ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ( ಬಿಎಂಆರ್ ಸಿಎಲ್) ನಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಈ ಕೆಳಕಂಡ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ಹುದ್ದೆ : ಮ್ಯಾನೇಜರ್ ( ವ್ಯವಸ್ಥಾಪಕರು) ( F &A) -01 ಹುದ್ದೆ
ಅಸಿಸ್ಟೆಂಟ್ ಮ್ಯಾನೇಜರ್ ( ಸಹಾಯಕ ವ್ಯವಸ್ಥಾಪಕರು) ( ಸ್ಟೋರ್ಸ್) -01 ಹುದ್ದೆ
ಅಸಿಸ್ಟೆಂಟ್ ಮ್ಯಾನೇಜರ್ ( ಸಹಾಯಕ ವ್ಯವಸ್ಥಾಪಕರು) ( ಹೆಚ್ ಆರ್) – 01 ಹುದ್ದೆ
ವಯೋಮಿತಿ : ಮ್ಯಾನೇಜರ್ ಹುದ್ದೆಗೆ ಅಭ್ಯರ್ಥಿಗಳಿಗೆ ಕನಿಷ್ಠ 45 ವರ್ಷ, ಅಸಿಸ್ಟೆಂಟ್ ಮ್ಯಾನೇಜರ್ ( ಸ್ಟೋರ್ಸ್ ) 40 ವರ್ಷ, ಅಸಿಸ್ಟೆಂಟ್ ಮ್ಯಾನೇಜರ್ ( ಹೆಚ್ ಆರ್ ) 40 ವರ್ಷ ಮೀರಿರಬಾರದು.
ವೇತನ : ಮ್ಯಾನೇಜರ್ ( ಎಫ್ ಎ) ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 75,000/- ವೇತನವಿರುತ್ತದೆ. ಅಸಿಸ್ಟೆಂಟ್ ಮ್ಯಾನೇಜರ್ ( ಸ್ಟೋರ್ಸ್ ) ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ( ಹೆಚ್ ಆರ್ ) ಹುದ್ದೆಗೆ ರೂ.50,000/- ವೇತನವಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-08-2021 ( ಸಂಜೆ 4 ಗಂಟೆಗೆ)
ಅರ್ಜಿ ಸಲ್ಲಿಕೆ ಹೇಗೆ ? ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು. ಅರ್ಜಿಯ ಲಕೋಟೆ ಮೇಲೆ Application for the post of( post name) ಎಂದು ಬರೆದಿರಬೇಕು. ಅರ್ಜಿಯನ್ನು ವಿಳಾಸ General Manager ( HR), Bangalore Metro Rail Corporation Limited, 3rd Floor, BMTC Complex, K.H.Road, Shantinagar, Bangalore – 560027 ಕ್ಕೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.