Tag: website

  • IBPS Recruitment 2024: ಐಬಿಪಿಎಸ್‌ ನಿಂದ 9995 ಬ್ಯಾಂಕ್‌ ಹುದ್ದೆಗೆ ಅರ್ಜಿ ಆಹ್ವಾನ; ಪದವಿ, ಸ್ನಾತಕೋತ್ತರ ಪದವಿ ಆದವರು ಈ ಕೂಡಲೇ ಅರ್ಜಿ ಸಲ್ಲಿಸಿ

    IBPS Recruitment 2024: ಐಬಿಪಿಎಸ್‌ ನಿಂದ 9995 ಬ್ಯಾಂಕ್‌ ಹುದ್ದೆಗೆ ಅರ್ಜಿ ಆಹ್ವಾನ; ಪದವಿ, ಸ್ನಾತಕೋತ್ತರ ಪದವಿ ಆದವರು ಈ ಕೂಡಲೇ ಅರ್ಜಿ ಸಲ್ಲಿಸಿ

    IBPS Recruitment 2024: ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ ನೇಮಕಾತಿ ಡ್ರೈವ್ ನಡೆಸುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಗ್ರೂಪ್‌ ʼಎʼ ಅಧಿಕಾರಿಗಳು ಮತ್ತು ಗ್ರೂಪ್‌ ಬಿ -ಆಫೀಸ್‌ ಅಸಿಸ್ಟೆಂಟ್‌ (ಮಲ್ಟಿಪರ್ಪಸ್‌) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪ್ರಾದೇಶಿಕ ವಲಯದಲ್ಲಿರುವ ಖಾಲಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಇಂದು (07-06-2024) ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಪೂರ್ವ ಪರೀಕ್ಷೆಯು ಭೌತಿಕ ಮೋಡ್‌ನ ಆನ್‌ಲೈನ್‌ಲ್ಲಿರಲಿದೆ.

    9995 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಖಿಲ ಭಾರತ ಸರ್ಕಾರದಲ್ಲಿ ಈ ಹುದ್ದೆಯ ಪೋಸ್ಟಿಂಗ್‌ ನಡೆಯಲಿದ್ದು, ಆಸಕ್ತರು 27-Jun-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 07-06-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-06-2024
    ಆನ್‌ಲೈನ್‌ ಪರೀಕ್ಷಾ ದಿನಾಂಕ ( ಪ್ರಿಲಿಮಿನರಿ)- ಆಗಸ್ಟ್‌, 2024
    ಆನ್‌ಲೈನ್‌ ಪರೀಕ್ಷೆಯ ಫಲಿತಾಂಶ ದಿನಾಂಕ: ಆಗಸ್ಟ್‌/ಸೆಪ್ಟೆಂಬರ್-‌2024
    ಆನ್‌ಲೈನ್‌ ಪರೀಕ್ಷೆ (ಮೈನ್/ಸಿಂಗಲ್‌)- ಸೆಪ್ಟೆಂಬರ್‌ /ಅಕ್ಟೋಬರ್‌ 2024

    ಬ್ಯಾಂಕ್‌ಗಳ ಆಧಾರದ ಮೇಲೆ ಹುದ್ದೆಗಳ ವಿವರ ಇಲ್ಲಿದೆ;
    ಕರ್ನಾಟಕ ಗ್ರಾಮೀಣ ಬ್ಯಾಂಕ್ 386
    ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ 200

    ಪೋಸ್ಟ್‌ಗಳ ಆಧಾರದ ಮೇಲೆ ಹುದ್ದೆಗಳ ವಿವರ ಇಲ್ಲಿದೆ;

    ಕಚೇರಿ ಸಹಾಯಕ 5585 ಹುದ್ದೆಗಳು
    ಅಧಿಕಾರಿ ಸ್ಕೇಲ್-II ಜನರಲ್ ಬ್ಯಾಂಕಿಂಗ್ ಅಧಿಕಾರಿ 496 ಹುದ್ದೆಗಳು
    ಆಫೀಸರ್ ಸ್ಕೇಲ್-II (IT) 94 ಹುದ್ದೆಗಳು
    ಆಫೀಸರ್ ಸ್ಕೇಲ್-II (CA) 60 ಹುದ್ದೆಗಳು
    ಆಫೀಸರ್ ಸ್ಕೇಲ್-II (ಕಾನೂನು) 30 ಹುದ್ದೆಗಳು
    ಅಧಿಕಾರಿ ಸ್ಕೇಲ್-II (ಖಜಾನೆ ವ್ಯವಸ್ಥಾಪಕ) 21 ಹುದ್ದೆಗಳು
    ಅಧಿಕಾರಿ ಸ್ಕೇಲ್-II (ಮಾರ್ಕೆಟಿಂಗ್ ಅಧಿಕಾರಿ) 11 ಹುದ್ದೆಗಳು
    ಅಧಿಕಾರಿ ಸ್ಕೇಲ್-II (ಕೃಷಿ ಅಧಿಕಾರಿ) 70 ಹುದ್ದೆಗಳು
    ಆಫೀಸರ್ ಸ್ಕೇಲ್- III (ಸೀನಿಯರ್ ಮ್ಯಾನೇಜರ್) 129 ಹುದ್ದೆಗಳು
    ಆಫೀಸರ್ ಸ್ಕೇಲ್-I (ಸಹಾಯಕ ವ್ಯವಸ್ಥಾಪಕ) 3499 ಹುದ್ದೆಗಳು

    ಶೈಕ್ಷಣಿಕ ಅರ್ಹತೆ:
    ಆಫೀಸರ್ ಸ್ಕೇಲ್-I (ಸಹಾಯಕ ವ್ಯವಸ್ಥಾಪಕ) ಹುದ್ದೆಗೆ ಅರ್ಜಿ ಸಲ್ಲಿಸುವವರು ಪದವಿ ತೇರ್ಗಡೆ ಹೊಂದಿರಬೇಕು.
    ಆಫೀಸರ್ ಸ್ಕೇಲ್-II (ಮ್ಯಾನೇಜರ್) ಹುದ್ದೆಗೆ CA, LLB, ಪದವಿ, MBA ಮಾಡಿರಬೇಕು.
    ಆಫೀಸರ್ ಸ್ಕೇಲ್-III (ಸೀನಿಯರ್ ಮ್ಯಾನೇಜರ್), ಕಚೇರಿ ಸಹಾಯಕ ಹುದ್ದೆಗೆ ಪದವಿ ಆಗಿರಬೇಕು.

    ವಯೋಮಿತಿ:
    ಆಫೀಸರ್ ಸ್ಕೇಲ್-I (ಸಹಾಯಕ ಮ್ಯಾನೇಜರ್) 18-30 ವರ್ಷದೊಳಗಿನವರು ಅರ್ಜಿ ಸಲ್ಲಿಸಿ.
    ಆಫೀಸರ್ ಸ್ಕೇಲ್-II (ಮ್ಯಾನೇಜರ್) 21-32 ವರ್ಷ ಗರಿಷ್ಠ ಮಿತಿ
    ಆಫೀಸರ್ ಸ್ಕೇಲ್-III (ಸೀನಿಯರ್ ಮ್ಯಾನೇಜರ್) 21-40 ವರ್ಷ ದೊಳಗಿನವರು ಅರ್ಜಿ ಸಲ್ಲಿಸಿ.
    ಕಚೇರಿ ಸಹಾಯಕ 18-28 ಗರಿಷ್ಠ ಮಿತಿ ನಿಗದಿಪಡಿಸಲಾಗಿದೆ.
    SC/ST ಅಭ್ಯರ್ಥಿಗಳಿಗೆ 05 ವರ್ಷ, OBC (NCL) ಅಭ್ಯರ್ಥಿಗಳಿಗೆ 03 ವರ್ಷ, PwBD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಅಧಿಕಾರಿ (ಸ್ಕೇಲ್ I, II ಮತ್ತು III) ಹುದ್ದೆಗಳಿಗೆ:
    SC/ST/PwBD ಅಭ್ಯರ್ಥಿಗಳಿಗೆ ರೂ.175/- ಇತರ ಅಭ್ಯರ್ಥಿಗಳಿಗೆ ರೂ.850/- ಅರ್ಜಿ ಶುಲ್ಕ ವಿಧಿಸಲಾಗಿದೆ.

    ಕಚೇರಿ ಸಹಾಯಕರ ಹುದ್ದೆಗಳಿಗೆ:
    SC/ST/PwBD/ESM/DESM ಅಭ್ಯರ್ಥಿಗಳಿಗೆ ರೂ.175/-, ಇತರ ಅಭ್ಯರ್ಥಿಗಳಿಗೆ ರೂ.850/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ಪಾವತಿ ವಿಧಾನ: ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಪ್ರಿಲಿಮ್ಸ್‌, ಮೇನ್ಸ್‌, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಇದು ಆನ್‌ಲೈನ್‌ ಅಥವಾ ಭೌತಿಕ ರೀತಿಯಲ್ಲಿರಬಹುದು ಎಂದು ಹೇಳಲಾಗಿದೆ.

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ