Category: Central Govt Jobs

Central Govt Jobs News in Kannada, Central Govt Employment News in Kannada, UPSC, Indian Railway Jobs, Bank Jobs News, Airforce Recruitment, Indian Army, Agniveer Jobs updates all Central govt jobs read in Sarakarijobs.com

  • BEL ನಲ್ಲಿ ಅಪ್ರೆಂಟಿಸ್ ಶಿಪ್ :  ಐಟಿಐ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

    BEL ನಲ್ಲಿ ಅಪ್ರೆಂಟಿಸ್ ಶಿಪ್ : ಐಟಿಐ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

    ಭಾರತೀಯ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಮತ್ತು ಭಾರತದ ಪ್ರಥಮ ವೃತ್ತಿಪರ ಎಲೆಕ್ಟ್ರಾನಿಕ್ಸ್ ಸಾರ್ವಜನಿಕ ವಲಯದ ನವರತ್ನ ಕಂಪನಿ ಆಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಬೆಂಗಳೂರು, ಕಾರ್ಖಾನೆಯಲ್ಲಿ ಶಿಶಿಕ್ಷು ಕಾಯಿದೆ 1961 ರ ಅಡಿಯಲ್ಲಿ 2021-22 ನೇ ಸಾಲಿನ ಅವಧಿಗೆ ಅಪ್ರೆಂಟಿಶಿಪ್ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021

    ಹುದ್ದೆಗಳ ವಿವರ : ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಇಲೆಕ್ಟ್ರೀಷಿಯನ್, ಮೆಶಿನಿಸ್ಟ್, ಟರ್ನರ್, ಡ್ರಾಫ್ಟ್ ಮೆನ್ ಮೆಕ್ಯಾನಿಕ್, ಎಲೆಕ್ಟ್ರೋ ಪ್ಲಾಟರ್, ಮೆಕ್ಯಾನಿಕ್ ಶೈತ್ಯೀಕರಣ ಮತ್ತು ಹವಾನಿಯಂತ್ರಣ ( ಎಮ್ ಆರ್ & ಎಸಿ), ಕಂಪ್ಯೂಟರ್ ಅಪರೇಟರ್ ಪ್ರೊಗ್ರಾಮಿಂಗ್ ಅಸಿಸ್ಟೆಂಟ್ ( ಕೋಪಾ), ವೆಲ್ಡರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ 01-01-2018 ರಂದು ಅಥವಾ ನಂತರ ಐಟಿಐ ಪಾಸಾಗಿರಬೇಕು.

    ಅಭ್ಯರ್ಥಿಗಳು ಎನ್ ಸಿವಿಟಿ / ಎಸ್ ಸಿವಿಟಿ ಮಂಡಳಿಗಳು ನೀಡಿದ ಐಟಿಐ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.

    ವಯಸ್ಸಿನ ಮಿತಿ : 21 ವರ್ಷಗಳು. ಎಸ್ ಸಿ/ ಎಸ್ ಟಿ ವರ್ಗಕ್ಕೆ 5 ವರ್ಷ, ಒಬಿಸಿ ವರ್ಗಕ್ಕೆ 3 ವರ್ಷಗಳ ವಯಸ್ಸಿನ ಮಿತಿಯಲ್ಲಿ ವಿನಾಯಿತಿ ನೀಡಲಾಗುವುದು. ಮತ್ತು ಕನಿಷ್ಠ 40% ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ 10 ವರ್ಷಗಳ ವಿನಾಯಿತಿ ನೀಡಲಾಗುವುದು.

    ಬೇರೆ ಯಾವುದೇ ಸಂಸ್ಥೆಯಲ್ಲಿ ಈಗಾಗಲೇ ಅಪ್ರೆಂಟಿಸ್ ಶಿಪ್ ತರಬೇತಿ ಪಡೆಯುತ್ತಿರುವವರು ತರಬೇತಿಗಾಗಿ ನೋಂದಾಯಿಸಿಕೊಂಡ ಅಭ್ಯರ್ಥಿಗಳು ಅರ್ಹರಲ್ಲ.

    ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹರು.

    ಆಯ್ಕೆ ಪ್ರಕ್ರಿಯೆ : ಎಸ್ ಎಸ್ ಎಲ್ ಸಿ/ 10 ನೇ ತರಗತಿ ಮತ್ತು ಐಟಿಐ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

    ಅಂತಿಮ ಆಯ್ಕೆಯ ಫಲಿತಾಂಶವನ್ನು ಬಿಇಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಅಥವಾ ಪ್ರಮಾಣ ಪತ್ರಗಳ‌ ಪರಿಶೀಲನೆಯ ದಿನಾಂಕದಂದು ತತಕ್ಷಣ ಆಯ್ಕೆಯ ಪತ್ರವನ್ನು ‌ನೀಡಲಾಗುವುದು. ಅಥವಾ ಎಸ್ ಎಂಎಸ್ / ಇ- ಮೇಲ್ ಮೂಲಕ ತಿಳಿಸಲಾಗುವುದು.

    ಆಸಕ್ತ ಅಭ್ಯರ್ಥಿಗಳು ಕೆಳಗೆ ತಿಳಿಸಲಾದ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಜೊತೆಗೆ 10/ನೇ / ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್, ಐಟಿಐ ಮಾರ್ಕ್ಸ್ ಕಾರ್ಡ್, ಜಾತಿ‌ಪ್ರಮಾಣ ಪತ್ರ( ಅನ್ವಯಿಸಿದ್ದರೆ ) ಮತ್ತು ಆಧಾರ್ ಕಾರ್ಡ್ ಗಳನ್ನು ಲಗತ್ತಿಸಬೇಕು.

    ವಿಳಾಸ : Deputy Manager ( HR/CLD), centre for learning and development, Bharat Electronics Limited, Jalahalli post, Bengaluru-560013

    ಹೆಚ್ಚಿನ ವಿವರಗಳು ಹಾಗೂ ಸ್ಪಷ್ಟೀಕರಣಗಳಿಗಾಗಿ ದಯವಿಟ್ಟು ಸಂಪರ್ಕಿಸಿ , ಇ – ಮೇಲ್: [email protected] ಅಥವಾ 080-22195323

    ಹೆಚ್ಚಿನ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • 63 ಲಕ್ಷ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನಗಳ ಘೋಷಣೆ : ವಿವರಗಳು ಇಲ್ಲಿದೆ

    63 ಲಕ್ಷ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನಗಳ ಘೋಷಣೆ : ವಿವರಗಳು ಇಲ್ಲಿದೆ

    5 ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಮಾನದಂಡಗಳಿಗೆ ಸಮನಾಗಿ ಎಸ್ ಸಿಗಳಲ್ಲಿ ಒಟ್ಟು ದಾಖಲಾತಿ ಅನುಪಾತವನ್ನು (ಉನ್ನತ ಶಿಕ್ಷಣ) ತರಲು ಭಾರತ ಸರಕಾರವು ರಾಜ್ಯ ಸರಕಾರದೊಂದಿಗೆ ಕೂಡಿ 2021-22 ರ ಅವಧಿಯಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 63 ಲಕ್ಷ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನವನ್ನು ‌ನೀಡಲಿದೆ.

    ಅರ್ಹತೆ : ಎಸ್ ಸಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ 11ನೇ ತರಗತಿ ಮತ್ತು ಅದಕ್ಕಿಂತ ಮೇಲಿನ ತರಗತಿಯಲ್ಲಿ ಅಧ್ಯಯನ ಮಾಡಲು ಅವರ ಪೋಷಕರ ವಾರ್ಷಿಕ ಆದಾಯ ರೂ.< 25 ಲಕ್ಷ ಇರಬೇಕು.

    ಉಪಯೋಗಗಳು : ಕೋರ್ಸ್ ನ ಸಂಪೂರ್ಣ ಅವಧಿಗೆ ವಿದ್ಯಾರ್ಥಿವೇತನವು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ.
    ಬೋಧನಾ ಶುಲ್ಕ ಸೇರಿದಂತೆ ಕಡ್ಡಾಯ ಮರುಪಾವತಿಸಬೇಕಾದ ಶುಲ್ಕಗಳು.
    ಶಿಕ್ಷಣದ ಮಟ್ಟವನ್ನು ಆಧರಿಸಿ ವಾರ್ಷಿಕ ‌2500 ರಿಂದ 13500 ರವರೆಗೆ ಶೈಕ್ಷಣಿಕ ಭತ್ಯೆ.
    ದಿವ್ಯಾಂಗ ವಿದ್ಯಾರ್ಥಿಗಳಿಗೆ ಹತ್ತು ಪರ್ಸೆಂಟ್ ಹೆಚ್ಚುವರಿ ಭತ್ಯೆ ನೀಡಲಾಗುವುದು.
    ಎಲ್ಲಾ ಅರ್ಹ ವಿದ್ಯಾರ್ಥಿಗಳು ಬೋಧನಾ ‌ಶುಲ್ಕ‌ಮತ್ತು ಹಾಸ್ಟೆಲ್ ಶುಲ್ಕವನ್ನು ‌ಮೊದಲೇ ಪಾವತಿಸದೆ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.
    ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರಗಳು ಫ್ರೀ ಶಿಪ್ ಕಾರ್ಡ್ ನೀಡುವ ಮೂಲಕ ಶುಲ್ಕವನ್ನು ಮೊದಲೇ ಪಾವತಿಸದೆ ಸಂಸ್ಥೆಯಲ್ಲಿ ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತವೆ‌

    ಅರ್ಜಿಗಳು : ಎಲ್ಲಾ ಅರ್ಹ ವಿದ್ಯಾರ್ಥಿಗಳು ರಾಜ್ಯ ಸರಕಾರದ ಆನ್ಲೈನ್ ‌ವಿದ್ಯಾರ್ಥಿವೇತನ ವೇದಿಕೆಯಲ್ಲಿ 2021 ರ ಎಪ್ರಿಲ್ 16 ಜೂನ್ 30 ರವರೆಗೆ ಪ್ರಾರಂಭವಾಗುವ ಮೊದಲ ಕರೆಯಲ್ಲಿ ಅರ್ಜಿ ಸಲ್ಲಿಸಬಹುದು.
    ಯಾವುದೇ ತೊಂದರೆಗಳಿದ್ದಲ್ಲಿ ರಾಜ್ಯ ಸರಕಾರದ ಕುಂದುಕೊರತೆ ಪರಿಹಾರ ಸಂಖ್ಯೆಗೆ ಕರೆ ಮಾಡಿ ಅಥವಾ ರಾಜ್ಯ ಸರಕಾರದ ‌ಸಮಾಜ ಕಲ್ಯಾಣ ಆಯುಕ್ತರನ್ನು ಸಂಪರ್ಕಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.socialjustice.nic.in ನಲ್ಲಿ ನೋಡಬಹುದು.

  • ಧಾರವಾಡ ಕೃಷಿ ವಿಶ್ವವಿದ್ಯಾಲಯ : ಹುದ್ದೆಗಳ ನೇಮಕ

    ಧಾರವಾಡ ಕೃಷಿ ವಿಶ್ವವಿದ್ಯಾಲಯ : ಹುದ್ದೆಗಳ ನೇಮಕ

    ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧಿಕಾರಿ ವೃಂದದ ವಿವಿಧ ಹುದ್ದೆಗಳಿಗೆ (ನಿಶ್ಚಿತಾವಧಿಯ ಹುದ್ದೆಗಳು) ನೇರ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಅಧಿಕಾರಿ ವೃಂದದ ವಿವಿಧ (ನಿಶ್ಚಿತಾವಧಿಯ) ಹುದ್ದೆಗಳಿಗೆ ನೇಮಕಾತಿಗಾಗಿ ಉಲ್ಲೇಖಿತ ವಿಶ್ವವಿದ್ಯಾಲಯದ ಅಧಿಸೂಚನೆ ಮೂಲಕ ಜಾಹೀರುಪಡಿಸಲಾಗಿದೆ.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.uasd.edu ವೆಬ್‌ಸೈಟ್‌ ಗೆ ಭೇಟಿ ನೀಡಬಹುದು.

  • LIC : ಅಸೋಸಿಯೇಟ್ ಹುದ್ದೆ

    LIC : ಅಸೋಸಿಯೇಟ್ ಹುದ್ದೆ

    ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈ ಈಗಾಗಲೇ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ಜೂನ್ 07, 2021 ಕೊನೆಯ ದಿನಾಂಕವಾಗಿದೆ. ಆಸಕ್ತರು ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

    ವಿದ್ಯಾರ್ಹತೆ :ಸೋಶಿಯಲ್ ವರ್ಕ್ / ರೂರಲ್ ಡೆವಲಪ್ಮೆಂಟ್ ಮಾಸ್ಟರ್ ಡಿಗ್ರಿ ನ್ನು ಶೇ.55 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ದೂರ ಶಿಕ್ಷಣ , ಕರೆಸ್ಪಾಂಡೆನ್ಸ್ ಡಿಗ್ರಿ ಓದಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

    ವಯೋಮಿತಿ : ದಿನಾಂಕ ೦1-೦1-2021 ಕ್ಕೆ ಕನಿಷ್ಠ 23 ವರ್ಷದಿಂದ 30 ವರ್ಷ ಗರಿಷ್ಠ ವಯೋಮಿತಿ ಮೀರದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

    ಕಾರ್ಯಾನುಭವ : ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಪ್ರಾಜೆಕ್ಟ್ ಸೈಕಲ್ ಮ್ಯಾನೇಜ್ಮೆಂಟ್, ಮಾನಿಟರಿಂಗ್ ಮತ್ತು ಇವ್ಯಾಲುಯೇಷನ್‌ ಆಫ್ ಪ್ರಾಜೆಕ್ಟ್ ಸಿಎಸ್‌ಆರ್‌ ಫೌಂಡೇಶನ್ ಮತ್ತು ಆರ್ಗನೈಸೇಷನ್‌ನಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು.

    ಉದ್ಯೋಗ ಸ್ಥಳ : ದೆಹಲಿ ಕೋಲ್ಕತ್ತ, ಭೋಪಾಲ್ , ಮುಂಬೈ

    ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ ವಿಲಾಸ ಕ್ಕೆ ಭೇಟಿ ನೀಡಿ ಕೆರಿಯರ್ ವಿಭಾಗದಲ್ಲಿ ಸಬ್ಮಿಟ್ ರೆಸ್ಯುಮ್ ಎಂಬಲ್ಲಿ ಕ್ಲಿಕ್ ಮಾಡಿ ನಂತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

    ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • AI Airport : ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    AI Airport : ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

    ಎಐ ಏರ್ ಪೋರ್ಟ್ ಸರ್ವೀಸಸ್‌ ಲಿಮಿಟೆಡ್‌ ( ಹಿಂದೆ ಏರ್ ಇಂಡಿಯಾ ಟ್ರಾನ್ಸ್ ಪೋರ್ಟ್ ಸರ್ವೀಸಸ್‌ ಲಿಮಿಟೆಡ್‌) ಎಂಬುದಾಗಿತ್ತು. ಕೆಳಕಂಡ ಹುದ್ದೆಗಳಿಗಾಗಿ ನಿಗದಿತ ಅರ್ಹತಾ ಅಗತ್ಯತೆಗಳನ್ನು ಹೊಂದಿರುವ ಭಾರತೀಯ ರಾಷ್ಟ್ರೀಯರಿಂದ (ಪುರುಷ ಮತ್ತು ಮಹಿಳೆ) ಅರ್ಜಿ ಗಳನ್ನು ಆಹ್ವಾನಿಸಿದೆ. ಹುದ್ದೆಗಳು ನಿಶ್ಚಿತ ಗುತ್ತಿಗೆ ಅವಧಿಯದ್ದಾಗಿದ್ದು, ಉದ್ಯೊಗಿಯ ಉತ್ತಮ ಸಾಮರ್ಥ್ಯ ಮತ್ತು ಸೇವೆಗಳನ್ನು ಮತ್ತು ಎಐ ಏರ್ ಪೋರ್ಟ್ ಸರ್ವಿಸಸ್ ಲಿಮಿಟೆಡ್ ( ಹಿಂದೆ ಏರ್ ಇಂಡಿಯಾ ಟ್ರಾನ್ಸ್ ಪೋರ್ಟ್ ಸರ್ವಿಸಸ್ ಲಿಮಿಟೆಡ್ ) ನ ಅವಶ್ಯಕತೆಯನ್ನು ಅನುಸರಿಸಿ ಅವಧಿಯ ಮುಂದುವರಿಕೆ ಬದ್ಧವಾಗಿರುತ್ತದೆ ಮತ್ತು ಖಾಲಿಯಿರುವ ಕೆಳಕಂಡಂತೆ ತಿಳಿಸಿದ ಹುದ್ದೆಗಳು ಭರ್ತಿ ಮಾಡುವುದಕ್ಕೆ ಮತ್ತು ಮುಂದೆ ಭರ್ತಿ ಮಾಡಬಹುದಾದ ಹುದ್ದೆಗಳಿಗೆ ಕಾಯುವ ಪಟ್ಟಿ ಸಿದ್ಧಪಡಿಸುವುದಕ್ಕಾಗಿ ಇರುತ್ತವೆ.

    ಹುದ್ದೆ : ವ್ಯವಸ್ಥಾಪಕ – ಹಣಕಾಸು – 04
    ಲೆಕ್ಕಪತ್ರ – ಅಧಿಕಾರಿ – 07
    ಸಹಾಯಕ – ಲೆಕ್ಕಪತ್ರ – 04

    ಅರ್ಜಿ ನಮೂನೆ ಮತ್ತು ಇತರೆ ವಿವರಗಳಿಗಾಗಿ ವೆಬ್‌ಸೈಟ್‌ www.airindia.in(career) ನಲ್ಲಿ ಜಾಹೀರಾತುಗಳನ್ನು ನೋಡುವುದು.

  • ಮಂಡ್ಯ : 183 ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಮಂಡ್ಯ : 183 ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ , ಸಾರ್ವಜನಿಕ ಆಸ್ಪತ್ರೆ ಹಾಗೂ ಉಪ ವಿಭಾಗೀಯ ಆಸ್ಪತ್ರೆಗಳಲ್ಲಿ ಕೋವಿಡ್-19 ಕರ್ತವ್ಯ ನಿರ್ವಹಿಸಲು ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲು ಮಹಿಳಾ ಆರೋಗ್ಯ ಸಹಾಯಕಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.

    ಆಸಕ್ತರು ದಿ.26.05.2021 ರಂದು ಬೆಳಿಗ್ಗೆ 11.00 ಗಂಟೆಯಿಂದ ಸಂಜೆ‌ 4.00 ಗಂಟೆಯ ಒಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕೊಠಡಿಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗುವುದು.

    ಹುದ್ದೆ : ಕಿರಿಯ ಆರೋಗ್ಯ ಮಹಿಳಾ ಸಹಾಯಕಿ

    ಒಟ್ಟು ಹುದ್ದೆ ಸಂಖ್ಯೆ : 183

    ಮಾಸಿಕ ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.15,000/- ವೇತನವಿರುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ – 08232-224027 ರಲ್ಲಿ ಸಂಪರ್ಕಿಸಬಹುದು.