ರಾಷ್ಟ್ರೀಯ ವಿತ್ತೀಯ ವರದಿ ಪ್ರಾಧಿಕಾರದಲ್ಲಿ ಹುದ್ದೆ

Advertisements

ಕಾರ್ಪೋರೇಟ್ ವ್ಯವಹಾರಗಳ ಮಂತ್ರಾಲಯ, ಭಾರತ ಸರಕಾರ ನವದೆಹಲಿ ಇವರು ರಾಷ್ಟ್ರೀಯ ವಿತ್ತೀಯ ವರದಿ ಪ್ರಾಧಿಕಾರದಲ್ಲಿ ( ಎನ್ ಎಫ್ ಆರ್ ಎ) ಅಧ್ಯಕ್ಷರು ಮತ್ತು ಪೂರ್ಣಾವಧಿಗೆ ಮೂವರು ಸದಸ್ಯರ ಹುದ್ದೆಗಳಿಗೆ ಭಾರತೀಯ ನಾಗರೀಕರಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.

ಕಂಪನಿಗಳು ಲೆಕ್ಕಪರಿಶೋಧನಾ ನೀತಿಗಳನ್ನು ಅಳವಡಿಸಿಕೊಳ್ಳಲು ಮತ್ತು ಮಾನದಂಡಗಳನ್ನು ‌ರೂಪಿಸುವ ಮತ್ತು ಸೃಷ್ಟಿಸುವ ಕುರಿತು ಕೇಂದ್ರ ಸರಕಾರಕ್ಕೆ ಶಿಫಾರಸು ‌ಮಾಡಲು ಎನ್ ಎಫ್ ಆರ್ ಎ ಗೆ ಆದೇಶವಿದೆ. ನಿಗದಿಪಡಿಸಿದಂತೆ ಲೆಕ್ಕಪರಿಶೋಧಕ ಮತ್ತು ಲೆಕ್ಕ ಪರಿಶೋಧನೆಯ ಮಾನದಂಡಗಳ ಅನುಸರಣೆಯನ್ನು ಮೇಲ್ವಿಚಾರಣೆ ಮತ್ತು ಜಾರಿಗೊಳಿಸುವ ನಿರೀಕ್ಷೆಯಿದೆ.

ಅಂತಹ ಮಾನದಂಡಗಳ ಅನುಸರಣೆಯನ್ನು ಖಾತ್ರಿಪಡಿಸಿಕೊಳ್ಳುವುದರೊಂದಿಗೆ ಸಂಬಂಧಿಸಿದ ವೃತ್ತಿಗಳ ಸೇವೆಯ ಗುಣಮಟ್ಟವನ್ನು ಎನ್ ಎಫ್ ಆರ್ ಎ ನೋಡಿಕೊಳ್ಳುತ್ತದೆ ಮತ್ತು ಸೇವೆಯ ಗುಣಮಟ್ಟ ಇತ್ಯಾದಿಯ ಸುಧಾರಣೆಗೆ ಅಗತ್ಯವಾದ ಕ್ರಮಗಳನ್ನು ಸೂಚಿಸುತ್ತದೆ.

ಅರ್ಹತಾ ಸ್ಥಿತಿಗಳು ಇತರ ವಿವರಗಳನ್ನು www.mca.gov.in ರಲ್ಲಿ ನೋಡಬಹುದು.

ಯೋಗ್ಯ ಅರ್ಜಿದಾರರು ಅಗತ್ಯವೆಂದು ಪರಿಗಣಿಸಿದಲ್ಲಿ ಸರಕಾರವು ಮಾನದಂಡಗಳನ್ನು ಸಡಿಲಿಸಹುದು.

ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳ ಸಲ್ಲಿಕೆಗೆ ಕಡೇ ದಿನಾಂಕ 18 ನೇ ಆಗಸ್ಟ್ 2021ಆಗಿತ್ತು. ಇದನ್ನು 25 ನೇ ಆಗಸ್ಟ್ , 2021 ( 5.30 ಗಂಟೆ) ವಿಸ್ತರಿಸಲಾಗಿದೆ.

Leave a Comment