ಕೃಷಿ ವಿಶ್ವವಿದ್ಯಾಲಯ ಧಾರವಾಡ, ಸ್ನಾತಕೋತ್ತರ ಶಿಕ್ಷಣ ನಿರ್ದೇಶನಾಲಯ, ಕೃಷಿ ನಗರ ಧಾರವಾಡ ಅಡಿಯಲ್ಲಿ ವಿವಿಧ ಡಿಪ್ಲೋಮಾ ಮಹಾ ವಿದ್ಯಾಲಯದಲ್ಲಿ ತಾತ್ಕಾಲಿಕ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ.
ಹುದ್ದೆ: ಟೆಕ್ನಿಕಲ್ ಅಸಿಸ್ಟೆಂಟ್ – 01
ಹುದ್ದೆ ಅವಧಿ : 179 ದಿನಗಳವರೆಗೆ ತಾತ್ಕಾಲಿಕವಾಗಿ ತೊಡಗಿಸಿಕೊಳ್ಳಲಾಗುವುದು.
ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 21,600/- ವೇತನ ನಿಗದಿಪಡಿಸಲಾಗಿದೆ.
ವಯೋಮಿತಿ : ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಸಂದರ್ಶನವು ದಿನಾಂಕ 21-06-2021 ರಂದು ಬೆಳಿಗ್ಗೆ 11 ಗಂಟೆಗೆ ಡೀನ್(ಸ್ನಾತಕೋತ್ತರ ಕಚೇರಿ), ಕೃ.ವಿ.ವಿ ಧಾರವಾಡದಲ್ಲಿ ಆನ್ಲೈನ್ ಮೂಲಕ ನಡೆಯಲಿದೆ.
ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಬಯೋಡೇಟಾ, ಮೂಲ ಅಂಕಪಟ್ಟಿಗಳು ಮತ್ತು ಕೆಲಸದ ಅನುಭವದ ಪ್ರಮಾಣ ಪತ್ರಗಳನ್ನು ಈ ಇ- ಮೇಲ್ [email protected] ವಿಳಾಸಕ್ಕೆ ದಿನಾಂಕ 19-06-2021 ರ ಬೆಳಿಗ್ಗೆ 10.00 ಗಂಟೆಯೊಳಗಾಗಿ ಸ್ಕ್ಯಾನ್ ಪ್ರತಿ ಸಲ್ಲಿಸತಕ್ಕದ್ದು.
ಸಂದರ್ಶನದ ಆನ್ಲೈನ್ ಜ಼ೂಮ್ ಮೀಟಿಂಗ್ ಐಡಿ ಮತ್ತು ಪಾಸ್ ವರ್ಡ್ ನ್ನು ದಿನಾಂಕ 19-06-2021ರ ಸಾಯಂಕಾಲ 5.00 ರ ಒಳಗಾಗಿ ತಿಳಿಸಲಾಗುವುದು.
ನೋಟಿಫಿಕೇಶನ್