Category: Central Govt Jobs

Central Govt Jobs News in Kannada, Central Govt Employment News in Kannada, UPSC, Indian Railway Jobs, Bank Jobs News, Airforce Recruitment, Indian Army, Agniveer Jobs updates all Central govt jobs read in Sarakarijobs.com

  • CMFRI Jobs: ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ನೇಮಕಾತಿ-ಮಂಗಳೂರಿನಲ್ಲಿ ಕೆಲಸ

    CMFRI Jobs: ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ನೇಮಕಾತಿ-ಮಂಗಳೂರಿನಲ್ಲಿ ಕೆಲಸ

    CMFRI Recruitment 2024: ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ CMFRI ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಯುವ ವೃತ್ತಿಪರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು 29-ಫೆಬ್ರವರಿ-2024 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು. ಮಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಹುದ್ದೆಯು ಸೇರ್ಪಡೆಗೊಂಡ ದಿನಾಂಕದಿಂದ ಅಥವಾ ಯೋಜನೆಯ ಮುಕ್ತಾಯದವರೆಗೆ ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ಇರುತ್ತದೆ.

    ಪ್ರಮುಖ ದಿನಾಂಕಗಳು;
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 13-02-2024
    ನೇರ ಸಂದರ್ಶನಕ ದಿನಾಂಕ: 29-ಫೆಬ್ರವರಿ-2024

    ಹುದ್ದೆಗಳ ಸಂಖ್ಯೆ: ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CMFRI) ಯಂಗ್ ಪ್ರೊಫೆಷನಲ್-I ಹುದ್ದೆಗಳು ಖಾಲಿ ಇದೆ.

    ಪೋಸ್ಟಿಂಗ್‌: ICAR-CMFRI ನ ಪ್ರಾದೇಶಿಕ ಕೇಂದ್ರ, ಮಂಗಳೂರು

    ವೇತನ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ರೂ. 30,000/- ವೇತನ ಸಿಗಲಿದೆ

    ಶೈಕ್ಷಣಿಕ ಅರ್ಹತೆ: CMFRI ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಡಿಪ್ಲೊಮಾ, ಪದವಿ, B.Sc, B.F.Sc ತೇರ್ಗಡೆ ಹೊಂದಿರಬೇಕು. ಕ್ಷೇತ್ರ ಆಧಾರಿತ (Field Oriented) ಚಟುವಟಿಕೆಗಳಲ್ಲಿ ಅನುಭವ ಇರುವವರಿಗೆ ಆದ್ಯತೆ.

    ವಯಸ್ಸಿನ ಮಿತಿ: ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯೋಮಿತಿಯು ಕನಿಷ್ಠ 21 ವರ್ಷ ಆಗಿರಬೇಕು. ಹಾಗೆನೇ ಗರಿಷ್ಠ 45 ವರ್ಷಗಳನ್ನು ಮೀರರಬಾರದು. ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

    29.02.2024 ರಂದು (10.00 ಗಂಟೆ) ICAR-CMFRI ನ ಮಂಗಳೂರು ಪ್ರಾದೇಶಿಕ ಕೇಂದ್ರದ ಕಛೇರಿ, ಹೊಗೆ ಬಜಾರ್, ಮಂಗಳೂರು-575001 ರಲ್ಲಿ “ಸಮಾಲೋಚನೆ ಯೋಜನೆಯಡಿಯಲ್ಲಿ ಯುವ ವೃತ್ತಿಪರ-1 ರ ನೇಮಕಾತಿಗಾಗಿ ವಾಕ್-ಇನ್-ಇಂಟರ್ವ್ಯೂ ಮಾಡಲಾಗುವುದು. ಮತ್ತು ಸ್ಟಾಕ್ ಅಸೆಸ್‌ಮೆಂಟ್ ಆಫ್ ಸ್ಮಾಲ್ ಪೆಲೇಜಿಸ್ ಇನ್ ಪರ್ಸ್ ಸೀನ್‌ಸ್ ಅಂಡ್ ಕರ್ನಾಟಕ ಕರಾವಳಿಯುದ್ದಕ್ಕೂ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಅರ್ಹ ಅಭ್ಯರ್ಥಿಗಳು ತಮ್ಮ ಬಯೋ-ಡೇಟಾವನ್ನು ಮೂಲ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳೊಂದಿಗೆ [email protected] ಗೆ 29.02.2024 ರೊಳಗೆ ತಲುಪಿಸಬೇಕು. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಇ-ಮೇಲ್ ಮೂಲಕ ತಿಳಿಸಲಾಗುವುದು. ಅಂತಹ ಅಭ್ಯರ್ಥಿಗಳು ನಿರ್ದಿಷ್ಟ ದಿನಾಂಕ ಮತ್ತು ಸಮಯದಂದು ಸಂದರ್ಶನಕ್ಕೆ ಹಾಜರಾಗಬಹುದು. ಈ ನೇಮಕಾತಿಯು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ತಾತ್ಕಾಲಿಕ ಆಧಾರದ ಮೇಲೆ ನೇಮಕ ಮಾಡಲಾಗುವುದು.

    ಅಗತ್ಯ ವಿದ್ಯಾರ್ಹತೆ ಸೇರಿದಂತೆ ಮೆಟ್ರಿಕ್ಯುಲೇಷನ್‌ನಿಂದ ಎಲ್ಲಾ ಮೂಲ ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿದ ರೂಪದಲ್ಲಿ crofrimngigmail.com ಗೆ 29.02.2024 ರಂದು ಅಥವಾ ಮೊದಲು ಕಳುಹಿಸಬೇಕು, ಈ ಪ್ರಮಾಣಪತ್ರಗಳಿಲ್ಲದೆ, ಅರ್ಜಿದಾರರನ್ನು ಸಂದರ್ಶನಕ್ಕೆ ಹಾಜರಾಗಲು ಅನುಮತಿಸಲಾಗುವುದಿಲ್ಲ.

  • RRB Technician Recruitment 2024: ರೈಲ್ವೆ ಇಲಾಖೆಯಲ್ಲಿ ಬೃಹತ್‌ ಉದ್ಯೋಗಾವಕಾಶ; ಭರ್ಜರಿ 9000 ಹುದ್ದೆಗಳು,ಐಟಿಐ, ಡಿಪ್ಲೋಮಾ, ಬಿಇ ಪಾಸಾದವರಿಗೆ ಸಿಹಿ ಸುದ್ದಿ

    RRB Technician Recruitment 2024: ರೈಲ್ವೆ ಇಲಾಖೆಯಲ್ಲಿ ಬೃಹತ್‌ ಉದ್ಯೋಗಾವಕಾಶ; ಭರ್ಜರಿ 9000 ಹುದ್ದೆಗಳು,ಐಟಿಐ, ಡಿಪ್ಲೋಮಾ, ಬಿಇ ಪಾಸಾದವರಿಗೆ ಸಿಹಿ ಸುದ್ದಿ

    RRB Technician Recruitment 2024: ಕೇಂದ್ರ ಸರಕಾರಿ ಹುದ್ದೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ರೈಲ್ವೆ ಇಲಾಖೆಯು ಖಾಲಿ ಇರುವ 9000 ಟೆಕ್ನಿಷಿಯನ್‌ ಹುದ್ದೆಗಳಿಗೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಿದೆ. ಟೆಕ್ನಿಷಿಯನ್ಸ್ ಗ್ರೇಡ್ III ರ ವಿವಿಧ ವಿಭಾಗಗಳಿಗೆ ಮತ್ತು ಟೆಕ್ನಿಷಿಯನ್ ಗ್ರೇಡ್ 1 ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08-04-2024. ಅಭ್ಯರ್ಥಿಗಳು ಎಲ್ಲಾ ರೀತಿಯಲ್ಲೂ ಪೂರ್ಣಗೊಂಡ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು.

    ದೇಶದ ಎಲ್ಲಾ ರೈಲ್ವೇ ವಲಯಗಳಲ್ಲಿ ನೇಮಕ ಮಾಡಲು ಕಿರು ನೋಟಿಫಿಕೇಶನ್‌ನ್ನು ಬಿಡುಗಡೆ ಮಾಡಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 09-03-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-04-2024

    ಹುದ್ದೆಗಳ ವಿವರ: ಟೆಕ್ನಿಷಿಯನ್‌ ಗ್ರೇಡ್‌-1 ಸಿಗ್ನಲ್‌-1100
    ಟೆಕ್ನಿಷಿಯನ್‌ ಗ್ರೇಡ್‌ 111-7900 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ವೇತನ: ಟೆಕ್ನಿಷಿಯನ್‌ ಗ್ರೇಡ್‌ 1 ಸಿಗ್ನಲ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.29,200 ಮಾಸಿಕ ವೇತನ ಸಿಗಲಿದೆ
    ಟೆಕ್ನಿಷಿಯನ್‌ ಗ್ರೇಡ್‌ 111 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.19,900 ವೇತನ ದೊರಕಲಿದೆ.

    ವಯೋಮಿತಿ: ಟೆಕ್ನಿಷಿಯನ್‌ ಗ್ರೇಡ್‌ 1 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ಆಗಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 36 ವರ್ಷ ಮೀರಿರಬಾರದು.
    ಟೆಕ್ನಿಷಿಯನ್‌ ಗ್ರೇಡ್‌ 111 ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ಆಗಿರಬೇಕು. ಗರಿಷ್ಠ ವಯೋಮಿತಿ 33 ಮೀರರಬಾರದು.

    ಶೈಕ್ಷಣಿಕ ಅರ್ಹತೆ: ವಿವಿಧ ಹುದ್ದೆಗಳಿಗೆ ವಿವಿಧ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, RRB ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ವಿವರ ನೀಡಲಾಗಿದೆ.

    ಅರ್ಜಿ ಶುಲ್ಕ: Gen/OBC/EWS ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.500 ಪಾವತಿ ಮಾಡಬೇಕು.
    SC, ST, ಮಾಜಿ ಸೈನಿಕರು, EBC/ ಮಹಿಳಾ ಅಭ್ಯರ್ಥಿಗಳಿಗೆ ರೂ.250
    ಟ್ರಾನ್ಸ್ಜೆಂಡರ್, ಅಲ್ಪಸಂಖ್ಯಾತರು ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗ (ಇಬಿಸಿ) ರೂ.250/-ಗಳ ಈ ಶುಲ್ಕವನ್ನು CBT ಯಲ್ಲಿ ಕಾಣಿಸಿಕೊಂಡಾಗ ಅನ್ವಯವಾಗುವಂತೆ ಬ್ಯಾಂಕ್ ಶುಲ್ಕಗಳನ್ನು ಕಡಿತಗೊಳಿಸಿ ಮರುಪಾವತಿ ಮಾಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕಿರು ನೋಟಿಫಿಕೇಶನ್‌ ಕ್ಲಿಕ್‌ ಮಾಡಬಹುದು.

  • Ballari Grama Panchayath Jobs: ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ಮೇಲ್ವಿಚಾರಕರ 14 ಹುದ್ದೆ, ದ್ವಿತೀಯ ಪಿಯುಸಿ ಆದವರು ಅರ್ಜಿ ಸಲ್ಲಿಸಿ

    Ballari Grama Panchayath Jobs: ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ಮೇಲ್ವಿಚಾರಕರ 14 ಹುದ್ದೆ, ದ್ವಿತೀಯ ಪಿಯುಸಿ ಆದವರು ಅರ್ಜಿ ಸಲ್ಲಿಸಿ

    Ballari Grama Panchayat Recruitment 2024: ಬಳ್ಳಾರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ 14 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕರ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಆರಂಭಿಕ ದಿನಾಂಕ -08/02/2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 28/02/2024

    ಹುದ್ದೆ ವಿವರಗಳು ಈ ಕೆಳಗಿನಂತಿದೆ.
    ಹುದ್ದೆ ಹೆಸರು:
    ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕರು

    ಹುದ್ದೆ ಸಂಖ್ಯೆ: ಬಳ್ಳಾರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಒಟ್ಟು ಎಂಟು ಗ್ರಾಮ ಪಂಚಾಯಿತಿಗಳಿಗೆ ನೂತನವಾಗಿ ಗ್ರಾಮಪಂಚಾಯಿತಿ ಗ್ರಂಥಾಲಯ ಮ್ತು ಮಾಹಿತಿ ಕೇಂದ್ರಗಳು ಮಂಜೂರಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಒಂದರಂತೆ ಒಟ್ಟು ಎಂಟು ಹುದ್ದೆಗಳು ಮತ್ತು ರಾಜೀನಾಮೆ, ನಿವೃತ್ತಿ ಕಾರಣದಿಂದ ತೆರವಾದ ಆರು ಹುದ್ದೆಗಳು ಸೇರಿ ಒಟ್ಟು 14 ಹುದ್ದೆಗಳು ಖಾಲಿ ಇದೆ.

    ಶೈಕ್ಷಣಿಕ ವಿದ್ಯಾರ್ಹತೆ: ಪಿಯುಸಿ ಯಲ್ಲಿ ಉತ್ತೀರ್ಣರಾಗಿರಬೇಕು. ಮತ್ತು ಸರ್ಟಿಫಿಕೇಷನ್‌ ಕೋರ್ಸ್‌ ಇನ್‌ ಲೈಬ್ರರಿ ಸೈನ್ಸ್‌ನಲ್ಲಿ ಪ್ರಮಾಣ ಪತ್ರ ಪಡೆದಿರತಕ್ಕದ್ದು. ಕನಿಷ್ಠ ಮೂರು ತಿಂಗಳ ಕಂಪ್ಯೂಟರ್‌ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.

    ವಾಸಸ್ಥಳ: ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಯಾಗಿರತಕ್ಕದ್ದು.

    ವಯೋಮಿತಿ: ಮೇಲಿನ ಹುದ್ದೆಗೆ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ಪೂರೈಸಿರತಕ್ಕದ್ದು. ಹಾಗೂ ಗರಿಷ್ಠ ವಯೋಮಿತಿಯು ಈ ಕೆಳಕಂಡಂತೆ ನೀಡಲಾಗಿದೆ.
    ಸಾಮಾನ್ಯ ವರ್ಗ 35ವರ್ಷ, 2ಎ, ಎಬಿ, 3ಎ,3ಬಿ -38 ವರ್ಷ, ಪ.ಜಾತಿ/ಪ.ಪಂಗಡ/ಪ್ರ-1 40 ವರ್ಷ

    ಅರ್ಜಿ ಶುಲ್ಕ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಆಯ್ಕೆ ವಿಧಾನ
    ಶೈಕ್ಷಣಿಕ ಅರ್ಹತೆಯಲ್ಲಿನ ಮೆರಿಟ್‌ ಮತ್ತು ರೋಸ್ಟರ್‌ ಮೀಸಲಾತಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಒಂದು ವೇಳೆ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಸಮಾನವಾದ ಅಂಕಗಳನ್ನು/ಮೆರಿಟ್‌ ಅನ್ನು ಹೊಂದಿದ್ದಲ್ಲಿ ವಯಸ್ಸಿನಲ್ಲಿ ಹಿರಿಯರಾದವರನ್ನು ಆಯ್ಕೆಗೆ ಪರಿಗಣಿಸಲಾಗುವುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

    ಅರ್ಜಿ ಸಲ್ಲಿಸುವ ವಿಧಾನ
    ಅರ್ಜಿಯನ್ನು ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ವೆಬ್‌ಸೈಟ್‌ ವಿಳಾಸ https://ballari.nic.in ದಲ್ಲಿ ಸಲ್ಲಿಸುವುದು.
    ಅರ್ಜಿ ಶುಲ್ಕ ವಿನಾಯಿತಿಸಲಾಗಿದೆ
    ಅರ್ಜಿಯೊಂದಿಗೆ ಈ ಕೆಳಕಾಣಿಸಿದ ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು
    ಪಿಯುಸಿ ಅಂಕಪಟ್ಟಿ, ಸರ್ಟಿಫಿಕೇಷನ್‌ ಕೋರ್ಸ್‌ ಇನ್‌ ಲೈಬ್ರರಿ ಸೈನ್ಸ್‌ನಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿ, ಮೂರು ತಿಂಗಳ ಕಂಪ್ಯೂಟರ್‌ ಕೋರ್ಸ್‌ ಪಡೆದಿರುವ ಪ್ರಮಾಣ ಪತ್ರ, ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ, ಜಾತಿ ಮತ್ತು ಆದಾರಯ ಪ್ರಮಾಣ ಪತ್ರ

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • NMDC Recruitment 2024: ಎನ್‌ಎಂಡಿಸಿಯಲ್ಲಿ ಉದ್ಯೋಗ: ಐಟಿಐ ಪಾಸಾದವರರು ಅರ್ಜಿ ಹಾಕಿ

    NMDC Recruitment 2024: ಎನ್‌ಎಂಡಿಸಿಯಲ್ಲಿ ಉದ್ಯೋಗ: ಐಟಿಐ ಪಾಸಾದವರರು ಅರ್ಜಿ ಹಾಕಿ

    NMDC Recuitment 2024: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (NMDC) ದಲ್ಲಿ ಅಪ್ರೆಂಟಿಸ್‌ ತರಬೇತುದಾರ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. ವಿವಿಧ ಟ್ರೇಡ್‌ನಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದರ ಕುರಿತು ನೋಟಿಫಿಕೇಶನ್‌ನಲ್ಲಿ ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ, ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಐಟಿಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಹುದ್ದೆ: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಅಪ್ರೆಂಟಿಸ್‌ ತರಬೇತುದಾರರ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
    ಹುದ್ದೆ ಸಂಖ್ಯೆ: ಒಟ್ಟು 120 ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ.

    ಹುದ್ದೆಗಳ ವಿವರ: ಮೆಕ್ಯಾನಿಕ್‌ (ಮೋಟಾರ್‌ ವೆಹಿಕಲ್):‌ 20 ಹುದ್ದೆಗಳು
    ವೆಲ್ಡರ್ (ಗ್ಯಾಸ್‌ ಮತ್ತು ಇಲೆಕ್ಟ್ರಿಕಲ್)-‌20 ಹುದ್ದೆಗಳು
    ಮೆಕ್ಯಾನಿಕ್‌ ಡೀಸೆಲ್‌-25 ಹುದ್ದೆಗಳು
    ಫಿಟ್ಟರ್‌ – 20 ಹುದ್ದೆಗಳು
    ಇಲೆಕ್ಟ್ರೀಷಿಯನ್-‌ 30 ಹುದ್ದೆಗಳು
    ಮಷಿನಿಸ್ಟ್‌ – 5 ಹುದ್ದೆಗಳು

    ಹುದ್ದೆಯ ಅವಧಿ: ಒಂದು ವರ್ಷದವರೆಗೆ ಹುದ್ದೆ ಅವಧಿ ಇರುತ್ತದೆ. ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಆಧರಿಸಿ ಹುದ್ದೆಯ ಅವಧಿಯನ್ನು ಮುಂದುವರಿಸಲಾಗುವುದಾಗಿ ತಿಳಿಸಲಾಗಿದೆ.

    ಆಯ್ಕೆ ವಿಧಾನ: ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ತಾವು ಕಲಿತ ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ವಿದ್ಯಾರ್ಹತೆಗಳ ಅಂಕಗಳ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಲಾಗುವುದು.

    ಸ್ಟೈಫಂಡ್‌ ವಿವರ: ನಿಗದಿತ ಮಾಸಿಕ ಸ್ಟೈಫಂಡ್‌ ಅನ್ನು ನೇರ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

    ವಿದ್ಯಾರ್ಹತೆ: ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ನೋಟಿಫಿಕೇಶನ್‌ ಪ್ರಕಾರ ಐಟಿಐ ಪಾಸ್‌ (ವಿವಿಧ ಟ್ರೇಡ್‌ಗಳಲ್ಲಿ ಎನ್‌ಸಿವಿಟಿ/ ಎಸ್‌ಸಿವಿಟಿ ಪ್ರಮಾಣ ಪತ್ರ) ಆಗಿರಬೇಕು.

    ಸಂದರ್ಶನಕ್ಕೆ ನಿಗದಿ ಪಡಿಸಿದ ದಿನಾಂಕ: ಅಭ್ಯರ್ಥಿಗಳು ಆಧಾರ್‌ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಐಟಿಐ ಎನ್‌ಸಿವಿಟಿ/ಎಸ್‌ಸಿವಿಟಿ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳ ಜೊತೆಗೆ ದಿನಾಂಕ 22 ಫೆಬ್ರವರಿ, 2024 ರಿಂದ 26 ಫೆಬ್ರವರಿ 2024 ರವರೆಗೆ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು ಎಂದು ನೋಟಿಫಿಕೇಶನ್‌ನಲ್ಲಿ ತಿಳಿಸಲಾಗಿದೆ.

    ಸಂದರ್ಶನದ ಸಮಯದಲ್ಲಿ, ಅಭ್ಯರ್ಥಿಯು ತಮ್ಮ ರೆಸ್ಯೂಮ್ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ಜನ್ಮ ದಿನಾಂಕ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು (ಆಧಾರ್ ಲಿಂಕ್), ವಿಳಾಸ, ಪುರಾವೆಗಳನ್ನು ತರಬೇಕು.

    ಸಂದರ್ಶನ ನಡೆಯುವ ಸ್ಥಳ: Traimng Institute, BIHOM, Bacheli Complex, Bacheli, Pin Code: 494553, Dist. Dantewada (CG).

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ.

  • ಉದ್ಯೋಗಿ ಮೊದಲು ಗ್ರಾಚ್ಯುಟಿ ನಿಯಮಗಳಿಂದ ಅಚಲ ಆರ್ಥಿಕ ಪ್ರಯೋಜನ ಖಾತರಿ

    ಬೆಂಗಳೂರು,  ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು-2024 ಕರ್ನಾಟಕದಲ್ಲಿ ಉದ್ಯೋಗಿಗಳಿಗೆ ವರ್ಧಿತ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಕಂಪನಿಯು ಹಣಕಾಸಿನ ಸವಾಲುಗಳನ್ನು ಎದುರಿಸಿ, ಉದ್ಯೋಗಿಗಳಿಗೆ ಅವರ ಗ್ರಾಚ್ಯುಟಿ ಬದ್ಧತೆಗಳನ್ನು ಪೂರೈಸಲು ಸಾಧ್ಯವಾಗದ ಸಂದರ್ಭಗಳಲ್ಲಿ, ಗ್ರಾಚ್ಯುಟಿ ವಿಮೆಯು ನಿರ್ಣಾಯಕ ರಕ್ಷಣಾತ್ಮಕ ಹೆಜ್ಜೆ ಎನಿಸುತ್ತದೆ.

    ಸಂಭಾವ್ಯ ಇತಿಮಿತಿಗಳನ್ನು ಒಪ್ಪಿಕೊಂಡು, ಕಂಪನಿಗಳು ಗ್ರಾಚ್ಯುಟಿ ವಿಮೆಯನ್ನು ಹೊಂದಿರುವುದು ಈಗ ಕಡ್ಡಾಯವಾಗಿದೆ, ಕಂಪನಿಯು ನಷ್ಟದಿಂದ ಬಳಲುತ್ತಿದ್ದರೂ ಸಹ, ಉದ್ಯೋಗಿಗಳ ಗ್ರಾಚ್ಯುಟಿ ಸುರಕ್ಷಿತವಾಗಿದೆ ಎನ್ನುವುದನ್ನು ಇದು ಖಚಿತಪಡಿಸುತ್ತದೆ. ಮೂಲಭೂತವಾಗಿ, ಇದು ಉದ್ಯೋಗಿ-ಕೇಂದ್ರಿತ ನೀತಿಗಳಲ್ಲಿ ಪ್ರಮುಖ ಕ್ಷಣವನ್ನು ಗುರುತಿಸುತ್ತದೆ, ಸವಾಲಿನ ಸಮಯದಲ್ಲೂ ಸಹ ಉದ್ಯೋಗಿಗಳ ಸಮರ್ಪಣೆ ಮತ್ತು ನಿಷ್ಠೆಯನ್ನು ಆರ್ಥಿಕ ಭದ್ರತೆಯೊಂದಿಗೆ ಪೂರೈಸಲಾಗುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ.

    ಪಾಲಿಸಿಬಜಾರ್‍ನ ವಹಿವಾಟು ಮುಖ್ಯಸ್ಥರಾದ ಶ್ರೀ ಸಜ್ಜಾ ಪ್ರವೀಣ್ ಚೌಧರಿ ಹೇಳುವಂತೆ, “ನಾವು ಗ್ರಾಚ್ಯುಟಿ ಪಾವತಿಗಳ ವಿಕಾಸಶೀಲ ಪರಿಸರದಲ್ಲಿ ಮುನ್ನಡೆಯುತ್ತಿರುವಾಗ, ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು- 2024, ಉದ್ಯೋಗದಾತ-ಉದ್ಯೋಗಿಗಳ ಸಂಬಂಧಕ್ಕೆ ಹೊಸ ದೃಷ್ಟಿಕೋನವನ್ನು ತರುತ್ತದೆ. ಸಂಸ್ಥೆಗೆ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳನ್ನು ಬದ್ಧರಾಗಿರುವ ಉದ್ಯೋಗಿಗಳ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ, ಈ ನಿಯಮಗಳು ಸಂಭಾವ್ಯ ಅನ್ಯಾಯಗಳ ವಿರುದ್ಧ ಸುರಕ್ಷೆಯಾಗಿ ಕಾರ್ಯನಿರ್ವಹಿಸುತ್ತವೆ. ಉದ್ಯೋಗಿಯ ರಾಜೀನಾಮೆಯ ಸಂದರ್ಭದಲ್ಲಿ, ಗ್ರಾಚ್ಯುಟಿಯ ಅರ್ಹತೆಯು ಅವರ ಆರ್ಥಿಕ ಯೋಗಕ್ಷೇಮದ ನಿರ್ಣಾಯಕ ಅಂಶವಾಗಿದೆ. ಉದ್ಯೋಗದಾತನು ತನ್ನ ಉದ್ಯೋಗಿಗಳಿಗೆ ಅವನ/ಅವಳ ಜೇಬಿನಿಂದ ಗ್ರಾಚ್ಯುಟಿಯನ್ನು ಪಾವತಿಸಬಹುದು ಅಥವಾ ವಿಮಾ ಕಂಪನಿಯಿಂದ ಗುಂಪು ಗ್ರಾಚ್ಯುಟಿ ಯೋಜನೆಯನ್ನು ತೆಗೆದುಕೊಳ್ಳಬಹುದು. ಈ ಶಾಸನವು ನೌಕರರು ಗ್ರಾಚ್ಯುಟಿಯ ಮೂಲಕ ತಮ್ಮ ದೀರ್ಘಾವಧಿಯ ಸೇವೆಗಾಗಿ ಗುರುತಿಸಲ್ಪಡುತ್ತಾರೆ ಎನ್ನುವುದನ್ನು ಖಚಿತಪಡಿಸುವ ಜತೆಗೆ ಅವರ ಕುಟುಂಬಗಳು ತೆರಿಗೆ ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ ಹಣಕಾಸಿನ ಬೆಂಬಲವನ್ನು ಪಡೆಯಲು ಸಹಕಾರಿಯಾಗಿದೆ. ಇದು ಹಣಕಾಸು ಯೋಜನೆ, ತೆರಿಗೆ ಮತ್ತು ಉದ್ಯೋಗಿ ಕಲ್ಯಾಣದ ಗಮನಾರ್ಹ ಅಂಶವಾಗಿದೆ. ಈ ನಿಯಮಗಳು ಉದ್ಯೋಗಿಗಳನ್ನು ಸಬಲೀಕರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಸಂಸ್ಥೆಗೆ ಅವರ ಸಮರ್ಪಣೆ ಮತ್ತು ಸೇವೆಯು ಅವರ ಅರ್ಹ ಆರ್ಥಿಕ ಮನ್ನಣೆಯನ್ನು ಖಾತರಿಪಡಿಸುತ್ತದೆ”
    ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು 2024 ಉದ್ಯೋಗಿಗಳಿಗೆ ಗ್ರಾಚ್ಯುಟಿ ಪಾವತಿಗಳ ಪ್ರಕ್ರಿಯೆಯನ್ನು ಸುಗಮಗೊಳಿಸಲು, ಹೆಚ್ಚಿನ ರಕ್ಷಣೆ ಮತ್ತು ಪ್ರಯೋಜನಗಳನ್ನು ಒದಗಿಸುವ ಸಮಗ್ರ ಚೌಕಟ್ಟನ್ನು ರೂಪಿಸಿದೆ. ನಿಯಮಗಳು ಅಗತ್ಯ ಪದಗಳಿಗೆ ಸ್ಪಷ್ಟವಾದ ವ್ಯಾಖ್ಯಾನಗಳನ್ನು ಒದಗಿಸುತ್ತವೆ, ಅವುಗಳ ವ್ಯಾಖ್ಯಾನದಲ್ಲಿ ಸ್ಪಷ್ಟತೆ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುತ್ತದೆ. 1972 ರ ಗ್ರಾಚ್ಯುಟಿ ಕಾಯ್ದೆ ಮತ್ತು ಇತರ ಸಂಬಂಧಿತ ಕಾಯಿದೆಗಳ ಪಾವತಿಯಂತಹ ಅಸ್ತಿತ್ವದಲ್ಲಿರುವ ಶಾಸನಗಳೊಂದಿಗೆ ವ್ಯಾಖ್ಯಾನಗಳು ಹೊಂದಾಣಿಕೆಯಾಗುತ್ತವೆ.

    ಉದ್ಯೋಗದಾತರು ನಿಗದಿತ ಸಮಯದೊಳಗೆ ಮಾನ್ಯವಾದ ವಿಮಾ ಪಾಲಿಸಿಯನ್ನು ಪಡೆಯಬೇಕು, ಅರ್ಹ ಉದ್ಯೋಗಿಗಳಿಗೆ ಸಕಾಲಿಕ ಮತ್ತು ಸುರಕ್ಷಿತ ಗ್ರಾಚ್ಯುಟಿ ಪಾವತಿಗಳನ್ನು ಖಾತ್ರಿಪಡಿಸಿಕೊಳ್ಳಬೇಕು. ನಿಯಮಗಳು ವಿಮಾ ಪೂರೈಕೆದಾರರನ್ನು ಆಯ್ಕೆಮಾಡುವ ಮಾನದಂಡಗಳನ್ನು ನಿರ್ದಿಷ್ಟಪಡಿಸುತ್ತವೆ ಮತ್ತು ಪ್ರೀಮಿಯಂ ಪಾವತಿಗಳು ಮತ್ತು ಪಾಲಿಸಿ ನವೀಕರಣಗಳಲ್ಲಿ ಶ್ರದ್ಧೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ. ಗ್ರಾಚ್ಯುಟಿ ಪಾವತಿ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ನೇಮಕಗೊಂಡ ನಿಯಂತ್ರಣ ಪ್ರಾಧಿಕಾರವು, ವಿವಾದಗಳ ಸಂದರ್ಭದಲ್ಲಿ ವಿಮಾ ಕಂಪನಿಗಳಿಂದ ಗ್ರಾಚ್ಯುಟಿ ಮೊತ್ತವನ್ನು ಮರುಪಡೆಯಲು ಅಧಿಕಾರವನ್ನು ಹೊಂದಿದೆ, ಕ್ಲೈಮ್‍ಗಳ ಇತ್ಯರ್ಥಕ್ಕೆ ದೃಢವಾದ ಕಾರ್ಯವಿಧಾನವನ್ನು ಖಾತ್ರಿಪಡಿಸುತ್ತದೆ.
    ಕರ್ನಾಟಕದಲ್ಲಿ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು, 2024 ರ ಪರಿಚಯವು ಉದ್ಯೋಗಿಗಳ ಆರ್ಥಿಕ ಯೋಗಕ್ಷೇಮವನ್ನು ಕಾಪಾಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ನಿಯಮಗಳು ರಚನಾತ್ಮಕ ಮತ್ತು ಜವಾಬ್ದಾರಿಯುತ ಚೌಕಟ್ಟನ್ನು ರಚಿಸುತ್ತವೆ, ನ್ಯಾಯೋಚಿತ ಮತ್ತು ಪರಿಣಾಮಕಾರಿ ಗ್ರಾಚ್ಯುಟಿ ವಿತರಣೆಗಳನ್ನು ಉತ್ತೇಜಿಸುತ್ತವೆ.

  • ಹೋಟೆಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಕರಿಯರ್‌: ಏನಿದು ಹೋಟೆಲ್‌ ಮ್ಯಾನೇಜ್‌ಮೆಂಟ್‌, ಈ ಕೋರ್ಸ್‌ ಕಲಿತವರಿಗೆ ಉದ್ಯೋಗಾವಕಾಶ

    ಹೋಟೆಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಕರಿಯರ್‌: ಏನಿದು ಹೋಟೆಲ್‌ ಮ್ಯಾನೇಜ್‌ಮೆಂಟ್‌, ಈ ಕೋರ್ಸ್‌ ಕಲಿತವರಿಗೆ ಉದ್ಯೋಗಾವಕಾಶ

    ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಲೆಲ್ಲ ಇಂದು ಹೋಟೆಲ್‌ ಉದ್ಯಮವು ಅತ್ಯಂತ ಜನಪ್ರಿಯ ಕರಿಯರ್‌ ಕ್ಷೇತ್ರ. ಮೊದಲೆಲ್ಲ ಹೋಟೆಲ್‌ ಉದ್ಯೋಗವೆಂದರೆ ತಾತ್ಸರದಿಂದ ಜನರು ನೋಡುತ್ತಿದ್ದರು. ಆದರೆ, ಈಗ ಹೋಟೆಲ್‌ ಕ್ಷೇತ್ರದ ಅಗಾಧ ಅವಕಾಶ ನೋಡಿ ಅದಕ್ಕೆ ಸಂಬಂಧಪಟ್ಟ ಕೋರ್ಸ್‌ಗಳನ್ನು ಕಲಿಯಲು ಹೆಚ್ಚಿನವರು ಆದ್ಯತೆ ನೀಡುತ್ತಿದ್ದಾರೆ.

    ಏನಿದು ಹೋಟೆಲ್‌ ಮ್ಯಾನೇಜ್‌ಮೆಂಟ್‌?


    ಹೋಟೆಲ್‌ ಮ್ಯಾನೇಜ್‌ಮೆಂಟ್‌ ಎನ್ನುವುದು ಆತಿಥ್ಯ ವಲಯದ ಒಂದು ಭಾಗ. ಅತಿಥಿಗಳಿಗೆ ಬೋರ್ಡಿಂಗ್‌ ಮತ್ತು ಲಾಡ್ಜಿಂಗ್‌ ಸೇವೆ ನೀಡುವ ವಿಭಾಗ ಇದಾಗಿದೆ. ವಿವಿಧ ಹೋಟೆಲ್‌ಗಳು ತಾವು ನೀಡುವ ಸೇವೆಗಳಿಗೆ ಮತ್ತು ಐಷಾರಾಮ್ಯಕ್ಕೆ ತಕ್ಕಂತೆ ಐದು ಸ್ಟಾರ್‌ವರೆಗೆ ವಿವಿಧ ಗ್ರೇಡ್‌ಗಳನ್ನು ಹೊಂದಿವೆ. ಸಾಮಾನ್ಯ ಪಂಚತಾರ ಹೋಟೆಲ್‌ನಲ್ಲಿ ಮುಖ್ಯವಾಗಿ 4 ಪ್ರಮುಖ ವಿಭಾಗಗಳು ಇವೆ. 1. ಫ್ರಂಟ್‌ ಆಫೀಸ್‌ ಅಥವಾ ರಿಸೆಲ್ಷನ್‌. 2. ಹೌಸ್‌ಕೀಪಿಂಗ್‌. 3. ಆಹಾರ ಮತ್ತು ಪಾನೀಯ ಸೇವೆಗಳು. 4. ಕಿಚನ್‌ ಅಥವಾ ಅಡುಗಮನೆ. ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಈ ನಾಲ್ಕು ವಿಭಾಗಗಳ ಕುರಿತು ಪ್ರಮುಖವಾಗಿ ಕಲಿಯುತ್ತಾರೆ. ಈ ನಾಲ್ಕು ವಿಭಾಗಗಳು ಹೇಗೆ ಒಂದಕ್ಕೊಂದು ಸಂಬಂಧ ಹೊಂದಿವೆ ಮತ್ತು ಹೇಗೆ ಜೊತೆಯಾಗಿ ಕೆಲಸ ಮಾಡಬೇಕು ಎನ್ನುವುದನ್ನೂ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮುಗಿಸಿದ ಬಳಿಕ ವಿದ್ಯಾರ್ಥಿಗಳು ಈ ನಾಲ್ಕು ವಿಭಾಗಗಳಲ್ಲಿ ಯಾವ ವಿಭಾಗದಲ್ಲಿ ಕರಿಯರ್‌ ರೂಪಿಸಿಕೊಳ್ಳಬೇಕು ಎಂದು ಯೋಚಿಸಿ ಆ ವಿಭಾಗದ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
    ಹೋಟೆಲಿಗರು ಏನು ಮಾಡುತ್ತಾರೆ?
    ಮೇಲೆ ತಿಳಿಸಿದ ನಾಲ್ಕು ವಿಭಾಗಗಳನ್ನು ನಿರ್ವಹಣೆ ಮಾಡುವುದು ಹೋಟೆಲಿಗರ (ಹೋಟೆಲಿಯರ್‌) ಕೆಲಸ. ಅಂದರೆ, ಹೌಸ್‌ಕೀಪಿಂಗ್‌ನಿಂದ ಕಿಚನ್‌ವರೆಗೆ ಎಲ್ಲವನ್ನೂ ನೋಡಿಕೊಳ್ಳಬೇಕು. ಒಟ್ಟಾರೆ ಹೋಟೆಲ್‌ನ ಕಾರ್ಯನಿರ್ವಹಣೆ ಸರಾಗವಾಗಿ ನಡೆಯುವಂತೆ ಇವರು ನೋಡಿಕೊಳ್ಳಬೇಕು. ಅಂದರೆ, ಅತಿಥಿಯನ್ನು ಸ್ವಾಗತಿಸುವುದರಿಂದ ಹಿಡಿದು, ರೆಸ್ಟೂರೆಂಟ್‌ನಲ್ಲಿ ಆಹಾರ ಮತ್ತು ಪಾನೀಯ ಸರಬರಾಜು ಮಾಡುವುದು, ಅತಿಥಿಯ ಕೊಠಡಿಯನ್ನು ಸ್ವಚ್ಛವಾಗಿ ಮತ್ತು ಆಹ್ಲಾದಕರವಾಗಿ ಇಡುವುದು ಸೇರಿದಂತೆ ಹೋಟೆಲ್‌ನ ಸಮಸ್ತ ವಿಭಾಗದ ಕುರಿತು ಕಾಳಜಿ ವಹಿಸುವುದು ಹೋಟೆಲಿಯರ್‌ ಕೆಲಸವಾಗಿದೆ.

    ಯಾಕೆ ಈ ಕರಿಯರ್‌?
    ಭಾರತದಲ್ಲಿ ಹೋಟೆಲ್‌ ಉದ್ಯಮವು ವೇಗವಾಗಿ ಪ್ರಗತಿ ಕಾಣುತ್ತಿದೆ. ಇದರಿಂದ ಈ ವಿಭಾಗದಲ್ಲಿ ಕೆಲಸ ಮಾಡಲು ಬಯಸುವವರಿಗೆ ಹೆಚ್ಚಿನ ಅವಕಾಶ ಸೃಷ್ಟಿಯಾಗುತ್ತಿದೆ. ಈ ಪ್ರಗತಿಯು ದೇಶದ ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೆ ಹೋಟೆಲ್‌ ಉದ್ಯಮಕ್ಕೂ ಸಾಕಷ್ಟು ಕೊಡುಗೆಯನ್ನು ನೀಡುತ್ತಿದೆ.
    ಹೋಟೆಲ್‌ ಮ್ಯಾನೇಜ್‌ಮೆಂಟ್‌ ವ್ಯಾಪ್ತಿ

    • ಫ್ರಂಟ್‌ ಆಫೀಸ್‌
    • ಹೌಸ್‌ ಕೀಪಿಂಗ್‌
    • ಆಹಾರ ಮತ್ತು ಪಾನೀಯ
    • ಕಿಚನ್‌
    • ಮಾರ್ಕೆಟಿಂಗ್‌
    • ಫೈನಾನ್ಸ್‌
    • ಖರೀದಿ
      ಫ್ರಂಟ್‌ ಆಫೀಸ್‌ ಪ್ರಮುಖವಾಗಿ ಅತಿಥಿಗಳು ಮತ್ತು ಚೆಕ್‌ಇನ್‌ ಪ್ರಕ್ರಿಯೆಯ ಕುರಿತು ಗಮನ ನೀಡುತ್ತದೆ. ಹೋಟೆಲ್‌ ನಿರ್ವಹಣೆ ಮತ್ತು ಸ್ವಚ್ಛತೆಯ ಉಸ್ತುವಾರಿಯನ್ನು ಹೌಸ್‌ ಕೀಪಿಂಗ್‌ ವಿಭಾಗ ನೀಡಿಕೊಳ್ಳುತ್ತದೆ. ಎಫ್‌ಆಂಡ್‌ಬಿ ವಿಭಾಗವು ಆಹಾರ ಮತ್ತು ಪಾನೀಯಗಳ ಸೇವೆಯನ್ನು ನೋಡಿಕೊಳ್ಳುತ್ತದೆ. ಆಹಾರ ಸಿದ್ಧಪಡಿಸುವುದು ಕಿಚನ್‌ ವಿಭಾಗದ ಕೆಲಸ.

    ಹೇಗಿದೆ ಬೇಡಿಕೆ
    ಸ್ಟಾಸಿಸ್ಟ ಅಂಕಿಅಂಶದ ಪ್ರಕಾರ ಭಾರತದ ಹೋಟೆಲ್‌ ಉದ್ಯಮವು 2015ರಲ್ಲಿ 700 ಕೋಟಿ ಡಾಲರ್‌ನಷ್ಟು ಬೆಳೆದಿತ್ತು. 2020ರ ವೇಳೆಗೆ ಇದು 1300 ಕೋಟಿ ಡಾಲರ್‌ಗೆ ತಲುಪುವ ನಿರೀಕ್ಷೆ ಇದೆ ಎಂದು ನೌಕ್ರಿ.ಕಾಂ ಹೇಳಿದೆ. ಇದೇ ಕಾರಣಕ್ಕೆ ಈಗಿನ ಯುವ ಜನತೆ ಹೋಟೆಲ್‌ ಉದ್ಯಮಕ್ಕೆ ಸಂಬಂಧಪಟ್ಟ ಕೋರ್ಸ್‌ಗಳನ್ನು ಕಲಿಯಲು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.

    ಗುಣ ಮತ್ತು ಅವಗುಣ
    ಗುಣಗಳು: ಸ್ಪಷ್ಟ ಕರಿಯರ್‌ ಹಾದಿಯಾಗಿದೆ. ಜಗತ್ತಿನೆಲ್ಲೆಡೆ ಬರುವ ಜನರೊಂದಿಗೆ ಮಾತುಕತೆ ನಡೆಸಬಹುದು. ಬೋರ್‌ ಹೊಡೆಸುವ ಡೆಸ್ಕ್‌ ಉದ್ಯೋಗದಂತೆ ಅಲ್ಲ. ಕಲಿಯುವ ಅವಕಾಶ ಹೆಚ್ಚಿರುತ್ತದೆ.
    ಅವಗುಣಗಳು: ಕೆಲಸದ ಅವಧಿ ಸುದೀರ್ಘವಾದದ್ದು. ಡೆಸ್ಕ್‌ ಜಾಬ್‌ನಂತೆ 8 ಗಂಟೆಯಲ್ಲಿ ಮುಗಿಯದು. ದೈಹಿಕ ಶ್ರಮ ಬೇಡುತ್ತದೆ. ಹಬ್ಬದ ದಿನಗಳಲ್ಲಿ ರಜೆ ಸಿಗದು. ಕೆಲಸವು ಒತ್ತಡದಿಂದ ಕೂಡಿರುತ್ತದೆ.
    ಹೊರಗಿನಿಂದ ನೋಡಲು ಹೋಟೆಲ್‌ಗಳು ಗ್ಲಾಮರ್‌ ಆಗಿ, ಲಗ್ಷುರಿಯಾಗಿ ಕಾಣಿಸಬಹುದು. ಆದರೆ, ಆ ಹೋಟೆಲ್‌ಗಳಲ್ಲಿ ಕೆಲಸ ಮಾಡುವವರ ಬದುಕು ಅಷ್ಟು ಗ್ಲಾಮರಸ್‌ ಆಗಿರುವುದಿಲ್ಲ. ಕೆಲಸದ ಪಾಳಿ ಹೆಚ್ಚಿರುತ್ತದೆ, ಮುಂಜಾನೆ ಶಿಫ್ಟ್‌ ಇರುತ್ತದೆ. ಶ್ರಮ ಬೇಡುವ ಕೆಲಸ ಮಾಡಬೇಕಾಗುತ್ತದೆ. ದೀಪಾವಳಿ, ಕ್ರಿಸ್‌ಮಸ್‌ಗೆ ರಜೆ ಕೇಳುವಂತೆ ಇರುವುದಿಲ್ಲ. ಯಾಕೆಂದರೆ, ಇಂತಹ ಹಬ್ಬ ಹರಿದಿನಗಳ ಸಮಯದಲ್ಲಿಯೇ ಹೋಟೆಲ್‌ಗೆ ಆಗಮಿಸುವ ಗ್ರಾಹಕರ ಸಂಖ್ಯೆ ಹೆಚ್ಚಿರುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿವು ಹೋಟೆಲ್‌ ಉದ್ಯಮವನ್ನು ನಿಮ್ಮ ಕರಿಯರ್‌ ಆಗಿ ಆಯ್ಕೆ ಮಾಡಿಕೊಳ್ಳಬಹುದು.
    ಆದರೆ, ಡೆಸ್ಕ್‌ ಕೆಲಸ ಬಯಸದವರಿಗೆ ಹೋಟೆಲ್‌ ಕೆಲಸ ತುಂಬಾ ಆನಂದದಾಯಕವಾಗಿರುತ್ತದೆ. ಪ್ರತಿದಿನ ಆಗಮಿಸುವ ಅತಿಥಿಗಳೊಂದಿಗೆ ಮಾತನಾಡಬಹುದು (ನೀವು ಸವೀರ್ಸ್‌ ಮಾಡುವ ಉದ್ಯೋಗಿಯಾಗಿದ್ದರೆ ಅಥವಾ ಫ್ರಂಟ್‌ ಡೆಸ್ಕ್‌ನಲ್ಲಿದ್ದರೆ). ಹೊಸ ಹೊಸ ಅತಿಥಿಗಳು ಆಗಮಿಸುವುದರಿಂದ ಪ್ರತಿದಿನವೂ ಕೆಲಸವು ಹೊಸ ಸವಾಲುಗಳನ್ನು ಹೊಂದಿರುತ್ತದೆ. ಹೀಗಾಗಿ, ಪ್ರತಿದಿನ ಕೆಲಸ ಬೋರ್‌ ಹೊಡೆಸದು. ಇಂತಹ ಹಲವು ಸಕಾರಾತ್ಮಕ ಅಂಶಗಳು ಹೋಟೆಲ್‌ ಮ್ಯಾನೇಜ್‌ಮೆಂಟ್‌ ಉದ್ಯೋಗದಲ್ಲಿದೆ.

    ಏನು ಓದಿರಬೇಕು?
    ಏನೂ ಓದದೆಯೂ ಪಂಚತಾರ ಹೋಟೆಲ್‌ಗಳನ್ನು ಕಟ್ಟಿದವರು ಇದ್ದಾರೆ. ನೀವು ಹೋಟೆಲ್‌ ಉದ್ಯಮದಲ್ಲಿ ಉದ್ಯೋಗ ಮಾಡಲು ಹೋಟೆಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಬಿಎ ಅಥವಾ ಬಿಎಸ್ಸಿ ಅಥವಾ ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಬಹುದು. ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳನ್ನು ಕಲಿಸುವ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಇವೆ. ಕೆಲವು ಸಂಸ್ಥೆಗಳು ದುಬಾರಿ ಶುಲ್ಕ ಪಡೆಯಬಹುದು. ಯಾವುದೇ ಕಾಲೇಜು ಆಯ್ಕೆ ಮಾಡಿಕೊಳ್ಳುವ ಮೊದಲು ಅಲ್ಲಿ ನೀಡುವ ಕೋರ್ಸ್‌ಗಳ ಕುರಿತು ಮತ್ತು ಶಿಕ್ಷಣದ ಗುಣಮಟ್ಟದ ಕುರಿತು ತಿಳಿದುಕೊಳ್ಳಿ. ಈ ಕೋರ್ಸ್‌ ಕಲಿತರೆ ಹೋಟೆಲ್‌ನಲ್ಲಿ ಫ್ರಂಟ್‌ ಡೆಸ್ಕ್‌, ಕಿಚನ್‌, ಆಹಾರ ಮತ್ತು ಪಾನೀಯ, ಅಡುಗೆಮನೆ ಕೆಲಸ ಮಾತ್ರವಲ್ಲದೆ ವಿಮಾನಯಾನ ಕಂಪನಿಗಳು, ರೈಲ್ವೆ, ಆರೋಗ್ಯ ಸೇವಾ ಸಂಸ್ಥೆಗಳು ಸೇರಿದಂತೆ ಇತರ ಕಡೆಗಳಲ್ಲಿಯೂ ಉದ್ಯೋಗ ಪಡೆಯಬಹುದಾಗಿದೆ.


    ವಿವಿಧ ಪದವಿಗಳು
    ಬಿಎಚ್‌ಎಂ: ಆಹಾರ ತಯಾರಿಕೆ, ಬೇಕರಿ, ಆಹಾರ ಮತ್ತು ಪಾನೀಯ, ಹೌಸ್‌ ಕೀಪಿಂಗ್‌, ಫೆಸಿಲಿಟಿ ಪ್ಲ್ಯಾನಿಂಗ್‌, ಫ್ರಂಟ್‌ ಆಫೀಸ್‌ ಇತ್ಯಾದಿ ವಿಭಾಗಗಳಲ್ಲಿ ಉದ್ಯೋಗ ಪಡೆಯಬಹುದು.
    ಬಿಎಚ್‌ಎಂಸಿಡಿ: ನ್ಯೂಟ್ರಿಷಿಯನ್‌, ಫ್ರಂಟ್‌ ಆಫೀಸ್‌, ಆಹಾರ ಸಿದ್ಧಪಡಿಸುವಿಕೆ, ಹೌಸ್‌ ಕೀಪಿಂಗ್‌, ಕಮ್ಯುನಿಕೇಷನ್‌ ಇತ್ಯಾದಿ ವಿಭಾಗಗಳಲ್ಲಿ ಉದ್ಯೋಗ ಪಡೆಯಬಹುದು.
    ಎಚ್‌ಎಚ್‌ಎಂನಲ್ಲಿ ಬಿಎಸ್ಸಿ: ಫುಡ್‌ ಪ್ರೊಡಕ್ಷನ್‌, ಫ್ರಂಟ್‌ ಆಫೀಸ್‌, ಬೇಕರಿ, ಹೌಸ್‌ ಕೀಪಿಂಗ್‌, ಕಮ್ಯುನಿಕೇಷನ್‌ ವಿಭಾಗಗಳಲ್ಲಿ ಕೆಲಸ ಮಾಡಬಹುದು.


    ವಿವಿಧ ಹುದ್ದೆಗಳು
    ಸ್ಟಿವರ್ಡ್ಸ್: ರೆಸ್ಟೂರೆಂಟ್‌ಗಳಲ್ಲಿ ಮತ್ತು ಕೊಠಡಿಯೊಳಗೆ ಅತಿಥಿಗಳಿಗೆ ಆಹಾರ, ಪಾನೀಯ ಸರ್ವ್‌ ಮಾಡುವುದು ಮತ್ತು ಅಟೆಂಡ್‌ ಮಾಡುವುದು.
    ಫ್ರಂಟ್‌ ಆಫೀಸ್‌ ಅಟೆಂಡೆಂಟ್‌: ರಿಸೆಪ್ಷನ್‌ ವಿಭಾಗದಲ್ಲಿ ಅತಿಥಿಗಳೊಂದಿಗೆ ಸಂವಹನ ನಡೆಸುವುದು. ಚೆಕ್‌ ಇನ್‌ ಪ್ರಕ್ರಿಯೆಯಲ್ಲಿ ಅವರಿಗೆ ಸಹಾಯ ಮಾಡುವುದು.
    ಹೌಸ್‌ಕೀಪಿಂಗ್‌ ಅಟೆಂಡೆಂಟ್‌: ಲಾಬೀಗಳು, ಕಾರಿಡಾರ್‌ಗಳು ಮತ್ತು ಅತಿಥಿಯ ಕೊಠಡಿಗಳನ್ನು ಸ್ವಚ್ಛಗೊಳಿಸುವುದು.
    ಅಡುಗೆ ಸಹಾಯಕ: ಹೋಟೆಲ್‌ ಅಡುಗೆಯವರಿಗೆ (ಶೆಫ್‌) ಆಹಾರ, ಬಫೆಟ್‌ ಇತ್ಯಾದಿಗಳನ್ನು ಸಿದ್ಧಪಡಿಸಲು ಸಹಾಯ ಮಾಡುವುದು.
    ಇವೆಲ್ಲ ಆರಂಭಿಕ ಹುದ್ದೆಗಳು. ಹೆಚ್ಚು ಅನುಭವ, ಶಿಕ್ಷಣ ಪಡೆದಂತೆ ನೀವು ಫ್ರಂಟ್‌ ಆಫೀಸ್‌ ಮ್ಯಾನೇಜರ್‌, ಎಫ್‌ಆ್ಯಂಡ್‌ಬಿ ಮ್ಯಾನೇಜರ್‌, ಹೌಸ್‌ಕೀಪಿಂಗ್‌ ಮ್ಯಾನೇಜರ್‌, ಶೆಫ್‌ ಇತ್ಯಾದಿ ಹುದ್ದೆಗಳನ್ನೂ ಪಡೆಯಬಹುದಾಗಿದೆ.


    ಯಾವೆಲ್ಲ ಕೌಶಲದ ಅಗತ್ಯವಿದೆ?
    ಸಂವಹನ: ಇಂಗ್ಲಿಷ್‌ನಲ್ಲಿ ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ಅತಿಥಿಯೊಂದಿಗೆ ಸಂವಹನ ನಡೆಸಲು ಇಂಗ್ಲಿಷ್‌ ಜ್ಞಾನ ಅವಶ್ಯ.
    ಶಿಷ್ಟ ವರ್ತನೆ: ಆತಿಥ್ಯ ವಲದಯದಲ್ಲಿ ಸೌಮ್ಯವಾದ ನಡವಳಿಕೆ ಅತ್ಯಂತ ಅವಶ್ಯ.
    ದೈಹಿಕ ಸಾಮರ್ಥ್ಯ‌: ದೀರ್ಘಾವಧಿಯ ಕೆಲಸ ಮಾಡಲು ಮತ್ತು ಶ್ರಮದಾಯಕ ಕೆಲಸ ಮಾಡಲು ದೈಹಿಕ ಶಕ್ತಿಯೂ ಉತ್ತಮವಾಗಿರಬೇಕು.
    ಟೀಮ್‌ ಸ್ಪೀರಿಟ್‌: ತಂಡದೊಂದಿಗೆ ಮತ್ತು ಇತರೆ ತಂಡದ ಜೊತೆಗೆ ಕೆಲಸ ಮಾಡುವ ಸಾಮರ್ಥ್ಯ‌ ಇರಬೇಕು.
    ಶಿಸ್ತು: ಆತಿಥ್ಯ ವಲಯದಲ್ಲಿ ಕೆಲಸ ಮಾಡುವಾಗ ನೀಟಾದ ಉಡುಗೆ ತೊಡುಗೆ, ದೈಹಿಕ ಸೌಂದರ್ಯದ ಕುರಿತು ಕಾಳಜಿ ಹೊಂದಿರಬೇಕು.