UPSC Jobs: ಕೇಂದ್ರ ಸರಕಾರಿ ಉದ್ಯೋಗಾವಕಾಶ; 312 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಉದ್ಯೋಗ ವಿವರ- ಕ್ವಿಕ್‌ ಲುಕ್

  • ಎಲ್ಲಿ ಉದ್ಯೋಗ?: ಕೇಂದ್ರ ಲೋಕ ಸೇವಾ ಆಯೋಗ
  • ಹುದ್ದೆಯ ಹೆಸರು: ಸಹಾಯಕ ಪ್ರಾಧ್ಯಾಪಕ, ಉಪ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಹುದ್ದೆಗಳು ಸೇರಿ ವಿವಿಧ ಹುದ್ದೆಗಳ ಭರ್ತಿ
  • ಹುದ್ದೆಗಳ ಸಂಖ್ಯೆ: 312
  • ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ ಮೂಲಕ
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: May 25, 2024
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: June 13, 2024
  • ವೆಬ್‌ ವಿಳಾಸ: https://upsc.gov.in/
Advertisements

UPSC Recruitment 2024: ಕೇಂದ್ರ ಲೋಕ ಸೇವಾ ಆಯೋಗವು (UPSC) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 312 ಹುದ್ದೆಗಳು ಖಾಲಿ ಇದ್ದು, ಸಹಾಯಕ ಪ್ರಾಧ್ಯಾಪಕ, ಉಪ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಹುದ್ದೆಗಳು ಸೇರಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು 13-ಜೂನ್-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು;
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 25-5-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-06-2024

ಹುದ್ದೆಯ ಕುರಿತ ಹೆಚ್ಚಿನ ವಿವರ ಇಲ್ಲಿದೆ;
ಸಂಸ್ಥೆಯ ಹೆಸರು: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌, ಡೆಪ್ಯುಟಿ ಸೂಪರಿಂಟೆಂಡಿಂಗ್‌ ಆರ್ಕಿಯಾಲಜಿಸ್ಟ್‌ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಯುಪಿಎಸ್‌ಸಿ ನಿಯಮಗಳ ಪ್ರಕಾರ ವೇತನ ನಿಗದಿಪಡಿಸಲಾಗಿದೆ.

ಹುದ್ದೆಯ ಹೆಸರು ಮತ್ತು ಪೋಸ್ಟ್ಗಳ ಸಂಖ್ಯೆ;
ಉಪ ಅಧೀಕ್ಷಕ ಪುರಾತತ್ವ ರಸಾಯನಶಾಸ್ತ್ರಜ್ಞ 4
ಉಪ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ 67
ಸಿವಿಲ್ ಹೈಡ್ರೋಗ್ರಾಫಿಕ್ ಅಧಿಕಾರಿ 4
ಸಹಾಯಕ ಪ್ರಾಧ್ಯಾಪಕರು (ಫೊರೆನ್ಸಿಕ್ ಮೆಡಿಸಿನ್) 6
ಸಹಾಯಕ ಪ್ರಾಧ್ಯಾಪಕ (ಜನರಲ್ ಮೆಡಿಸಿನ್) 61
ಸಹಾಯಕ ಪ್ರಾಧ್ಯಾಪಕ (ಜನರಲ್ ಸರ್ಜರಿ) 39
ಸಹಾಯಕ ಪ್ರಾಧ್ಯಾಪಕರು (ಪೀಡಿಯಾಟ್ರಿಕ್ ನೆಫ್ರಾಲಜಿ) 3
ಸ್ಪೆಷಲಿಸ್ಟ್ ಗ್ರೇಡ್ III ಸಹಾಯಕ ಪ್ರೊಫೆಸರ್ (ಪೀಡಿಯಾಟ್ರಿಕ್ಸ್) 23
ಸ್ಪೆಷಲಿಸ್ಟ್ ಗ್ರೇಡ್ III (ಅರಿವಳಿಕೆಶಾಸ್ತ್ರ) 2
ಸ್ಪೆಷಲಿಸ್ಟ್ ಗ್ರೇಡ್ III (ಡರ್ಮಟಾಲಜಿ, ವೆನೆರಿಯಾಲಜಿ & ಕುಷ್ಠರೋಗ) 2
ಸ್ಪೆಷಲಿಸ್ಟ್ ಗ್ರೇಡ್ III (ಜನರಲ್ ಮೆಡಿಸಿನ್) 4
ಸ್ಪೆಷಲಿಸ್ಟ್ ಗ್ರೇಡ್ III (ಸಾಮಾನ್ಯ ಶಸ್ತ್ರಚಿಕಿತ್ಸೆ) 7
ಸ್ಪೆಷಲಿಸ್ಟ್ ಗ್ರೇಡ್ III (ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ) 5
ಸ್ಪೆಷಲಿಸ್ಟ್ ಗ್ರೇಡ್ III (ನೇತ್ರಶಾಸ್ತ್ರ) 3
ಸ್ಪೆಷಲಿಸ್ಟ್ ಗ್ರೇಡ್ III (ಆರ್ಥೋಪೆಡಿಕ್ಸ್) 2
ಸ್ಪೆಷಲಿಸ್ಟ್ ಗ್ರೇಡ್-III ಒಟೊ-ರೈನೋ-ಲರಿಂಗೋಲಜಿ (ಕಿವಿ, ಮೂಗು ಮತ್ತು ಗಂಟಲು) 3
ಸ್ಪೆಷಲಿಸ್ಟ್ ಗ್ರೇಡ್-III (ಪೀಡಿಯಾಟ್ರಿಕ್ಸ್) 2
ಸ್ಪೆಷಲಿಸ್ಟ್ ಗ್ರೇಡ್-III (ರೋಗಶಾಸ್ತ್ರ) 4
ಸ್ಪೆಷಲಿಸ್ಟ್ ಗ್ರೇಡ್-III (ಮನೋವೈದ್ಯಶಾಸ್ತ್ರ) 1
ಉಪ ಕೇಂದ್ರ ಗುಪ್ತಚರ ಅಧಿಕಾರಿ (ತಾಂತ್ರಿಕ)(DCIO/Tech) 9
ಸಹಾಯಕ ನಿರ್ದೇಶಕರು (ತೋಟಗಾರಿಕೆ) 4
ಸಹಾಯಕ ನಿರ್ದೇಶಕ ಗ್ರೇಡ್-II (IEDS) (ರಾಸಾಯನಿಕ) 5
ಸಹಾಯಕ ನಿರ್ದೇಶಕ ಗ್ರೇಡ್-II (IEDS) (ಆಹಾರ) 19
ಸಹಾಯಕ ನಿರ್ದೇಶಕ ಗ್ರೇಡ್-II (IEDS) (ಹೊಸೈರಿ) 12
ಸಹಾಯಕ ನಿರ್ದೇಶಕ ಗ್ರೇಡ್-II (ಚರ್ಮ ಮತ್ತು ಪಾದರಕ್ಷೆ) 8
ಸಹಾಯಕ ನಿರ್ದೇಶಕ ಗ್ರೇಡ್-II (ಮೆಟಲ್ ಫಿನಿಶಿಂಗ್) 2
ಇಂಜಿನಿಯರ್ ಮತ್ತು ಶಿಪ್ ಸರ್ವೇಯರ್/ಉಪ ನಿರ್ದೇಶಕ ಜನರಲ್ 2
ತರಬೇತಿ ಅಧಿಕಾರಿ-ಉಡುಪು ತಯಾರಿಕೆ 5
ತರಬೇತಿ ಅಧಿಕಾರಿ-ಎಲೆಕ್ಟ್ರಾನಿಕ್ ಮೆಕ್ಯಾನಿಕ್ 3
ಸಹಾಯಕ ಪ್ರಾಧ್ಯಾಪಕರು (ಮೂತ್ರಶಾಸ್ತ್ರ) 1

ವಿದ್ಯಾಭ್ಯಾಸ: ಮೇಲ್ಕಂಡ ಹುದ್ದೆಗಳಿಗೆ ತಕ್ಕಂತೆ ಅಭ್ಯರ್ಥಿಗಳು ಪದವಿ, ಸ್ನಾತಕೋತ್ತರ ಪದವಿ, ಎಂಬಿಬಿಎಸ್, M.D, Ph.D, ಎಂ.ಎಸ್, DM, M.S,B.Sc, B.E ಅಥವಾ B.Tech, M.Sc, MCA, ಎಲೆಕ್ಟ್ರಾನಿಕ್ ಮೆಕ್ಯಾನಿಕ್, M.Ch, DNB ತೇರ್ಗಡೆ ಹೊಂದಿರಬೇಕು.

ವಯೋಮಿತಿ: ಮೇಲ್ಕಂಡ ಹುದ್ದೆಗೆ ಅಭ್ಯರ್ಥಿಗಳ ವಯೋಮಿತಿಯು 30-50 ವರ್ಷದೊಳಗಿರಬೇಕು. OBC ಅಭ್ಯರ್ಥಿಗಳಿಗೆ 03 ವರ್ಷ, SC/ST ಅಭ್ಯರ್ಥಿಗಳಿಗೆ 05 ವರ್ಷ, PwBD (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, PwBD (OBC) ಅಭ್ಯರ್ಥಿಗಳಿಗೆ 13 ವರ್ಷ, PwBD (SC/ST) ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ: SC/ST/PwBD/ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಇತರ ಎಲ್ಲಾ ಅಭ್ಯರ್ಥಿಗಳು: ರೂ.25/- ಅರ್ಜಿ ಶುಲ್ಕ ಪಾವತಿ ಮಾಡಬೇಕು. ಅಭ್ಯರ್ಥಿಗಳು ಆನ್‌ಲೈನ್/SBI ಬ್ಯಾಂಕ್ ಮುಖಾಂತರ ಅರ್ಜಿ ಶುಲ್ಕ ಪಾವತಿ ಮಾಡಬೇಕು.

ಆಯ್ಕೆ ಪ್ರಕ್ರಿಯೆ: ಮೇಲೆ ತಿಳಿಸಿದ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್‌ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು.