ಉತ್ತರಕನ್ನಡ ಜಿಲ್ಲಾ ಪಂಚಾಯತ್ ಉದ್ಯೋಗವಕಾಶ

Advertisements

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಎರಡು ಬಿಇ-ಸಿವಿಲ್ ಒಂದು ಬಿಎಸ್ಸಿ/ಎಂಎಸ್ಸಿ ತೋಟಗಾರಿಕೆ ಮತ್ತು ಒಂದು ಬಿಎಸ್ಸಿ/ ಎಂಎಸ್ಸಿ ಅರಣ್ಯ ತಾಂತ್ರಿಕ ಸಹಾಯಕರು ಅವಶ್ಯಕತೆ ಇದ್ದು, ಸದ್ರಿ ಹುದ್ದೆಗೆ ಆಸಕ್ತಿ ಇರುವ ಕೆಳಗಿನ ಅರ್ಹತಾ ಮಾನದಂಡಗಳನ್ನು ಹೊಂದಿರುವ ಅಭ್ಯರ್ಥಿಗಳು ದಿನಾಂಕ 25-03-2021 ರಿಂದ 29-03-2021 ರೊಳಗಾಗಿ ಅರ್ಜಿಗಳನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಸಲ್ಲಿಸಬಹುದಾಗಿದೆ. ಅಪೂರ್ಣ ಹೊಂದಿರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಅರ್ಹತೆ: ಬಿಇ-ಸಿವಿಲ್ ವಿದ್ಯಾರ್ಹತೆ, ಬಿಎಸ್ಸಿ/ಎಂ.ಎಸ್ಸಿ ತೋಟಗಾರಿಕೆ.

ವಿದ್ಯಾರ್ಹತೆ : ಬಿ.ಎಸ್ಸಿ/ಎಂ.ಎಸ್ಸಿ ಅರಣ್ಯ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಇಂಗ್ಲೀಷ್‌ ಭಾಷೆ ತಿಳಿದಿರಬೇಕು.

ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ‌ ಸಂಭಾವನೆ ರೂ.24,000/-+ ಪ್ರಯಾಣ ಭತ್ಯೆ ಪಾವತಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08382-226862 ಸಂಪರ್ಕಿಸಬಹುದು. (ಕಚೇರಿ ಅವಧಿಯಲ್ಲಿ).

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave a Comment