ಐ.ಡಿ.ಎಸ್.ಪಿ , ಎನ್.ಸಿ.ಡಿ ಕ್ಲಿನಿಕ್, ಎನ್.ಪಿ.ಹೆಚ್.ಸಿ ( ಹಿರಿಯ ನಾಗರಿಕರ ವಾರ್ಡ್ ) ಕಾರ್ಯಕ್ರಮದಡಿಯಲ್ಲಿ ಈ ಕೆಳಕಂಡ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ರಾಷ್ಟ್ರೀಯ ಅಭಿಯಾನದ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ : ಡಾಟಾ ಮ್ಯಾನೇಜರ್- 01, ಡಾಕ್ಟರ್ (ಜನರಲ್ ಫಿಸಿಶಿಯನ್)- 01, ಡಾಕ್ಟರ್ ( ಕನ್ಸಲ್ಟೆಂಟ್ ಮೆಡಿಸಿನ್) – 01 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನುಆಹ್ವಾನಿಸಲಾಗಿದೆ.
ಡಾಟಾ ಮ್ಯಾನೇಜರ್ (ಐಡಿಎಸ್‌ಪಿ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪೋಸ್ಟ್ ಗ್ರಾಜ್ಯುಯೇಶನ್ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಬಿಇ ಇನ್ ಐಟಿ/ ಎಲೆಕ್ಟ್ರಾನಿಕ್ಸ್ ನ್ನು ಹೊಂದಿರಬೇಕು. ಹಾಗೂ ಸದರಿ ಹುದ್ದೆಯಲ್ಲಿ ಒಂದು ವರ್ಷಗಳ ಅನುಭವವಿರಬೇಕು. ಹೆಲ್ತ್ ಅಥವಾ ಸೋಷಿಯಲ್ ಸೆಕ್ಟರ್ ನಲ್ಲಿಅನುಭವವಿರುವರಿಗೆ ಆದ್ಯತೆ ನೀಡಲಾಗುವುದು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 22,050/- ಮಾಸಿಕ ವೇತನವಿರುತ್ತದೆ.
ಡಾಕ್ಟರ್ (ಜನರಲ್ ಪಿಸಿಶಿಯನ್)(ಎನ್‌ಸಿಡಿ ಕ್ಲಿನಿಕ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂ.ಇ.ಎಸ್.ಎಸ್, ಎಂಡಿ (ಇಂಟರ್ನಲ್ ಮೆಡಿಸಿನ್) ಹೊಂದಿರಬೇಕು. ಸದರಿ ಹುದ್ದೆಯಲ್ಲಿ 3 ವರ್ಷಗಳ ಅನುಭವ ಇರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.1,10,000/- ಅಥವಾ ರೂ. 50,000/- ಮಾಸಿಕ ವೇತನವಿರುತ್ತದೆ.
ಡಾಕ್ಟರ್ (ಕನ್ಸಲ್ಟೆಂಟ್ ಮೆಡಿಸಿನ್)(ಎನ್‌ಪಿಎಚ್‌ಸಿಇ ವಾರ್ಡ್) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎಂಬಿಬಿಎಸ್ ಗ್ರಾಜ್ಯುಯೇಟ್ ಮಾಡಿರಬೇಕು. 3 ವರ್ಷಗಳ ಅನುಭವವಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.50,000/- ಮಾಸಿಕ ವೇತನ ನಿಗದಿ ಪಡಿಸಲಾಗಿದೆ.
ಈ ಮೇಲ್ಕಂಡ ಎಲ್ಲಾ ಹುದ್ದೆಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ದಿನಾಂಕ 29-04-2021 ರಿಂದ 05-05-2021 ರವರೆಗೆ ಅರ್ಜಿಗಳನ್ನು ದೃಢೀಕರಣ ಸಹಿಯೊಂದಿಗೆ ನೇರವಾಗಿ ಮೇಲ್ಕಂಡ ಕಛೇರಿಯಲ್ಲಿ ಸಲ್ಲಿಸಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಯಾಯಾಲಯದ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ. ಕಛೇರಿಯ ಸಮಯ ಬೆಳಿಗ್ಗೆ : 11.00 ರಿಂದ ಸಂಜೆ 5.00 ರವರೆಗೆ.