Category: bangalore

  • ಬೆಂಗಳೂರು ಸಿಆರ್ ಪಿಎಫ್ ಕಾಂಪೋಸಿಟ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆ

    ಬೆಂಗಳೂರು ಸಿಆರ್ ಪಿಎಫ್ ಕಾಂಪೋಸಿಟ್ ಆಸ್ಪತ್ರೆಯಲ್ಲಿ ವಿವಿಧ ಹುದ್ದೆ

    ಬೆಂಗಳೂರಿನ ಸಿಆರ್ ಪಿಎಫ್ ನ ಕಾಂಪೋಸಿಟ್ ಆಸ್ಪತ್ರೆಯಲ್ಲಿ ವಿಶೇಷ ವೈದ್ಯಕೀಯ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ‌ ಕೆಳಕಂಡ ವಿವರಗಳು ದಿನಾಂಕಗಳನ್ವಯ ನೇಮಕಾತಿ ಮಾಡಿಕೊಳ್ಳಲು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ.

    ಸಂದರ್ಶನ ವೇಳೆ ಮತ್ತು ದಿನಾಂಕ : 22-04-2021 (9.00 ಗಂಟೆಗೆ)
    ಸ್ಥಳ ಸಂದರ್ಶನ ಕೇಂದ್ರ : ಬೆಂಗಳೂರಿನ ಸಿಆರ್ ಪಿಎಫ್ ನ ಕಾಂಪೊಸಿಟ್ ಆಸ್ಪತ್ರೆ, ಜಿಸಿ
    ವಯೋಮಿತಿ : ನೇರ ಸಂದರ್ಶನದ ದಿನಾಂಕದ ವೇಳೆಗೆ 70 ವರ್ಷ ಮೀರಿರಬಾರದು.

    ವೇತನ : ರೂ.85,000/- ವಿ.ವೈ.ಅಧಿಕಾರಿಗಳಿಗೆ

    ಹುದ್ದೆಗಳ ವಿವರ : ರೇಡಿಯಾಲಜಿ-01, ಸರ್ಜನ್ -01

    ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ / ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ.
    ಸ್ನಾತಕೋತ್ತರ ಪದವಿ ನಂತರ ಒಂದೂವರೆ ವರ್ಷದ ಅನುಭವ.
    ಪಿಜಿ ಡಿಪ್ಲೋಮಾದ ನಂತರ ಎರಡೂವರೆ ವರ್ಷದ ಅನುಭವ.

    1. ನೇಮಕಾತಿಯು ಕೇವಲ ಗುತ್ತಿಗೆ ಆಧಾರದಲ್ಲಿ ಪ್ರಾರಂಭಿಜ ಗುತ್ತಿಗೆ ಅವಧಿ ಮೂರು ವರ್ಷಗಳಾಗಿದ್ದು, ನಂತರ ಗರಿಷ್ಠ 70 ವರ್ಷ ವಯಸ್ಸಿನವರೆಗೆ ವರ್ಷದಿಂದ ವರ್ಷಕ್ಕೆ ಹೆಚ್ಚುವರಿ 02 ವರ್ಷಗಳಿಗೆ ವಿಸ್ತರಿಸಬಹುದು.
    2. ಅವಧಿ ಪೂರ್ಣಗೊಂಡ ನಂತರ ಗುತ್ತಿಗೆಯು ವಿಫಲವಾಗುತ್ತದೆ. ಆದಾಗ್ಯೂ ಯಾವುದೇ ಕಾರಣ ನೀಡದೆ ಯಾವುದೇ ಸಮಯದಲ್ಲಿ (ಎರಡೂ ಬದಿಯಲ್ಲಿ) ಒಂದು ತಿಂಗಳ ನೋಟಿಸ್ ಅಥವಾ ಒಂದು ತಿಂಗಳ ನೋಟಿಸ್ ಪಾವತಿಸಿ ಅಥವಾ ಒಂದು ತಿಂಗಳ ವೇತನ ಪಾವತಿಸಿ ಅಥವಾ ಸಕ್ಷಮ ಪ್ರಾಧಿಕಾರದ ತೃಪ್ತಿಯಡಿ ಮೂರು ತಿಂಗಳು ಪೂರ್ಣಗೊಳಿಸಲು ವಿಫಲರಾದಲ್ಲಿ ನೇಮಕಾತಿಯನ್ನು ವಜಾಗೊಳಿಸಲಾಗುವುದು.
    3. ಪಿಎಫ್, ಪಿಂಚಣಿ, ಗ್ರಾಚುಟಿ, ಮೆಡಿಕಲ್ ಅಟೆಂಡೆನ್ಸ್ ಟ್ರೀಟ್ ಮೆಂಟ್, ಹಿರಿತನ, ಪ್ರಮೋಷನ್ ಇತ್ಯಾದಿ ಸವಲತ್ತುಗಳು ಅಥವಾ ನಿಯಮ ಆಧಾರದ ಮೇಲೆ ಸರ್ಕಾರಿ ಸೇವಾ ನೇಮಕಾತಿ ಗೆ ಲಭ್ಯವಿರುವ ಯಾವುದೇ ಸವಲತ್ತುಗಳನ್ನು ನಿಯುಕ್ತ ವ್ಯಕ್ತಿ ಪಡೆಯುವುದಿಲ್ಲ. ನಿಯುಕ್ತ ವ್ಯಕ್ತಿಯು ಸಿಆರ್ ಫಿಎಫ್ ನಡಿ ಯಾವುದೇ ಹುದ್ದೆಗೆ ಖಾಯಂ ನೇಮಕಾತಿಗೆ ಯಾವುದೇ ಕ್ಲೇಮು/ ಹಕ್ಕನ್ನು ಹೊಂದಿರುವುದಿಲ್ಲ.
    4. ನಿಯುಕ್ತ ವ್ಯಕ್ತಿಯ ಕೆಲಸದ ಅವಧಿಯು ಸಿಆರ್ ಪಿಎಫ್ ಆಸ್ಪತ್ರೆಗಳು/ ಸ್ಥಾಪನೆ ಅಥವಾ ಸಕ್ಷಮ ಪ್ರಾಧಿಕಾರದಿಂದ ಸ್ಥಿರಗೊಳಿಸಲಾದ ಅನ್ವಯ ಇರುತ್ತದೆ.
    5. ನೇಮಕಾತಿ ಯು ದೇಶದ ಯಾವುದೇ ಭಾಗದಲ್ಲಿ ಸೇವೆ ಮಾಡಲು ಬಾಧ್ಯವಾಗಿರುತ್ತದೆ.
      ನಿಯುಕ್ತ ವ್ಯಕ್ತಿಯು ಆತ/ಆಕೆಗೆ ನೀಡಲಾದ ಕೆಲಸವನ್ನು ನಿಭಾಯಿಸಬೇಕು. ಸಕ್ಷಮ ಪ್ರಾಧಿಕಾರವು ಅಗತ್ಯವಿದ್ದಲ್ಲಿ ಯಾವುದೇ ಕೆಲಸ ನೀಡುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುವರಿ/ಅಧಿಕ ಭತ್ಯೆಗಳನ್ನು ನೀಡಲಾಗುವುದಿಲ್ಲ.
    6. ನಿಯುಕ್ತ ವ್ಯಕ್ತಿಯ ಲೀವ್ ಎಂಟೈಟಲ್ ಮೆಂಟನ್ನು ಆಗಿಂದಾಗ್ಗೆ ತಿದ್ದುಪಡಿಯಾದ ಡಿಒಪಿ ಮತ್ತು ಟಿ ಓ ಎಂ ನಂ. 12016/3/84- ಸ್ಥಾಪನೆ (ಎಲ್) ದಿನಾಂಕ 12 ನೇ ಎಪ್ರಿಲ್ 1985, ಓ.ಎಂ.ನಂ. 12016/1/90-ಸ್ಥಾಪನೆ (ಎಲ್) ದಿನಾಂಕ 05 ಜುಲೈ 1990 ಮತ್ತು ಓ.ಎಂ.ನಂ.12016/2/99-ಸ್ಥಾಪನೆ (ಎಲ್) ದಿನಾಂಕ 12 ಜುಲೈ 1999ರನ್ವಯ ನಿರ್ವಹಿಸಲಾಗುವುದು.
    7. ನೇರ ಸಂದರ್ಶನದ ವೇಳೆ ಯಾವುದೇ ಟಿಎ/ಡಿಎ ಮತ್ತು ಬೋರ್ಡಿಂಗ್ /ಲಾಡ್ಜಿಂಗ್ ನ ನೀಡಲಾಗುವುದಿಲ್ಲ.
    8. ಗುತ್ತಿಗೆ/ಹೈಯರಿಂಗ್ ಆಧಾರದ ಮೇಲೆ ಸಿಆರ್ ಪಿಎಫ್ ನಲ್ಲಿ ನಿಯೋಜಿತ ಅವಧಿಯಲ್ಲಿ ಯಾವುದೇ ಟಿಎ/ಡಿಎ ಪಾವತಿಸುವುದಿಲ್ಲ.
      ಗುತ್ತಿಗೆ ಅವಧಿಯಲ್ಲಿ ಆತ/ಆಕೆಯ ಆಡಳಿತ ಪ್ರಾಧಿಕಾರದ ಆದೇಶಗಳನ್ನು ಶಿಸ್ತುಬದ್ಧವಾಗಿ ಲಿಖಿತ ಅಥವಾ ಮೌಖಿಕವಾಗಿ ಪಾಲಿಸಬೇಕು.
    9. ಆಸಕ್ತ ಅಭ್ಯರ್ಥಿಗಳು ಜಿಡಿಎಂಗಳು ಮತ್ತಯ ವಿಶೇಷ ಎಂಒ ಗಳ ಗುತ್ತಿಗೆ ನೇಮಕಾತಿಗಾಗಿ ಪೂರ್ಣ ಷರತ್ತು ಮತ್ತು ನಿಬಂಧನೆಗಳ ಪೂರ್ಣ ವಿವರಗಳಿಗಾಗಿ ನಮ್ಮ ವೆಬ್‌ಸೈಟ್‌ www.crpf.gov.in ಗೆ ಭೇಟಿ ನೀಡಿ.
    10. ನೇರ ಸಂದರ್ಶನ ಹಾಜರಾತಿಗೆ ಅಭ್ಯರ್ಥಿಗಳು ತಮ್ಮ ಮೂಲ ಮತ್ತು ಸಂಬಂಧಿತ ದಾಖಲೆಗಳಾದ ಡಿಗ್ರಿ ವಯಸ್ಸು ಪುರಾವೆ ಮತ್ತು ಹಳೆ ಅನುಭವ ಪ್ರಮಾಣ ಪತ್ರ ಇತ್ಯಾದಿ ನಕಲು ಪ್ರತಿಗಳನ್ನು ಅಭ್ಯರ್ಥಿಯು ಹೆಸರು ಮತ್ತು ಹುದ್ದೆಯ ವಿವರಗಳನ್ನು ಬಿಳಿ ಹಾಳೆಯ ಮೇಲೆ ಸೂಪರ್ ಸ್ಕ್ರಿಪ್ಟ್ ಮಾಡಿ ಹಾಗೂ ಐದು ಇತ್ತೀಚಿನ ಭಾವಚಿತ್ರವನ್ನು ತರಬೇಕು. ಸಂದರ್ಶನವು ವೈದ್ಯಕೀಯ ತಪಾಸಣೆಯಿಂದ ಪ್ರಾರಂಭವಾಗುವುದು.
  • HMT : ಬೆಂಗಳೂರು : ಕಂಪನಿ ಟ್ರೈನೀಸ್ ಹುದ್ದೆಗೆ ಅರ್ಜಿ ಆಹ್ವಾನ

    HMT : ಬೆಂಗಳೂರು : ಕಂಪನಿ ಟ್ರೈನೀಸ್ ಹುದ್ದೆಗೆ ಅರ್ಜಿ ಆಹ್ವಾನ

    ಹೆಚ್ ಎಂಟಿ ಮೆಷಿನ್ ಟೂಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಕಂಪನಿ ಟ್ರೈನೀಸ್ (ವರ್ಕ್ ಮೆನ್ )

    ಹುದ್ದೆ ಸ್ಥಳ : ಜಾಲಹಳ್ಳಿ – ಕರ್ನಾಟಕ

    ಅರ್ಜಿ ಶುಲ್ಕ : ಅರ್ಜಿ ಶುಲ್ಕವನ್ನು ಡಿಮಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು.

    ಜನರಲ್ , ಇಡ್ಬ್ಯುಎಸ್/ ಒಬಿಸಿ ಅಭ್ಯರ್ಥಿಗಳಿಗೆ ರೂ.500/-, ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.250/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ಹುದ್ದೆ ಸಂಖ್ಯೆ : 12

    ಹುದ್ದೆ ವಿವರ : ಮೆಶಿನಿಸ್ಟ್, ಫಿಟ್ಟರ್, ಗ್ರೈಂಡರ್, ಎಲೆಕ್ಟ್ರಿಶಿಯನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ

    ವಿದ್ಯಾರ್ಹತೆ : ಈ ಹುದ್ದೆಗಳಿಗೆ ಅಭ್ಯರ್ಥಿಗಳು NCVT/ITI+NAC ನ್ನು ಯಾವುದೇ ಅಂಗೀಕೃತ ಬೋರ್ಡ್/ಇನ್ಸ್ಟಿಟ್ಯೂಟ್ ನಿಂದ ಪಡೆದಿರಬೇಕು.

    ವಯೋಮಿತಿ : ಅಭ್ಯರ್ಥಿಗಳ ವಯೋಮಿತಿಯು 33 ವರ್ಷ ಮೀರಿರಬಾರದು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • NAL : 17 ಟೆಕ್ನಿಶಿಯನ್ ಹುದ್ದೆ

    NAL : 17 ಟೆಕ್ನಿಶಿಯನ್ ಹುದ್ದೆ

    ನ್ಯಾಷನಲ್ ಏರೋ ಸ್ಪೇಸ್ ಲ್ಯಾಬೋರೇಟರಿ (ಎನ್ ಎಎಲ್)ಯು ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್(ಸಿಎಸ್‌ಐಆರ್‌) ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರೀಮಿಯರ್ ರಿಸರ್ಚ್ ಲ್ಯಾಬೋರೇಟರಿ ಆಗಿದ್ದು ಇಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ 20-04-2021 ರಂದು ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು 20-05-2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 21-04-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-05-2021

    ಹುದ್ದೆ : ಟೆಕ್ನೀಷಿಯನ್

    ಹುದ್ದೆಗಳ ಸಂಖ್ಯೆ : 17

    ವಯೋಮಿತಿ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 28 ವರ್ಷ ಮೀರಿರಬಾರದು.

    ಮೀಸಲಾತಿ : ಪರಿಶಿಷ್ಟ ಜಾತಿ -2, ಪರಿಶಿಷ್ಟ ಪಂಗಡ – 2, ಎಕ್ಸ್‌ ಸರ್ವಿಸ್‌ಮೆನ್‌- 2, ಒಬಿಸಿ – 2, ಸ್ಪೋಟ್ಸ್‌ – 2, ಪಿಡ್ಬ್ಲುಡಿ -3, ಇಡಬ್ಲುಎಸ್‌ – 2, ಯುಆರ್‌ – 2

    ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅಂಕಗಳು, ಮೀಸಲಾತಿ ಹಾಗೂ ಇತರೆ ಮಾನದಂಡಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.31,000/- ವೇತನವಿರುತ್ತದೆ.

    ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ ಜೊತೆಗೆ, ಐಟಿಐ ಅನ್ನು ಫಿಟ್ಟರ್/ಟರ್ನರ್/ಇಲೆಕ್ಟ್ರಾನಿಕ್ ಮೆಕ್ಯಾನಿಕ್‌/ ಇಲೆಕ್ಟ್ರೀಷಿಯನ್/ ಡ್ರಾಫ್ಟ್‌ಮನ್ ( ಮೆಕ್ಯಾನಿಕ್‌)/ಇಲೆಕ್ಟ್ರೋಪ್ಲೇಟಿಂಗ್/ ಇಲೆಕ್ಟ್ರೋಪ್ಲೇಟರ್/ ಪೇಂಟರ್ ( ಜೆನೆರಲ್ ) ಟ್ರೇಡ್‌ ನಲ್ಲಿ ತೇರ್ಗಡೆ ಹೊಂದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಸಿಎಬಿಎಸ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಸಿಎಬಿಎಸ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಸೆಂಟರ್ ಫಾರ್ ಎರ್ ಬೋರ್ನ್ ಸಿಸ್ಟಮ್ಸ್ (ಸಿಎಬಿಎಸ್), ಡಿಫಿನ್ಸ್‌ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಓ) ರಕ್ಷಣಾ ಮಂತ್ರಾಲಯ ಇಲ್ಲಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಸಬಹುದು.

    ಹುದ್ದೆ : ಸಿವಿಲಿಯನ್ ಮೆಡಿಕಲ್ ಆಫೀಸರ್ ಹುದ್ದೆಗಾಗಿ ಅರ್ಹ ವೈದ್ಯರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ( ಗುತ್ತಿಗೆ ಆಧಾರದ ಮೇಲೆ)

    ಹುದ್ದೆ ಸಂಖ್ಯೆ – 01

    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.55,೦೦೦/- ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ : ಕೆಎಂಸಿ/ಐಎಂಸಿ ನೋಂದಣಿಯೊಂದಿಗೆ ಎಂಬಿಬಿಎಸ್‌, ಏವಿಯೇಷನ್‌ ಮೆಡಿಸಲನ್‌ನಲ್ಲಿ ಅಪೇಕ್ಷಣೀಯ ಪಿಜಿ ಡಿಪ್ಲೋಮಾ/ಡಿಗ್ರಿ ಪಡೆದಿರಬೇಕು.

    ಕಾರ್ಯಾನುಭವ : ಕ್ಲಿನಿಕ್/ ಆಸ್ಪತ್ರೆಯಲ್ಲಿ ವೈಯಕ್ತಿಕ ಸಾಮರ್ಥ್ಯದಲ್ಲಿ ಒಬ್ಬ ಆರ್‌ಎಂಪಿಯಾಗಿ ಕನಿಷ್ಠ 5 ವರ್ಷಗಳ ಅನುಭವವಿರಬೇಕು.
    ಸ್ಥಳೀಯ ಭಾಷೆ ಕನ್ನಡ ಬಲ್ಲವರಾದ ಬೆಂಗಳೂರಿಗರಿಗೆ ಆದ್ಯತೆ.

    ‍‍‍‍‍‍‍‍‍‍ಷರತ್ತುಗಳು :

    a.ಹುದ್ದೆಯು ಕೇವಲ ಗುತ್ತಿಗೆ ಆಧಾರಿತವಾಗಿರುತ್ತದೆ.
    b.ಎನ್‌ಪಿಎ ಮತ್ತು ಇತರೆ ಭತ್ಯೆಗಳು ಸ್ವೀಕಾರ್ಹವಲ್ಲ.
    c.ನೇಮಕಾತಿಯ ಅವಧಿ ಕೆಲಸ ಕೈಗೆತ್ತಿಕೊಂಡ ದಿನದಿಂದ ಒಂದು ವರ್ಷ ಅಥವಾ ಸಿಎಬಿಎಸ್‌ಗೆ ಖಾಯಂ ಹುದ್ದೆಗಾರ ದೊರೆಯುವವರೆಗೆ ಯಾವುದು ಮೊದಲೋ ಅದರನ್ವಯ
    d.ಹುದ್ದೆಗೆ ಆಯ್ಕೆಯಾದ ಅಧಿಕಾರಿಯು ಮುಂದೊಮ್ಮೆ ಖಾಯಂ ಸರಕಾರಿ ಸೇವೆಗೆ ಆಯ್ಕೆಯಾದಲ್ಲಿ ಸೇವಾ ಹಿರಿತನ ಅಥವಾ ಯಾವುದೇ ಅನ್ವಯ ಸವಲತ್ತುಗಳಿಗೆ ಅರ್ಹರಾಗುವುದಿಲ್ಲ.
    e.ನೇಮಕಾತಿಯು ನವದೆಹಲಿಯ ಡಿಆರ್‌ಡಿಒ ಕೇಂದ್ರ ಕಚೇರಿಯ ಅನುಮೋದನೆಗೆ ಒಳಪಟ್ಟಿರುತ್ತದೆ.
    f.ಕೆಲಸದ ವೇಳೆ ( ರಜಾದಿನ ಬಿಟ್ಟು ) ಸೋಮವಾರದಿಂದ ಶುಕ್ರವಾರ 8.30 ಗಂಟೆಯಿಂದ 05.೦೦ ಗಂಟೆಯವರಿಗೆ. ಶನಿವಾರ/ಭಾನುವಾರ (ತುರ್ತು ಅಥವಾ ಕರೆಯ ಮೇರೆಗೆ)
    g.ಅರ್ಹ ಅಭ್ಯರ್ಥಿಗಳು ಹೆಸರು, ತಂದೆ/ಗಂಡನ ಹೆಸರು, ಜನ್ಮದಿನಾಂಕ, ಸಂವಹನ ವಿಳಾಸ, ವಿದ್ಯಾರ್ಹತೆ ಅನುಭವ ವಿವರ, ದೂರವಾಣಿ ಸಂಖ್ಯೆ ಮತ್ತು ಇಮೇಲ್ ವಿಳಾಸದೊಂದಿಗೆ ಕೆಎಂಸಿ/ಐಎಂಸಿ ನೋಂದಣಿಯನ್ನು ಒಂದು ಬಿಳಿಯ ಹಾಳೆಯ ಮೇಲೆ ಅರ್ಜಿಯನ್ನು ಬೆರಳಚ್ಚು ಮಾಡಿಸಿ ಮತ್ತು ಪೂರಕ ಪ್ರಮಾಣಪತ್ರ/ಯೋಗ್ಯತಾ ಪತ್ರಗಳ ಸ್ವ ದೃಢೀಕೃತ ನಕಲು ಪ್ರತಿಗಳನ್ನು ನಿರ್ದೇಶಕರು, ಸಿಎಬಿಎಸ್, ವಿಂಡ್ ಟೆನಲ್ ರಸ್ತೆ, ಬೇಲೂರು,ಯಮಲೂರು ಅಂಚೆ, ಬೆಂಗಳೂರು -560037 ಗೆ ಈ ಜಾಹೀರಾತು ಪ್ರಕಟವಾದ 30 ದಿನದೊಳಗಾಗಿ ಸಲ್ಲಿಸಬೇಕು. ಲಕೋಟೆಯ ಮೇಲೆ ‘ಸಿವಿಲಿಯನ್ ಮೆಡಿಕಲ್ ಆಫೀಸರ್- ಗುತ್ತಿಗೆ ಹುದ್ದೆಗಾಗಿ ಅರ್ಜಿ’ ಎಂದು ಸೂಪರ್‌ಸ್ಕ್ರೈಬ್ಡ್ ಆಗಿರಬೇಕು.

  • ಗ್ರಂಥಾಲಯ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ

    ಗ್ರಂಥಾಲಯ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಒಕ್ಕೂಟದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಗ್ರಂಥಾಲಯ ಟ್ರೈನಿ

    ಹುದ್ದೆ ಅವಧಿ : 11 ತಿಂಗಳ ಅವಧಿಗೆ

    ವಿದ್ಯಾರ್ಹತೆ : ಈ ಹುದ್ದೆಗಳಿಗೆ 2018 ರ ನಂತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಕರ್ನಾಟಕದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ರೂ.15,000/- ಮಾಸಿಕ ಸ್ಟೈಫೆಂಡ್ ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ದಿನಾಂಕ 27-04-2021 ರೊಳಗೆ ಸಲ್ಲಿಸತಕ್ಕದ್ದು.

    ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಲಕೋಟೆ ಮೇಲೆ ‘ಗ್ರಂಥಾಲಯ ಟ್ರೈನಿ’ ಎಂದು ನಮೂದಿಸಿರಬೇಕು.

    ಅರ್ಜಿಯನ್ನು ಅಭ್ಯರ್ಥಿಗಳು [email protected] ಇ-ಮೇಲ್ ಗೆ ಸಾಫ್ಟ್‌ ಕಾಪಿ ಕಳುಹಿಸಬಹುದು. ಅಥವಾ ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೂ ಸಲ್ಲಿಸಬಹುದು.

    ಅಗತ್ಯ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಸ್ವವಿವರಗಳನ್ನು ಸ್ವಯಂ ದೃಡೀಕೃತ ಹೆಚ್‌.ಎಸ್‌.ಸಿ ಯಿಂದ ಪ್ರಾರಂಭವಾಗುವ ಶೈಕ್ಷಣಿಕ ಅರ್ಹತೆಗಳನ್ನು ಹಾಗೂ ಒಂದು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರವನ್ನು 27-04-2021 ರೊಳಗೆ ಸಲ್ಲಿಸತಕ್ಕದ್ದು.

    ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ : ನಿರ್ದೇಶಕರು, ಗ್ರಂಥಾಲಯ,ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ,ಕರ್ನಾಟಕ, 4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು -560041

  • ಸಿಎಆರ್‌ಐ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಈ ಕೂಡಲೇ ಅರ್ಜಿ ಸಲ್ಲಿಸಿ

    ಸಿಎಆರ್‌ಐ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಈ ಕೂಡಲೇ ಅರ್ಜಿ ಸಲ್ಲಿಸಿ

    ಸೆಂಟ್ರಲ್ ಆಯುರ್ವೇದ ರಿಸರ್ಚ್‌ ಇನ್‌ಸ್ಟಿಟ್ಯೂಟ್ (ಸಿಎಆರ್‌ಎ) ‘centre of excellence in research and clinical services for Madhumeha ( Diabetes Millitus) ‘ಯೋಜನೆ ಒಂದರಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಅಭ್ಯರ್ಥಿಗಳು ವಿದ್ಯಾರ್ಹತೆ, ಅರ್ಜಿ ಶುಲ್ಕ, ವಯೋಮಿತಿ ಇತರೆ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

    ಸಂದರ್ಶನದ ದಿನಾಂಕ : ಎಪ್ರಿಲ್ 21, 22, 2021

    ಹುದ್ದೆಗಳ ವಿವರ : ಕನ್ಸಲ್‌ಟಂಟ್(ಆಯುರ್ವೇದ)-01
    ಕನ್ಸಲ್‌ಟಂಟ್ ( ಅಡ್ಮಿನ್ )-01
    ಕನ್ಸಲ್‌ಟಂಟ್ ( ಮೆಡಿಷನ್)-01
    ಎಸ್‌ಆರ್‌ಎಫ್(ಐಟಿ)-01
    ಎಸ್‌ಆರ್‌ಎಫ್ (ಆಯುರ್ವೇದ)-02
    ಎಸ್‌ಆರ್‌ಎಫ್ (ಯೋಗ)-01
    ಎಸ್‌ಆರ್‌ಎಫ್ (ಬಯೋ-ಸ್ಟ್ಯಾಟಿಸ್ಟಿಕ್ಸ್‌)- 01
    ಎಸ್‌ಆರ್‌ಎಫ್ ( ಕೆಮಿಸ್ಟ್ರಿ)-01
    ಸೋಶಿಯಲ್ ವರ್ಕರ್-02
    ಡಾಟಾ ಎಂಟ್ರಿ ಆಪರೇಟರ್/ಆಫೀಸ್ ಅಸಿಸ್ಟಂಟ್-02
    ಮಲ್ಟಿ ಟಾಸ್ಕಿಂಗ್ ಅಟೆಂಡಂಟ್- 02
    ಪಂಚಕರ್ಮ ಟೆಕ್ನೀಷಿಯನ್-02
    ಡ್ರೈವರ್-01
    ಸ್ಪೆಷಲಿಸ್ಟ್ ಕನ್ಸಲ್‌ಟಂಟ್- 01

    ವೇತನ : ಹುದ್ದೆಗಳಿಗೆ ಅನುಸಾರವಾಗಿ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ. 16,000/- ರಿಂದ ರೂ.50,000/-ವರೆಗೆ ಇರುತ್ತದೆ.

    ವಿದ್ಯಾರ್ಹತೆ : ಹುದ್ದೆಗಳಿಗನುಗುನವಾಗಿ ಅಭ್ಯರ್ಥಿಗಳು ಬಿಇ/ಬಿ.ಟೆಕ್‌/ಎಂ.ಎ/ಎಂ.ಟೆಕ್‌/ಎಂ.ಸಿಎ/ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಟಿಎ/ಡಿಎ ನೀಡಲಾಗುತ್ತದೆ.

    ಆಯ್ಕೆ ಪ್ರಕ್ರಿಯೆ : ನೇರ ಸಂದರ್ಶನದ ಮೂಲಕ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಿಎಆರ್‌ಐ ಕಚೇರಿಗೆ ಭೇಟಿ ನೀಡಬಹುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ