ಪಶ್ಚಿಮ ಕೇಂದ್ರ ರೈಲ್ವೆನಲ್ಲಿ 165 ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

Advertisements

ಪಶ್ಚಿಮ ಕೇಂದ್ರ ರೈಲ್ವೆನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 30, ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

ಪಶ್ಚಿಮ ಕೇಂದ್ರ ರೈಲ್ವೆನಲ್ಲಿ 165 ವಿವಿಧ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01-03-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-03-2021

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.

ಹುದ್ದೆಗಳ ವಿವರ : ಫಿಟ್ಟರ್ -45,
ವೆಲ್ಡರ್-28,ಇಲೆಕ್ಟ್ರೀಷಿಯನ್ -18, copa-08,ಸೆಕ್ರೇಟೇರಿಯಲ್ ಅಸಿಸ್ಟೆಂಟ್(ಇಂಗ್ಲೀಷ್)-05,ಪೇಂಟರ್ (ಜನರಲ್)-10, ಕಾರ್ಪೆಂಟರ್ – 20, ಪ್ಲಂಬರ್ – 08,ಡ್ರಾಟ್ಸ್ ಮ್ಯಾನ್ (ಸಿವಿಲ್) -02, ಟೇಲರ್ (ಜನರಲ್) -05,ಮೆಕ್ಯಾನಿಕ್ (ಡೀಸೆಲ್‌)-07,ಮೆಕ್ಯಾನಿಕ್ (ಟ್ರ್ಯಾ ಕ್ಟರ್)-04, ಅಪರೇಟರ್ (ಅಡ್ವಾನ್ಸ್ಡ್ ಮೆಷಿನ್ ಟೂಲ್)- 05

ವಿದ್ಯಾರ್ಹತೆ: ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಜೊತೆಗೆ ಸಂಬಂಧಿಸಿದ ಟ್ರೇಡ್ ನಲ್ಲಿ ಐಟಿಐ ತೇರ್ಗಡೆಹೊಂದಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 15 ಹಾಗೂ ಗರಿಷ್ಠ 24 ವರ್ಷ ಹೊಂದಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಒಬಿಸಿ, ಪ್ರವರ್ಗ-1 ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪಿಡ್ಬ್ಯು ಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ.70/-,
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.170/- ಅರ್ಜಿ ಶುಲ್ಕ ನಿಗದಿಯಾಗಿದೆ.

ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 8000/- ವೇತನವಿರುತ್ತದೆ.
ಉದ್ಯೋಗ ಸ್ಥಳ : ನಿಶಾತ್ ಪುರ್ (ಭೋಪಾಲ್)

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave a Comment