UPSC Recruitment 2024: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 17 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ತರಬೇತಿ ಅಧಿಕಾರಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 16-ಮೇ-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಪ್ರಮುಖ ದಿನಾಂಕಗಳು;
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 27-04-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 16-05-2024
ಭರ್ತಿ ಮಾಡಿದ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 17-ಮೇ-2024
ಹುದ್ದೆಯ ಕುರಿತ ವಿವರ ಇಲ್ಲಿದೆ;
ಸಂಸ್ಥೆಯ ಹೆಸರು: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಲ್ಲಿ ಖಾಲಿ ಇರುವ ಒಟ್ಟು 17 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಭಾರತದೆಲ್ಲೆಡೆ ತರಬೇತಿ ಅಧಿಕಾರಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ನಡೆಯಲಿದೆ.
ಹುದ್ದೆ ಹೆಸರು ಮತ್ತು ಸಂಖ್ಯೆ:
ಸಹಾಯಕ ನಿರ್ದೇಶಕ (ರಿಮೋಟ್ ಸೆನ್ಸಿಂಗ್) – 1 ಹುದ್ದೆ
ಉಪ ಆಯುಕ್ತರು (NRM/RFS) – 2 ಹುದ್ದೆಗಳು
ಉಪ ನಿರ್ದೇಶಕರು (ವೈದ್ಯಕೀಯ) – 1 ಹುದ್ದೆ
ಸಹಾಯಕ ನಿಯಂತ್ರಕ – 2 ಹುದ್ದೆಗಳು
ತರಬೇತಿ ಅಧಿಕಾರಿ (ಮಹಿಳಾ ತರಬೇತಿ) – 1 ಹುದ್ದೆ
ತರಬೇತಿ ಅಧಿಕಾರಿ (ಮಹಿಳಾ ತರಬೇತಿ) – 3 ಹುದ್ದೆಗಳು
ಸಹಾಯಕ ಪ್ರಾಧ್ಯಾಪಕರು (ರಸಾಯನಶಾಸ್ತ್ರ) – 1 ಹುದ್ದೆ
ಸಹಾಯಕ ಪ್ರಾಧ್ಯಾಪಕ (ಇಂಗ್ಲಿಷ್) – 1 ಹುದ್ದೆ
ಸಹಾಯಕ ಪ್ರಾಧ್ಯಾಪಕ (ಗಣಿತ) – 1 ಹುದ್ದೆ
ಸಹಾಯಕ ಪ್ರಾಧ್ಯಾಪಕರು (ಭೌತಶಾಸ್ತ್ರ) – 1 ಹುದ್ದೆ
ಸಹಾಯಕ ಪ್ರಾಧ್ಯಾಪಕ (ಹಿಂದಿ) -1 ಹುದ್ದೆ
ಹಿರಿಯ ಸಂಶೋಧನಾ ಅಧಿಕಾರಿ (ಭಾಷಾ ಮಾಧ್ಯಮ) – 2 ಹುದ್ದೆಗಳು
ವಿದ್ಯಾರ್ಹತೆ:
ಸಹಾಯಕ ನಿರ್ದೇಶಕ (ರಿಮೋಟ್ ಸೆನ್ಸಿಂಗ್) – B.E ಅಥವಾ B.Tech, M.E ಅಥವಾ M.Tech ಮಾಡಿರಬೇಕು.
ಉಪ ಆಯುಕ್ತರು (NRM/RFS) – ಪದವಿ, ಸ್ನಾತಕೋತ್ತರ ಪದವಿ ಮಾಡಿರಬೇಕು.
ಉಪ ನಿರ್ದೇಶಕರು (ವೈದ್ಯಕೀಯ)- ಎಂಬಿಬಿಎಸ್ ತೇರ್ಗಡೆ ಹೊಂದಿರಬೇಕು.
ಸಹಾಯಕ ನಿಯಂತ್ರಕ – B.E ಅಥವಾ B.Tech, M.E ಅಥವಾ M.Tech ತೇರ್ಗಡೆ ಹೊಂದಿರಬೇಕು.
ತರಬೇತಿ ಅಧಿಕಾರಿ (ಮಹಿಳಾ ತರಬೇತಿ) – ಡಿಪ್ಲೊಮಾ, ಪದವಿ ಮಾಡಿರಬೇಕು.
ಸಹಾಯಕ ಪ್ರಾಧ್ಯಾಪಕ (ರಸಾಯನಶಾಸ್ತ್ರ) – ಸ್ನಾತಕೋತ್ತರ ಪದವಿ, Ph.D ತೇರ್ಗಡೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
ಸಹಾಯಕ ಪ್ರಾಧ್ಯಾಪಕರು (ಇಂಗ್ಲಿಷ್), ಸಹಾಯಕ ಪ್ರಾಧ್ಯಾಪಕ (ಗಣಿತ), ಸಹಾಯಕ ಪ್ರಾಧ್ಯಾಪಕ (ಭೌತಶಾಸ್ತ್ರ), ಸಹಾಯಕ ಪ್ರಾಧ್ಯಾಪಕ (ಹಿಂದಿ) ಸ್ನಾತಕೋತ್ತರ – ಈ ಹುದ್ದೆಗೆ ಪದವಿ, M.Ed ಮಾಡಿರಬೇಕು.
ಹಿರಿಯ ಸಂಶೋಧನಾ ಅಧಿಕಾರಿ (ಭಾಷಾ ಮಾಧ್ಯಮ) – ಸ್ನಾತಕೋತ್ತರ ಪದವಿ ಮಾಡಿರುವವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ: ಸಹಾಯಕ ನಿರ್ದೇಶಕ (ರಿಮೋಟ್ ಸೆನ್ಸಿಂಗ್) 35 ವರ್ಷ, ಉಪ ಆಯುಕ್ತರು (NRM/RFS) 50 ವರ್ಷ, ಉಪ ನಿರ್ದೇಶಕರು (ವೈದ್ಯಕೀಯ), ಸಹಾಯಕ ನಿಯಂತ್ರಕ 35 ವರ್ಷ, ತರಬೇತಿ ಅಧಿಕಾರಿ (ಮಹಿಳಾ ತರಬೇತಿ) 30 ವರ್ಷ, ಸಹಾಯಕ ಪ್ರಾಧ್ಯಾಪಕರು (ರಸಾಯನಶಾಸ್ತ್ರ) 35 ವರ್ಷ, ಸಹಾಯಕ ಪ್ರಾಧ್ಯಾಪಕ (ಇಂಗ್ಲಿಷ್) 40 ವರ್ಷ, ಸಹಾಯಕ ಪ್ರಾಧ್ಯಾಪಕ (ಗಣಿತ) 35 ವರ್ಷ, ಸಹಾಯಕ ಪ್ರಾಧ್ಯಾಪಕ (ಭೌತಶಾಸ್ತ್ರ) 38 ವರ್ಷ, ಸಹಾಯಕ ಪ್ರಾಧ್ಯಾಪಕರು (ಹಿಂದಿ) 35 ವರ್ಷ, ಹಿರಿಯ ಸಂಶೋಧನಾ ಅಧಿಕಾರಿ (ಭಾಷಾ ಮಾಧ್ಯಮ) 40 ವರ್ಷ ಮೀರಿರಬಾರದು. OBC ಅಭ್ಯರ್ಥಿಗಳಿಗೆ 03 ವರ್ಷ, SC/ST ಅಭ್ಯರ್ಥಿಗಳಿಗೆ 05 ವರ್ಷ, PwBD (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, PwBD (OBC) ಅಭ್ಯರ್ಥಿಗಳಿಗೆ 13 ವರ್ಷ, PwBD (SC/ST) ಅಭ್ಯರ್ಥಿಗಳಿಗೆ 15 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ: SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಎಲ್ಲಾ ಇತರ ಅಭ್ಯರ್ಥಿಗಳು ರೂ.25/- ಅರ್ಜಿ ಶುಲ್ಕ ಪಾವತಿ ಮಾಡಬೇಕು. ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ