Advertisements
ಕರಿಯರ್‌ನಲ್ಲಿ ಪ್ರಗತಿ ಕಾಣಲು ಕೇವಲ ಬಾಹ್ಯ ಅಂದ ಸಾಕಾಗದು. ಯಶಸ್ಸಿಗೆ ಸೋಷಿಯಲ್ ಸ್ಕಿಲ್ಸ್ ಅವಶ್ಯವಾಗಿದೆ. ಬಾಹ್ಯ ಅಂದವೆಂದರೆ ಶೋಕೇಸ್‌ನಲ್ಲಿರುವ ಗೊಂಬೆ, ಸೋಷಿಯಲ್ ಕೌಶಲವೆನ್ನುವುದು ಮನೆಯಲ್ಲಿ ಲವಲವಿಕೆಯಿಂದ ಓಡಾಡುವ ಪುಟ್ಟ ಮಗು. ನಿಮ್ಮ ಬಗ್ಗೆ ನಿಮಗಿರುವ ಸ್ವಯಂ ಭರವಸೆ, ಸಕಾರಾತ್ಮಕ ವರ್ತನೆ, ಉತ್ತಮ ಬಾಡಿ ಲ್ಯಾಂಗ್ವೇಜ್, ಐ ಕಾಂಟ್ಯಾಕ್ಟ್, ಅತ್ಯುತ್ತಮ ಸಂವಹನ ಕೌಶಲ ಇತ್ಯಾದಿಗಳು ಕರಿಯರ್ ಪ್ರಗತಿಗೆ ಸಾಥ್ ನೀಡುತ್ತವೆ.
- ಜನರೊಂದಿಗೆ ಬೆರೆಯಿರಿ
ಸೋಷಿಯಲ್ ಕೌಶಲಗಳು ಮಾತ್ರವಲ್ಲದೆ, ಸೋಷಿಯಲ್ ಇಂಟರಾರಯಕ್ಷನ್ ಕಡೆಗೂ ಗಮನ ನೀಡಿ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ. ನೀವು ಜನರೊಂದಿಗೆ ಚರ್ಚೆಯಲ್ಲಿ ಕಡಿಮೆ ಭಾಗಿಯಾದಷ್ಟು ನೀವು ಕಡಿಮೆ ಆಕರ್ಷಕರಾಗುವಿರಿ. - ನಿಮ್ಮ ಸ್ವಂತ ಸ್ಟೈಲ್ ಇರಲಿ
ನೀವು ಯಾರದ್ದೋ ರೀತಿ ಆಗಲು ಹೋಗಬೇಡಿ. ನಿಮ್ಮ ಸ್ವಂತಿಕೆ ಇರಲಿ. ನಿಮ್ಮ ಸ್ವಂತ ಸ್ಟೈಲ್ ರೂಪಿಸಿ. ನಿಮಗೆ ಹೆಚ್ಚು ಆರಾಮದಾಯಕವೆನಿಸುವ ಸ್ಟೈಲ್ ಹುಡುಕಿ ಮತ್ತು ಅದನ್ನು ನಿತ್ಯ ಅನುಸರಿಸಿ. ಇಂತಹ ಸ್ಟೈಲ್ ಅನ್ನು ಅನ್ವಯಿಸುವಾಗ ನಿಮ್ಮ ಸ್ವಂತಿಕೆ ಕಳೆದುಕೊಳ್ಳಬೇಡಿ. ಯಾವತ್ತಿಗೂ ನೀವು ನೀವಾಗಿಯೇ ಇರಲಿ. ಮುಖವಾಡ ಹಾಕಿಕೊಂಡು ಜೀವಿಸಬೇಡಿ. - ಸ್ಮಾರ್ಟ್ ಆಗಿರಿ, ಕೂಲಾಗಿರಿ
ನಿಮ್ಮ ಮನಸ್ಸಿನೊಳಗೆ ನೂರಾರು ಒತ್ತಡಗಳು ಇರಬಹುದು. ಇಂತಹ ಸ್ಥಿತಿಯಲ್ಲಿಯೂ ಕೂಲ್ ಆಗಿ ಹೊರಗೆ ಕಾಣಿಸಲು ಪ್ರಯತ್ನಿಸಿ. ಸದಾ ಏನಾದರೂ ದೂರುತ್ತ, ಸಮಸ್ಯೆ ಹೇಳುತ್ತ ಇರುವವರನ್ನು ನೀವು ನೋಡಿರಬಹುದು. ಅಂತಹ ನಕಾರಾತ್ಮಕ ವ್ಯಕ್ತಿತ್ವ ನಿಮ್ಮದಾಗುವುದು ಬೇಡ. - ನಿಮ್ಮ ಬಗ್ಗೆ ನಿಮಗೆ ಸಂಶಯ ಬೇಡ
ನಿಮ್ಮ ಮೇಲೆ ನಿಮಗೆ ನಂಬಿಕೆ ಇರದೆ ಇದ್ದರೆ ಇತರರು ಹೇಗೆ ನಿಮ್ಮನ್ನು ನಂಬುತ್ತಾರೆ. ನೀವು ಮಾಡುವ ಕೆಲಸ, ನೀವು ತೆಗೆದುಕೊಳ್ಳುವ ನಿರ್ಧಾರ ಇತ್ಯಾದಿಗಳಲ್ಲಿ ಭರವಸೆ ಇರಲಿ. ನಿಮ್ಮ ಸ್ವಂತ ತೀರ್ಮಾನದ ಮೇಲೆ ನಂಬಿಕೆ ಇರಲಿ. ನಿಮಗೆ ನಿಮ್ಮ ನಿರ್ಧಾರಗಳ ಕುರಿತು ಸಂದೇಹಗಳಿದ್ದರೆ ಯಾರಾದರೂ ಮೆಂಟರ್ ಬಳಿ ಅಭಿಪ್ರಾಯ ಕೇಳಬಹುದು. ನಿಮ್ಮಲ್ಲಿರುವ ಇಂತಹ ಗುಣವು ನಿಮ್ಮನ್ನು ಲೀಡರ್ ಆಗಿಸುತ್ತದೆ. - ಆಶಾವಾದಿಯಾಗಿರಿ
ಆಶಾವಾದವು ಸಾಂಕ್ರಾಮಿಕ. ನೀವು ಆಶಾವಾದಿಯಾಗಿದ್ದರೆ ನಿಮ್ಮ ಜೊತೆಗಿದ್ದವರೂ ಆಶಾವಾದಿಯಾಗುತ್ತಾರೆ. ಸದಾ ನಕಾರಾತ್ಮಕವಾಗಿ ಚಿಂತಿಸುವ, ಮಾತನಾಡುವ ವ್ಯಕ್ತಿಗಳು ಯಾರಿಗೂ ಇಷ್ಟವಾಗುವುದಿಲ್ಲ. ಯಾವುದೇ ಸಮಯದಲ್ಲಿಯೂ, ಸ್ಥಿತಿಯಲ್ಲಿಯೂ ಆಶಾವಾದ ಕಳೆದುಕೊಳ್ಳದೆ ಇರುವವರು ಎಲ್ಲರಿಗೂ ಇಷ್ಟವಾಗುತ್ತಾರೆ. - ನಿಮ್ಮ ಕೆಲಸದ ಕುರಿತು ಉತ್ಸಾಹದಿಂದಿರಿ
ಉತ್ಸಾಹರಹಿತ ವ್ಯಕ್ತಿಗಳು ಯಾರಿಗೂ ಇಷ್ಟವಾಗುವುದಿಲ್ಲ. ಕೆಲಸದ ಕುರಿತು, ಕರಿಯರ್ ಕುರಿತು ಸದಾ ಕಂಪ್ಲೇಟ್ ಹೇಳುವವರೂ ಇಷ್ಟವಾಗುವುದಿಲ್ಲ. ಹೀಗಾಗಿ, ನೀವು ಮಾಡುವ ಕೆಲಸವನ್ನು ಖುಷಿಯಿಂದ, ಶ್ರದ್ಧೆಯಿಂದ ಮಾಡಿ. ಎಲ್ಲಾದರೂ ನೀವು ಮಾಡುವ ಕೆಲಸದಲ್ಲಿ ನಿಮಗೆ ಖುಷಿ ಸಿಗುತ್ತಿಲ್ಲವೆಂದಾದರೆ ನೀವು ತಪ್ಪು ಕರಿಯರ್ ಆಯ್ಕೆ ಮಾಡಿಕೊಂಡಿದ್ದೀರಿ ಎಂದರ್ಥ. ಅದರ ಕುರಿತು ದೂರುವುದನ್ನು ನಿಲ್ಲಿಸಿ ನಿಮಗೆ ಆಸಕ್ತಿ ಇರುವ ಕ್ಷೇತ್ರಕ್ಕೆ ಕಾಲಿಡಿ. ನಿಮ್ಮ ಉತ್ಸಾಹ, ಲವಲವಿಕೆ ನಿಮಗೆ ಮಾತ್ರವಲ್ಲದೆ ಇತರರಿಗೂ ಸೂಧಿರ್ತಿ ನೀಡುತ್ತದೆ. - ಅಗ್ರೇಸಿವ್ ಆಗಿರಬೇಡಿ
ಸದಾ ಆಕ್ರಮಣಕಾರಿಯಾಗಿ ವರ್ತಿಸುವವರಿಂದ ಜನರು ದೂರ ಹೋಗುತ್ತಾರೆ. ಇದು ನಿಮ್ಮ ಸೋಷಿಯಲ್ ಮತ್ತು ಪ್ರೊಫೆಷನಲ್ ಲೈಫ್‌ಗೆ ತಡೆಗೋಡೆಯಾಗಬಹುದು. ನಿಮ್ಮಲ್ಲಿ ಇರುವ, ಇರಬಹುದಾದ ಇಂತಹ ಆಕರ್ಷಕವಲ್ಲದ ಗುಣಗಳಿಗೆ ಕೊಕ್ ನೀಡಿ. ಜೀವನದಲ್ಲಿ ನೀವು ಏನಾಗಬೇಕು ಎನ್ನುವುದನ್ನು ಸಾವಧಾನವಾಗಿ ಯೋಚಿಸಿ, ಆ ದಿಕ್ಕಿನಲ್ಲಿ ಸಾಗಿ. - ಹಸನ್ಮುಖಿಯಾಗಿರಿ
ಬೋರಿಂಗ್ ಮತ್ತು ಅತ್ಯಧಿಕ ಸೀರಿಯಸ್ ಆಗಿ ವರ್ತಿಸುವರು ಯಾರಿಗೂ ಇಷ್ಟವಾಗುವುದಿಲ್ಲ. ಸದಾ ಹಸನ್ಮುಖಿಯಾಗಿದ್ದರೆ ನಿಮಗೆ ಆತ್ಮೀಯರು ಹೆಚ್ಚುತ್ತಾರೆ. ನಿಮ್ಮ ಕಂಪೆನಿಯನ್ನು ಜನರು ಇಷ್ಟಪಡುತ್ತಾರೆ. ಜನರಿಗೆ ಕೇಳಿದಾಗ ಖುಷಿಯಾಗುವಂತಹ ಹಾಸ್ಯ ಸನ್ನಿವೇಶ ಅಥವಾ ಕತೆಗಳನ್ನು ನಿಮ್ಮಲ್ಲಿ ಇಟ್ಟುಕೊಳ್ಳಿ. - ಸ್ಥಿರತೆ ಇರಲಿ
ನಿಮ್ಮ ಗುರಿ ಸಾಧನೆಯತ್ತ ಲಕ್ಷ್ಯವಿರಲಿ. ನಿಮ್ಮ ದಿನನಿತ್ಯದ ಚಟುವಟಿಕೆಗಳ ಜೊತೆಗೆ ಭವಿಷ್ಯದಲ್ಲಿ ಏನಾಗಬೇಕು ಎನ್ನುವ ಕುರಿತು ಗಮನ ಇರಲಿ. ಸೋಷಿಯಲ್ ಆಗಿರಬೇಕೆಂದು ಬೇಕಾಬಿಟ್ಟಿಯಾಗಿ ಬದುಕಬೇಡಿ. - ಅತ್ಯುತ್ತಮ ಕೇಳುಗರಾಗಿ
- ನಂಬಿಕಸ್ಥರಾಗಿ
- ಭರವಸೆ ಇರಲಿ
- ಸೂಕ್ತವಾದ ಉಡುಗೆ ತೊಡಿ
- ನಿಮ್ಮ ಬಗ್ಗೆ ಕಾಳಜಿ ಇರಲಿ
- ಕೆಟ್ಟ ಅಭ್ಯಾಸಗಳಿಂದ ದೂರವಿರಿ.