ಕೋವಿಡ್ -19 ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಚಾಮರಾಜನಗರ ಈ ಕಚೇರಿಯ ಅಧೀನ ಸಂಸ್ಥೆಗಳಲ್ಲಿ ಖಾಲಿ ಇರುವ ಶುಶ್ರೂಷಕರು, ಕಿರಿಯ ವೈದ್ಯಕೀಯ ಪ್ರಯೋಗಶಾಲ ತಂತ್ರಜ್ಞರು ಹಾಗೂ ಫಾರ್ಮಸಿಸ್ಟ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ಮೆರಿಟ್ ಕಂ ರೋಸ್ಟರ್ ಮೂಲಕ ದಿನಾಂಕ 30-09-2021 ರ ವರೆಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿ ಮಾಡುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕಾತಿ ಮಾಡಲು ಹಾಗೂ ಕಚೇರಿಯ ಅಧೀನ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು 6 ಐಸಿಯು ಹಾಸಿಗೆಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ವೈದ್ಯಾಧಿಕಾರಿ 8 ಹುದ್ದೆಗಳನ್ನು ತಾತ್ಕಾಲಿಕವಾಗಿ 06 ತಿಂಗಳ ಅವಧಿಗೆ ನೇಮಕಾತಿ ಮಾಡಲು ಹುದ್ದೆಗಳ ಮುಂದೆ ನಮೂದಿಸಿರುವ ದಿನಾಂಕದಂದು ನೇರ ಸಂದರ್ಶನವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಕೊಠಡಿ ಸಂಖ್ಯೆ 312, ಮೂರನೇ ಮಹಡಿ, ಜಿಲ್ಲಾಡಳಿತ ಭವನ, ಚಾಮರಾಜನಗರ ಇಲ್ಲಿ ಏರ್ಪಡಿಸಲಾಗಿದೆ. ಆಸಕ್ತರು ತಮ್ಮ ಮೂಲ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳು ( 1 ಜೊತೆ ಜೆರಾಕ್ಸ್ ಪ್ರತಿ) ಹಾಗೂ ಸ್ವ ವಿವರಗಳೊಂದಿಗೆ ನೇರಸಂದರ್ಶನಕ್ಕೆ ಹಾಜರಾಗುವುದು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಕರ್ತವ್ಯದ ವೇಳೆಯಲ್ಲಿ ಸಂಪರ್ಕಿಸುವುದು.
ಹುದ್ದೆಯ ಹೆಸರು : ವೈದ್ಯಾಧಿಕಾರಿ – 8 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಎಂಬಿಬಿಎಸ್ ತೇರ್ಗಡೆ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.60,000/- ವೇತನವಿರುತ್ತದೆ.
ಶುಶ್ರೂಷಾಧಿಕಾರಿ: 04 ಹುದ್ದೆ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,000/- ಮಾಸಿಕ ವೇತನವಿರುತ್ತದೆ. ಅಭ್ಯರ್ಥಿಗಳು ಜಿಎನ್ ಎಂ ನ್ನು ಅಂಗೀಕೃತ ನರ್ಸಿಂಗ್ ಕೌನ್ಸಿಲ್ ನಿಂದ ಪಡೆದುಕೊಂಡಿರಬೇಕು.
ಪ್ರಯೋಗ ಶಾಲಾ ತಂತ್ರಜ್ಞರು : 15 ಹುದ್ದೆಗಳು : ಈ ಹುದ್ದೆಗೆ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಜೊತೆಗೆ ಡಿಎಂಎಲ್ ಟಿ ಅಥವಾ ಪಿಯುಸಿ ಜೊತೆಗೆ ಪ್ಯಾರಾಮೆಡಿಕಲ್ ಬೋರ್ಡ್ ಲ್ಯಾಬ್ ಟೆಕ್ನಿಶಿಯನ್ ಹೊಂದಿರ ಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.20,000/- ವೇತನವಿರುತ್ತದೆ.
ಫಾರ್ಮಸಿಸ್ಟ್ : 26 ಹುದ್ದೆಗಳು : ಈ ಹುದ್ದೆಗೆ 2 ವರ್ಷಗಳ ಡಿಪ್ಲೋಮಾ ಕೋರ್ಸ್ ಡಿಫಾರ್ಮಾ ದಲ್ಲಿ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.20,000/- ವೇತನವಿರುತ್ತದೆ.
ವಯೋಮಿತಿ : ಜನರಲ್ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಸಿಎಟಿ1 ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.
ನೇರ ಸಂದರ್ಶನ ನಡೆಯುವ ದಿನಾಂಕ ಮತ್ತು ಸಮಯ: 11-06-2021 ಸಮಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ.