Tag: Teachers

  • ಶ್ರೀ ಬಲಭೀಮ ಜನತಾ ವಿದ್ಯಾವರ್ಧಕ ಸಂಘ, ಸಾಸನೂರ ; ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

    ಶ್ರೀ ಬಲಭೀಮ ಜನತಾ ವಿದ್ಯಾವರ್ಧಕ ಸಂಘ, ಸಾಸನೂರ , ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಈ ಕೆಳಕಾಣಿಸಿಸ ಪ್ರೌಢಶಾಲೆಯಲ್ಲಿ ನಿವೃತ್ತಿಯಿಂದ ಖಾಲಿಯಿರುವ ಒಂದು ಅನುದಾನಿತ ಹುದ್ದೆಯನ್ನು ತುಂಬಿಕೊಳ್ಳಲು ಈ ಕೆಳಗೆ ಕಾಣಿಸಿದ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದ್ದು, ವಿವರ ಈ ಕೆಳಗೆ ನೀಡಲಾಗಿದೆ.

    ಹುದ್ದೆ : ಸಹ ಶಿಕ್ಷಕರು ( ಆಂಗ್ಲ)

    ಆಸಕ್ತ ಅಭ್ಯರ್ಥಿಗಳು ಜಾಹೀರಾತು ಪ್ರಕಟಗೊಂಡ 21 ದಿನಗಳ ಒಳಗಾಗಿ ತಮ್ಮ ಶೈಕ್ಷಣಿಕ ಪ್ರಮಾಣ ದೃಢೀಕೃತ ಝರಾಕ್ಸ್ ಪ್ರತಿಗಳೊಂದಿಗೆ ರೂಪಾಯಿ 800/- ರಾಷ್ಟ್ರೀಕೃತ ಬ್ಯಾಂಕ್ ಹುಂಡಿಯೊಂದಿಗೆ ( ಡಿಡಿ) ಅಧ್ಯಕ್ಷರು ಶ್ರೀ ಬಲಭೀಮ ಜನತಾ ವಿದ್ಯಾವರ್ಧಕ ಸಂಘ ಸಾಸನೂರ ಇವರ ಹೆಸರಿನಲ್ಲಿ ಪಡೆದು ಅರ್ಜಿಯ ಜೊತೆ ಬ್ಯಾಂಕ್ ಹುಂಡಿಯನ್ನು (ಡಿಡಿ) ಪ್ರತಿ ಎಲ್ಲಾ ಪ್ರಮಾಣ ಪತ್ರಗಳ ಝರಾಕ್ಸ್ ಪ್ರತಿಗಳನ್ನು ಹಚ್ಚಿ ಅಧ್ಯಕ್ಷರು, ಶ್ರೀ ಬಲಭೀಮ ಜನತಾ ವಿದ್ಯಾವರ್ಧಕ ಸಂಘ ವಿಳಾಸಕ್ಕೆ ಸಾಸನೂರ, ತಾಳಿಕೋಟೆ ಜಿಲ್ಲಾ ವಿಜಯಪುರ -586214 ವಿಳಾಸಕ್ಕೆ ಹಾಗೂ ಇನ್ನೊಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು, ಸಾ.ಶಿ.ಇಲಾಖೆ, ವಿಜಯಪುರ ಇವರಿಗೆ ಸಲ್ಲಿಸಬೇಕು. ಈಗಾಗಲೇ ನಿಗದಿತ ದಿನಾಂಕದಂದು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಲಾಖಾ‌ ನಿಯಮಾನುಸಾರವಾಗಿ ಪ್ರತ್ಯೇಕವಾಗಿ ಸಂದರ್ಶನ ಸ್ಥಳ, ದಿನಾಂಕ ಮತ್ತು ವೇಳೆಯನ್ನು ತಿಳಿಸಲಾಗುವುದು.

  • ಇಂಗ್ಲೀಷ್ ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ

    ಶ್ರೀ ಜನಾರ್ದನ ಎಜ್ಯುಕೇಶನ್ ಟ್ರಸ್ಟ್ ( ರಿ) ಎಳ್ಳಾರೆ , ಈ ವಿದ್ಯಾಸಂಸ್ಥೆಗೆ ಇಂಗ್ಲೀಷ್ ಶಿಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :

    ಶ್ರೀ ಜನಾರ್ಧನ ಪ್ರಾಥಮಿಕ ಶಾಲೆ ಎಳ್ಳಾರೆ – ಡಿ.ಎಡ್/ ಬಿ.ಎಡ್ ಇಂಗ್ಲೀಷ್ ಶಿಕ್ಷಕಿ -01 ಹುದ್ದೆ
    ಶ್ರೀ ಜನಾರ್ದನ ಪ್ರಾಥಮಿಕ ಶಾಲೆ ಎಳ್ಳಾರೆ – ಪದವೀಧರರು ‌ಇಂಗ್ಲೀಷ್ ಸ್ಪೋಕನ್ – 01 ಹುದ್ದೆ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಸಕ್ತ ಅಭ್ಯರ್ಥಿಗಳು ದಿನಾಂಕ 30-06-2021ನೇ ಬುಧವಾರದ ಒಳಗೆ ಅರ್ಜಿಯನ್ನು ಸ್ವಯಂ ವಿವರಗಳೊಂದಿಗೆ ( ರೆಸ್ಯೂಮ್) ಸ್ಬಯ ಜಲ ಹಸ್ತಾಕ್ಷರದಲ್ಲಿ ಬರೆದು ದೂರವಾಣಿ ಸಂಖ್ಯೆಯೊಂದಿಗೆ ವಿದ್ಯಾಸಂಸ್ಥೆಗೆ ಸಲ್ಲಿಸುವುದು.

    ಅಭ್ಯರ್ಥಿಗಳು ಇ- ಮೇಲ್ ಮುಖಾಂತರವೂ ಅರ್ಜಿಯನ್ನು ಸಲ್ಲಿಸಬಹುದು.

    ಇ-ಮೇಲ್ ವಿಳಾಸ ಈ ಕೆಳಗೆ ನೀಡಲಾಗಿದೆ : [email protected]

  • ಶಿಕ್ಷಕರ ವರ್ಗಾವಣೆ ನಿಯಮಾವಳಿ : ವರ್ಗ ವೇಳಾಪಟ್ಟಿ ನಾಳೆ ?

    ಶಿಕ್ಷಕರ ವರ್ಗಾವಣೆಯ ಸಮಯ ಹತ್ತಿರವಾಗಿದೆ. ಶಿಕ್ಷಣ ಇಲಾಖೆಯು ಶಿಕ್ಷಕರ ವರ್ಗಾವಣೆ ನಿಯಮವನ್ನು ಅಂತಿಮಗೊಳಿಸಿ ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತಂದಿರುವ ಸರಕಾರ, ಕರಡು ಪ್ರತಿಯನ್ನು ರೂಪಿಸಿ ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಿತ್ತು. ಸಾವಿರಕ್ಕೂ ಹೆಚ್ಚಿನ ಆಕ್ಷೇಪಣೆಗಳು ಬಂದಿದ್ದು, ಪರಿಶೀಲಿಸಿ, ಅಂತಿಮ ನಿಯಮ ರೂಪಿಸಿ ಅಧಿಕೃತ ಆದೇಶ ಶುಕ್ರವಾರ ದೊರಕಿದೆ.

    ವರ್ಗಾವಣೆ ನಿಯಮ ಪ್ರಶ್ನಿಸಿ ಶಿಕ್ಷಕರು ಕೋರ್ಟ್ ಮೆಟ್ಟಿಲೇರಿದರೂ, ಕೋರ್ಟ್ ಶಿಕ್ಷಣ ಇಲಾಖೆಯ ನಿಲುವು ಪಡೆದುಕೊಂಡ ಮೇಲೆ ಮುಂದಿನ ಆದೇಶ ಹೊರಡಿಸಬೇಕಾಗುತ್ತದೆ.

    ನಿಯಮದಲ್ಲಿ ಏನಿದೆ?

    ವರ್ಗಾವಣೆ ವೇಳಾಪಟ್ಟಿಗೆ ಅನುಸಾರ ಮೊದಲು ವಿಶೇಷ ಕೌನ್ಸಿಲಿಂಗ್ ಲಭ್ಯವಿರುವ ಖಾಲಿ ಹುದ್ದೆಗಳ ಪಟ್ಟಿಯನ್ನು ಪ್ರಕಟಿಸುವುದು.
    ಕಳೆದ ಬಾರಿ ಕಡ್ಡಾಯ, ವಲಯ, ಸಮರ್ಪಕ ವರ್ಗಾವಣೆಗಳಲ್ಲಿ ಅವಕಾಶ ಸಿಗದ ಬಾಧಿತ ಶಿಕ್ಷಕರಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದು.
    ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಿ ವಿಶೇಷ ಕೌನ್ಸಿಲಿಂಗ್ ಅವಕಾಶ ಪಡೆಯಲು ಅನುವಾಗುವಂತೆ ಅನುಕೂಲ ಮಾಡಿಕೊಡುವುದು.
    ಜ್ಯೇಷ್ಠತಾ ಕ್ರಮಾಂಕ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಿ ಅಂತಿಮಗೊಳಿಸುವುದು.
    ಎಲ್ಲ ಬಾಧಿತ ಶಿಕ್ಷಕರಿಗೆ ಕೌನ್ಸಿಲಿಂಗ್ ಮಾಡುವುದು‌.
    ಹೆಚ್ಚುವರಿ ಗೊಂಡಿರುವ ಪ್ರಕರಣಗಳಲ್ಲಿ ವಲಯ ನಿರ್ಬಂಧ ಇರುವುದಿಲ್ಲ.