ಬೆಂಗಳೂರು ನಗರ ಜಿಲ್ಲಾ ಪಂಚಾಯತಿನಲ್ಲಿ ರೂರ್ಬನ್ ಯೋಜನೆಗೆ ಗುತ್ತಿಗೆ ಆಧಾರದಲ್ಲಿ ಹೊರಗುತ್ತಿಗೆ ಸಂಸ್ಥೆಯ ಮೂಲಕ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ : ರೀಜನಲ್ ಪ್ಲ್ಯಾನಿಂಗ್ ಸ್ಪೆಷಲಿಸ್ಟ್, ರೂರಲ್ ಡೆವಲಪ್ಮೆಂಟ್ ಮತ್ತು ಮ್ಯಾನೇಜ್ಮೆಂಟ್ ಸ್ಪೆಷಲಿಸ್ಟ್, ಇಂಜಿನಿಯರಿಂಗ್ ಸ್ಪೆಷಲಿಸ್ಟ್, ಸ್ಪೆಷಲ್ ಪ್ಲ್ಯಾನಿಂಗ್ ಪ್ರೊಫೆಷನಲ್, ರೂರಲ್ ಮ್ಯಾನೇಜ್ಮೆಂಟ್ ಪ್ರೊಫೆಷನಲ್.
ವಯೋಮಿತಿ : ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ ಕನಿ 25 ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.
ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಮತ್ತು ಇಂಗ್ಲೀಷ್ ಭಾಷೆ ಚೆನ್ನಾಗಿ ತಿಳಿದಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು ನಗರ ಜಿಲ್ಲೆಯ ಯಾವುದೇ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.
ಮೇಲ್ಕಂಡ ಹುದ್ದೆಯು ಸಂಪೂರ್ಣವಾಗಿ ತಾತ್ಕಾಲಿಕ ಹುದ್ದೆಯಾಗಿದ್ದು, ಆಯ್ಕೆಯಾದ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು. ನಂತರ ಕಾಲಕಾಲಕ್ಕೆ ಅವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ನವೀಕರಿಸಲಾಗುವುದು.
ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ದಿನಾಂಕ 20-06-2021 ರೊಳಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಡಿ.ಆರ್.ಡಿ.ಎ ಕೋಶ, ಕರಿಯಪ್ಪ ರಸ್ತೆ, ಬನಶಂಕರಿ ದೇವಾಲಯ ಪಕ್ಕ, ಬನಶಂಕರಿ, ಬೆಂಗಳೂರು ಇಲ್ಲಿಗೆ ಖುದ್ದಾಗಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಚೇರಿ ವೇಳೆಯಲ್ಲಿ ಜಿಲ್ಲಾ ಪಂಚಾಯಿತಿ ಡಿ.ಆರ್.ಡಿ.ಎ ಕೋಶವನ್ನು ಸಂಪರ್ಕಿಸುವುದು ( 9901031755)
ಅರ್ಜಿ ನಮೂನೆ ಮತ್ತು ಪ್ರಕಟಣೆಯನ್ನು http://bengaluruurban.nic.in ನಲ್ಲಿ ಪಡೆಯಬಹುದು.