5 ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಮಾನದಂಡಗಳಿಗೆ ಸಮನಾಗಿ ಎಸ್ ಸಿಗಳಲ್ಲಿ ಒಟ್ಟು ದಾಖಲಾತಿ ಅನುಪಾತವನ್ನು (ಉನ್ನತ ಶಿಕ್ಷಣ) ತರಲು ಭಾರತ ಸರಕಾರವು ರಾಜ್ಯ ಸರಕಾರದೊಂದಿಗೆ ಕೂಡಿ 2021-22 ರ ಅವಧಿಯಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 63 ಲಕ್ಷ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನವನ್ನು ನೀಡಲಿದೆ.
ಅರ್ಹತೆ : ಎಸ್ ಸಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ 11ನೇ ತರಗತಿ ಮತ್ತು ಅದಕ್ಕಿಂತ ಮೇಲಿನ ತರಗತಿಯಲ್ಲಿ ಅಧ್ಯಯನ ಮಾಡಲು ಅವರ ಪೋಷಕರ ವಾರ್ಷಿಕ ಆದಾಯ ರೂ.< 25 ಲಕ್ಷ ಇರಬೇಕು.
ಉಪಯೋಗಗಳು : ಕೋರ್ಸ್ ನ ಸಂಪೂರ್ಣ ಅವಧಿಗೆ ವಿದ್ಯಾರ್ಥಿವೇತನವು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ.
ಬೋಧನಾ ಶುಲ್ಕ ಸೇರಿದಂತೆ ಕಡ್ಡಾಯ ಮರುಪಾವತಿಸಬೇಕಾದ ಶುಲ್ಕಗಳು.
ಶಿಕ್ಷಣದ ಮಟ್ಟವನ್ನು ಆಧರಿಸಿ ವಾರ್ಷಿಕ 2500 ರಿಂದ 13500 ರವರೆಗೆ ಶೈಕ್ಷಣಿಕ ಭತ್ಯೆ.
ದಿವ್ಯಾಂಗ ವಿದ್ಯಾರ್ಥಿಗಳಿಗೆ ಹತ್ತು ಪರ್ಸೆಂಟ್ ಹೆಚ್ಚುವರಿ ಭತ್ಯೆ ನೀಡಲಾಗುವುದು.
ಎಲ್ಲಾ ಅರ್ಹ ವಿದ್ಯಾರ್ಥಿಗಳು ಬೋಧನಾ ಶುಲ್ಕಮತ್ತು ಹಾಸ್ಟೆಲ್ ಶುಲ್ಕವನ್ನು ಮೊದಲೇ ಪಾವತಿಸದೆ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.
ಅರ್ಹ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರಗಳು ಫ್ರೀ ಶಿಪ್ ಕಾರ್ಡ್ ನೀಡುವ ಮೂಲಕ ಶುಲ್ಕವನ್ನು ಮೊದಲೇ ಪಾವತಿಸದೆ ಸಂಸ್ಥೆಯಲ್ಲಿ ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತವೆ
ಅರ್ಜಿಗಳು : ಎಲ್ಲಾ ಅರ್ಹ ವಿದ್ಯಾರ್ಥಿಗಳು ರಾಜ್ಯ ಸರಕಾರದ ಆನ್ಲೈನ್ ವಿದ್ಯಾರ್ಥಿವೇತನ ವೇದಿಕೆಯಲ್ಲಿ 2021 ರ ಎಪ್ರಿಲ್ 16 ಜೂನ್ 30 ರವರೆಗೆ ಪ್ರಾರಂಭವಾಗುವ ಮೊದಲ ಕರೆಯಲ್ಲಿ ಅರ್ಜಿ ಸಲ್ಲಿಸಬಹುದು.
ಯಾವುದೇ ತೊಂದರೆಗಳಿದ್ದಲ್ಲಿ ರಾಜ್ಯ ಸರಕಾರದ ಕುಂದುಕೊರತೆ ಪರಿಹಾರ ಸಂಖ್ಯೆಗೆ ಕರೆ ಮಾಡಿ ಅಥವಾ ರಾಜ್ಯ ಸರಕಾರದ ಸಮಾಜ ಕಲ್ಯಾಣ ಆಯುಕ್ತರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.socialjustice.nic.in ನಲ್ಲಿ ನೋಡಬಹುದು.