Tag: UPSC

  • UPSC Recruitment 2024: ಟ್ರೈನೀ ಆಫೀಸರ್‌, ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ

    UPSC Recruitment 2024: ಟ್ರೈನೀ ಆಫೀಸರ್‌, ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ

    UPSC Recruitment 2024: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 17 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ತರಬೇತಿ ಅಧಿಕಾರಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 16-ಮೇ-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 27-04-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 16-05-2024
    ಭರ್ತಿ ಮಾಡಿದ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 17-ಮೇ-2024

    ಹುದ್ದೆಯ ಕುರಿತ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಲ್ಲಿ ಖಾಲಿ ಇರುವ ಒಟ್ಟು 17 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಭಾರತದೆಲ್ಲೆಡೆ ತರಬೇತಿ ಅಧಿಕಾರಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ನಡೆಯಲಿದೆ.

    ಹುದ್ದೆ ಹೆಸರು ಮತ್ತು ಸಂಖ್ಯೆ:
    ಸಹಾಯಕ ನಿರ್ದೇಶಕ (ರಿಮೋಟ್ ಸೆನ್ಸಿಂಗ್) – 1 ಹುದ್ದೆ
    ಉಪ ಆಯುಕ್ತರು (NRM/RFS) – 2 ಹುದ್ದೆಗಳು
    ಉಪ ನಿರ್ದೇಶಕರು (ವೈದ್ಯಕೀಯ) – 1 ಹುದ್ದೆ
    ಸಹಾಯಕ ನಿಯಂತ್ರಕ – 2 ಹುದ್ದೆಗಳು
    ತರಬೇತಿ ಅಧಿಕಾರಿ (ಮಹಿಳಾ ತರಬೇತಿ) – 1 ಹುದ್ದೆ
    ತರಬೇತಿ ಅಧಿಕಾರಿ (ಮಹಿಳಾ ತರಬೇತಿ) – 3 ಹುದ್ದೆಗಳು
    ಸಹಾಯಕ ಪ್ರಾಧ್ಯಾಪಕರು (ರಸಾಯನಶಾಸ್ತ್ರ) – 1 ಹುದ್ದೆ
    ಸಹಾಯಕ ಪ್ರಾಧ್ಯಾಪಕ (ಇಂಗ್ಲಿಷ್) – 1 ಹುದ್ದೆ
    ಸಹಾಯಕ ಪ್ರಾಧ್ಯಾಪಕ (ಗಣಿತ) – 1 ಹುದ್ದೆ
    ಸಹಾಯಕ ಪ್ರಾಧ್ಯಾಪಕರು (ಭೌತಶಾಸ್ತ್ರ) – 1 ಹುದ್ದೆ
    ಸಹಾಯಕ ಪ್ರಾಧ್ಯಾಪಕ (ಹಿಂದಿ) -1 ಹುದ್ದೆ
    ಹಿರಿಯ ಸಂಶೋಧನಾ ಅಧಿಕಾರಿ (ಭಾಷಾ ಮಾಧ್ಯಮ) – 2 ಹುದ್ದೆಗಳು

    ವಿದ್ಯಾರ್ಹತೆ:
    ಸಹಾಯಕ ನಿರ್ದೇಶಕ (ರಿಮೋಟ್ ಸೆನ್ಸಿಂಗ್) – B.E ಅಥವಾ B.Tech, M.E ಅಥವಾ M.Tech ಮಾಡಿರಬೇಕು.
    ಉಪ ಆಯುಕ್ತರು (NRM/RFS) – ಪದವಿ, ಸ್ನಾತಕೋತ್ತರ ಪದವಿ ಮಾಡಿರಬೇಕು.
    ಉಪ ನಿರ್ದೇಶಕರು (ವೈದ್ಯಕೀಯ)- ಎಂಬಿಬಿಎಸ್ ತೇರ್ಗಡೆ ಹೊಂದಿರಬೇಕು.
    ಸಹಾಯಕ ನಿಯಂತ್ರಕ – B.E ಅಥವಾ B.Tech, M.E ಅಥವಾ M.Tech ತೇರ್ಗಡೆ ಹೊಂದಿರಬೇಕು.
    ತರಬೇತಿ ಅಧಿಕಾರಿ (ಮಹಿಳಾ ತರಬೇತಿ) – ಡಿಪ್ಲೊಮಾ, ಪದವಿ ಮಾಡಿರಬೇಕು.
    ಸಹಾಯಕ ಪ್ರಾಧ್ಯಾಪಕ (ರಸಾಯನಶಾಸ್ತ್ರ) – ಸ್ನಾತಕೋತ್ತರ ಪದವಿ, Ph.D ತೇರ್ಗಡೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
    ಸಹಾಯಕ ಪ್ರಾಧ್ಯಾಪಕರು (ಇಂಗ್ಲಿಷ್), ಸಹಾಯಕ ಪ್ರಾಧ್ಯಾಪಕ (ಗಣಿತ), ಸಹಾಯಕ ಪ್ರಾಧ್ಯಾಪಕ (ಭೌತಶಾಸ್ತ್ರ), ಸಹಾಯಕ ಪ್ರಾಧ್ಯಾಪಕ (ಹಿಂದಿ) ಸ್ನಾತಕೋತ್ತರ – ಈ ಹುದ್ದೆಗೆ ಪದವಿ, M.Ed ಮಾಡಿರಬೇಕು.
    ಹಿರಿಯ ಸಂಶೋಧನಾ ಅಧಿಕಾರಿ (ಭಾಷಾ ಮಾಧ್ಯಮ) – ಸ್ನಾತಕೋತ್ತರ ಪದವಿ ಮಾಡಿರುವವರು ಅರ್ಜಿ ಸಲ್ಲಿಸಬಹುದು.

    ವಯೋಮಿತಿ: ಸಹಾಯಕ ನಿರ್ದೇಶಕ (ರಿಮೋಟ್ ಸೆನ್ಸಿಂಗ್) 35 ವರ್ಷ, ಉಪ ಆಯುಕ್ತರು (NRM/RFS) 50 ವರ್ಷ, ಉಪ ನಿರ್ದೇಶಕರು (ವೈದ್ಯಕೀಯ), ಸಹಾಯಕ ನಿಯಂತ್ರಕ 35 ವರ್ಷ, ತರಬೇತಿ ಅಧಿಕಾರಿ (ಮಹಿಳಾ ತರಬೇತಿ) 30 ವರ್ಷ, ಸಹಾಯಕ ಪ್ರಾಧ್ಯಾಪಕರು (ರಸಾಯನಶಾಸ್ತ್ರ) 35 ವರ್ಷ, ಸಹಾಯಕ ಪ್ರಾಧ್ಯಾಪಕ (ಇಂಗ್ಲಿಷ್) 40 ವರ್ಷ, ಸಹಾಯಕ ಪ್ರಾಧ್ಯಾಪಕ (ಗಣಿತ) 35 ವರ್ಷ, ಸಹಾಯಕ ಪ್ರಾಧ್ಯಾಪಕ (ಭೌತಶಾಸ್ತ್ರ) 38 ವರ್ಷ, ಸಹಾಯಕ ಪ್ರಾಧ್ಯಾಪಕರು (ಹಿಂದಿ) 35 ವರ್ಷ, ಹಿರಿಯ ಸಂಶೋಧನಾ ಅಧಿಕಾರಿ (ಭಾಷಾ ಮಾಧ್ಯಮ) 40 ವರ್ಷ ಮೀರಿರಬಾರದು. OBC ಅಭ್ಯರ್ಥಿಗಳಿಗೆ 03 ವರ್ಷ, SC/ST ಅಭ್ಯರ್ಥಿಗಳಿಗೆ 05 ವರ್ಷ, PwBD (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, PwBD (OBC) ಅಭ್ಯರ್ಥಿಗಳಿಗೆ 13 ವರ್ಷ, PwBD (SC/ST) ಅಭ್ಯರ್ಥಿಗಳಿಗೆ 15 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಎಲ್ಲಾ ಇತರ ಅಭ್ಯರ್ಥಿಗಳು ರೂ.25/- ಅರ್ಜಿ ಶುಲ್ಕ ಪಾವತಿ ಮಾಡಬೇಕು. ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
    ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • CAPF ಅಸಿಸ್ಟೆಂಟ್ ಕಮಾಂಡೆಂಟ್ಸ್ ಎಕ್ಸಾಂ ಆಗಸ್ಟ್‌ 8 ಕ್ಕೆ

    ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಹಾಯಕ‌‌ ಕಮಾಂಡೆಟ್ಸ್ ನೇಮಕಾತಿಗಾಗಿ ಸಂಬಂಧಿಸಿದಂತೆ ಕೇಂದ್ರ ಲೋಕ ಸೇವಾ ಆಯೋಗವು ಆಗಸ್ಟ್ 8 ರಂದು ಪರೀಕ್ಷೆ ನಡೆಸಲು‌ ಪ್ರಕಟಣೆ ಹೊರಡಿಸಿದೆ.

    ಅಡ್ಮಿಟ್ ಕಾರ್ಡನ್ನು ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ಯುಪಿಎಸ್ ಸಿ ವೆಬ್‌ಸೈಟ್‌ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

    ಇ-ಅಡ್ಮಿಟ್ ಕಾರ್ಡ್ ನಲ್ಲಿ ಯಾವುದೇ ಸಮಸ್ಯೆ ಗಳಿದ್ದಲ್ಲಿ ಆಯೋಗಕ್ಕೆ ಇಮೇಲ್ ಮೂಲಕ ತಿಳಿಸಬಹುದು. ಇ- ಮೇಲೆ ವಿಳಾಸ ಇಲ್ಲಿದೆ : [email protected]

    ಈ ನೇಮಕಾತಿಯಲ್ಲಿ ಸಿಐಎಸ್ ಎಫ್ ಗೆ 67, ಎಸ್ ಎಸ್ ಬಿ 1, ಸಿಆರ್ ಪಿಎಫ್ ಗೆ 36, ಸಿಐಎಸ್ ಎಫ್ ಗೆ 67 ಮತ್ತು ಐಟಿಬಿಪಿಗೆ 20 ಸೇರಿದಂತೆ ಒಟ್ಟು 159 ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ.

    ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ( ಸಹಾಯಕ ಕಮಾಂಡೆಂಟ್ಸ್) ಪರೀಕ್ಷೆಯ ಅಂತಿಮ ಫಲಿತಾಂಶ ಘೋಷಿಸುವವರೆಗೆ ಇ ಅಡ್ಮಿಟ್ ಕಾರ್ಡ್ ನ್ನು ಸುರಕ್ಷಿತವಾಗಿಡಬೇಕು. ಪರೀಕ್ಷೆಗೆ ಯಾವುದೇ ಪೇಪರ್ ಅಡ್ಮಿಟ್ ಕಾರ್ಡ್ ನೀಡಲಾಗುವುದಿಲ್ಲ.

    ಅಭ್ಯರ್ಥಿಗಳು ಪರೀಕ್ಷೆಯ ನಿಗದಿತ ಪ್ರಾರಂಭಕ್ಕೆ 10 ನಿಮಿಷಗಳ ಮೊದಲೇ ಪರೀಕ್ಷಾ ಕೇಂದ್ರ ಪ್ರವೇಶಿಸಬೇಕು. ಅಭ್ಯರ್ಥಿಗಳು ಬೆಳಗಿನ ಸೆಷನ್ ಪರೀಕ್ಷೆಗೆ 9.50 ರೊಳಗೆ ಹಾಜರಿರಬೇಕು. ಎರಡನೇ ಸೆಷನ್ ಪರೀಕ್ಷೆಗೆ ಹಾಜರಾಗಲು ಮಧ್ಯಾಹ್ನ 1.50 ರೊಳಗೆ ಪರೀಕ್ಷಾ ಕೇಂದ್ರವನ್ನು ತಲುಪ ಬೇಕೆಂದು ಸೂಚಿಸಲಾಗಿದೆ. ತಡವಾಗಿ ಪರೀಕ್ಷಾ ಸ್ಥಳಕ್ಕೆ ಪ್ರವೇಶಿಸಲು ಯಾವುದೇ ಅಭ್ಯರ್ಥಿಯನ್ನು ಅನುಮತಿಸಲಾಗುವುದಿಲ್ಲ.

    ಬ್ಲಾಕ್ ಬಾಲ್ ಪಾಯಿಂಟ್ ಪೆನ್ ನ್ನು ತರಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ಉತ್ತರ ಪತ್ರಿಕೆ ಮತ್ತು ಹಾಜರಾತಿ ಪಟ್ಟಿಯನ್ನು ಬ್ಲ್ಯಾಕ್ ಬಾಲ್ ಪಾಯಿಂಟ್ ಪೆನ್ನೊಂದಿಗೆ ಮಾತ್ರ ಭರ್ತಿ ಮಾಡಲು ಸೂಚಿಸಲಾಗಿದೆ. ಅಭ್ಯರ್ಥಿಗಳು ಇ – ಅಡ್ಮಿಟ್ ಕಾರ್ಡ್ ಜೊತೆಗೆ ಫೊಟೋ ಐಡಿ ಕಾರ್ಡ್ ನಮೂದಿಸಬೇಕು.

    ಪರೀಕ್ಷೆಯು ಲಿಖಿತ ರೂಪದಲ್ಲಿದ್ದು, ಎರಡು ಪತ್ರಿಕೆಗಳು ಇರುತ್ತವೆ. ಪೇಪರ್ -1 ಬಹು ಆಯ್ಕೆ ಪ್ರಶ್ನೆಗಳ ( ಎಂಸಿಕ್ಯೂ) ಆಧಾರದ ಮೇಲೆ ಅಭ್ಯರ್ಥಿಗಳ ಸಾಮಾನ್ಯ ಸಾಮಾರ್ಥ್ಯ ಮತ್ತು ಬುದ್ಧಿವಂತಿಕೆಯನ್ನು ಪರೀಕ್ಷಿಸಲಾಗುತ್ತದೆ. ಇಲ್ಲಿ ಒಟ್ಟು 250 ಅಂಕಗಳನ್ನು ಹೊಂದಿರುವ 200 ಪ್ರಶ್ನೆಗಳನ್ನು ಪೂರ್ಣಗೊಳಿಸಲು ಅಭ್ಯರ್ಥಿಗೆ ಒಟ್ಟು 2 ಗಂಟೆ ಅವಧಿ ಕಾಲಾವಕಾಶ ನೀಡಲಾಗಿದೆ. ಪೇಪರ್ 2 ವಿವರಣಾತ್ಮಕ ಪ್ರಶ್ನೆ ಹೊಂದಿದ್ದು, ಅಭ್ಯರ್ಥಿಯ ಭಾಷಾ ಪ್ರಾವೀಣ್ಯತೆಯನ್ನು ಪರೀಕ್ಷಿಸುತ್ತದೆ.ಇಲ್ಲಿ ಕೂಡಾ 200 ಅಂಕಗಳನ್ನು ಹೊಂದಿರುವ ವಿವರಣಾತ್ಮಕ ಪ್ರಕಾರದ ಪ್ರಶ್ನೆಗಳನ್ನು ಪೂರ್ಣಗೊಳಿಸಲು 3 ಗಂಟೆ ಸಮಯ ಇದೆ.

    ಸಾಂವಿಧಾನಿಕ ಮಂಡಳಿಯಾದ ಲೋಕಸೇವಾ ಆಯೋಗಬಯ ( ಯುಪಿಎಸ್ ಸಿ), ಗಡಿ ಭದ್ರತಾ ಪಡೆ ( ಬಿಎಸ್ ಎಫ್), ಕೇಂದ್ರ ಭದ್ರತಾ ಪಡೆ (ಸಿಐಎಸ್ ಎಫ್), ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ( ಐಟಿಬಿಪಿ), ಕೇಂದ್ರ ಮೀಸಲು ಪೊಲೀಸ್ ಸಹಾಯಕ ಕಮಾಂಡೆಂಟ್ ಗಳ‌ ( ಗ್ರೂಪ್ ಎ), ಫೋರ್ಸ್ ( ಸಿಆರ್ಪಿಎಫ್) ಮತ್ತು ಸಶಸ್ತ್ರ ಸೀಮಾ ಪಡೆ ( ಎಸ್ ಎಸ್ ಬಿ) ಅಧಿಕಾರಿಗಳ ಅರ್ಹತೆ ಆಧಾರಿತ ಆಯ್ಕೆಗಾಗಿ ಸಿಎಪಿಎಫ್ ಪರೀಕ್ಷೆಯನ್ನು ನಡೆಸುತ್ತದೆ.

  • ಯುಪಿಎಸ್ಸಿ ಎನ್ ಡಿಎ ಪರೀಕ್ಷೆಗೆ ಅಧಿಸೂಚನೆ ಪ್ರಕಟ, ಜೂನ್ 29ರ ಮೊದಲು ಅರ್ಜಿ ಸಲ್ಲಿಸಿ

    ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ 400 ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಲು ನೋಟಿಫಿಕೇಶನ್ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ನ್ಯಾಷನಲ್ ಡಿಫೆನ್ಸ್ ಅಕಾಡೆಮಿ – 370
    ನವಲ್ ಅಕಾಡೆಮಿ – 30 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 09-06-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-06-2021 ( 6pm)
    ಅರ್ಜಿ ಶುಲ್ಕ ಸಲ್ಲಿಸಲು ಕೊನೆಯ ದಿನಾಂಕ: 28-06-2021
    ಪರೀಕ್ಷೆಯ ದಿನಾಂಕ : 05-09-2021

    ರಾಜ್ಯದಲ್ಲಿ ಪರೀಕ್ಷಾ ಕೇಂದ್ರ : ಬೆಂಗಳೂರು ಮತ್ತು ಧಾರವಾಡ

    ಹುದ್ದೆ ಸ್ಥಳ : ಭಾರತದೆಲ್ಲೆಡೆ

    ಒಟ್ಟು ಹುದ್ದೆ ಸಂಖ್ಯೆ : 400

    ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಯುನಿವರ್ಸಿಟಿಯಿಂದ 12th ತೇರ್ಗಡೆ ಹೊಂದಿರಬೇಕು.

    ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿಗೆ 370 ( ಭೂ ಸೇನೆ 208, ನೌಕಾಪಡೆ 42, ವಾಯುಪಡೆ 120) ಮತ್ತು ನೇವಲ್ ಅಕಾಡೆಮಿ ಗೆ 30 ಸೇರಿ ಈ ಬಾರಿ ಒಟ್ಟು 400 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 02 ಜನವರಿ 2003 ಮತ್ತು 1 ಜನವರಿ 2006 ರ ನಡುವೆ ಜನಿಸಿರಬೇಕು( ಅವಿವಾಹಿತ ಪುರುಷ ಅಭ್ಯರ್ಥಿಗಳು)

    ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಸೇನೆಯ ಅಧಿಕಾರಿಗಳ ( ಜೆಸಿಎ/ಎನ್ ಸಿಎ/ಒಆರ್) ಪುತ್ರರಾಗಿದ್ದಲ್ಲಿ ಅಂಥ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಉಳಿದ ಅಭ್ಯರ್ಥಿಗಳಿಗೆ ರೂ.100/- ಶುಲ್ಕ ನಿಗದಿಪಡಿಸಲಾಗಿದೆ. ಯಾವುದೇ ಎಸ್ ಬಿಐ ಶಾಖೆಯಲ್ಲಿ ಶುಲ್ಕ ಪಾವತಿಸಬಹುದಾಗಿದೆ. ಅಥವಾ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ ರುಪೇ ಕಾರ್ಡ್/ ಡೆಬಿಟ್ ಕಾರ್ಡ್ ಗಳ ಮೂಲಕ ಆನ್ಲೈನ್ ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ ಹೇಗೆ ?

    ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಅಥವಾ ನೇವಲ್ ಅಕಾಡೆಮಿಗೆ ಆಯ್ಕೆಯಾಗಲು ಅಭ್ಯರ್ಥಿಯು ಮೂರು ಹಂತಗಳನ್ನು ದಾಟಬೇಕು. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪ್ರವೇಶ ಪರೀಕ್ಷೆ ಮೊದಲನೇ ಹಂತವಾಗಿರುತ್ತದೆ. ಇದರ ನಂತರ ಎಸ್ ಎಸ್ ಬಿ ನಡೆಸುವ ಬೌದ್ಧಿಕ ಹಾಗೂ ವ್ಯಕ್ತಿತ್ವ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಎರಡು ಹಂತದ ನಂತರ ಎಸ್ಎಸ್ ಬಿ ನಡೆಸುವ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು. ಈ ಮೂರೂ ಹಂತ ದಾಟಿದ ನಂತರ ಯಶಸ್ವಿಯಾದ ಅಭ್ಯರ್ಥಿಗಳಿಗೆ ಅವರವರ ಆಯ್ಕೆಯ ಕೋರ್ಸ್ ಗಳಿಗೆ ಲಭ್ಯತೆಯ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು.

    ನೋಟಿಫಿಕೇಶನ್

  • UPSC : 363 ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಿ : ಇಲ್ಲಿದೆ ವಿವರ

    UPSC : 363 ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಿ : ಇಲ್ಲಿದೆ ವಿವರ

    ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಪ್ರಿನ್ಸಿಪಾಲ್ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 363 ಹುದ್ದೆಯಲ್ಲಿ ಪುರುಷ ಅಭ್ಯರ್ಥಿಗಳಿಗೆ 208 ಹುದ್ದೆ ಹಾಗೂ ಉಳಿದ 155 ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗಾಗಿರುತ್ತದೆ.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 50 ವರ್ಷ ಮೀರಿರಬಾರದು. ಇಲ್ಲಿ ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ. ಆಯ್ಕೆ ಪ್ರಕ್ರಿಯೆಯು ಸಂದರ್ಶನದ ಮೂಲಕ ನಡೆಯುತ್ತದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅಲ್ಲಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆನ್‌ಲೈನ್ ಮೂಲಕ ಸಲ್ಲಿಸಬೇಕು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :23-04-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13-05-2021

    ಆಫೀಶಿಯಲ್ ವೆಬ್‌ಸೈಟ್ ಲಿಂಕ್‌ ಗಾಗಿ ಇಲ್ಲಿ ಕ್ಲಿಕ್ ಮಾಡಿ
    ನೋಟಿಫಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

  • UPSC : ಪರೀಕ್ಷೆ ಮುಂದೂಡಿಕೆ

    UPSC : ಪರೀಕ್ಷೆ ಮುಂದೂಡಿಕೆ

    ನಾಗರಿಕ ಸೇವಾ ಆಯೋಗಗಳಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ನಿಗದಿಪಡಿಸಲಾಗಿರುವ ಸಂದರ್ಶನ ದಿನಾಂಕವನ್ನು ಮುಂದೂಡಲಾಗಿದೆ ಎಂದು ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್ ಸಿ) ಪ್ರಕಟಣೆಯಲ್ಲಿ ತಿಳಿಸಿದೆ.

    ದೂರ ಪ್ರದೇಶಗಳಿಂದ ಪ್ರವಾಸ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಮುಂದೂಡಲಾಗಿದೆ.

    15 ದಿನಗಳ ಮುಂಚಿತವಾಗಿ ಪರಿಷ್ಕೃತ ದಿನಾಂಕವನ್ನು ಯುಪಿಎಸ್ ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

    2020 ನೇ ಸಾಲಿನ ಇಂಡಿಯನ್ ಎಕನಾಮಿಕ್ ಸರ್ವಿಸ್ / ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್ ಎಕ್ಸಾಮಿನೇಷನ್ ಬರೆದ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಎ‌.20 ರಿಂದ 23 ರವರೆಗೆ ನಡೆಯಬೇಕಿತ್ತು. 2020ನೇ ಸಾಲಿನ ಸಿವಿಲ್ ಸರ್ವಿಸ್ ಎಕ್ಸಾಮಿನೇಷನ್ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಏ.26 ರಿಂದ ಜೂನ್ 18 ರವರೆಗೆ ನಡೆಯಬೇಕಿತ್ತು.

  • UPSC EPFO ಪ್ರವೇಶ ಪತ್ರ ಬಿಡುಗಡೆ

    UPSC EPFO ಪ್ರವೇಶ ಪತ್ರ ಬಿಡುಗಡೆ

    ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಎನ್‌ಫೋರ್ಸ್‌ಮೆಂಟ್ ಆಫೀಸರ್ ಅಕೌಂಟ್ಸ್ ಆಫೀಸರ್ ಪರೀಕ್ಷೆಗೆ ಅಭ್ಯರ್ಥಿಗಳ ಪ್ರವೇಶ ಪತ್ರ ಬಿಡುಗಡೆ ಮಾಡಿದೆ.

    ಇಪಿಎಫ್‌ಒ ಪರೀಕ್ಷೆಯ ಪ್ರವೇಶ ಪತ್ರವನ್ನು ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ದಿನಾಂಕ ಮೇ, 09, 2021 ರವರೆಗೆ ಡೌನ್‌ಲೋಡ್‌ ಮಾಡಲು ಅವಕಾಶವಿದೆ. ಅಭ್ಯರ್ಥಿಗಳು upsc.gov.in ವೆಬ್‌ಸೈಟ್ ಗೆ ಲಾಗಿನ್ ಆಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

    ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಕಡ್ಡಾಯ. ನೀಡಲಾಗಿರುವ ಮಾರ್ಗಸೂಚಿಗಳನ್ನು ಫಾಲೋ ಮಾಡಬೇಕು. ಪರೀಕ್ಷೆ ದಿನಾಂಕ, ಪರೀಕ್ಷಾ ಕೇಂದ್ರ ಇತ್ಯಾದಿ ಮಾಹಿತಿಗಳನ್ನು ಪ್ರವೇಶ ಪತ್ರದಲ್ಲಿ ನೀಡಲಾಗುತ್ತದೆ. ಪ್ರವೇಶ ಪತ್ರದ ಜೊತೆಗೆ ಇತರೆ ಇನ್ನೊಂದು ಅಧಿಕೃತ ಗುರುತಿನ ಚೀಟಿಯನ್ನು ಅಭ್ಯರ್ಥಿಗಳು ತರಬೇಕು.

    ಯುಪಿಎಸ್‌ಸಿ ಇಪಿಎಫ್‌ಒ ಪರೀಕ್ಷೆಯನ್ನು ಮೇ. 09,2021 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12ಗಂಟೆ ವರೆಗೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.