Author: Mallika

  • CAIR ; ಅಪ್ರೆಂಟಿಸ್ ಶಿಪ್ ಟ್ರೈನಿಗಳಿಗಾಗಿ ಅರ್ಜಿ ಆಹ್ವಾನ

    ಸೆಂಟರ್ ಫಾರ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆಂಡ್ ರೋಬೊಟಿಕ್ಸ್( ಸಿಎಐಆರ್) ಅಪ್ರೆಂಟಿಸ್ ಶಿಪ್ ಟ್ರೈನಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಫೆಲೋಶಿಪ್ ಗಳ ಸಂಖ್ಯೆ : ಗ್ರಾಜ್ಯುಯೇಟ್ ಅಪ್ರೆಂಟಿಸ್ ಟ್ರೈನಿಗಳು -33 ಖಾಲಿ ಹುದ್ದೆ. ಈ ಹುದ್ದೆಗೆ ಬಿ.ಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.

    ಡಿಪ್ಲೋಮಾ ಅಪ್ರೆಂಟಿಸ್ ಟ್ರೈನಿ – 01 ಹುದ್ದೆ, ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಮಾಡಿರಬೇಕು.

    ವಯೋಮಿತಿ : ಕನಿಷ್ಠ 18 ವರ್ಷ, ಪ್ರವರ್ಗ 27 ವರ್ಷ, ಒಬಿಸಿ -30 ವರ್ಷ, ಎಸ್ ಸಿ/ ಎಸ್ ಟಿ – 32 ವರ್ಷ, ಅಂಗವೈಕಲ್ಯ ವ್ಯಕ್ತಿ ( ಪಿಡಬ್ಲ್ಯೂಡಿ) 37 ವರ್ಷ ಗರಿಷ್ಠ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಆನ್ಲೈನ್ ಅರ್ಜಿ ಪ್ರಾರಂಭದ ಸಂಭವನೀಯ ದಿನಾಂಕ : 22 ನೇ ನವೆಂಬರ್ , 2021

    ಆನ್ಲೈನ್ ಅರ್ಜಿ ಸಲ್ಲಿಕೆಗೆ ಕಡೆಯ ಸಂಭವನೀಯ ದಿನಾಂಕ 10 ನೇ ಡಿಸೆಂಬರ್, 2021

    ಹೆಚ್ಚಿನ ವಿವರ ಮತ್ತು ಅರ್ಜಿ ನಮೂನೆಯನ್ನು (ಆನ್ಲೈನ್ ನಲ್ಲಿ ಭರ್ತಿ ಮಾಡಲು)

  • IISC : ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ

    ಭಾರತೀಯ ಇನ್ಸ್ಟಿಟ್ಯೂಟ್ ನಲ್ಲಿರುವ ಅಂಡರ್ ಗ್ರಾಜ್ಯುಯೃಟ್ ಪ್ರೋಗ್ರಾಮ್ ಕಚೇರಿಯಲ್ಲಿ ಬೋಧಕರು ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಈ ಹುದ್ದೆಯು ಸಂಪೂರ್ಣ ಗುತ್ತಿಗೆ ಆಧಾರದಲ್ಲಿ ಇರುತ್ತದೆ.

    ಹುದ್ದೆ : ಬೋಧಕರು

    ಹುದ್ದೆ ಸಂಖ್ಯೆ : 6 ( ಸಾಮಾನ್ಯ – 01, ಒಬಿಸಿ – 02, ಪ.ಜಾ- 01, ಪ.ಪಂ- 01, ಇಡ್ಬ್ಲೂಎಸ್ – 01)

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-12-2021

    ಅಭ್ಯರ್ಥಿಗಳು ಹೆಚ್ಚಿನ ವಿವರಗಳನ್ನು ಆನ್ಲೈನ್ ಅರ್ಜಿ ಸಲ್ಲಿಸಲು ಸಂಸ್ಥೆಯ ವೆಬ್ಸೈಟ್ ಗೆ ಭೇಟಿ ನೀಡಬಹುದು.

    ನೋಟಿಫಿಕೇಶನ್

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆರೋಗ್ಯ ಸಹಾಯಕಿ ಹುದ್ದೆಗೆ ತರಬೇತಿ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿ, ರಾಮನಗರ ಜಿಲ್ಲೆಯಲ್ಲಿ ಖಾಲಿ ಇರುವ ಆರೋಗ್ಯ ಸಹಾಯಕಿಯರ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆರೋಗ್ಯ ಇಲಾಖಾ ವತಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ತರಬೇತಿ ಅವಧಿಯು 2 ವರ್ಷದ್ದಾಗಿರುತ್ತದೆ.

    ಆಸಕ್ತ ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಅರ್ಜಿಯನ್ನು ಪಡೆದು ದ್ವಿಪ್ರತಿಯಲ್ಲಿ ದೃಢೀಕೃತ ಪ್ರತಿಗಳೊಂದಿಗೆ ದಿನಾಂಕ 10-12-2021 ರ ಸಂಜೆ 5.30 ಗಂಟೆಯೊಳಗೆ ಅರ್ಜಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ರಾಮನಗರ ಜಿಲ್ಲೆ ಇವರಿಗೆ ಸಲ್ಲಿಸತಕ್ಕದ್ದು.

    ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

    ವಯೋಮಿತಿ : ಪ್ರಸ್ತುತ ವರ್ಷದ ಡಿಸೆಂಬರ್ 31 ಕ್ಕೆ ಅಭ್ಯರ್ಥಿಯ ವಯಸ್ಸು ಕನಿಷ್ಠ 17 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 30 ವರ್ಷಗಳು ಮೀರಬಾರದು.

    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ರಾಮನಗರ, ಇವರಿಂದ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ : 080-29576058

  • ಶಿವಮೊಗ್ಗ : ನ್ಯಾಯಾಲಯದಲ್ಲಿ ವಿವಿಧ ಹುದ್ದೆ, ಆಸಕ್ತರು ಈ ಕೂಡಲೇ ಅರ್ಜೊ ಸಲ್ಲಿಸಿ

    ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಪ್ರೋಸೆಸ್ ಜಾರಿಕಾರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಪ್ರೊಸೆಸ್ ಜಾರಿಕಾರ

    ಹುದ್ದೆ ಸಂಖ್ಯೆ : 07

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 23-11-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-12-2021 ( ರಾತ್ರಿ 11.59 ರವರೆಗೆ)

    ವಿದ್ಯಾರ್ಹತೆ : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ

    ವಾಹನ ಚಾಲನೆಯ ‌ಲೈಸೆನ್ಸ್ ಇರುವವರಿಗೆ ಆದ್ಯತೆ ನೀಡಲಾಗುವುದು.

    ವಯೋಮಿತಿ : ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿತಕ್ಕದ್ದು.

    ಗರಿಷ್ಠ ವಯೋಮಿತಿ : ಸಾಮಾನ್ಯ ವರ್ಗ : : 35 ವರ್ಷಗಳು

    2ಎ, 2ಬಿ, 3 ಎ, 3 ಬಿ : 38 ವರ್ಷಗಳು

    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ: ಪ್ರವರ್ಗ – 1 : 40 ವರ್ಷಗಳು

    ವಿಧವೆಯರಿಗೆ ಮತ್ತು ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆ ಹಾಗೂ ಈಗಾಗಲೇ ಸರಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

    ಅರ್ಜಿ ಶುಲ್ಕ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.200/-, ಪ್ರವರ್ಗ 2 ಎ, 2 ಬಿ, 3 ಎ, 3 ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ. 100/-, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ – 1, ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

    ನಿಗದಿತ ಶುಲ್ಕವನ್ನು ನ್ಯಾಯಾಲಯದ ವೆಬ್ಸೈಟ್ ಮೂಲಕ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ state bank collect ಮೂಲಕ ಆನ್ಲೈನ್ ಮೂಲಕ ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಚಲನ್ ಸೌಲಭ್ಯದ ಮೂಲಕ ಸಲ್ಲಿಸತಕ್ಕದ್ದು.

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ

  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ : 115 ಎಸ್ ಒ ಪೋಸ್ಟ್

    ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದೇಶದ ವಿವಿಧ ಬ್ರ್ಯಾಂಚ್ ಗಳಲ್ಲಿ ಅಗತ್ಯವಿರುವ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಡಿಗ್ರಿ, ಸ್ನಾತಕೋತ್ತರ ಪದವಿ ಪಾಸಾದವರು ಹಾಗೂ ಬಿಇ/ ಬಿಟೆಕ್ ಇತರೆ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ನೇಮಕಾತಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

    ಹುದ್ದೆ : ಸ್ಪೆಷಲಿಸ್ಟ್ ಆಫೀಸರ್
    ಹುದ್ದೆ ಸಂಖ್ಯೆ : 115

    ವಿದ್ಯಾರ್ಹತೆ : ಪದವಿ/ ಸ್ನಾತಕೋತ್ತರ ಪದವಿ/ ಬಿಇ/ ಬಿಟೆಕ್/ ಸಿಎ/ ಪಿಹೆಚ್ ಡಿ/ ಎಂಬಿಎ ಪಾಸ್ ಮಾಡಿರಬೇಕು. ಜೊತೆಗೆ ಅಗತ್ಯ ಕಾರ್ಯಾನುಭವ ಹೊಂದಿರಬೇಕು.

    ಪ್ರಮುಖ ದಿನಾಂಕ : ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 23-11-2021

    ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ ವ: 17-12-2021

    ಆನ್ಲೈನ್ ಲಿಖಿತ ಪರೀಕ್ಷೆಗೆ ಅಡ್ಮಿಟದ ಕಾರ್ಡ್ ಡೌನ್‌ಲೋಡ್ ಮಾಡಲು ಆರಂಭ ದಿನಾಂಕ -11-01-2021

    ಆನ್ಲೈನ್ ಪರೀಕ್ಷೆಯ ಸಂಭಾವ್ಯ ದಿನಾಂಕ – 22-01-2021

    ಅಪ್ಲಿಕೇಶನ್ ಶುಲ್ಕ ವಿವರ

    ಸಾಮಾನ್ಯ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ. 850

    ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.175

    ಅಪ್ಲಿಕೇಶನ್ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇತರೆ ಆನ್ಲೈನ್ ಪೇಮೆಂಟ್ ಮೋಡ್ ನಲ್ಲಿ ಸಹ ಪಾವತಿಸಬಹುದು.

    ಕನಿಷ್ಠ 20 ವರ್ಷ ಆಗಿರುವ ಗರಿಷ್ಠ 45 ವರ್ಷ ವಯಸ್ಸು ಮೀರದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆವಾರು ವಯೋಮಿತಿ ಅರ್ಹತೆ ಬೇರೆ ಬೇರೆ ಆಗಿದ್ದು, ಕಂಪ್ಲೀಟ್ ನೋಟಿಫಿಕೇಶನಲ್ಲಿ ತಿಳಿಸಲಾಗಿದೆ.

    ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಎಸ್ಒ ಹುದ್ದೆಗಳ ಪೈಕಿ ಎಕಾನಮಿಸ್ಟ್, ಇನ್ ಕಮ್ ಟ್ಯಾಕ್ಸ್ ಆಫೀಸರ್, ಡಾಟಾ ಎಂಜಿನಿಯರ್, ಕ್ರೆಡಿಟ್ ಆಫೀಸರ್, ಫೈನಾನ್ಸಿಯಲ್ ಆಫೀಸರ್, ಟೆಕ್ನಿಕಲ್ ಆಫೀಸರ್, ಇನ್ಫಾರ್ಮೇಶನ್ ಟೆಕ್ನಾಲಜಿ ಮ್ಯಾನೇಜರ್, ಕಾನೂನು ಅಧಿಕಾರಿ, ಸೆಕ್ಯುರಿಟಿ, ರಿಸ್ಕ್ ಮ್ಯಾನೇಜರ್, ಟೆಕ್ನಿಕಲ್ ‌ ಆಫೀಸರ್ ಹುದ್ದೆಗಳಿವೆ.

    ಉದ್ಯೋಗ ವಿಧ : ಫುಲ್ ಟೈಮ್

    ವೇತನ ವಿವರ : ₹36,000/- ರಿಂದ ₹ 1,00,350/- ವರೆಗೆ

    ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್ ಕ್ಲಿಕ್ ಮಾಡಿ

  • ನೇವಲ್ ಶಿಪ್ ರಿಪೇರ್ ಯಾರ್ಡ್ ನಲ್ಲಿ ಅಪ್ರೆಂಟಿಸ್ ಷಿಪ್ ತರಬೇತಿಗಾಗಿ ಅರ್ಜಿ ಆಹ್ವಾನ

    ನೇವಲ್ ಶಿಪ್ ರಿಪೇರ್ ಯಾರ್ಡ್, ನೇವಲ್ ಬೇಸ್, ಕಾರವಾರ, ಗೋವಾ, ದಬೋಲಿಂ ಇಲ್ಲಿ ಅಪ್ರೆಂಟಿಸ್ ತರಬೇತಿಗೆ ನೋಂದಾವಣಿಗಾಗಿ ಗೊತ್ತುಪಡಿಸಿದ ವಿವಿಧ ಟ್ರೇಡ್ ಗಳಲ್ಲಿ ಅಪ್ರೆಂಟಿಸ್ ಷಿಪ್ ತರಬೇತಿಗಾಗಿ ನೋಂದಾವಣಿ ಮಾಡಲು ಐಟಿಐ ಅರ್ಹತೆಯುಳ್ಳ ಭಾರತೀಯ ನಾಗರಿಕರಿಂದ ( ಪುರುಷ/ ಮಹಿಳೆ) ಅರ್ಜಿಗಳನ್ನು ಕರೆಯಲಾಗಿದೆ.

    ನೇವಲ್ ಶಿಪ್ ರಿಪೇರಚ ಯಾರ್ಡ್, ಕಾರವಾರದಲ್ಲಿ ಒಟ್ಟು 150 ಹುದ್ದೆಗಳಿದ್ದು, ಏರ್ ಕ್ರಾಫ್ಟ್ ಯಾರ್ಡ್ ( ಗೋವಾ) ದಬೋಲಿಂ, ಗೋವಾದಲ್ಲಿ 23 ಹುದ್ದೆಗಳಿವೆ.

    ಹೆಚ್ಚಿನ ವಿವರಗಳು ಈ ಕೆಳಗೆ ನೀಡಲಾಗಿದೆ.