Category: Govt Jobs

  • ಜಿಲ್ಲಾ ಪಂಚಾಯತ ಕಾರ್ಯಾಲಯ ಹಾವೇರಿ : ವಿವಿಧ ಹುದ್ದೆ

    ಹಾವೇರಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕರು ( ಅರಣ್ಯ/ಕೃಷಿ/ತೋಟಗಾರಿಕೆ) ಮತ್ತು ಬಿ.ಎಫ್.ಟಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ತಾಂತ್ರಿಕ ಸಹಾಯಕರು ( ಅರಣ್ಯ) – 3 ಹುದ್ದೆ: ಬಿ.ಎಸ್ಸಿ ( ಅರಣ್ಯ) ವಿದ್ಯಾರ್ಹತೆಯನ್ನು ಹೊಂದಿರಬೇಕು.

    ತಾಂತ್ರಿ ಸಹಾಯಕರು ( ಕೃಷಿ) :3 ಹುದ್ದೆ: ಬಿಎಸ್ಸಿ (ಕೃಷಿ) ವಿದ್ಯಾರ್ಹತೆಯನ್ನು ಹೊಂದಿರಬೇಕು.

    ತಾಂತ್ರಿಕ ಸಹಾಯಕರು ( ತೋಟಗಾರಿಕೆ) : 8 ಹುದ್ದೆ: ಬಿಎಸ್ಸಿ ( hori) ವಿದ್ಯಾರ್ಹತೆಯನ್ನು ಹೊಂದಿರಬೇಕು.

    ಬಿ.ಎಫ್.ಟಿ( ಬರಿಗಾಲು ತಜ್ಞ) :8 ಹುದ್ದೆ: ಈ ಹುದ್ದೆಗೆ ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿರಬೇಕು.

    ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ https://haveri.nic.in/ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29-07-2021
    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12-08-2021
    ಮೂಲ ದಾಖಲೆಗಳನ್ನು ಪರಿಶೀಲಿಸಲು ‌ನಿಗದಿಪಡಿಸಿರುವ ದಿನಾಂಕ 24-08-2021 ರಂದು ಸಂಜೆ 5 ಹಾಜರಾಗುವ ಅಭ್ಯರ್ಥಿಗಳ ದಾಖಲೆಗಳನ್ನು ಮಾತ್ರ ಪರಿಶೀಲಿಸಲಾಗುವುದು.

    ಆನ್ಲೈನ್ ಮೂಲಕ ಇಲ್ಲಿ ಅರ್ಜಿ ಸಲ್ಲಿಸಿ

  • ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಪದವೀಧರರಿಗೆ ನೇಮಕಾತಿ

    ರಾಷ್ಟ್ರೀಯ ಆರೋಗ್ಯ ಅಭಿಯಾನ ( ಎನ್ ಎಚ್ ಎಂ) ಯೋಜನೆಯಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಿಂದ ‌ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-08-2021

    ಹುದ್ದೆಗಳ ವಿವರ : ಸಲಹೆಗಾರ ಕನ್ಸಲ್ಟೆಂಟ್ – ಮೆಟರ್ನಲ್ ಹೆಲ್ತ್ ಆಂಡ್ ಫ್ಯಾಮಿಲಿ ಪ್ಲಾನಿಂಗ್-1
    ಲಕ್ಷ್ಯ ಕಾರ್ಯಕ್ರಮ ಸಮನ್ವಯಕಾರ – 1
    ಎಚ್ ಎಂಐಎಸ್ ಆಂಡ್ ಎಂಸಿಟಿಎಸ್ ಸಮನ್ವಯಕಾರ – 1 ಹುದ್ದೆ
    ಸಲಹೆಗಾರರು ( ಎಚ್ ಆಂಡ್ ಪಿ)- 1
    ಕಾರ್ಯಕ್ರಮ ಸಹಾಯಕ – 2
    ಸಿಎಸ್ ಟಿ ಸಮನ್ವಯಕಾರರು- 1
    ಸಲಹೆಗಾರರು ಚೈಲ್ಡ್ -1

    ವೇತನ : ಈ ಹುದ್ದೆಗೆ ಅನುಗುಣವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,000/- ರಿಂದ ರೂ.60,000/- ಗಳವರೆಗೆ ವೇತನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ : ಕಂಪ್ಯೂಟರ್ ಸೈನ್ಸ್/ಇನ್ ಫರ್ಮೇಷನ್ ಸೈನ್ಸ್ ನಲ್ಲಿ ಬಿಇ, ಸ್ಟಟಿಸ್ಟಿಕ್ಸ್, ಗಣಿತದಲ್ಲಿ ಎಂಎಸ್ಸಿ/ಅರ್ಥಶಾಸ್ತ್ರದಲ್ಲಿ ಎಂಎ, ಬಿಬಿಎ/ಬಿಬಿಎಂ, ಎಂಬಿಬಿಎಸ್, ಎಂಡಿ, ಬಿಡಿಎಸ್, ಮಾಸ್ಟರ್ ಇನ್ ಪಬ್ಲಿಕ್ ಹೆಲ್ತ್, ಮಾಸ್ಟರ್ ಇನ್ ಅಪ್ಲೈಡ್ ಎಪಿಡೆಮಿಯೋಲಜಿ ( ಎಂಇಎ), ಎಂಎಸ್ ಡಬ್ಲ್ಯೂ ಮಾಡಿದ್ದು, ಕನಿಷ್ಠ 1-3 ವರ್ಷ ವೃತ್ತಿ ಅನುಭವ ಇರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ.

    ವಯೋಮಿತಿ : ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳು ಗರಿಷ್ಠ 40 ರಿಂದ 65 ವರ್ಷ ವಯೋಮಿತಿಯೊಳಗಿನವರಾಗಿರಬೇಕು.

    ಈ ಹುದ್ದೆಗಳಿಗೆ ಇಲಾಖೆಯ ವೆಬ್‌ಸೈಟ್‌ ನಲ್ಲಿ ನೀಡಿದ ಗೂಗಲ್ ಫಾರ್ಮ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದವರ ಪೈಕಿ ಶಾರ್ಟ್ ಲಿಸ್ಟ್ ಆದವರನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು. ಈ ಹುದ್ದೆಗಳನ್ನು ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಆಯಿಲ್ ಇಂಡಿಯಾ ಲಿಮಿಟೆಡ್ ನಲ್ಲಿ 115 ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ,ಡಿಪ್ಲೋಮಾ, ಪದವಿ ಪಡೆದವರಿಗೆ ಆದ್ಯತೆ

    ಆಯಿಲ್ ಇಂಡಿಯಾ ಲಿಮಿಟೆಡ್ ನಲ್ಲಿ ಹಲವು ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಿದೆ.

    ಹುದ್ದೆ: ಅಸಿಸ್ಟೆಂಟ್ ವೆಲ್ಡರ್, ಅಸಿಸ್ಟೆಂಟ್ ಫಿಟ್ಟರ್, ಅಸಿಸ್ಟೆಂಟ್ ಡೀಸೆಲ್‌ ಮೆಕ್ಯಾನಿಕ್, ಇಲೆಕ್ಟ್ರಿಕಲ್ ಸೂಪರ್ ವೈಸರ್ ಮತ್ತು ಇತರೆ ಹಲವು ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿದೆ.

    ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಎಸ್ ಎಸ್ ಎಲ್ ಸಿ/ ಡಿಪ್ಲೊಮಾ/ ಪದವಿಯನ್ನು ಹೊಂದಿರಬೇಕು.

    ನೇರ ಸಂದರ್ಶನ ದಿನಾಂಕ : ಆಗಸ್ಟ್ 16 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಸಲಿದೆ.

    ನೋಟಿಫಿಕೇಶನ್

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಹಾಸನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ರಾಷ್ಟ್ರೀಯ ಆರೋಗ್ಯ ಅಭಿಯಾನದ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಹಾಸನ ಇಲ್ಲಿ ಎನ್.ಟಿ.ಇ.ಪಿ ಗುತ್ತಿಗೆ ನೇಮಕಾತಿ ಮಾರ್ಗಸೂಚಿ ಅನ್ವಯ ಅನುಮೋದನೆಗೊಂಡು ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ ಮತ್ತು ಹುದ್ದೆಗೆ ಸಂಬಂಧಪಟ್ಟ ಮಾಹಿತಿಯನ್ನು ಈ ಕಚೇರಿಯ ವೇಳೆಯಲ್ಲಿ ಪಡೆಯಲು ತಿಳಿಸಿದೆ.

    ಹುದ್ದೆಯ ಹೆಸರು : 1. ಕ್ಷಯರೋಗ ವೀಕ್ಷಕರು ( TBHV)
    ಹುದ್ದೆಗಳ ಸಂಖ್ಯೆ : 02
    ವಿದ್ಯಾರ್ಹತೆ : ವಿಜ್ಞಾನದಲ್ಲಿ ಪದವಿ ಹೊಂದಿರಬೇಕು.

    1. ಪ್ರಯೋಗಶಾಲಾ ತಂತ್ರಜ್ಞಾನ (LT): ಹುದ್ದೆಗಳ ಸಂಖ್ಯೆ : 01, ವಿದ್ಯಾರ್ಹತೆ : 10+2 (PUC) DMLT ಅಭಿಯಾನ ನಿರ್ದೇಶಕರು, ಎನ್.ಹೆಚ್.ಎಂ ರವರ ಪತ್ರದನ್ವಯ ಕಂಪ್ಯೂಟರ್ ಸಾಕ್ಷರತೆಯನ್ನು ಸರಕಾರದಿಂದ ಅಥವಾ ಸರಕಾರದ ಮಾನ್ಯತೆ ಹೊಂದಿರುವ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗಳಿಂದ ಪಡೆದಿರುವ ಕಂಪ್ಯೂಟರ್ ಸಾಕ್ಷರತಾ ಪ್ರಮಾಣ ಪತ್ರವನ್ನು ಮೇಲ್ಕಂಡ 2 ಹುದ್ದೆಗಳಿಗೂ ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದೆ.

    ಭರ್ತಿ ಮಾಡಿದ ಅರ್ಜಿ ಮತ್ತು ಮೂಲ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿದ ನಕಲು ಪ್ರತಿಗಳೊಂದಿಗೆ ದಿನಾಂಕ 11-08-2021 ರಂದು ಬೆಳಿಗ್ಗೆ 10.30 ಕ್ಕೆ ಸರಿಯಾಗಿ ದಾಖಲಾತಿ ಪರಿಶೀಲನೆಗಾಗಿ ಹಾಜರಾಗಲು ತಿಳಿಸಿದೆ.

  • KIMS ಹುಬ್ಬಳ್ಳಿ : ನೇಮಕಾತಿ ಪ್ರಕಟಣೆ

    ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ ( ಕಿಮ್ಸ್) ಸಂಸ್ಥೆಯಲ್ಲಿ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ದಿನಾಂಕ : 18-03-2020 ರಂದು ಪತ್ರಿಕಾ ಪ್ರಕಟಣೆ ಮುಖಾಂತರ ‌ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಿಮ್ಸ್ ವೆಬ್‌ಸೈಟ್‌ www.hubballikims.karnataka.gov.in ರಲ್ಲಿ ಪ್ರಚುರ ಪಡಿಸಲಾಗಿದೆ.

    ಈ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ದಿನಾಂಕ : 13-08-2021 ರ ಸಾಯಂಕಾಲ 05:00 ಘಂಟೆಯ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಂಸ್ಥೆಯ ಕಾರ್ಯಾಲಯಕ್ಕೆ ಸಲ್ಲಿಸಬಹುದು. ತದನಂತರ ಬಂದ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು. ಹಾಗೂ ಇದೇ ಅಂತಿಮ ಆಯ್ಕೆ ಪಟ್ಟಿಯೆಂದು ಪರಿಗಣಿಸಲಾಗುವುದು.

  • ಸಾರಿಗೆ ನೌಕರರ ತುಟ್ಟಿಭತ್ಯೆ ಹೆಚ್ಚಳ

    ನಾಲ್ಕು ಸಾರಿಗೆ ನಿಗಮಗಳ ನೌಕರರ ತುಟ್ಟಿ ಭತ್ಯೆ ಯನ್ನು ರಾಜ್ಯ ಸರಕಾರವು ಶೇ.11.25 ರಿಂದ ಶೇ.21.50 ಕ್ಕೆ ಹೆಚ್ಚಿಸಲಾಗಿದೆ. ಜುಲೈ ತಿಂಗಳ ವೇತನದಲ್ಲೇ ಹೆಚ್ಚಳ ಮಾಡಿ ಪಾವತಿಸಲು ಆದೇಶಿಸಲಾಗಿದೆ.
    ಜುಲೈ 26 ರಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಅದರಂತೆ ಕೆಎಸ್ ಆರ್ ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ನೌಕರರ ತುಟ್ಟಿಭತ್ಯೆಯನ್ನೂ ಪರಿಷ್ಕರಿಸಲಾಗಿದೆ.