Advertisements
ಆಯುಷ್ ನಿರ್ದೇಶನಾಲಯದ ಆಯುಷ್ ಇಲಾಖೆಯ ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ: ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30,000/- ವೇತನವಿರುತ್ತದೆ.
ವಿದ್ಯಾರ್ಹತೆ :ಗ್ರಾಜ್ಯುಯೇಶನ್ ಡಿಗ್ರಿ ಯನ್ನು ಯಾವುದೇ ಆಯುಷ್ ಪಿಜಿ. ಎಂಬಿಎ/ ಪೋಸ್ಟ್ ಗ್ರಾಜ್ಯುಯೇಶನ್ ಡಿಪ್ಲೋಮಾ AICTE ನಿಂದ ಪಡೆದುಕೊಂಡಿರಬೇಕು.
ಗರಿಷ್ಠ 45 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆಯು ನಡೆಯುತ್ತದೆ. ರೂ. 200 ಅರ್ಜಿ ಶುಲ್ಕವನ್ನು ಪಾವತಿಸಬೇಕು.
ದಿನಾಂಕ 15-05-2021 ರಂದು ಸಮಯ ಸಂಜೆ 4.30 ಘಂಟೆಯೊಳಗಾಗಿ ಅರ್ಜಿಯನ್ನು ಕಚೇರಿಯಿಂದ ಪಡೆದುಕೊಳ್ಳುವುದು.
ದಿನಾಂಕ 17-05-2021 ರಂದು ಸಮಯ ಸಂಜೆ 4.30 ಘಂಟೆಯೊಳಗಾಗಿ ತಲುಪುವಂತೆ ಅರ್ಜಿಗಳನ್ನು ಸಲ್ಲಿಸುವುದು.