Advertisements
ನಾಗರಿಕ ಸೇವಾ ಆಯೋಗಗಳಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ನಿಗದಿಪಡಿಸಲಾಗಿರುವ ಸಂದರ್ಶನ ದಿನಾಂಕವನ್ನು ಮುಂದೂಡಲಾಗಿದೆ ಎಂದು ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್ ಸಿ) ಪ್ರಕಟಣೆಯಲ್ಲಿ ತಿಳಿಸಿದೆ.
ದೂರ ಪ್ರದೇಶಗಳಿಂದ ಪ್ರವಾಸ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಮುಂದೂಡಲಾಗಿದೆ.
15 ದಿನಗಳ ಮುಂಚಿತವಾಗಿ ಪರಿಷ್ಕೃತ ದಿನಾಂಕವನ್ನು ಯುಪಿಎಸ್ ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
2020 ನೇ ಸಾಲಿನ ಇಂಡಿಯನ್ ಎಕನಾಮಿಕ್ ಸರ್ವಿಸ್ / ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್ ಎಕ್ಸಾಮಿನೇಷನ್ ಬರೆದ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಎ.20 ರಿಂದ 23 ರವರೆಗೆ ನಡೆಯಬೇಕಿತ್ತು. 2020ನೇ ಸಾಲಿನ ಸಿವಿಲ್ ಸರ್ವಿಸ್ ಎಕ್ಸಾಮಿನೇಷನ್ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಏ.26 ರಿಂದ ಜೂನ್ 18 ರವರೆಗೆ ನಡೆಯಬೇಕಿತ್ತು.