ಯುಪಿಎಸ್‌ಸಿ ಮೂಲಕ ವಿವಿಧ ಹುದ್ದೆಗಳಿಗೆ ನೇಮಕ, ಅಧಿಸೂಚನೆ ಪ್ರಕಟ

Advertisements

ಕೇಂದ್ರ ಲೋಕಸೇವಾ ಆಯೋಗವು ಇತ್ತೀಚೆಗೆ ಬಿಡುಗಡೆ ಮಾಡಿರುವ ಕೆಲವು ಅಧಿಸೂಚನೆಗಳ ಮಾಹಿತಿ ಇಲ್ಲಿದೆ. ಪ್ರಸಕ್ತ ಕೊರೊನಾ ಸಂದರ್ಭದಲ್ಲಿ ಅನಿಶ್ಚಿತ ಉದ್ಯೋಗ ಭದ್ರತೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರಕಾರದ ಉದ್ಯೋಗ ಪಡೆಯಲು ಪ್ರಯತ್ನಪಡಿ. ಶುಭವಾಗಲಿ. ಸರಕಾರಿ ಜಾಬ್ಸ್‌ ಇದೀಗ ಮತ್ತೆ ಮರು ಆರಂಭಗೊಂಡಿದ್ದು, ನಿತ್ಯ ಉದ್ಯೋಗ ಮಾಹಿತಿಯನ್ನು ನೀಡಲಿದೆ. – ಸಂಪಾದಕ

ಯುಪಿಎಸ್‌ಸಿ ಸಿಜಿಎಸ್‌ ಪ್ರಿಲೀಮ್ಸ್-೨೦೨೧ ಅಧಿಸೂಚನೆ

ಕೇಂದ್ರ ಲೋಕಸೇವಾ ಆಯೋಗವು ಕಂಬೈನ್ಡ್‌ ಜಿಯೊ ಸೈಂಟಿಸ್ಟ್‌ ಪರೀಕ್ಷೆ ೨೦೨೧ಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಇದೇ ಅಕ್ಟೋಬರ್‌ ೨೭ರ ಮೊದಲು ಅರ್ಜಿ ಸಲ್ಲಿಸಬಹುದು. ಕೆಮಿಸ್ಟ್‌ ಗ್ರೂಪ್‌ ಎ ಮತ್ತು ಸೈಂಟಿಸ್ಟ್‌ ಎ (ಹೈಡ್ರೊಲಜಿ, ಕೆಮಿಕಲ್‌ ಮತ್ತು ಜಿಯೊಫಿಸಿಕ್ಸ್‌) ಹುದ್ದೆಗಳ ನೇಮಕಕ್ಕೆ ನಡೆಯುವ ಪರೀಕ್ಷೆ ಇದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27.10.2020

ಕಂಬೈನ್ಡ್‌ ಜಿಯೊ ಸೈಂಟಿಸ್ಟ್ ಪರೀಕ್ಷೆ: 2021

ಅರ್ಜಿ ಸಲ್ಲಿಸುವುದು ಹೇಗೆ?: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಅಂಚೆ ಅಥವಾ ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಜಿ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳು ಒಂದು ಫೋಟೊ ಗುರುತಿನ ಪತ್ರ ಜೊತೆಯಲ್ಲಿಟ್ಟುಕೊಳ್ಳಬೇಕು.ಅಂದರೆ, ಆಧಾರ್‌/ಮತದಾರರ ಗುರುತಿನ ಪತ್ರ/ ಪಾನ್‌ ಕಾರ್ಡ್‌/ ಪಾಸ್‌ಪೋರ್ಟ್‌/ ಡಿಎಲ್‌ ಅಥವಾ ಇತರೆ ಫೋಟೊ ಐಟಿ(ರಾಜ್ಯ ಅಥವಾ ಕೇಂದ್ರ ಸರಕಾರದ ಮಾನ್ಯತೆ ಇರುವ) ಲಗ್ಗತ್ತಿಸಬೇಕು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್‌ ೨೭ರ ಸಂಜೆ ಆರು ಗಂಟೆಯವರೆಗೆ ಮಾತ್ರ ಸಮಯ ನೀಡಲಾಗುತ್ತದೆ. ಅರ್ಜಿ ಹಿಂಪಡೆಯಲು ಬಯಸುವವರಿಗೆ ನವೆಂಬರ್‌ ೪ರಿಂದ ನವೆಂಬರ್‌ ೧೦ರವರೆಗೆ ಮಾತ್ರ ಅವಕಾಶವಿರುತ್ತದೆ.

ಆನ್‌ಲೈನ್‌ ಪರೀಕ್ಷೆಗೆ ಬರುವ ಮೊದಲು ಇ ಅಡ್ಮಿಟ್‌ ಕಾರ್ಡ್‌ ಕಡ್ಡಾಯವಾಗಿ ತರಬೇಕು. ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಇ ಅಡ್ಮಿಟ್‌ ಕಾರ್ಡ್‌ ಲಭ್ಯವಿರಲಿದೆ. ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ನೆಗೆಟಿವ್‌ ಅಂಕ ಇರುತ್ತದೆ.

ಹುದ್ದೆಗಳ ವಿವರ: ಗ್ರೂಪ್‌ ಎ 15 ಹುದ್ದೆಗಳಿವೆ.

ಗ್ರೂಪ್‌ ಎಯಲ್ಲಿ ಸೈಂಟಿಸ್ಟ್‌ ಬಿ (ಹೈಡ್ರೊಲಜಿ) 16, ಸೈಂಟಿಸ್ಟ್‌ ಬಿ (ಕೆಮಿಕಲ್‌) 03 ಮತ್ತು ಸೈಂಟಿಸ್ಟ್‌ ಬಿ (ಜಿಯೋಫಿಸಿಕ್ಸ್‌) 6 ಹುದ್ದೆಗಳಿವೆ.

ಅಧಿಸೂಚನೆ ಡೌನ್‌ಲೋಡ್‌ ಮಾಡಿಕೊಳ್ಳಲು ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಯುಪಿಎಸ್‌ಸಿ ಅಧಿಸೂಚನೆ: ಫೋರ್‌ಮೆನ್‌,ಸೀನಿಯರ್‌ ಸೈಂಟಿಫಿಕ್‌ ಅಸಿಸ್ಟೆಂಟ್‌, ಅಸಿಸ್ಟೆಂಟ್‌ ಪ್ರೊಫೆಸರ್‌

ಒಟ್ಟು ಹುದ್ದೆಗಳ ಸಂಖ್ಯೆ: 44

ವಿದ್ಯಾರ್ಹತೆ: ಎಂಬಿಬಿಎಸ್‌, ಎಂಜಿನಿಯರಿಂಗ್‌ ಪದವಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್‌ 29

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Comment