ಶ್ರೀ ಬಲಭೀಮ ಜನತಾ ವಿದ್ಯಾವರ್ಧಕ ಸಂಘ, ಸಾಸನೂರ , ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಈ ಕೆಳಕಾಣಿಸಿಸ ಪ್ರೌಢಶಾಲೆಯಲ್ಲಿ ನಿವೃತ್ತಿಯಿಂದ ಖಾಲಿಯಿರುವ ಒಂದು ಅನುದಾನಿತ ಹುದ್ದೆಯನ್ನು ತುಂಬಿಕೊಳ್ಳಲು ಈ ಕೆಳಗೆ ಕಾಣಿಸಿದ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದ್ದು, ವಿವರ ಈ ಕೆಳಗೆ ನೀಡಲಾಗಿದೆ.
ಹುದ್ದೆ : ಸಹ ಶಿಕ್ಷಕರು ( ಆಂಗ್ಲ)
ಆಸಕ್ತ ಅಭ್ಯರ್ಥಿಗಳು ಜಾಹೀರಾತು ಪ್ರಕಟಗೊಂಡ 21 ದಿನಗಳ ಒಳಗಾಗಿ ತಮ್ಮ ಶೈಕ್ಷಣಿಕ ಪ್ರಮಾಣ ದೃಢೀಕೃತ ಝರಾಕ್ಸ್ ಪ್ರತಿಗಳೊಂದಿಗೆ ರೂಪಾಯಿ 800/- ರಾಷ್ಟ್ರೀಕೃತ ಬ್ಯಾಂಕ್ ಹುಂಡಿಯೊಂದಿಗೆ ( ಡಿಡಿ) ಅಧ್ಯಕ್ಷರು ಶ್ರೀ ಬಲಭೀಮ ಜನತಾ ವಿದ್ಯಾವರ್ಧಕ ಸಂಘ ಸಾಸನೂರ ಇವರ ಹೆಸರಿನಲ್ಲಿ ಪಡೆದು ಅರ್ಜಿಯ ಜೊತೆ ಬ್ಯಾಂಕ್ ಹುಂಡಿಯನ್ನು (ಡಿಡಿ) ಪ್ರತಿ ಎಲ್ಲಾ ಪ್ರಮಾಣ ಪತ್ರಗಳ ಝರಾಕ್ಸ್ ಪ್ರತಿಗಳನ್ನು ಹಚ್ಚಿ ಅಧ್ಯಕ್ಷರು, ಶ್ರೀ ಬಲಭೀಮ ಜನತಾ ವಿದ್ಯಾವರ್ಧಕ ಸಂಘ ವಿಳಾಸಕ್ಕೆ ಸಾಸನೂರ, ತಾಳಿಕೋಟೆ ಜಿಲ್ಲಾ ವಿಜಯಪುರ -586214 ವಿಳಾಸಕ್ಕೆ ಹಾಗೂ ಇನ್ನೊಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು, ಸಾ.ಶಿ.ಇಲಾಖೆ, ವಿಜಯಪುರ ಇವರಿಗೆ ಸಲ್ಲಿಸಬೇಕು. ಈಗಾಗಲೇ ನಿಗದಿತ ದಿನಾಂಕದಂದು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಲಾಖಾ ನಿಯಮಾನುಸಾರವಾಗಿ ಪ್ರತ್ಯೇಕವಾಗಿ ಸಂದರ್ಶನ ಸ್ಥಳ, ದಿನಾಂಕ ಮತ್ತು ವೇಳೆಯನ್ನು ತಿಳಿಸಲಾಗುವುದು.