ತುಮಕೂರು ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

Advertisements

ತುಮಕೂರು ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

ಹುದ್ದೆ : ಬೆರಳಚ್ಚುಗಾರ-07
ಬೆರಳಚ್ಚು ನಕಲುಗಾರ – 03
ಜಾರಿ ಪೇದೆ-11

ಹುದ್ದೆ ಸಂಖ್ಯೆ : 21

ಹುದ್ದೆ ಸ್ಥಳ‌: ತುಮಕೂರು ನ್ಯಾಯಾಲಯ

ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ : 23-02-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 24-03-2021

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- 26-03-2021

ಸೂಚನೆ : ವಯೋಮಿತಿ ಹಾಗೂ ವಿದ್ಯಾರ್ಹತೆ ಗಳು ಹಿಂದಿನ ದಿನಾಂಕಗಳೇ ಅನ್ವಯವಾಗುತ್ತದೆ.

ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ.

ವೇತನ : ಬೆರಳಚ್ಚುಗಾರ ಮತ್ತು ಬೆರಳಚ್ಚು ನಕಲುಗಾರ ಹುದ್ದೆಗಳಿಗೆ ರೂ. 21,000/- ರಿಂದ ರೂ.42,000/-

ಜಾರಿಪೇದೆ ಹುದ್ದೆಗಳಿಗೆ ರೂ. 19,950/- ರಿಂದ 37,900/- ರವರೆಗೆ ವೇತನವಿರುತ್ತದೆ.

ವಿದ್ಯಾರ್ಹತೆ : 10 ನೇ ತರಗತಿ ತೇರ್ಗಡೆ ಹೊಂದಿರಬೇಕು.

ಕನ್ನಡ ಮತ್ತು ಆಂಗ್ಲ ಪ್ರೌಢ ದರ್ಜೆಯ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಜಾರಿಪೇದೆ ಹುದ್ದೆಗೆ ತತ್ಸಮಾನ ವಿದ್ಯಾರ್ಹತೆ ಅಥವಾ ಎಸ್ ಎಸ್ ಎಲ್ ಸಿ ಜೊತೆಗೆ ಚಾಲನಾ ಪರವಾನಗಿ ಹೊಂದಿರಬೇಕು.

ವಯೋಮಿತಿ ‌: ಕನಿಷ್ಠ 18 ಹಾಗೂ ಗರಿಷ್ಠ 35 ವಯೋಮಿತಿ ಮೀರಿರಬಾರದು.

ಜಾತಿವಾರು ಮೀಸಲಾತಿ ನಿಯಮ ಅನ್ವಯಿಸುತ್ತದೆ.

ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ ರೂ.200/- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ , ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/- ಅನ್ವಯಿಸುತ್ತದೆ.

ಅರ್ಜಿ ಶುಲ್ಕ ವನ್ನು ಆನ್ ಲೈನ್ ಮುಖಾಂತರ ಸಲ್ಲಿಸಲು ಎಪ್ರಿಲ್ 18 ಹಾಗೂ ಚಲನ್ ಮೂಲಕ ಪಾವತಿಸಲು ಎಪ್ರಿಲ್ 21 ರವರೆಗೆ ಅವಕಾಶವಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕನ್ನು ಕ್ಲಿಕ್ ಮಾಡಿ

Leave a Comment