NPCIL ನಲ್ಲಿ 173 ಅಪ್ರೆಂಟಿಸ್ ಗಳ ನೇಮಕ, ಐಟಿಐ ಪಾಸ್ ಆದವರಿಗೆ ಆದ್ಯತೆ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ದೇಶದ ಪ್ರಮುಖ ಸಂಸ್ಥೆಯಾಗಿರುವ ಎನ್ ಪಿಸಿಐಎಲ್ ಖಾಲಿ ಇರುವ ಹುದ್ದೆಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಆಸಕ್ತರು ಆಗಸ್ಟ್ 16 ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆ : 273 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ ಪಾಸ್ ಸರ್ಟಿಫಿಕೇಟ್ ಹೊಂದಿರಬೇಕು.

ವಯೋಮಿತಿ: ಅಭ್ಯರ್ಥಿಗಳ ವಯೋಮಿತಿಯು‌18 ವರ್ಷಕ್ಕಿಂತ ಕಡಿಮೆ ಇರಬಾರದು.

ಅಭ್ಯರ್ಥಿಗಳು npcl ನ‌ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ‌ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯು ವೆಬ್ ಪೋರ್ಟಲ್ ನಲ್ಲಿ ನೋಂದಾಯಿಸದಿದ್ದರೆ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.

ಈಗಾಗಲೇ ಒಂದು ವರ್ಷ ಅಥವಾ ಹೆಚ್ಚಿನ ಅವಧಿಗೆ ಭಾಗಶಃ ಅಥವಾ ಪೂರ್ಣ ಅಪ್ರೆಂಟಿಸ್ ತರಬೇತಿಗೆ ಒಳಗಾದ ಅಭ್ಯರ್ಥಿಗಳು, ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಒಂದು ಹುದ್ದೆಗೆ ಒಂದು ಅರ್ಜಿಯನ್ನು ಮಾತ್ರ ಅಭ್ಯರ್ಥಿಗಳು ಸಲ್ಲಿಸಬೇಕು.

ಹುದ್ದೆಗಳ ವಿವರ ; ಫಿಟ್ಟರ್ – 50, ಮೆಕಾನಿಸ್ಟ್ – 25, ವೆಲ್ಡರ್ ( ಗ್ಯಾಸ್ ಆಂಡ್ ಎಲೆಕ್ಟ್ರಾನಿಕ್ಸ್) – 8, ಎಲೆಕ್ಟ್ರಿಶಿಯನ್ – 40, ಎಲೆಕ್ಟ್ರಾನಿಕ್ ಮೆಕ್ಯಾನಿಕ್ – 20, ಪಂಪ್ ಅಪರೇಟರ್ ಕಮ್ ಮೆಕ್ಯಾನಿಕ್ – 20, ಮೆಕ್ಯಾನಿಕ್ ( ಚಿಲ್ಲರೆ ಪ್ಲಾಂಟ್ ) ಇಂಡಸ್ಟ್ರಿಯಲ್ ಏರಿಯಾ- 5 ಹುದ್ದೆ

ಅಭ್ಯರ್ಥಿಗಳು ತಮಿಳುನಾಡಿನ ಕೂಡಂಕುಲಂನ ಎನ್ ಪಿಸಿಐಎಲ್ ಸ್ಥಾವರದಲ್ಲಿ ಒಂದು ವರ್ಷದ ಅವಧಿಗೆ ಕೆಲಸ ಮಾಡಬೇಕಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫೆಂಡ್ ಪಡೆಯಲು ಅರ್ಹರಾಗಿರುತ್ತಾರೆ. ಐಟಿಐ ( ಕೈಗಾರಿಕಾ ತರಬೇತಿ ಸಂಸ್ಥೆ) ಯೊಂದಿಗೆ ಎರಡು ವರ್ಷಗಳ ತರಬೇತಿ ಕೋರ್ಸ್ ಗೆ ಒಳಪಟ್ಟ ಅಭ್ಯರ್ಥಿಗಳಿಗೆ ರೂ.8,855/- ಸ್ಟೈಫೆಂಡ್ ಹಾಗೂ ಐಟಿಐನೊಂದಿಗೆ ಒಂದು ವರ್ಷದ ತರಬೇತಿ ಕೋರ್ಸ್ ಗೆ ಒಳಪಟ್ಟ ವರಿಗೆ ಮಾಸಿಕ ರೂ.7,700/- ಸ್ಟೈಫೆಂಡ್ ನೀಡಲಾಗುವುದು.

ಅಭ್ಯರ್ಥಿಗಳು10+2 ಶಿಕ್ಷಣದ ಅಡಿಯಲ್ಲಿ ಅಥವಾ ಅದಕ್ಕೆ ಸಮನಾದ ಶಿಕ್ಷಣದಡಿ‌10 ನೇ ತರಗತಿಯಲ್ಲಿ ವಿಜ್ಞಾನ ಅಥವಾ ಗಣಿತ ವಿಷಯದಲ್ಲಿ ಪಾಸ್ ಆಗಿರಬೇಕು. ಐಟಿಐ ನಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ನೋಟಿಫಿಕೇಶನ್

Leave a Comment