ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಪದವೀಧರರಿಗೆ ನೇಮಕಾತಿ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ರಾಷ್ಟ್ರೀಯ ಆರೋಗ್ಯ ಅಭಿಯಾನ ( ಎನ್ ಎಚ್ ಎಂ) ಯೋಜನೆಯಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಿಂದ ‌ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-08-2021

ಹುದ್ದೆಗಳ ವಿವರ : ಸಲಹೆಗಾರ ಕನ್ಸಲ್ಟೆಂಟ್ – ಮೆಟರ್ನಲ್ ಹೆಲ್ತ್ ಆಂಡ್ ಫ್ಯಾಮಿಲಿ ಪ್ಲಾನಿಂಗ್-1
ಲಕ್ಷ್ಯ ಕಾರ್ಯಕ್ರಮ ಸಮನ್ವಯಕಾರ – 1
ಎಚ್ ಎಂಐಎಸ್ ಆಂಡ್ ಎಂಸಿಟಿಎಸ್ ಸಮನ್ವಯಕಾರ – 1 ಹುದ್ದೆ
ಸಲಹೆಗಾರರು ( ಎಚ್ ಆಂಡ್ ಪಿ)- 1
ಕಾರ್ಯಕ್ರಮ ಸಹಾಯಕ – 2
ಸಿಎಸ್ ಟಿ ಸಮನ್ವಯಕಾರರು- 1
ಸಲಹೆಗಾರರು ಚೈಲ್ಡ್ -1

ವೇತನ : ಈ ಹುದ್ದೆಗೆ ಅನುಗುಣವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,000/- ರಿಂದ ರೂ.60,000/- ಗಳವರೆಗೆ ವೇತನ ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ : ಕಂಪ್ಯೂಟರ್ ಸೈನ್ಸ್/ಇನ್ ಫರ್ಮೇಷನ್ ಸೈನ್ಸ್ ನಲ್ಲಿ ಬಿಇ, ಸ್ಟಟಿಸ್ಟಿಕ್ಸ್, ಗಣಿತದಲ್ಲಿ ಎಂಎಸ್ಸಿ/ಅರ್ಥಶಾಸ್ತ್ರದಲ್ಲಿ ಎಂಎ, ಬಿಬಿಎ/ಬಿಬಿಎಂ, ಎಂಬಿಬಿಎಸ್, ಎಂಡಿ, ಬಿಡಿಎಸ್, ಮಾಸ್ಟರ್ ಇನ್ ಪಬ್ಲಿಕ್ ಹೆಲ್ತ್, ಮಾಸ್ಟರ್ ಇನ್ ಅಪ್ಲೈಡ್ ಎಪಿಡೆಮಿಯೋಲಜಿ ( ಎಂಇಎ), ಎಂಎಸ್ ಡಬ್ಲ್ಯೂ ಮಾಡಿದ್ದು, ಕನಿಷ್ಠ 1-3 ವರ್ಷ ವೃತ್ತಿ ಅನುಭವ ಇರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ.

ವಯೋಮಿತಿ : ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳು ಗರಿಷ್ಠ 40 ರಿಂದ 65 ವರ್ಷ ವಯೋಮಿತಿಯೊಳಗಿನವರಾಗಿರಬೇಕು.

ಈ ಹುದ್ದೆಗಳಿಗೆ ಇಲಾಖೆಯ ವೆಬ್‌ಸೈಟ್‌ ನಲ್ಲಿ ನೀಡಿದ ಗೂಗಲ್ ಫಾರ್ಮ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದವರ ಪೈಕಿ ಶಾರ್ಟ್ ಲಿಸ್ಟ್ ಆದವರನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು. ಈ ಹುದ್ದೆಗಳನ್ನು ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave a Comment