Author: Mallika

  • HESCOM : ಮೈಕ್ರೋ ಫೀಡರ್ ಹುದ್ದೆ

    ಕಾರ್ಯ ಮತ್ತು ಪಾಲನಾ ವೃತ್ತ, ಹೆಸ್ಕಾಂ, ‌ಶಿರಸಿ ವೃತ್ತ ವ್ಯಾಪ್ತಿಯಲ್ಲಿ ಬರುವ ಯಲ್ಲಾಪುರ, ದಾಂಡೇಲಿ ಮತ್ತು ಹಳಿಯಾಳ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ” ಮೈಕ್ರೋ ಫೀಡರ್ ಪ್ರಾಂಚೈಸಿ” ರವರನ್ನು ಹುವಿಸಕಂನಿಯು ಪ್ರೋತ್ಸಾಹ ಧನ ( incentive) ಆಧಾರದ ಮೇಲೆ ಗೊತ್ತು ಮಾಡುವುದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಹತೆ : ಮೈಕ್ರೋ ಫೀಡರ್ ಪ್ರಾಂಚೈಸಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸಂಬಂಧಿಸಿದ ಆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸವಾಗಿರಬೇಕು. ವಾಸ ಸ್ಥಳದ ಪ್ರಮಾಣ ಪತ್ರವನ್ನು ಸಂಬಂಧಪಟ ಗ್ರಾಮ ಪಂಚಾಯತಿಯ ಅಧಿಕೃತ ಅಧಿಕಾರಿಯಿಂದ ಪಡೆದಿರಬೇಕು. ಒಂದು ವೇಳೆ ಯೋಗ್ಯ ಅಭ್ಯರ್ಥಿಯು ಅದೇ ಗ್ರಾಮ ಪಂಚಾಯತಿಯಲ್ಲಿ ದೊರಕದಿದ್ದರೆ ಆ ಗ್ರಾಮ ಪಂಚಾಯತಿಗೆ‌, ಪಂಚಾಯತಿಯ ಅಧ್ಯಕ್ಷರ ಅನುಮೋದನೆಯ ಮೇರೆಗೆ ಬೇರೊಂದು ಪಂಚಾಯತಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು.

    ಅಭ್ಯರ್ಥಿಯ ಕನಿಷ್ಠ ವಿದ್ಯಾರ್ಹತೆ : ಪಿಯುಸಿ, ದ್ವಿತೀಯ ವರ್ಷ ಪಾಸಾಗಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ದ್ವಿತೀಯ ಪಿಯುಸಿಯಲ್ಲಿ ಅಯ ತತ್ಸಮಾನ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು.

    ವಯೋಮಿತಿ : ಅಭ್ಯರ್ಥಿಯು ದಿನಾಯ 16-08-2021 ಕ್ಕೆ 18 ರಿಂದ 40 ವರ್ಷ ವಯೋಮಿತಿಯಲ್ಲಿರಬೇಕು.
    ವೇತನ : ಮೈಕ್ರೋ ಫೀಡರ್ ಪ್ರಾಂಚೈಸಿ ಯು ಪ್ರತಿ ತಿಂಗಳಿಗೆ ಗ್ರಾಹಕರ ‌ಮಾಪಕಗಳನ್ನು ಓದಿ ಶೇಕಡಾ 100 ರಷ್ಟು ಬಿಲ್ ವಿತರಣೆ ಮಾಡಿ ಹುವಿಸಕಂನಿಯು ನಿಗದಿಪಡಿಸಿರುವ ಮಾಸಿಕ ಮೂಲ ಗುರಿಯನ್ನು ಸಾಧಿಸಿದ್ದಲ್ಲಿ ರೂ.12,000/- ವನ್ನು ಕನಿಷ್ಠ ಖಚಿತ ಪ್ರೋತ್ಸಾಹ ಧನವಾಗಿ ನೀಡಲಾಗುವುದು.

    ಭರ್ತಿಯಾದ ಅರ್ಜಿಗಳನ್ನು ನೇರವಾಗಿ ಈ ಕೆಳಯ ವಿಳಾಸಕ್ಕೆ ನೊಂದಾಯಿತ ಅಂಚೆ ಮೂಲಕ / ಸ್ಪೀಡ್ ಮೂಲಕ/ ಮುದ್ದಾಂ ಮೂಲಕ ಕಳುಹಿಸಬೇಕು.

    ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ : 16-08-2021 ರ ಸಂಜೆ 4 ಗಂಟೆಯವರೆಗೆ.

    ಕೊನೆಯ ದಿನಾಂಕದ ನಂತರ ತಲುಪಿದ ಹಾಗೂ ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಂಚೆ ವಿಳಾಸಕ್ಕೆ ಈ ಕಚೇರಿ ಜವಾಬ್ದಾರರಾಗಿರುವುದಿಲ್ಲ.

    ಅರ್ಹ ಅಭ್ಯರ್ಥಿಗಳು ‌ಮೂಲ ದಾಖಲಾತಿ ಪರಿಶೀಲನೆಗೆ ದಿನಾಂಕ 19-08-2021 ರ ಬೆಳಿಗ್ಗೆ 10 ಗಂಟೆಗೆ ಈ ಕೆಳಗಿನ ವಿಳಾಸಕ್ಕೆ ಹಾಜರಾಗಲು ತಿಳಿಸಲಾಗುವುದು.

    ಸ್ಥಳ : ಅಧೀಕ್ಷಕ ಇಂಜಿನಿಯರ್ ( ವಿ) ಕಾರ್ಯ ಮತ್ತು‌ ಪಾಲನಾ ವೃತ್ತ ಕಚೇರಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿ., ಬಿಲ್ಡಿಂಗ್ ಸಂ.# 258/2, ಅಯ್ಯಪ್ಪ ನಗರ, ಹುಬ್ಬಳ್ಳಿ ರಸ್ತೆ, ತಾ||ಶಿರಸಿ- 581402 ( ಉತ್ತರ ಕನ್ನಡ)

    ಅರ್ಜಿ ನಮೂನೆ‌ ಹಾಗೂ ಮಾಹಿತಿ ದೊರೆಯುವ ಸ್ಥಳ :
    www.hescom.karnataka.gov.in ವೆಬ್ಸೈಟ್ ಅಥವಾ ಈ ಕಚೇರಿ/ ಕಾರ್ಯ ನಿರ್ವಾಹಕ ಇಂಜಿನಿಯರ್( ವಿ), ಕಾ ಮತ್ತು ಪಾ ವಿಭಾಗ, ಹೆಸ್ಕಾಂ, ಶಿರಸಿ ಹಾಗೂ ದಾಂಡೇಲಿ /ಆಯಾ ತಾಲ್ಲೂಕು ವ್ಯಾಪ್ತಿಯ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)

    ಅರ್ಜಿ ಸಲ್ಲಿಸುವ ವಿಳಾಸ: ನೋಂದಣಿ ಅಂಚೆ/ ಸ್ಪೀಡ್ ಪೋಸ್ಟ್/ ಮುದ್ದಾಂ ಮೂಲಕ ಅರ್ಜಿ ಸಲ್ಲಿಸುವ ವಿಳಾಸ: ಅಧೀಕ್ಷಕ ಇಂಜಿನಿಯರ್ ( ವಿ),ಕಾರ್ಯ ಮತ್ತು ಪಾಲನಾ ವೃತ್ತ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿ.,ಬಿಲ್ಡಿಂಗ್ ಸಂ.# 258/2, ಅಯ್ಯಪ್ಪ ನಗರ, ಹುಬ್ಬಳ್ಳಿ ರಸ್ತೆ, ತಾ||ಶಿರಸಿ- 581402 ( ಉತ್ತರ ಕನ್ನಡ)

  • ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಾತಿಗಾಗಿ ಅರ್ಜಿ ಆಹ್ವಾನ

    ಜಂಟಿ‌ ಕೃಷಿ ನಿರ್ದೇಶಕರ ಕಚೇರಿ, ಚಿಕ್ಕಮಗಳೂರು ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ತಾಂತ್ರಿಕ ಹುದ್ದೆಗಳು ಕ್ಷೇತ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಯುವಕ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ ನೀಡಲಾಗುವುದು.

    ಹುದ್ದೆಗಳ ವಿವರ : ಕನ್ಸಲ್ಟೆಂಟ್ – 1 ಹುದ್ದೆ
    ಟೆಕ್ನಿಶಿಯನ್ ಅಸಿಸ್ಟೆಂಟ್ – 1 ಹುದ್ದೆ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16/08/2021 ರ ಸಂಜೆ 5 ಗಂಟೆಯೊಳಗೆ ಜಂಟಿ ನಿರ್ದೇಶಕರ ಕಚೇರಿಗೆ ಸಲ್ಲಿಸತಕ್ಕದ್ದು.

    ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಈ ಕಚೇರಿಯಿಂದ ಪಡೆದು ಸಲ್ಲಿಸಲು ತಿಳಿಸಲಾಗಿದೆ.

  • ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ 511 ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೇ ದಿನಾಂಕ

    ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಒಂದು ನವರತ್ನ ಕಂಪನಿ‌ ಮತ್ತು ರಕ್ಷಣಾ ಮಂತ್ರಾಲಯದ ಅಧೀನ ಭಾರತದ ಪ್ರಮುಖ ವೃತ್ತಿಪರ ಎಲೆಕ್ಟ್ರಾನಿಕ್ಸ್ ಕಂಪನಿಗೆ ಬೆಂಗಳೂರು ಸಂಕೀರ್ಣದಲ್ಲಿ ಗುತ್ತಿಗೆಯ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ : ಶಿಕ್ಷಣಾರ್ಥಿ ಇಂಜಿನಿಯರ್- 1 –
    ಯೋಜನೆ ಇಂಜಿನಿಯರ್ – 1

    ವಿದ್ಯಾರ್ಹತೆ : ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ / ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಶನ್ / ಟೆಲಿಕಮ್ಯುನಿಕೇಶನ್/ ಕಮ್ಯೂನಿಕೇಶನ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ನ ಇಂಜಿನಿಯರಿಂಗ್ ವಿಷಯದಲ್ಲಿ ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪೂರ್ಣಕಾಲಿಕ ಬಿ.ಇ/ಬಿ.ಟೆಕ್ ಇಂಜಿನಿಯರಿಂಗ್ ಪಡೆದಿರಬೇಕು.

    ಹುದ್ದೆಗಳ ಸಂಖ್ಯೆ : ಶಿಕ್ಷಣಾರ್ಥಿ ಇಂಜಿನಿಯರ್ -1 – 308 ಹುದ್ದೆಗಳು. ವೇತನ : 1 ನೇ ವರ್ಷ – ರೂ.25,000/-
    2 ನೇ ವರ್ಷ – ರೂ.28,000/-
    3 ನೇ ವರ್ಷ – ರೂ. 31,000/-
    ಯೋಜನೆ ಇಂಜಿನಿಯರ್ -1 – 203 ಹುದ್ದೆಗಳು. 1 ನೇ ವರ್ಷ ರೂ.35,000/-, 2 ನೇ ವರ್ಷ : ರೂ.40,000/-, 3 ನೇ ವರ್ಷ : ರೂ.45,000/-, 4 ನೇ ವರ್ಷ : ರೂ.50,000/-

    ಹುದ್ದೆ ಸ್ಥಳ : ಬೆಂಗಳೂರು

    ವಯೋಮಿತಿ : ಶಿಕ್ಷಣಾರ್ಥಿ ಇಂಜಿನಿಯರ್ ಹುದ್ದೆಗೆ ಅಭ್ಯರ್ಥಿಗಳ ವಯೋಮಿತಿಯು ಗರಿಷ್ಠ 25 ವರ್ಷ, ಹಾಗೂ ಯೋಜನೆ ಇಂಜಿನಿಯರ್ ಹುದ್ದೆಗೆ ಗರಿಷ್ಠ 28 ವರ್ಷ ಮೀರಿರಬಾರದು.

    ಅರ್ಜಿ ಶುಲ್ಕ :ಶಿಕ್ಷಣಾರ್ಥಿ ಇಂಜಿನಿಯರ್ ಹುದ್ದೆಗೆ ಜನರಲ್,ಇಡಬ್ಲ್ಯುಎಸ್, ಒಬಿಸಿ ಅಭ್ಯರ್ಥಿಗಳು ರೂ.500/- ಅರ್ಜಿ ಶುಲ್ಕವನ್ನು ಪಾವತಿಸಬೇಕು. ಯೋಜನೆ ಇಂಜಿನಿಯರ್ ಹುದ್ದೆಗೆ ಜನರಲ್, ಇಡಬ್ಲ್ಯುಎಸ್, ಒಬಿಸಿ ಅಭ್ಯರ್ಥಿಗಳು ರೂ.200/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-08-2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.bel-india.in ಗೆ ಭೇಟಿ ನೀಡಬಹುದು.

  • ಪಶ್ಚಿಮ ರೈಲ್ವೆಯಲ್ಲಿ ಕ್ರೀಡಾಕೋಟಾದಡಿ ಉದ್ಯೋಗವಕಾಶ

    ಭಾರತೀಯ ರೈಲ್ವೆಯು ಪಶ್ಚಿಮ ರೈಲ್ವೆ ವಲಯದಲ್ಲಿ ಖಾಲಿ ಇರುವ ಹುದ್ದೆಗಳ‌ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ.

    ಪಶ್ಚಿಮ ರೈಲ್ವೆಯಲ್ಲಿ ಒಟ್ಟು 21 ಗ್ರೂಪ್ ಸಿ ಪೋಸ್ಟ್ ಗಳನ್ನು ಭರ್ತಿ ಮಾಡಿಕೊಳ್ಳಲು ರೈಲ್ವೆ ನೇಮಕಾತಿ ಮಂಡಳಿ ಅರ್ಜಿಯನ್ನು ಆಹ್ಬಾನಿಸಿದೆ.

    ಕ್ರೀಡಾಕೋಟಾದಡಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 04,ಆಗಸ್ಟ್ 2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 03, 2021

    ವಯೋಮಿತಿ : ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18 ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು.

    ಕ್ರಿಕೆಟ್, ಹಾಕಿ,ಬಾಸ್ಕೆಟ್ ಬಾಲ್,ಟೇಬಲ್ ಟೆನ್ನಿಸ್, ಕುಸ್ತಿ ಹ್ಯಾಂಡ್ ಬಾಲ್, ವಾಟರ್ ಪೋಲೊ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುವ ಕನಿಷ್ಠ ಲೆವೆಲ್ 1 ರಿಂದ ಲೆವಲ್ 5 ರವರೆಗೆ ದೇಶವನ್ನು ಪ್ರತಿನಿಧಿಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು rc-wr.com ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ನೀಡಿ ಹಾಗೂ ದಾಖಲೆಗಳು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬೇಕಾಗುತ್ತದೆ.

  • KSOU ನಲ್ಲಿ ಉದ್ಯೋಗವಕಾಶ, 23 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ನೇರ ಸಂದರ್ಶನ

    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ.

    ಹುದ್ದೆಯ ಹೆಸರು : ಸಹಾಯಕ ಪ್ರಧ್ಯಾಪಕರು
    ಹುದ್ದೆ ಸಂಖ್ಯೆ : 23
    ಹುದ್ದೆಗಳ ವಿಧ : ತಾತ್ಕಾಲಿಕ ಗುತ್ತಿಗೆ ಆಧಾರಿತ ಹುದ್ದೆಯಾಗಿದೆ.

    ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ. ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

    ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ವಿವರ : ಇಂಗ್ಲೀಷ್, ಹಿಂದಿ, ಸಂಸ್ಕೃತ, ತೆಲುಗು, ಉರ್ದು, ಇತಿಹಾಸ, ಪ್ರಾಚೀನ ಇತಿಹಾಸ ಪುರಾತತ್ತ್ವ ಸಾರ್ವಜನಿಕ ಆಡಳಿತ, ಸಮಾಜ ಶಾಸ್ತ್ರ, ಮಾನವ ಶಾಸ್ತ್ರ, ನಿರ್ವಹಣಾ ಶಾಸ್ತ್ರ, ಭೌತಶಾಸ್ತ್ರ, ಶಿಕ್ಷಣ ಶಾಸ್ತ್ರ, ಸೂಕ್ಷ್ಮ ಜೀವಾಣು ಶಾಸ್ತ್ರ,ಬಯೋಟೆಕ್ನಾಲಜಿ ಮತ್ತು ಪ್ರಾಣಿ ಶಾಸ್ತ್ರ,ರಸಾಯನ ಶಾಸ್ತ್ರ,ಬಯೋಕೆಮಿಸ್ಟ್ರಿ,ಮನೋವಿಜ್ಞಾನ, ಪರಿಸರ ವಿಜ್ಞಾನ, ಆಹಾರ ವಿಜ್ಞಾನ, ಭೂಗೋಳ ಶಾಸ್ತ್ರ,ಗಣಕಯಂತ್ರ ವಿಜ್ಞಾನ, ಮಾಹಿತಿ ತಂತ್ರಜ್ಞಾನ,ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಗಣಿತ ಶಾಸ್ತ್ರ ಸಸ್ಯ ಶಾಸ್ತ್ರ

    ಅಭ್ಯರ್ಥಿಗಳು ನಿಗದಿತ ನಮೂನೆಯ ಐದು ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗತಕ್ಕದ್ದು.
    ಸಂದರ್ಶನದ ದಿನಾಂಕ : 10-08-2021 ರಿಂದ 13-08-2021 ರವರೆಗೆ

    ನಿರ್ದಿಷ್ಟ ಸಮಯ ಹಾಗೂ ಸ್ಥಳವನ್ನು ದಿನಾಂಕ 09-08-2021 ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.

    ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸುತ್ತಾರೋ ಆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಜೊತೆಗೆ ಎನ್ ಇಟಿ/ಕೆಎಸ್ ಇಟಿ/ಪಿಹೆಚ್‌ಡಿ ಯಾವುದಾದರೂ ಒಂದು ಅರ್ಹತೆಯನ್ನು ಹೊಂದಿರಬೇಕು.ಹಾಗೂ ಯುಜಿಸಿ 2018ಮಾರ್ಗಸೂಚಿ ಅನುಸಾರ ಇತರೆ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

    ಒಂದಕ್ಕಿಂತ ಹೆಚ್ಚಿನ ವಿಷಯಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದ್ದಲ್ಲಿ, ಪ್ರತಿಯೊಂದು ವಿಷಯಕ್ಕೆ ಪ್ರತ್ಯೇಕ ವಾಗಿ ಅರ್ಜಿಯನ್ನು ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಾಡಿ

    ಅಪ್ಲಿಕೇಶನ್ ಫಾರಂಗಾಗಿ ಇಲ್ಲಿ ಕ್ಲಿಕ್ ಮಾಡಿ

  • ರಾಷ್ಟ್ರೀಯ ವಿತ್ತೀಯ ವರದಿ ಪ್ರಾಧಿಕಾರದಲ್ಲಿ ಹುದ್ದೆ

    ಕಾರ್ಪೋರೇಟ್ ವ್ಯವಹಾರಗಳ ಮಂತ್ರಾಲಯ, ಭಾರತ ಸರಕಾರ ನವದೆಹಲಿ ಇವರು ರಾಷ್ಟ್ರೀಯ ವಿತ್ತೀಯ ವರದಿ ಪ್ರಾಧಿಕಾರದಲ್ಲಿ ( ಎನ್ ಎಫ್ ಆರ್ ಎ) ಅಧ್ಯಕ್ಷರು ಮತ್ತು ಪೂರ್ಣಾವಧಿಗೆ ಮೂವರು ಸದಸ್ಯರ ಹುದ್ದೆಗಳಿಗೆ ಭಾರತೀಯ ನಾಗರೀಕರಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.

    ಕಂಪನಿಗಳು ಲೆಕ್ಕಪರಿಶೋಧನಾ ನೀತಿಗಳನ್ನು ಅಳವಡಿಸಿಕೊಳ್ಳಲು ಮತ್ತು ಮಾನದಂಡಗಳನ್ನು ‌ರೂಪಿಸುವ ಮತ್ತು ಸೃಷ್ಟಿಸುವ ಕುರಿತು ಕೇಂದ್ರ ಸರಕಾರಕ್ಕೆ ಶಿಫಾರಸು ‌ಮಾಡಲು ಎನ್ ಎಫ್ ಆರ್ ಎ ಗೆ ಆದೇಶವಿದೆ. ನಿಗದಿಪಡಿಸಿದಂತೆ ಲೆಕ್ಕಪರಿಶೋಧಕ ಮತ್ತು ಲೆಕ್ಕ ಪರಿಶೋಧನೆಯ ಮಾನದಂಡಗಳ ಅನುಸರಣೆಯನ್ನು ಮೇಲ್ವಿಚಾರಣೆ ಮತ್ತು ಜಾರಿಗೊಳಿಸುವ ನಿರೀಕ್ಷೆಯಿದೆ.

    ಅಂತಹ ಮಾನದಂಡಗಳ ಅನುಸರಣೆಯನ್ನು ಖಾತ್ರಿಪಡಿಸಿಕೊಳ್ಳುವುದರೊಂದಿಗೆ ಸಂಬಂಧಿಸಿದ ವೃತ್ತಿಗಳ ಸೇವೆಯ ಗುಣಮಟ್ಟವನ್ನು ಎನ್ ಎಫ್ ಆರ್ ಎ ನೋಡಿಕೊಳ್ಳುತ್ತದೆ ಮತ್ತು ಸೇವೆಯ ಗುಣಮಟ್ಟ ಇತ್ಯಾದಿಯ ಸುಧಾರಣೆಗೆ ಅಗತ್ಯವಾದ ಕ್ರಮಗಳನ್ನು ಸೂಚಿಸುತ್ತದೆ.

    ಅರ್ಹತಾ ಸ್ಥಿತಿಗಳು ಇತರ ವಿವರಗಳನ್ನು www.mca.gov.in ರಲ್ಲಿ ನೋಡಬಹುದು.

    ಯೋಗ್ಯ ಅರ್ಜಿದಾರರು ಅಗತ್ಯವೆಂದು ಪರಿಗಣಿಸಿದಲ್ಲಿ ಸರಕಾರವು ಮಾನದಂಡಗಳನ್ನು ಸಡಿಲಿಸಹುದು.

    ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳ ಸಲ್ಲಿಕೆಗೆ ಕಡೇ ದಿನಾಂಕ 18 ನೇ ಆಗಸ್ಟ್ 2021ಆಗಿತ್ತು. ಇದನ್ನು 25 ನೇ ಆಗಸ್ಟ್ , 2021 ( 5.30 ಗಂಟೆ) ವಿಸ್ತರಿಸಲಾಗಿದೆ.