Vijayanagar Zilla Panchayat Recruitment 2024: ಜಿಲ್ಲಾ ಪಂಚಾಯತಿಯಲ್ಲಿ ಡಿಇಒ, ತಾಂತ್ರಿಕ ಸಹಾಯಕ ಹುದ್ದೆಗಳು ಖಾಲಿ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

Written By sarkari

Lorem ipsum dolor sit amet consectetur pulvinar ligula augue quis venenatis. 

Advertisements

Vijayanagar Zilla Panchayat Recruitment 2024: ವಿಜಯನಗರ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. DEO ಖಾಲಿ ಹುದ್ದೆಗಳದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಿಜಯನಗರ – ಕರ್ನಾಟಕ ಸರ್ಕಾರದಲ್ಲಿ ಕೆಲಸ ಹುಡುಕುವವರಿಗೆ ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 11-Mar-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು;
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 01-03-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-03-2024

ಹುದ್ದೆಯ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಯ ಹೆಸರು: ತಾಂತ್ರಿಕ ಸಹಾಯಕ, DEO ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ವೇತನ: ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.18000-28000/- ವೇತನವಿರತ್ತದೆ.

ಹುದ್ದೆ ಹೆಸರು ಮತ್ತು ಖಾಲಿ ಇರೋ ಹುದ್ದೆಗಳ ಸಂಖ್ಯೆ;
ತಾಂತ್ರಿಕ ಸಹಾಯಕ (ಕೃಷಿ) 3, ತಾಂತ್ರಿಕ ಸಹಾಯಕ (ತೋಟಗಾರಿಕೆ) 4, ತಾಂತ್ರಿಕ ಸಹಾಯಕ (ರೇಷ್ಮೆ ಕೃಷಿ) 2, ತಾಂತ್ರಿಕ ಸಹಾಯಕ (ಅರಣ್ಯ) 3, ಡೇಟಾ ಎಂಟ್ರಿ ಆಪರೇಟರ್ (DEO) 1. ಒಟ್ಟು 13 ಹುದ್ದೆಗಳು ಖಾಲಿ ಇದೆ.

ವಿದ್ಯಾರ್ಹತೆ:
ಟೆಕ್ನಿಕಲ್ ಅಸಿಸ್ಟೆಂಟ್ (ಕೃಷಿ) ಹುದ್ದೆಗೆ ಕೃಷಿಯಲ್ಲಿ ಪದವಿ ಪಡೆದಿರಬೇಕು. ತೋಟಗಾರಿಕೆಯಲ್ಲಿ ತಾಂತ್ರಿಕ ಸಹಾಯಕ (ತೋಟಗಾರಿಕೆ) ಹುದ್ದೆಗೆ ಪದವಿ ಪಾಸಾಗಿರಬೇಕು. ರೇಷ್ಮೆ ಕೃಷಿಯಲ್ಲಿ ತಾಂತ್ರಿಕ ಸಹಾಯಕ (ಸೆರಿಕಲ್ಚರ್) ಹುದ್ದೆಗೆ ಪದವಿ ಪಡೆದಿರಬೇಕು. ಅರಣ್ಯದಲ್ಲಿ ತಾಂತ್ರಿಕ ಸಹಾಯಕ (ಅರಣ್ಯಶಾಸ್ತ್ರ) ಹುದ್ದೆಗೆ ಪದವಿ ಹೊಂದಿರಬೇಕು. ಡೇಟಾ ಎಂಟ್ರಿ ಆಪರೇಟರ್ (DEO) ಹುದ್ದೆಗೆ ಯಾವುದೇ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 02 ರಿಂದ 03 ವರ್ಷಗಳ ಅನುಭವವನ್ನು ಹೊಂದಿರಬೇಕು

ವಯೋಮಿತಿ: ವಿಜಯನಗರ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಟ ವಯಸ್ಸು 21 ವರ್ಷ, ಮತ್ತು ಗರಿಷ್ಠ 40 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ: ಮೆರಿಟ್ ಪಟ್ಟಿ, ಟೈಪಿಂಗ್ ಪರೀಕ್ಷೆ, ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ವೇತನ: ತಾಂತ್ರಿಕ ಸಹಾಯಕ (ಕೃಷಿ), ತಾಂತ್ರಿಕ ಸಹಾಯಕ (ತೋಟಗಾರಿಕೆ), ತಾಂತ್ರಿಕ ಸಹಾಯಕ (ರೇಷ್ಮೆ ಕೃಷಿ), ತಾಂತ್ರಿಕ ಸಹಾಯಕ (ಅರಣ್ಯ) ಹುದ್ದೆಗಳಿಗೆ ರೂ.28,000 ವೇತನವಿದೆ. ಡೇಟಾ ಎಂಟ್ರಿ ಆಪರೇಟರ್ (DEO) ರೂ.18000/- ವೇತನವಿರಲಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ