ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಶನ್ (ಯುಪಿಎಸ್ ಸಿ) ವಿವಿಧ ವಿಷಯಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆ : ಆಯೋಗವು ಒಟ್ಟು 28 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-04-2021
ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ : 16-04-2021
ಹುದ್ದೆಗಳ ವಿವರ : ಸ್ಪೆಷಲಿಸ್ಟ್ ಗ್ರೇಡ್ III ಅಸಿಸ್ಟೆಂಟ್ ಪ್ರೊಫೆಸರ್ (ಪೀಡಿಯಾಟ್ರಿಕ್ಸ್)
ಸ್ಪೆಷಲಿಸ್ಟ್ ಗ್ರೇಡ್ III ಅಸಿಸ್ಟೆಂಟ್ ಪ್ರೊಫೆಸರ್ (ಫಿಸಿಯಾಲಜಿ)
ಸ್ಪೆಷಲಿಸ್ಟ್ ಗ್ರೇಡ್ III ಅಸಿಸ್ಟೆಂಟ್ ಪ್ರೊಫೆಸರ್ ( ಮನೋವೈದ್ಯ ಶಾಸ್ತ್ರ)
ಸ್ಪೆಷಲಿಸ್ಟ್ ಗ್ರೇಡ್ III ಅಸಿಸ್ಟೆಂಟ್ ಪ್ರೊಫೆಸರ್ ( ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ)
ವಿದ್ಯಾರ್ಹತೆ : ಅಭ್ಯರ್ಥಿಗಳು ಹುದ್ದೆಗಳಿಗನುಸಾರವಾಗಿ ಎಂ.ಬಿ.ಬಿ.ಎಸ್, ಎಂ.ಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಜೊತೆಗೆ ಕಾರ್ಯಾನುಭವವನ್ನು ಹೊಂದಿರಬೇಕು.
ಈ ಹುದ್ದೆಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಡಳಿತ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ