ECIL ನಲ್ಲಿ ತಾಂತ್ರಿಕ ಹುದ್ದೆಗೆ ಅರ್ಜಿ ಆಹ್ವಾನ

Advertisements

ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ನಲ್ಲಿ ತಾಂತ್ರಿಕ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಆಸಕ್ತರು ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಹಾಕಬಹುದು.

ಹುದ್ದೆ : ತಾಂತ್ರಿಕ ಅಧಿಕಾರಿ

ಹುದ್ದೆಯ ಸಂಖ್ಯೆ : 2

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ ,19 2021

ವೇತನ :ತಾಂತ್ರಿಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 23,000ರೂ. ವೇತನ ನಿಗದಿಯಾಗಿರುತ್ತದೆ.

ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ : ಅರ್ಜಿದಾರರು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.

ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಜಿನಿಯರ್ ಪದವೀಧರರಾಗಿರಬೇಕು.

ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಜನವರಿ 31, 2021, ರ ಅನ್ವಯ ಗರಿಷ್ಠ 30 ವರ್ಷ ವಯಸ್ಸಾಗಿರಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.

ಅಭ್ಯರ್ಥಿಗಳು ಆನ್ ಲೈನ್ ವೆಬ್‌ಸೈಟ್‌ http:/www.ecil.co.in/home.html ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್‌ಲೋಡ್ ಮಾಡಿ , ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ಫೆ.19, 2021 ಬೆಳಗ್ಗೆ 10 ಕ್ಕೆ ಕಚೇರಿಗೆ ನೇರ ಸಂದರ್ಶನಕ್ಕೆ ಭಾಗಿಯಾಗಬಹುದು.

ECIL Zonal Office,
D-15, DDA Local Shopping Complex
A – Block Ring Road,
Naraina, New Delhi -110028

ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ

Leave a Comment