ಕೃಷಿ ಅರ್ಥಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ಧಾರವಾಡದಲ್ಲಿ 2020-21 ನೇ ಸಾಲಿನ 2 ನೇ ಸೆಮಿಸ್ಟರ್ ನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಗ್ರಿಕಲ್ಚರ್ ಪ್ರೊಡಕ್ಷನ್ ಎಕಾನಮಿಕ್ಸ್ ವಿಷಯವನ್ನು ಬೋಧಿಸಲು ಈ ಕೆಳ ಕಾಣಿಸಿದ ವಿದ್ಯಾರ್ಹತೆಯನ್ನು ಹೊಂದಿರುವ ” ಅರೆಕಾಲಿಕ ಉಪನ್ಯಾಸಕರು ” ಹುದ್ದೆಗೆ 179 ದಿನಗಳ ಅವಧಿಗೆ ಮೀರದಂತೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆ : ಪಾರ್ಟ್ ಟೈಂ ಟೀಚರ್
ಹುದ್ದೆ ಸಂಖ್ಯೆ : 01
ವಿದ್ಯಾರ್ಹತೆ : Ph.D ಇನ್ ಅಗ್ರಿಕಲ್ಚರ್ ಎಕಾನಮಿಕ್ಸ್ ಮತ್ತು ಪಿಜಿ ಟೀಚರ್ ಎಕ್ಸ್ ಪೀರಿಯನ್ಸ್ ಹೊಂದಿರಬೇಕು.
ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಯ ಎರಡು ಪ್ರತಿಯೊಂದಿಗೆ ದಿನಾಂಕ : 20-07-2021 ರಂದು 11.00 ಗಂಟೆಗೆ.
ಸಂದರ್ಶನಕ್ಕೆ ಡೀನ್ ( ಕೃಷಿ) ರವರ ಕಚೇರಿ, ಕೃಷಿ ಮಹಾವಿದ್ಯಾಲಯ, ಧಾರವಾಡದಲ್ಲಿ ಹಾಜರಾಗಲು ತಿಳಿಸಲಾಗಿದೆ. ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಎರಡು ಪ್ರತಿಗಳನ್ನು ಸಂದರ್ಶನದ ಸಮಯದಲ್ಲಿ ತರಲು ತಿಳಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು.