ಜಿಲ್ಲಾಡಳಿತ ಬಳ್ಳಾರಿ ಇವರ ವತಿಯಿಂದ ಸರಕಾರದಿಂದ ಹುದ್ದೆಗಳು ಸೃಜನೆಯಾಗುವವರೆಗೆ ಡಿ.ಎಂ.ಎಫ್ ಯೋಜನೆಯ ನಿಧಿಯಿಂದ ಬಳ್ಳಾರಿಯ ವಿಮ್ಸ್ ಸಂಸ್ಥೆ ಅಧೀನದಲ್ಲಿರುವ ಕೋವಿಡ್-19 ಕೇಂದ್ರಗಳಲ್ಲಿ ರೋಗಿಗಳ ಚಿಕಿತ್ಸೆಗಾಗಿ ಶುಶ್ರೂಷಕ ಸಿಬ್ಬಂದಿಗಳನ್ನು ಸಂಚಿತ ವೇತನ ರೂ. 2೦,೦೦೦/- ರಿಸ್ಕ್ ಅಲವೆನ್ಸ್ ರೂ.5೦೦೦/- ಗಳ ಆಧಾರದ ಮೇಲೆ 11 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಲು ನೇರ ಸಂದರ್ಶನ ಏರ್ಪಡಿಸಲಾಗಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ಶೈಕ್ಷಣಿಕ ದಾಖಲಾತಿಗಳ ಮೂಲ ಪ್ರತಿ ಹಾಗೂ ಜೆರಾಕ್ಸ್ ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಹಾಜರಾಗುವುದು.
ನೇರ ಸಂದರ್ಶನ ದಿನಾಂಕ : 28-05-2021 ರಂದು 11:00 ಗಂಟೆಗೆ
ಸಂದರ್ಶನ ನಡೆಯುವ ಸ್ಥಳ : ಜಿಲ್ಲಾಧಿಕಾರಿಗಳ ಆವರಣ, ಬಳ್ಳಾರಿ
ಹುದ್ದೆ : ಶುಶ್ರೂಷಾಧಿಕಾರಿಗಳು – 118 ಹುದ್ದೆಗಳು
ವಯೋಮಿತಿ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು. ಸಾಮಾನ್ಯ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ನೇರ ಸಂದರ್ಶನಕ್ಕೆ ಹಾಜರಾಗಲು ಅರ್ಜಿಯನ್ನು ವಿಮ್ಸ್ ಅಂತರ್ಜಾಲದಲ್ಲಿ www.vimsbellay.org.in ಡೌನ್‌ಲೋಡ್ ಮಾಡಿಕೊಂಡು ಶೈಕ್ಷಣಿಕ ದಾಖಲಾತಿಗಳೊಂದಿಗೆ ಅಭ್ಯರ್ಥಿಯು ನೇರ ಸಂದರ್ಶನಕ್ಕೆ ಹಾಜರಾಗುವುದು,