Category: Central Govt Jobs

Central Govt Jobs News in Kannada, Central Govt Employment News in Kannada, UPSC, Indian Railway Jobs, Bank Jobs News, Airforce Recruitment, Indian Army, Agniveer Jobs updates all Central govt jobs read in Sarakarijobs.com

  • BEML Jobs: ಕಾರು ಡ್ರೈವರ್‌ ಹುದ್ದೆಗಳು ಖಾಲಿ ಇದೆ; ಮಾಸಿಕ ರೂ.23,500 ವೇತನ

    BEML Jobs: ಕಾರು ಡ್ರೈವರ್‌ ಹುದ್ದೆಗಳು ಖಾಲಿ ಇದೆ; ಮಾಸಿಕ ರೂ.23,500 ವೇತನ

    BEML Recruitment 2024: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 04 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸ್ಟಾಫ್ ಡ್ರೈವರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈ ಹುದ್ದೆಗೆ ಪೋಸ್ಟಿಂಗ್‌ ಬೆಂಗಳೂರು – ಕರ್ನಾಟಕದಲ್ಲಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು 05-Jun-2024 ರಂದು ಅಥವಾ ಮೊದಲು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಅಧಿಸೂಚನೆ ಬಿಡುಗಡೆಗೊಂಡ ದಿನಾಂಕ; 15-05-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-06-2024

    ಹುದ್ದೆಗಳ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು:
    ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ನಲ್ಲಿ 04 ಹುದ್ದೆಗಳು ಖಾಲಿ ಇದ್ದು, ಸ್ಟಾಫ್‌ ಡ್ರೈವರ್‌ (ಸಿಬ್ಬಂದಿ ಚಾಲಕ) ಪೋಸ್ಟ್‌ಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.20000-23500/- ವೇತನ ದೊರಕಲಿದೆ.

    ವಿದ್ಯಾರ್ಹತೆ: BEML ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷ ಮೀರಿರಬಾರದು. ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: SC/ST ಅಭ್ಯರ್ಥಿಗಳು ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಸಾಮಾನ್ಯ/EWS/OBC/ExSM ಅಭ್ಯರ್ಥಿಗಳಿಗೆ ರೂ.200/- ಅರ್ಜಿ ಶುಲ್ಕ ಪಾವತಿಸಬೇಕಾಗಿದೆ. ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ? ಭರ್ತಿ ಮಾಡಿದ ಅರ್ಜಿಯನ್ನು ಅಭ್ಯರ್ಥಿಗಳು ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಅಥವಾ ಯಾವುದೇ ಇತರ ಸೇವೆಗಳ ಮೂಲಕ ಈ ಕೆಳಗೆ ನೀಡಿದ ವಿಳಾಸಕ್ಕೆ ಕಳುಹಿಸಬೇಕು;
    ವಿಳಾಸ: Sr. Manager (Corporate Recruitment), Recruitment Cell, BEML Soudha, No.23/1, 4th Main Road, S.R Nagar, Bangalore-560027

  • EPFO Jobs: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಸ್ಟೆನೋಗ್ರಾಫರ್‌ ಹುದ್ದೆಗಳ ಭರ್ತಿ; ಒಟ್ಟು 62 ಹುದ್ದೆಗಳು ಖಾಲಿ ಇದೆ, ಈಗಲೇ ಅಪ್ಲೈ ಮಾಡಿ

    EPFO Jobs: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಸ್ಟೆನೋಗ್ರಾಫರ್‌ ಹುದ್ದೆಗಳ ಭರ್ತಿ; ಒಟ್ಟು 62 ಹುದ್ದೆಗಳು ಖಾಲಿ ಇದೆ, ಈಗಲೇ ಅಪ್ಲೈ ಮಾಡಿ

    EPFO Recruitment 2024: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 62 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಸ್ಟೆನೋಗ್ರಾಫರ್ಸ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 25-ಮೇ-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 16-05-2024
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-05-2024

    ಹುದ್ದೆಗಳ ವಿವರ ಇಲ್ಲಿದೆ;
    ಹುದ್ದೆ ಸಂಸ್ಥೆ:
    ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನಲ್ಲಿ ಸ್ಟೆನೋಗ್ರಾಫರ್ಸ್‌ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 62 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,500-ರೂ.81100 ವೇತನ ಸಿಗಲಿದೆ.

    ಸ್ಥಳದ ಹೆಸರು ಪೋಸ್ಟ್‌ಗಳ ಸಂಖ್ಯೆ
    ಅಹಮದಾಬಾದ್ 3
    ಬಾಂದ್ರಾ (ಮುಂಬೈ) 3
    ಬೆಂಗಳೂರು 3
    ಭೋಪಾಲ್ 1
    ಭುವನೇಶ್ವರ 1
    ಚಂಡೀಗಢ 1
    ಚೆನ್ನೈ 3
    ಕೊಯಮತ್ತೂರು 3
    ದೆಹಲಿ 18
    ಫರಿದಾಬಾದ್ 2
    ಗುರುಗ್ರಾಮ 1
    ಗುವಾಹಟಿ 3
    ಹುಬ್ಬಳ್ಳಿ 1
    ಹೈದರಾಬಾದ್ 3
    ಜೈಪುರ 2
    ಕಾನ್ಪುರ್ 2
    ಕೋಲ್ಕತ್ತಾ 3
    ಪಾಟ್ನಾ 2
    ಪುಣೆ 2
    ಥಾಣೆ 2
    ತಿರುವನಂತಪುರಂ 1
    ಉಜ್ಜಯಿನಿ 1
    ವಿಜಯವಾಡ 1

    ವಯೋಮಿತಿ ಹಾಗೂ ವಿದ್ಯಾಭ್ಯಾಸ: ಇಪಿಎಫ್‌ಒ ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಮತ್ತು ವಿದ್ಯಾಭ್ಯಾಸದ ಅರ್ಹತೆಯು EPFO ​​ನಿಯಮಗಳ ಪ್ರಕಾರ ಇರಬೇಕು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

    ಆಯ್ಕೆ ಪ್ರಕ್ರಿಯೆ: ಸ್ಟೆನೋಗ್ರಾಫರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • NTPC Jobs: ನ್ಯಾಷನಲ್‌ ಥರ್ಮಲ್‌ ಪವರ್‌ ಕಾರ್ಪೋರೇಷನ್‌ ಲಿಮಿಟೆಡ್‌ನಲ್ಲಿ ಅಸೋಸಿಯೇಟ್‌ ಹುದ್ದೆಗಳು ಖಾಲಿ ಇದೆ; ಉತ್ತಮ ವೇತನ, ಕೂಡಲೇ ಅರ್ಜಿ ಸಲ್ಲಿಸಿ

    NTPC Jobs: ನ್ಯಾಷನಲ್‌ ಥರ್ಮಲ್‌ ಪವರ್‌ ಕಾರ್ಪೋರೇಷನ್‌ ಲಿಮಿಟೆಡ್‌ನಲ್ಲಿ ಅಸೋಸಿಯೇಟ್‌ ಹುದ್ದೆಗಳು ಖಾಲಿ ಇದೆ; ಉತ್ತಮ ವೇತನ, ಕೂಡಲೇ ಅರ್ಜಿ ಸಲ್ಲಿಸಿ

    NTPC Recruitment 2024: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 26 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಭಾರತದಾದ್ಯಂತ ಹುದ್ದೆ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ದಿ.12-ಮೇ-2024 ಕೊನೆಯ ದಿನಾಂಕವಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 07-05-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-05-2024

    ಹುದ್ದೆಯ ವಿವರ ಈ ಕೆಳಗೆ ನೀಡಲಾಗಿದೆ;
    ಸಂಸ್ಥೆ ಹೆಸರು: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC) ನಲ್ಲಿ 26 ಹುದ್ದೆಗಳು ಖಾಲಿ ಇದ್ದು, ಅಸೋಸಿಯೇಟ್‌ ಹುದ್ದೆಗಳ ಭರ್ತಿ ನಡೆಯಲಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಎನ್‌ಟಿಪಿಸಿ ನಿಯಮಗಳ ಪ್ರಕಾರ ವೇತನ ನೀಡಲಾಗುವುದು.

    ವಿದ್ಯಾರ್ಹತೆ: NTPC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ CA ಅಥವಾ ICWA, CA (ಇಂಟರ್) ಅಥವಾ ICWA (ಇಂಟರ್) ಶೈಕ್ಷಣಿಕ ಅರ್ಹತೆಯನ್ನು ಪಡೆದಿರಬೇಕು.

    ವಯೋಮಿತಿ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 65 ವರ್ಷಗಳನ್ನು ಮೀರಿರಬಾರದು. ವಯೋಮಿತಿ ಸಡಿಲಿಕೆಯನ್ನು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಿಯಮಗಳ ಪ್ರಕಾರ ನೀಡಲಾಗುವುದು.

    ಅರ್ಜಿ ಶುಲ್ಕ: ಮೇಲ್ಕಂಡ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಪಾವತಿ ಮಾಡಬೇಕಾಗಿಲ್ಲ.

    ಆಯ್ಕೆ ಪ್ರಕ್ರಿಯೆ: ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • Airmen Jobs: ವಾಯುಪಡೆಯಲ್ಲಿ ಏರ್‌ಮೆನ್‌ ಉದ್ಯೋಗಗಳು; ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

    Airmen Jobs: ವಾಯುಪಡೆಯಲ್ಲಿ ಏರ್‌ಮೆನ್‌ ಉದ್ಯೋಗಗಳು; ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

    Indian Air Force Airmen Recruitment 2024: ಭಾರತೀಯ ವಾಯುಪಡೆಯು ಗ್ರೂಪ್‌ Y ಏರ್‌ಮೆನ್‌ ಹುದ್ದೆಗಳ ಭರ್ತಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೇಂದ್ರ ಸರಕಾರದ ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಮಾತ್ರ ಸಲ್ಲಿಸಬೇಕು. ಜುಲೈ 03 ರಿಂದ ಜುಲೈ 12, 2024 ರವರೆಗೆ ನೇಮಕಾತಿ ಪ್ರಕ್ರಿಯೆ ಇರಲಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22-05-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-06-2024 ರ ರಾತ್ರಿ 11 ಗಂಟೆಯವರೆಗೆ

    ಹುದ್ದೆಯ ಕುರಿತು ವಿವರ ಇಲ್ಲಿದೆ:
    ಹುದ್ದೆಯ ಹೆಸರು, ಸಂಸ್ಥೆ: ಭಾರತೀಯ ವಾಯುಪಡೆಯಲ್ಲಿ ಏರ್‌ಮನ್‌ಗ್ರೂಪ್‌ ವೈ (ನಾನ್‌ ಟೆಕ್ನಿಕಲ್)‌ ಮೆಡಿಕಲ್‌ ಟ್ರೇಡ್‌ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಯ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

    ಆಯ್ಕೆ ವಿಧಾನ: ಭಾರತೀಯ ವಾಯುಪಡೆಯಲ್ಲಿ ಆರ್‌ಮನ್‌ ಗ್ರೂಪ್‌ ವೈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಫಿಸಿಕಲ್‌ ಫಿಟ್‌ನೆಸ್‌, ಲಿಖಿತ ಪರೀಕ್ಷೆ, ಅಡಾಪ್ಟೆಬಿಲಿಟಿ ಟೆಸ್ಟ್‌, ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಹತೆ: ಮೆಡಿಕಲ್‌ ಅಸಿಸ್ಟೆಂಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 2,2004 ರಿಂದ 2008 ರ ಜನವರಿ 02 ರ ನಡುವೆ ಜನಿಸಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು.
    ಮೆಡಿಕಲ್‌ ಅಸಿಸ್ಟಂಟ್‌ ಟ್ರೇಡ್‌ (ಡಿಪ್ಲೋಮ/ಬಿಎಸ್ಸಿ ಇನ್‌ ಫಾರ್ಮಸಿ) ಹುದ್ದೆಗೆ ಅರ್ಜಿ ಸಲ್ಲಿಸುವವರು 2011 ರ ಜನವರಿ 02 ರಿಂದ 2004 ರ ಜನವರಿ 02 ರ ನಡುವೆ ಜನಿಸಿರಬೇಕು. ಅವಿವಾಹಿತ ಪುರುಷ ಅಭ್ಯರ್ಥಿ, ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ.

    ವಿದ್ಯಾರ್ಹತೆ: ಪಿಯುಸಿಯನ್ನು ಕಡ್ಡಾಯ ಫಿಸಿಕ್ಸ್‌, ಕೆಮಿಸ್ಟ್ರಿ, ಬಯೋಲಜಿ ಮತ್ತು ಇಂಗ್ಲೀಷ್‌ನಲ್ಲಿ ಶೇ.50 ರಷ್ಟು ಅಂಕದೊಂದಿಗೆ ಪಾಸಾಗಿರಬೇಕು.

    ವೇತನ: ಭಾರತೀಯ ವಾಯುಪಡೆಯ ಏರ್‌ಮೆನ್‌ ಗ್ರೂಪ್‌ ವೈ ಹುದ್ದೆಗೆ ತರಬೇತಿ ಸಮಯದಲ್ಲಿ ರೂ.14,900 ಮಾಸಿಕ ಸ್ಟೈಫಂಡ್‌ ನೀಡಲಾಗುವುದು. ತರಬೇತಿ ನಂತರ ಮಿಲಿಟರಿ ಸೇವೆಗಳ ಬೇಸಿಕ್‌ ಪೇ ರೂ.26,900 ಜೊತೆಗೆ ಇತರೆ ಭತ್ಯೆ ಸಿಗಲಿದೆ.

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • HAL Jobs: ಹೆಚ್‌ಎಎಲ್‌ನಲ್ಲಿ ಐಟಿಐ, ಡಿಪ್ಲೋಮಾ, ಬಿಇ, ಪದವಿ ಪಾಸಾದವರಿಗೆ ಭರ್ಜರಿ ಉದ್ಯೋಗಾವಕಾಶ

    HAL Jobs: ಹೆಚ್‌ಎಎಲ್‌ನಲ್ಲಿ ಐಟಿಐ, ಡಿಪ್ಲೋಮಾ, ಬಿಇ, ಪದವಿ ಪಾಸಾದವರಿಗೆ ಭರ್ಜರಿ ಉದ್ಯೋಗಾವಕಾಶ

    HAL Apprentice Recruitment 2024: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 304 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್‌ಎಎಲ್‌ನ ಹೈದರಾಬಾದ್‌ ಟ್ರೈನಿಂಗ್‌ ಆಂಡ್‌ ಡೆವಲಪ್ಮೆಂಟ್‌ ವಿಭಾಗವು ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಪ್ರಮುಖ ದಿನಾಂಕಗಳು;
    ನೇರ ಸಂದರ್ಶನಕ್ಕೆ ನಿಗದಿಪಡಿಸಲಾದ ದಿನಾಂಕ: 20-05-2024 ರಿಂದ 24-05-2024

    ಹುದ್ದೆಗಳ ವಿವರ;
    ಐಟಿಐ ಟ್ರೇಡ್‌ ಅಪ್ರೆಂಟಿಸ್‌ ಹುದ್ದೆಗಳ ಸಂಖ್ಯೆ : 200 ಹುದ್ದೆಗಳು
    ಇಂಜಿನಿಯರಿಂಗ್ ಪದವಿ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : 64 ಹುದ್ದೆಗಳು
    ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : 35 ಹುದ್ದೆಗಳು
    ಜೆನೆರಲ್‌ ಸ್ಟ್ರೀಮ್‌ ಪದವಿಯವರಿಗೆ ಅಪ್ರೆಂಟಿಸ್‌ ಹುದ್ದೆಗಳ ಸಂಖ್ಯೆ : 25 ಹುದ್ದೆಗಳು

    ವಿದ್ಯಾರ್ಹತೆ :
    ಐಟಿಐ ಟ್ರೇಡ್‌ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ ಪಾಸ್ ಆಗಿರಬೇಕು.
    ಇಂಜಿನಿಯರಿಂಗ್ ಪದವಿ ಅಪ್ರೆಂಟಿಸ್ ಹುದ್ದೆಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ / ಬಿ.ಟೆಕ್‌ ಪಾಸ್ ಮಾಡಿರಬೇಕು.
    ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮ ಇನ್‌ ಇಂಜಿನಿಯರಿಂಗ್ ತೇರ್ಗಡೆ ಹೊಂದಿರಬೇಕು.
    ಜೆನೆರಲ್‌ ಸ್ಟ್ರೀಮ್‌ ಪದವಿಯವರಿಗೆ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನವಿಕ ವಿಷಯಗಳ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.

    ವೇತನ: ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್‌ ರೂ.7000-10000 ನಿಗದಿಪಡಿಸಲಾಗಿದೆ.

    ಆಯ್ಕೆ ವಿಧಾನ: ಈ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುವುದು.

    ವಯೋಮಿತಿ: ಈ ಮೇಲಿನ ಅಪ್ರೆಂಟಿಸ್‌ ಹುದ್ದೆಗಳಿಗೆ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯು 24 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

    ಆಯ್ಕೆ ವಿಧಾನ: ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರನ್ನು ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್‌ ಮಾಡಿ, ನಂತರ ಸಂದರ್ಶನ, ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಲಾದ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ;

    HAL ITI Apprentice Notification, HAL Graduate/Technicial Apprentice Notification

  • DRDO Careers: ಡಿಆರ್‌ಡಿಒ ದಲ್ಲಿ ಉದ್ಯೋಗ; ಪರೀಕ್ಷೆ ಇಲ್ಲ, ಐಟಿಐ ಪಾಸಾದವರಿಗೆ ಆದ್ಯತೆ

    DRDO Careers: ಡಿಆರ್‌ಡಿಒ ದಲ್ಲಿ ಉದ್ಯೋಗ; ಪರೀಕ್ಷೆ ಇಲ್ಲ, ಐಟಿಐ ಪಾಸಾದವರಿಗೆ ಆದ್ಯತೆ

    DRDO Apprentice Recruitment 2024: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 127 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕಂಪ್ಯೂಟರ್‌ ಅಪರೇಟಿಂಗ್‌, ಪ್ರೋಗ್ರಾಮಿಂಗ್‌ ಅಸಿಸ್ಟಂಟ್‌, ಇಲೆಕ್ಟ್ರಿಕಲ್‌, ಫಿಟ್ಟರ್‌, ಪೇಂಟರ್‌, ಇತರೆ ಹಲವು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹೈದರಾಬಾದ್‌ನಲ್ಲಿ ಪೋಸ್ಟಿಂಗ್‌ ನಡೆಯಲಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ.31, 2024 ಕೊನೆಯ ದಿನಾಂಕವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-05-2024

    ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ;
    ಉದ್ಯೋಗದ ಸ್ಥಳ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹೈದರಾಬಾದ್‌ ನಲ್ಲಿ ಪೋಸ್ಟಿಂಗ್‌ ಇರಲಿದೆ.

    ಉದ್ಯೋಗದ ಅವಧಿ ಮತ್ತು ಸಂಭಾವನೆ: ಒಂದು ವರ್ಷ ತರಬೇತಿ ಇರಲಿದ್ದು, ಅಭ್ಯರ್ಥಿಗಳಿಗೆ ರೂ.8000-9000 ಪ್ರತಿ ತಿಂಗಳು ದೊರೆಯಲಿದೆ.

    ಹುದ್ದೆ ಹೆಸರು ಮತ್ತು ಹುದ್ದೆ ಸಂಖ್ಯೆ;
    ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟಂಟ್: 60 ಹುದ್ದೆಗಳು
    ಫಿಟ್ಟರ್ : 20 ಹುದ್ದೆಗಳು
    ಟರ್ನರ್ : 08 ಹುದ್ದೆಗಳು
    ಮಷಿನಿಸ್ಟ್‌ : 16 ಹುದ್ದೆಗಳು
    ವೆಲ್ಡರ್ : 04 ಹುದ್ದೆಗಳು
    ಇಲೆಕ್ಟ್ರೀಷಿಯನ್ : 12 ಹುದ್ದೆಗಳು
    ಇಲೆಕ್ಟ್ರಾನಿಕ್ಸ್‌ : 04 ಹುದ್ದೆಗಳು
    ಕಾರ್ಪೆಂಟರ್ : 02 ಹುದ್ದೆಗಳು
    ಬುಕ್‌ ಬೈಂಡರ್ : 01 ಹುದ್ದೆ

    ವಿದ್ಯಾರ್ಹತೆ: ಐಟಿಐ ಶಿಕ್ಷಣವನ್ನು ಹುದ್ದೆಯ ವಿಭಾಗಗಳಿಗೆ ಸಂಬಂಧಿಸಿದ ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು. ಎನ್‌ಸಿವಿಟಿ ಅಥವಾ ಎಸ್‌ಸಿವಿಟಿ ಪ್ರಮಾಣ ಪತ್ರವನ್ನು ಪಡೆದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ