ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ 400 ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಲು ನೋಟಿಫಿಕೇಶನ್ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆ : ನ್ಯಾಷನಲ್ ಡಿಫೆನ್ಸ್ ಅಕಾಡೆಮಿ – 370
ನವಲ್ ಅಕಾಡೆಮಿ – 30 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 09-06-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-06-2021 ( 6pm)
ಅರ್ಜಿ ಶುಲ್ಕ ಸಲ್ಲಿಸಲು ಕೊನೆಯ ದಿನಾಂಕ: 28-06-2021
ಪರೀಕ್ಷೆಯ ದಿನಾಂಕ : 05-09-2021
ರಾಜ್ಯದಲ್ಲಿ ಪರೀಕ್ಷಾ ಕೇಂದ್ರ : ಬೆಂಗಳೂರು ಮತ್ತು ಧಾರವಾಡ
ಹುದ್ದೆ ಸ್ಥಳ : ಭಾರತದೆಲ್ಲೆಡೆ
ಒಟ್ಟು ಹುದ್ದೆ ಸಂಖ್ಯೆ : 400
ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಯುನಿವರ್ಸಿಟಿಯಿಂದ 12th ತೇರ್ಗಡೆ ಹೊಂದಿರಬೇಕು.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ 370 ( ಭೂ ಸೇನೆ 208, ನೌಕಾಪಡೆ 42, ವಾಯುಪಡೆ 120) ಮತ್ತು ನೇವಲ್ ಅಕಾಡೆಮಿ ಗೆ 30 ಸೇರಿ ಈ ಬಾರಿ ಒಟ್ಟು 400 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 02 ಜನವರಿ 2003 ಮತ್ತು 1 ಜನವರಿ 2006 ರ ನಡುವೆ ಜನಿಸಿರಬೇಕು( ಅವಿವಾಹಿತ ಪುರುಷ ಅಭ್ಯರ್ಥಿಗಳು)
ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಸೇನೆಯ ಅಧಿಕಾರಿಗಳ ( ಜೆಸಿಎ/ಎನ್ ಸಿಎ/ಒಆರ್) ಪುತ್ರರಾಗಿದ್ದಲ್ಲಿ ಅಂಥ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಉಳಿದ ಅಭ್ಯರ್ಥಿಗಳಿಗೆ ರೂ.100/- ಶುಲ್ಕ ನಿಗದಿಪಡಿಸಲಾಗಿದೆ. ಯಾವುದೇ ಎಸ್ ಬಿಐ ಶಾಖೆಯಲ್ಲಿ ಶುಲ್ಕ ಪಾವತಿಸಬಹುದಾಗಿದೆ. ಅಥವಾ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ ರುಪೇ ಕಾರ್ಡ್/ ಡೆಬಿಟ್ ಕಾರ್ಡ್ ಗಳ ಮೂಲಕ ಆನ್ಲೈನ್ ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ ?
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಅಥವಾ ನೇವಲ್ ಅಕಾಡೆಮಿಗೆ ಆಯ್ಕೆಯಾಗಲು ಅಭ್ಯರ್ಥಿಯು ಮೂರು ಹಂತಗಳನ್ನು ದಾಟಬೇಕು. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪ್ರವೇಶ ಪರೀಕ್ಷೆ ಮೊದಲನೇ ಹಂತವಾಗಿರುತ್ತದೆ. ಇದರ ನಂತರ ಎಸ್ ಎಸ್ ಬಿ ನಡೆಸುವ ಬೌದ್ಧಿಕ ಹಾಗೂ ವ್ಯಕ್ತಿತ್ವ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಎರಡು ಹಂತದ ನಂತರ ಎಸ್ಎಸ್ ಬಿ ನಡೆಸುವ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು. ಈ ಮೂರೂ ಹಂತ ದಾಟಿದ ನಂತರ ಯಶಸ್ವಿಯಾದ ಅಭ್ಯರ್ಥಿಗಳಿಗೆ ಅವರವರ ಆಯ್ಕೆಯ ಕೋರ್ಸ್ ಗಳಿಗೆ ಲಭ್ಯತೆಯ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು.
ನೋಟಿಫಿಕೇಶನ್