Category: Govt Jobs

  • RERA : ಪರಿವೀಕ್ಷಣಾ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ಪ್ರವರ್ತಕರು/ ಅಭಿವೃದ್ಧಿದಾರರು ಯೋಜನೆಗಳನ್ನು ನೋಂದಣಿ ಮಾಡಿಸದೇ ನಿವೇಶನ/ ಫ್ಲ್ಯಾಟ್ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಪ್ರಾಧಿಕಾರದಲ್ಲಿ ನೋಂದಾಯಿಸದಿರುವ ಯೋಜನೆಗಳ ಸ್ಥಳ ಪರಿಶೀಲನೆಗಾಗಿ ಪರಿವೀಕ್ಷಣಾ ತಂಡಗಳ ರಚಿಸುವ ಸಲುವಾಗಿ, ಈ ಕೆಳಕಂಡ ನಿವೃತ್ತ ಅಧಿಕಾರಿಗಳನ್ನೊಂಡ ಪರಿವೀಕ್ಷಣಾ ಸಮಾಲೋಚಕರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.

    ಸಮಿತಿಯ ಸದಸ್ಯರು : 1. ಸಹಾಯಕ ಕಾರ್ಯಪಾಲಕ ಅಭಿಯಂತರರು/ ಸಹಾಯಕ ಅಭಿಯಂತರರು ( ನಿವೃತ್ತ ), 2. ತಹಶಿಲ್ದಾರ್ ( ನಿವೃತ್ತ) 3. ಸಿವಿಲ್ ಪೊಲೀಸ್ ನಿರೀಕ್ಷಕರು ( ನಿವೃತ್ತ)

    ಸಹಾಯಕ ಕಾರ್ಯಪಾಲಕ‌ ಅಭಿಯಂತರರು / ಸಹಾಯಕ ಅಭಿಯಂತರರು ( ನಿವೃತ್ತ) ವಿದ್ಯಾರ್ಹತೆ : ಬಿಇ( ಸಿವಿಲ್), ಅರ್ಹತೆ : ರಾಜ್ಯ ಸರಕಾರದ ಇಲಾಖೆಗಳಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು / ಸಹಾಯಕ ಇಂಜಿನಿಯರ್ ಆಗಿ ಕನಿಷ್ಠ 05 ವರ್ಷಗಳ ಅನುಭವ ಹೊಂದಿರಬೇಕು. ವಯಸ್ಸು 62 ವರ್ಷಕ್ಕಿಂತ ಮೀರಿರಬಾರದು.

    ತಹಶಿಲ್ದಾರ್ : ಈ ಹುದ್ದೆಯಲ್ಲಿ ರಾಜ್ಯ ಸರಕಾರದಲ್ಲಿ ಕನಿಷ್ಠ 05 ವರ್ಷಗಳ ಸೇವಾ ಅನುಭವ ಹೊಂದಿರಬೇಕು. ವಯಸ್ಸು 62 ವರ್ಷಕ್ಕಿಂತ ಮೀರಿರಬಾರದು.

    ಸಿವಿಲ್ ಪೊಲೀಸ್ ನಿರೀಕ್ಷಕರು : ರಾಜ್ಯ ಸರಕಾರಲ್ಲಿ ಕನಿಷ್ಠ 05 ವರ್ಷಗಳ ಸೇವಾ ಅನುಭವ ಹೊಂದಿರಬೇಕು. ವಯಸ್ಸು 62 ವರ್ಷಕ್ಕಿಂತ ಮೀರಿರಬಾರದು.

    ಸದರಿ ಗುತ್ತಿಗೆ ನೇಮಕಾತಿಯು ತಾತ್ಕಾಲಿಕವಾಗಿದ್ದು, ಗುತ್ತಿಗೆ ಅವಧಿಯನ್ನು ಮುಂದುವರಿಸುವ ಅಥವಾ ರದ್ದುಪಡಿಸುವ ಅಧಿಕಾರವನ್ನು ಪ್ರಾಧಿಕಾರವು ಹೊಂದಿರುತ್ತದೆ.

    ಗೌರವಧನ ಮತ್ತು ಇತರೆ ಸೌಲಭ್ಯಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗುವುದು. ಅರ್ಹ ನಿವೃತ್ತ ಅಧಿಕಾರಿಗಳು ಆನ್ಲೈನ್ ಮುಖಾಂತರ ಅಥವಾ ನೋಂದಾಯಿತ ಅಂಚೆ ಮೂಲಕ ದಿನಾಂಕ : 10.08.2021 ರ ಸಂಜೆ 5.00 ಗಂಟೆಯೊಳಗೆ ಮೇಲ್ಕಂಡ ಕಚೇರಿಗೆ ಅರ್ಜಿ ಸಲ್ಲಿಸತಕ್ಕದ್ದು.

    ಇ- ಮೇಲ್ : [email protected]

    ಅರ್ಜಿ ಸಲ್ಲಿಸುವ ನಿವೃತ್ತ ಅಧಿಕಾರಿಗಳು ಲಗತ್ತಿಸಲಾದ ಅರ್ಜಿ ನಮೂನೆಯಲ್ಲಿ ಸಲ್ಲಿಸತಕ್ಕದ್ದು. ದಾಖಲಾತಿಗಳನ್ನು ಸ್ವಯಂ ದೃಢೀಕರಿಸಬೇಕು ಹಾಗೂ ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಲಕೋಟೆಯ ಮೇಲೆ ” ಗುತ್ತಿಗೆ ಆಧಾರದ ಮೇಲೆ ಪರಿವೀಕ್ಷಣಾ ಸಮಾಲೋಚಕರ ಹುದ್ದೆಗೆ ಅರ್ಜಿ ” ಎಂದು ನಮೂದಿಸುವುದು.

  • ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಕಿತ್ತೂರು ಬೆಳಗಾವಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಪಿ.ಜಿ.ಟಿ ( ಇಂಗ್ಲೀಷ್ ): ಬಿ.ಎಡ್ ನೊಂದಿಗೆ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ, ಯಾವುದೇ ಸಿ.ಬಿ.ಎಸ್.ಇ ಶಾಲೆಯಲ್ಲಿ IX ರಿಂದ XII ನೇ ತರಗತಿಗಳನ್ನು ಕಲಿಸಿದ ಅನುಭವ, ಪರಿಣಾಮಕಾರಿ ಬೋಧನಾ ವಿಧಾನದೊಂದಿಗೆ ಸಂಪೂರ್ಣ ವಿಷಯ ಜ್ಞಾನ ಮತ್ತು ಬೋಧನಾ ಸಾಮರ್ಥ್ಯ ಹೊಂದಿರಬೇಕು.

    ಮೆಸ್‌ಮ್ಯಾನೇಜರ್ : ಹೋಮ್ ಸೈನ್ಸ್ ನಲ್ಲಿ ಪದವಿ/ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಟರಿಂಗ್ ತಂತ್ರಜ್ಞಾನದಲ್ಲಿ ಡಿಪ್ಲೋಮಾ, ವಸತಿ ಶಾಲೆಯಲ್ಲಿ ಮೆಸ್ ನಿರ್ವಹಣೆಯ ಅನುಭವಕ್ಕೆ ಆದ್ಯತೆ ನೀಡಲಾಗುವುದು. ನಿವೃತ್ತ ರಕ್ಷಣಾ ಜೇ.ಸಿ.ಓ/ ಎನ್.ಸಿ.ಓ ( ಎ.ಎಸ್.ಸಿ/ ವಾಯುಸೇನೆಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

    ದ್ವಿತೀಯ ದರ್ಜೆ ಗುಮಾಸ್ತ : ಕನಿಷ್ಠ ಐದು ವರ್ಷಗಳ ಅನುಭವ ವಿದ್ಯಾರ್ಹತೆ. ಬಿ.ಕಾಂ, ಟ್ಯಾಲಿಯನ್ನು ನಿರ್ವಹಿಸುವ ಉತ್ತಮ ಜ್ಞಾನ ( ಆವೃತ್ತಿ9.0) ಇ ಆರ್ ಪಿ, ಇಂಗ್ಲೀಷ್ ಮತ್ತು ಡಿಪ್ಲೋಮಾದೊಂದಿಗೆ ಕನ್ನಡ ಟೈಪಿಂಗ್ ಅಗತ್ಯ.

    ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಸಂಬಳವನ್ನು ನಿಗದಿ ಪಡಿಸಲಾಗುತ್ತದೆ.

    ಆಹಾರ ಮತ್ತು ವಸತಿ ಸೌಕರ್ಯಗಳ ಲಭ್ಯತೆ ಉಂಟು.

    ಇತ್ತೀಚಿನ ಭಾವಚಿತ್ರದೊಂದಿಗೆ ಅಗತ್ಯ ದಾಖಲೆಗಳನ್ನು ಪ್ರಾಚಾರ್ಯರು ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆ, ಕಿತ್ತೂರು – 591115. ಜಿಲ್ಲೆ : ಬೆಳಗಾವಿ, ಇಲ್ಲಿಗೆ ಕಳುಹಿಸಿ : ಕೊನೆಯ ದಿನಾಂಕ : 05-08-2021

  • ಸೇನಾ ನೇಮಕಾತಿ ಪರೀಕ್ಷೆ ಮುಂದಕ್ಕೆ

    ಮೂಡುಬಿದಿರೆ ಆಳ್ವಾಸ್ ಕ್ಯಾಂಪಸ್ ನಲ್ಲಿ ಜು.25 ರಂದು ನಡೆಯಬೇಕಿದ್ದ ಆರ್ಮಿ ರಿಕ್ರೂಟ್ ಮೆಂಟ್ ಕಾಮನ್ ಎಂಟ್ರೆನ್ಸ್ ಎಕ್ಸಾಂ ( ಸಿಇಒ) ಅನ್ನು ಮುಂದೂಡಲಾಗಿದಡ. ಕೊರೊನಾ ಬಿಕ್ಕಟ್ಟು ಮತ್ತು ಭಾರೀ ಮಳೆಯ ಕಾರಣದಿಂದ ಮುಂದೂಡಲ್ಪಟ್ಟಿದ್ದೆ. ಹೊಸ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

  • ಬ್ಯಾಂಕ್ ಆಫ್ ಬರೋಡಾದಲ್ಲಿ ಚೀಫ್ ಎಕಾನಮಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

    ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಚೀಫ್ ಎಕೊನಾಮಿಸ್ಟ್ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12-08-2021

    ಅವಧಿ : 3 ವರ್ಷಗಳ ಅವಧಿಯವರೆಗೆ.

    ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ವೆಬ್‌ಸೈಟ್‌ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12-08-2021

  • NPCIL ನಲ್ಲಿ 173 ಅಪ್ರೆಂಟಿಸ್ ಗಳ ನೇಮಕ, ಐಟಿಐ ಪಾಸ್ ಆದವರಿಗೆ ಆದ್ಯತೆ

    ದೇಶದ ಪ್ರಮುಖ ಸಂಸ್ಥೆಯಾಗಿರುವ ಎನ್ ಪಿಸಿಐಎಲ್ ಖಾಲಿ ಇರುವ ಹುದ್ದೆಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಆಸಕ್ತರು ಆಗಸ್ಟ್ 16 ರೊಳಗೆ ಅರ್ಜಿ ಸಲ್ಲಿಸಬಹುದು.

    ಹುದ್ದೆ : 273 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ ಪಾಸ್ ಸರ್ಟಿಫಿಕೇಟ್ ಹೊಂದಿರಬೇಕು.

    ವಯೋಮಿತಿ: ಅಭ್ಯರ್ಥಿಗಳ ವಯೋಮಿತಿಯು‌18 ವರ್ಷಕ್ಕಿಂತ ಕಡಿಮೆ ಇರಬಾರದು.

    ಅಭ್ಯರ್ಥಿಗಳು npcl ನ‌ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ‌ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯು ವೆಬ್ ಪೋರ್ಟಲ್ ನಲ್ಲಿ ನೋಂದಾಯಿಸದಿದ್ದರೆ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.

    ಈಗಾಗಲೇ ಒಂದು ವರ್ಷ ಅಥವಾ ಹೆಚ್ಚಿನ ಅವಧಿಗೆ ಭಾಗಶಃ ಅಥವಾ ಪೂರ್ಣ ಅಪ್ರೆಂಟಿಸ್ ತರಬೇತಿಗೆ ಒಳಗಾದ ಅಭ್ಯರ್ಥಿಗಳು, ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಒಂದು ಹುದ್ದೆಗೆ ಒಂದು ಅರ್ಜಿಯನ್ನು ಮಾತ್ರ ಅಭ್ಯರ್ಥಿಗಳು ಸಲ್ಲಿಸಬೇಕು.

    ಹುದ್ದೆಗಳ ವಿವರ ; ಫಿಟ್ಟರ್ – 50, ಮೆಕಾನಿಸ್ಟ್ – 25, ವೆಲ್ಡರ್ ( ಗ್ಯಾಸ್ ಆಂಡ್ ಎಲೆಕ್ಟ್ರಾನಿಕ್ಸ್) – 8, ಎಲೆಕ್ಟ್ರಿಶಿಯನ್ – 40, ಎಲೆಕ್ಟ್ರಾನಿಕ್ ಮೆಕ್ಯಾನಿಕ್ – 20, ಪಂಪ್ ಅಪರೇಟರ್ ಕಮ್ ಮೆಕ್ಯಾನಿಕ್ – 20, ಮೆಕ್ಯಾನಿಕ್ ( ಚಿಲ್ಲರೆ ಪ್ಲಾಂಟ್ ) ಇಂಡಸ್ಟ್ರಿಯಲ್ ಏರಿಯಾ- 5 ಹುದ್ದೆ

    ಅಭ್ಯರ್ಥಿಗಳು ತಮಿಳುನಾಡಿನ ಕೂಡಂಕುಲಂನ ಎನ್ ಪಿಸಿಐಎಲ್ ಸ್ಥಾವರದಲ್ಲಿ ಒಂದು ವರ್ಷದ ಅವಧಿಗೆ ಕೆಲಸ ಮಾಡಬೇಕಾಗುತ್ತದೆ.

    ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫೆಂಡ್ ಪಡೆಯಲು ಅರ್ಹರಾಗಿರುತ್ತಾರೆ. ಐಟಿಐ ( ಕೈಗಾರಿಕಾ ತರಬೇತಿ ಸಂಸ್ಥೆ) ಯೊಂದಿಗೆ ಎರಡು ವರ್ಷಗಳ ತರಬೇತಿ ಕೋರ್ಸ್ ಗೆ ಒಳಪಟ್ಟ ಅಭ್ಯರ್ಥಿಗಳಿಗೆ ರೂ.8,855/- ಸ್ಟೈಫೆಂಡ್ ಹಾಗೂ ಐಟಿಐನೊಂದಿಗೆ ಒಂದು ವರ್ಷದ ತರಬೇತಿ ಕೋರ್ಸ್ ಗೆ ಒಳಪಟ್ಟ ವರಿಗೆ ಮಾಸಿಕ ರೂ.7,700/- ಸ್ಟೈಫೆಂಡ್ ನೀಡಲಾಗುವುದು.

    ಅಭ್ಯರ್ಥಿಗಳು10+2 ಶಿಕ್ಷಣದ ಅಡಿಯಲ್ಲಿ ಅಥವಾ ಅದಕ್ಕೆ ಸಮನಾದ ಶಿಕ್ಷಣದಡಿ‌10 ನೇ ತರಗತಿಯಲ್ಲಿ ವಿಜ್ಞಾನ ಅಥವಾ ಗಣಿತ ವಿಷಯದಲ್ಲಿ ಪಾಸ್ ಆಗಿರಬೇಕು. ಐಟಿಐ ನಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್

  • ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆ : ಈ ಕೂಡಲೇ ಅರ್ಜಿ ಸಲ್ಲಿಸಿ

    ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಚೀಫ್ ಡಾಟಾ ಆಫೀಸರ್ – 1 ಹುದ್ದೆ, ಪರ್ಸನಲ್ ಅಸಿಸ್ಟೆಂಟ್ – 1 ಹುದ್ದೆ, ಫಸ್ಟ್ ಡಿವಿಷನಲ್ ಅಕೌಂಟೆಂಟ್ – 2 ಹುದ್ದೆ, ಫಸ್ಟ್ ಡಿವಿಷನಲ್ ಅಕೌಂಟ್ ಅಸಿಸ್ಟೆಂಟ್ – 1 ಹುದ್ದೆ, ಸೆಕೆಂಡ್ ಡಿವಿಷನಲ್ ಅಸಿಸ್ಟೆಂಟ್ – 01 ಹುದ್ದೆ

    ಚೀಫ್ ಡಾಟಾ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬ್ಯಾಚುಲರ್ ಅಥವಾ ಮಾಸ್ಟರ್ಸ್ ಇಂಜಿನಿಯರಿಂಗ್ ಡಿಗ್ರಿಯನ್ನು ಡಾಟಾ ಸೈನ್ಸ್, ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಸೈನ್ಸ್ ಮಾಡಿರಬೇಕು.

    ಪರ್ಸನಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ ಎಕ್ಸೆಲ್, ಎಂಎಸ್ ವರ್ಡ್ , ನುಡಿ ಜ್ಞಾನ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್ ವಿಷಯದಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು.

    ಫಸ್ಟ್ ಡಿವಿಷನಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ ಎಕ್ಸೆಲ್, ಎಂಎಸ್ ವರ್ಡ್ , ನುಡಿ ಜ್ಞಾನ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್ ವಿಷಯದಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು.

    ಫಸ್ಟ್ ಡಿವಿಷನಲ್ ಅಕೌಂಟ್ ಅಸಿಸ್ಟೆಂಟ್ ಈ ಹುದ್ದೆಗೆ ಅಭ್ಯರ್ಥಿಗಳು ಬಿ.ಕಾಂ/ ಬಿಬಿಎಂ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ಸೆಕೆಂಡ್ ಡಿವಿಷನಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಜೊತೆಗೆ ಎಂಎಸ್ ಎಕ್ಸೆಲ್, ಎಂಎಸ್ ವರ್ಡ್ , ನುಡಿ ಜ್ಞಾನ ಹೊಂದಿರಬೇಕು.

    ಅಭ್ಯರ್ಥಿಗಳು ತಮ್ಮ ಎಲ್ಲಾ ವಿವರಗಳನ್ನು ಜೊತೆಗೆ ಬಯೋಡೇಟಾವನ್ನು ಇ- ಮೇಲ್ ಮೂಲಕ‌ ಸಲ್ಲಿಸಬೇಕು.
    [email protected]

    ಅರ್ಜಿಯನ್ನು ಅಭ್ಯರ್ಥಿಗಳು ದಿನಾಂಕ 05-08-2021 ಸಂಜೆ 5.30 ರೊಳಗೆ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ 080-48504523 ದೂರವಾಣಿ ಸಂಪರ್ಕವನ್ನು ಸಂಪರ್ಕಿಸ ಬಹುದು.