PNB Job: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹುದ್ದೆ ಮಾಡಲು ಇಚ್ಛಿಸುವವರಿಗೆ ಸಿಹಿ ಸುದ್ದಿ. ಹೌದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ದೇಶದಾದ್ಯಂತ ತನ್ನ ವಿವಿಧ ಬ್ರ್ಯಾಂಚ್‌ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಕ್ರೆಡಿಟ್/ಮ್ಯಾನೆಜರ್ ಫಾರೆಕ್ಸ್, ಮ್ಯಾನೇಜರ್ ಸೈಬರ್ ಸೆಕ್ಯೂರಿಟಿ ಮತ್ತು ಇತರ ವಿಭಾಗಗಳಲ್ಲಿ ಭರ್ತಿ ಮಾಡಲು ಬ್ಯಾಂಕ್ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಪಿಎನ್‌ಬಿ ಯಲ್ಲಿ ಒಟ್ಟು 1025 ಹುದ್ದೆಗಳಿದ್ದು, ಫೆ.25, 2024 ರ ಒಳಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 07-02-2024 ರಂದು ಪ್ರಾರಂಭವಾಗಲಿದ್ದು, ಆನ್‌ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಫೆಬ್ರವರಿ, 02, 2024 ಆಗಿರುತ್ತದೆ. ಹಾಗೆನೇ ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ ಆನ್‌ಲೈನ್ ಪರೀಕ್ಷೆಯ ಸಂಭಾವ್ಯ ದಿನಾಂಕವನ್ನು ಮಾರ್ಚ್/ಎಪ್ರಿಲ್, 2024 ರಲ್ಲಿ ನಡೆಯುವುದಾಗಿ ಹೇಳಲಾಗಿದೆ.
ಹುದ್ದೆ ಹೆಸರು: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಸ್ಪೆಷಲಿಸ್ಟ್ ಆಫೀಸರ್ (ವಿವಿಧ ವಿಭಾಗ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1025 ಹುದ್ದೆಗಳಿದ್ದು, ಅಭ್ಯರ್ಥಿಗಳು ತಮ್ಮ ಸವಿವರಗಳನ್ನು ಭರ್ತಿ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿಬಹುದು.
ಹುದ್ದೆಗಳ ವಿವರ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಆಫೀಸರ್ ಕ್ರೆಡಿಟ್: 1000, ಮ್ಯಾನೇಜರ್ ಫಾರೆಕ್ಸ್ : 15, ಮ್ಯಾನೇಜರ್ ಸೈಬರ್ ಸೆಕ್ಯೂರಿಟಿ: 5, ಸೀನಿಯರ್ ಮ್ಯಾನೇಜರ್ ಸೈಬರ್ ಸೆಕ್ಯೂರಿಟಿ: 5 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ/ ಸ್ನಾತಕೋತ್ತರ ಪದವಿ/ಸಿಎ/ಸಿಎಂಎ/ ಐಡಿಡಬ್ಲ್ಯೂಎ ಪಾಸ್ ಮಾಡಿರುವವರು ಅರ್ಜಿ ಸಲ್ಲಿಸಬಹುದು.
ಹುದ್ದೆವಾರು ವೇತನ ಈ ರೀತಿ ಇದೆ;
ಆಫೀಸರ್ ಕ್ರೆಡಿಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಶ್ರೇಣಿ ರೂ.36,000-ರೂ.63,840 ಇರಲಿದೆ. ಮ್ಯಾನೇಜರ್ ಫಾರೆಕ್ಸ್ ಹುದ್ದೆಗೆ ರೂ.48170-69810, ಮ್ಯಾನೇಜರ್ ಸೈಬರ್ ಸೆಕ್ಯೂರಿಟಿ ಹುದ್ದೆಗೆ ರೂ.48,170-ರೂ.69,810 ಮಾಸಿಕ ವೇತನ ಇರಲಿದ್ದು, ಸೀನಿಯರ್ ಮ್ಯಾನೇಜರ್ ಸೈಬರ್ ಸೆಕ್ಯೂರಿಟಿ ಹುದ್ದೆಗೆ ರೂ.63,840-ರೂ.78,230 ಇರಲಿದೆ.
ವಯೋಮಿತಿ: ಆಫೀಸರ್ ಕ್ರೆಡಿಟ್ ಹುದ್ದೆಗಳಿಗೆ 21-28 ವರ್ಷ, ಮ್ಯಾನೇಜರ್ ಫಾರೆಕ್ಸ್ ಮತ್ತು ಮ್ಯಾನೇಜರ್ ಸೈಬರ್ ಸೆಕ್ಯುರಿಟಿ ಹುದ್ದೆಗಳಿಗೆ 25-35 ವರ್ಷ, ಸೀನಿಯರ್ ಮ್ಯಾನೇಜರ್ ಸೈಬರ್ ಸೆಕ್ಯೂರಿಟಿ ಹುದ್ದೆಗಳಿಗೆ 27-38 ವರ್ಷ ನಿಗದಿಪಡಿಸಲಾಗಿದೆ. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯಲಾಗಿದ್ದು, ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಬಹುದು.
ಅರ್ಜಿ ಶುಲ್ಕ: ರೂ.1180 ರೂ ಅರ್ಜಿ ಶುಲ್ಕವನ್ನು ಸಾಮಾನ್ಯ ಅರ್ಹತೆ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಪಾವತಿ ಮಾಡಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳು ರೂ.59 ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿ ಮಾಡಲು ಮಾತ್ರ ಅವಕಾಶವಿದೆ.
ಆಯ್ಕೆ ವಿಧಾನ: ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ಸಂದರ್ಶನ ದ ಮೂಲಕ ಆಯ್ಕೆ ಮಾಡಲಾಗುವುದು. ಅನಂತರ ಮೂಲ ದಾಖಲೆಗಳ ಪರಿಶೀಲನೆ ಮಾಡುವ ಮೂಲಕ ಅಂತಿಮವಾಗಿ ಆಯ್ಕೆ ಪಟ್ಟಿಯನ್ನು ಪ್ರಕಟ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ