ಯಾದಗಿರಿ ವೈದ್ಯಕೀಯ ವಿಜ್ಞಾಗಳ ಸಂಸ್ಥೆ : ನೇರ ನೇಮಕಾತಿ ಅಧಿಸೂಚನೆ

Advertisements

ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಯಾದಗಿರಿ, ಇಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳ ವಿವರ : ಪ್ರಾಧ್ಯಾಪಕರು -06
ಸಹ ಪ್ರಾಧ್ಯಾಪಕರು- 16
ಸಹಾಯಕ ಪ್ರಾಧ್ಯಾಪಕರು- 29
ಸೀನಿಯರ್ ರೆಸಿಡೆಂಟ್ ( ಗುತ್ತಿಗೆ ಆಧಾರದ ಮೇಲೆ ) – 17
ಟ್ಯೂಟರ್ ( ಗುತ್ತಿಗೆ ಆಧಾರದ ಮೇಲೆ ) – 17
ಒಟ್ಟು ಹುದ್ದೆಗಳು – 85

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ನಿರ್ದೇಶಕರು, ಯಾದಗಿರಿ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹೊಸ ಜಿಲ್ಲಾ ಆಸ್ಪತ್ರೆ, ಚಿತ್ತಾಪುರ ಮೇನ್ ರೋಡ್, ಯಾದಗಿರಿ – ಈ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಸಲ್ಲಿಸತಕ್ಕದ್ದು.

ಎಲ್ಲಾ ನೇಮಕಾತಿಗಳು ತಾತ್ಕಾಲಿಕವಾಗಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅನುಮೋದನೆಯ ಷರತ್ತಿಗೆ ಒಳಪಟ್ಟಿರುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-06-2021 ಸಮಯ 05:00 ಗಂಟೆಗೆ
ಸಂದರ್ಶನದ ದಿನಾಂಕ : 28-06-2021 ರಿಂದ, ನಿರ್ದೇಶಕರು, ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹೊಸ ಜಿಲ್ಲಾ ಆಸ್ಪತ್ರೆ ಚಿತ್ತಾಪುರ ಮೇನ್ ರೋಡ್, ಯಾದಗಿರಿ – ದಲ್ಲಿ ನಡೆಸಲಾಗುವುದು.

ವಯೋಮಿತಿ : ಪ್ರೊಫೆಸರ್ ಹುದ್ದೆಗೆ ಜಿಎಂ ಅಭ್ಯರ್ಥಿಗಳಿಗೆ ಗರಿಷ್ಟ 5೦ ವಯೋಮಿತಿ ಮೀರಿರಬಾರದು. 53 ವರ್ಷ ಒಬಿಸಿ ಅಭ್ಯರ್ಥಿಗಳಿಗೆ, 55 ವರ್ಷ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ.
ಸಹ ಪ್ರಾಧ್ಯಾಪಕರು ಹುದ್ದೆ : ಜಿಎಂ ಅಭ್ಯರ್ಥಿಗಳಿಗೆ 45 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 48 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಗರಿಷ್ಟ 50 ವಯೋಮಿತಿ ಮೀರಿರಬಾರದು.
ಸಹಾಯಕ ಪ್ರಾಧ್ಯಾಪಕ/ ಸೀನಿಯರ್ ರೆಸಿಡೆಂಟ್/ ಟ್ಯೂಟರ್ ಹುದ್ದೆಗೆ ಜಿಎಂ ಅಭ್ಯರ್ಥಿಗಳಿಗೆ 38 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 4೦ ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 43 ವರ್ಷ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave a Comment