Airmen Jobs: ವಾಯುಪಡೆಯಲ್ಲಿ ಏರ್‌ಮೆನ್‌ ಉದ್ಯೋಗಗಳು; ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

Advertisements

Indian Air Force Airmen Recruitment 2024: ಭಾರತೀಯ ವಾಯುಪಡೆಯು ಗ್ರೂಪ್‌ Y ಏರ್‌ಮೆನ್‌ ಹುದ್ದೆಗಳ ಭರ್ತಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೇಂದ್ರ ಸರಕಾರದ ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಮಾತ್ರ ಸಲ್ಲಿಸಬೇಕು. ಜುಲೈ 03 ರಿಂದ ಜುಲೈ 12, 2024 ರವರೆಗೆ ನೇಮಕಾತಿ ಪ್ರಕ್ರಿಯೆ ಇರಲಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಪ್ರಮುಖ ದಿನಾಂಕಗಳು;
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22-05-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-06-2024 ರ ರಾತ್ರಿ 11 ಗಂಟೆಯವರೆಗೆ

ಹುದ್ದೆಯ ಕುರಿತು ವಿವರ ಇಲ್ಲಿದೆ:
ಹುದ್ದೆಯ ಹೆಸರು, ಸಂಸ್ಥೆ: ಭಾರತೀಯ ವಾಯುಪಡೆಯಲ್ಲಿ ಏರ್‌ಮನ್‌ಗ್ರೂಪ್‌ ವೈ (ನಾನ್‌ ಟೆಕ್ನಿಕಲ್)‌ ಮೆಡಿಕಲ್‌ ಟ್ರೇಡ್‌ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಯ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಆಯ್ಕೆ ವಿಧಾನ: ಭಾರತೀಯ ವಾಯುಪಡೆಯಲ್ಲಿ ಆರ್‌ಮನ್‌ ಗ್ರೂಪ್‌ ವೈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಫಿಸಿಕಲ್‌ ಫಿಟ್‌ನೆಸ್‌, ಲಿಖಿತ ಪರೀಕ್ಷೆ, ಅಡಾಪ್ಟೆಬಿಲಿಟಿ ಟೆಸ್ಟ್‌, ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಹತೆ: ಮೆಡಿಕಲ್‌ ಅಸಿಸ್ಟೆಂಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 2,2004 ರಿಂದ 2008 ರ ಜನವರಿ 02 ರ ನಡುವೆ ಜನಿಸಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು.
ಮೆಡಿಕಲ್‌ ಅಸಿಸ್ಟಂಟ್‌ ಟ್ರೇಡ್‌ (ಡಿಪ್ಲೋಮ/ಬಿಎಸ್ಸಿ ಇನ್‌ ಫಾರ್ಮಸಿ) ಹುದ್ದೆಗೆ ಅರ್ಜಿ ಸಲ್ಲಿಸುವವರು 2011 ರ ಜನವರಿ 02 ರಿಂದ 2004 ರ ಜನವರಿ 02 ರ ನಡುವೆ ಜನಿಸಿರಬೇಕು. ಅವಿವಾಹಿತ ಪುರುಷ ಅಭ್ಯರ್ಥಿ, ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ.

ವಿದ್ಯಾರ್ಹತೆ: ಪಿಯುಸಿಯನ್ನು ಕಡ್ಡಾಯ ಫಿಸಿಕ್ಸ್‌, ಕೆಮಿಸ್ಟ್ರಿ, ಬಯೋಲಜಿ ಮತ್ತು ಇಂಗ್ಲೀಷ್‌ನಲ್ಲಿ ಶೇ.50 ರಷ್ಟು ಅಂಕದೊಂದಿಗೆ ಪಾಸಾಗಿರಬೇಕು.

ವೇತನ: ಭಾರತೀಯ ವಾಯುಪಡೆಯ ಏರ್‌ಮೆನ್‌ ಗ್ರೂಪ್‌ ವೈ ಹುದ್ದೆಗೆ ತರಬೇತಿ ಸಮಯದಲ್ಲಿ ರೂ.14,900 ಮಾಸಿಕ ಸ್ಟೈಫಂಡ್‌ ನೀಡಲಾಗುವುದು. ತರಬೇತಿ ನಂತರ ಮಿಲಿಟರಿ ಸೇವೆಗಳ ಬೇಸಿಕ್‌ ಪೇ ರೂ.26,900 ಜೊತೆಗೆ ಇತರೆ ಭತ್ಯೆ ಸಿಗಲಿದೆ.

ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ