ಧಾರವಾಡ ಮತ್ತು ನಿಪ್ಪಾಣಿ ಡಿಪ್ಲೋಮಾ ( ಕೃಷಿ) ಕಾಲೇಜಿನಲ್ಲಿ ಹಾಗೂ ಎರಡನೇ ವರ್ಷದ ಎರಡನೇ ಸೆಮಿಸ್ಟರ್ ನ ಡಿಪ್ಲೋಮಾ (ಕೃಷಿ) ವಿದ್ಯಾರ್ಥಿಗಳಿಗೆ ಈ ಕೆಳಗೆ ಸೂಚಿಸಿರುವ ಕೋರ್ಸುಗಳನ್ನು ಬೋಧಿಸಲು ಈ ಕೆಳಗಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆ: ಪಾರ್ಟ್ ಟೈಂ ಟೀಚರ್
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ಸಿ/ಎಂ.ವಿ.ಎಸ್ಸಿ/ಪಿಎಚ್ಡಿ ಇನ್ ಅನಿಮಲ್ ಸೈನ್ಸ್ / ವೆಟರ್ನರಿ ಸೈನ್ಸ್ ಸಬ್ಜೆಕ್ಟ್ ಹೊಂದಿರಬೇಕು. ಈ ಹುದ್ದೆಗೆ ಮಾಸಿಕ ರೂ.40,000/- ವೇತನವಿರುತ್ತದೆ.
ಅರೆಕಾಲಿಕ ಉಪನ್ಯಾಸಕರನ್ನು 2020-21 ರ ಸೆಮಿಸ್ಟರ್ ಅವಧಿ179 ದಿವಸಗಳ ಅವಧಿಗೆ ಮೀರದಂತೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗುವುದು. ಸಂದರ್ಶನವು ದಿನಾಂಕ 19-05-2021 ರಂದು ಬೆಳಿಗ್ಗೆ 11.00 ಗಂಟೆಗೆ ಡೀನ್ ( ಸ್ನಾತಕೋತ್ತರ) ಕಚೇರಿ, ಕೃ.ವಿ.ವಿ. ಧಾರವಾಡದಲ್ಲಿ ಆನ್ಲೈನ್ ( ಒನ್ಲೈನ್) ಮೂಲಕ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಬಯೋಡೇಟಾ, ತಮ್ಮ ಮೂಲ ಅಂಕಪಟ್ಟಿಗಳು ಮತ್ತು ಕೆಲಸದ ಅನುಭವ ಪ್ರಮಾಣಪತ್ರಗಳನ್ನು ಈ ಇ-ಮೇಲ್ [email protected] ವಿಳಾಸಕ್ಕೆ ದಿನಾಂಕ 18-05-2022 ಮುಂಜಾನೆ 10:00 ರ ಒಳಗಾಗಿ ಸ್ಕ್ಯಾನ್ ಪ್ರತಿ ಸಲ್ಲಿಸತಕ್ಕದ್ದು.
ಸಂದರ್ಶನದ ಆನ್ಲೈನ್ (ONLINE) -zoom link I’d ಮತ್ತು password ನ್ನು ದಿನಾಂಕ 18-05-2021 ರ ಸಾಯಂಕಾಲ 5:00 ರ ಒಳಗಾಗಿ ತಿಳಿಸಲಾಗುವುದು.