Tag: ssc recruitment

  • SSC Phase XII 2024: ಎಸ್‌ಎಸ್‌ಸಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ, 2049 ಪೋಸ್ಟ್‌ಗಳಿಗೆ ಈ ದಿನದವರೆಗೆ ನೋಂದಾಯಿಸಿ

    SSC Phase XII 2024: ಎಸ್‌ಎಸ್‌ಸಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ, 2049 ಪೋಸ್ಟ್‌ಗಳಿಗೆ ಈ ದಿನದವರೆಗೆ ನೋಂದಾಯಿಸಿ

    SSC Recruitment 2024: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (SSC) ಅಧಿಕೃತ ಅಧಿಸೂಚನೆಯ ಮೂಲಕ ಹಂತ-XII ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 2049 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 18-ಮಾರ್ಚ್-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಸಲ್ಲಿಸಲು ಸೂಚಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು 26 ಮಾರ್ಚ್ 2024 ಅರ್ಜಿ ವರೆಗೆ ವಿಸ್ತರಿಸಲಾಗಿದೆ.

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26ನೇ ಮಾರ್ಚ್ 2024 ರವರೆಗೆ ವಿಸ್ತರಿಸಲಾಗಿದೆ.
    ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: ಮಾರ್ಚ್ 27, 2024 ರವರೆಗೆ ವಿಸ್ತರಿಸಲಾಗಿದೆ.
    ಆನ್‌ಲೈನ್ ಪಾವತಿ ಸೇರಿದಂತೆ ಅರ್ಜಿ ನಮೂನೆ ತಿದ್ದುಪಡಿಗಾಗಿ ವಿಂಡೋ ದಿನಾಂಕಗಳು: 30 ಮಾರ್ಚ್ 2024 ರಿಂದ 01 ಏಪ್ರಿಲ್ 2024
    ಕಂಪ್ಯೂಟರ್ ಆಧಾರಿತ ಪರೀಕ್ಷೆಯ ದಿನಾಂಕಗಳು: 06 ರಿಂದ 08 ಮೇ 2024

    ಹುದ್ದೆಗಳ ವಿವರ
    ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
    ಮಲ್ಟಿಟಾಸ್ಕಿಂಗ್‌ ಸ್ಟಾಫ್‌, ರಿಹ್ಯಾಬಿಲಿಟೇಶನ್‌ ಕೌನ್ಸೆಲರ್‌, ಕಂಸರ್‌ವೇಶನ್‌ ಅಸಿಸ್ಟಂಟ್‌, ಟೆಕ್ನಿಕಲ್‌ ಅಸಿಸ್ಟಂಟ್‌, ಟೆಕ್ನಿಕಲ್‌ ಸೂಪರಿಂಟೆಂಡೆಂಟ್‌, ಜೂನಿಯರ್‌ ಸೀಡ್‌ ಅನಾಲಿಸ್ಟ್‌, ಅಕೌಂಟೆಂಟ್‌, ಹೆಡ್‌ ಕ್ಲರ್ಕ್‌, ಸ್ಟಾಫ್‌ ಕಾರ್‌ ಡ್ರೈವರ್‌, ಗರ್ಲ್ಸ್‌ ಕೆಡೆಟ್‌ ಇನ್‌ಸ್ಟ್ರಕ್ಟರ್‌, ಮೆಕ್ಯಾನಿಕಲ್‌ ವಿಭಾಗ ಚಾರ್ಜ್‌ಮನ್‌, ಸೈಂಟಿಫಿಕ್‌ ಅಸಿಸ್ಟೆಂಟ್‌, ರಿಸರ್ಚ್‌ ಇನ್ವೆಸ್ಟಿಗೇಟರ್‌, ಜೂನಿಯರ್‌ ಕಂಪ್ಯೂಟರ್‌ ಅಪರೇಟರ್‌, ಸಬ್‌ ಎಡಿಟರ್‌ (ಹಿಂದಿ), ಸಬ್‌ ಎಡಿಟರ್‌ (ಇಂಗ್ಲೀಷ್‌), ಸೀನಿಯರ್‌ ಸೈಂಟಿಫಿಕ್‌ ಅಸಿಸ್ಟೆಂಟ್‌ (ಬಯೋಲಜಿ), ಇತರೆ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ: ಮೇಲೆ ನೀಡಲಾದ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು.

    ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.2000 ರಿಂದ ರೂ.40000 ವರೆಗೆ ವೇತನವಿರುತ್ತದೆ.

    ಅರ್ಜಿ ಶುಲ್ಕ: ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಮತ್ತು ಆಫ್‌ಲೈನ್‌ ಚಲನ್‌ ಮೂಲಕ ಪಾವತಿಸಬೇಕು. ಎಸ್‌ಸಿ.ಎಸ್ಟಿ,ಮಹಿಳಾ ಅಭ್ಯರ್ಥಿಗಳು,PwBD ಅಭ್ಯರ್ಥಿಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

    ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18, ಗರಿಷ್ಠ 42 ವರ್ಷ ವಯಸ್ಸಾಗಿರಬೇಕು.

    ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ, PwBD ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯೂಡಿ (ಒಬಿಸಿ)ಅಭ್ಯರ್ಥಿಗಳಿಗೆ 13 ವರ್ಷ, ಪಿಡಬ್ಲೂಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ 15 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅಭ್ಯರ್ಥಿಗಳನ್ನು ಕಂಪ್ಯೂಟರ್‌ ಆಧಾರಿತ ಪರೀಕ್ಷೆ, ಸ್ಕಿಲ್‌ ಟೆಸ್ಟ್‌, ದಾಖಲೆಗಳ ಪರಿಶೀಲನೆ ಮೂಲಕ ಮೇಲ್ಕಂಡ ಹುದ್ದೆಗೆ ಆಯ್ಕೆ ಮಾಡಲಾಗುವುದು.

    ಪರೀಕ್ಷೆಯ ಕೇಂದ್ರಗಳು ಎಲ್ಲೆಲ್ಲಿದೆ?
    ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಕವರಟ್ಟಿ, ಬೆಳಗಾವಿ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

    ಅರ್ಜಿ ಸಲ್ಲಿಸುವ ವಿಧಾನ;
    ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು https://ssc.gov.in ಗೆ ಭೇಟಿ ನೀಡಬೇಕು, ನಂತರದ ಪುಟದಲ್ಲಿ ಕಾಣುವ Login or Register ಎಂಬಲ್ಲಿ ಕ್ಲಿಕ್‌ ಮಾಡಬೇಕು. ಈ ಲಿಂಕ್‌ ಕ್ಲಿಕ್‌ ಮಾಡಿದಾಗ ಇನ್ನೊಂದು ಪೇಜ್‌ ಬರುತ್ತದೆ, ಅಲ್ಲಿ ನಿಮ್ಮ ವಿವರಗಳನ್ನು ನೀಡಿ ರಿಜಿಸ್ಟ್ರೇಷನ್‌ ಮಾಡ್ಕೊಳ್ಳಿ. ಆಮೇಲೆ ಇನ್ನೊಮ್ಮೆ ಲಾಗಿನ್‌ ಆಗಿ ಎಲ್ಲಾ ಮಾಹಿತಿ, ದಾಖಲೆ ಸಹಿತ ನೀಡಿ.

  • SSC Jobs: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನಲ್ಲಿ 4187 ಹುದ್ದೆಗಳ ನೇಮಕಾತಿ; ಪದವಿ ಪಾಸಾದವರು ಅಪ್ಲೈ ಮಾಡಿ

    SSC Jobs: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನಲ್ಲಿ 4187 ಹುದ್ದೆಗಳ ನೇಮಕಾತಿ; ಪದವಿ ಪಾಸಾದವರು ಅಪ್ಲೈ ಮಾಡಿ

    SSC Recruitment 2024: ಮಾರ್ಚ್ 2024 ರ SSC ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 4187 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಕೆಳಗೆ ನೀಡಿರುವ ಮಾಹಿತಿಯನ್ನು ಓದಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು 4187 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಬ್-ಇನ್ಸ್‌ಪೆಕ್ಟರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಸಿಬ್ಬಂದಿ ಆಯ್ಕೆ ಆಯೋಗವು ಅರ್ಜಿ ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 28-Mar-2024 ರಂದು ಅಥವಾ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 04-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-03-2024
    ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 29-03-2024
    ‘ಅರ್ಜಿ ನಮೂನೆ ತಿದ್ದುಪಡಿಗಾಗಿ ವಿಂಡೋ’ ಮತ್ತು ತಿದ್ದುಪಡಿ ಶುಲ್ಕಗಳ ಆನ್‌ಲೈನ್ ಪಾವತಿಯ ದಿನಾಂಕ: 30.03.2024 ರಿಂದ 31.03.2024.
    ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿ: 9ನೇ, 10ನೇ ಮತ್ತು 13ನೇ ಮೇ, 2024.

    ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ;
    ಹುದ್ದೆ ಹೆಸರು
    : ಸಿಬ್ಬಂದಿ ಆಯ್ಕೆ ಆಯೋಗ (SSC)ವು ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 4187 ಹುದ್ದೆಗಳು ಖಾಲಿ ಇದ್ದು, ಭಾರತದಾದ್ಯಂತ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದು.

    ವೇತನ: ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 35,400 – 1,12,400/- ವೇತನ ಸಿಗಲಿದೆ.

    ಹುದ್ದೆಗಳು ಹಾಗೂ ಪೋಸ್ಟ್‌ಗಳ ಸಂಖ್ಯೆ:
    ದೆಹಲಿ ಪೊಲೀಸ್ SI (ಪುರುಷ) 125
    ದೆಹಲಿ ಪೊಲೀಸ್ SI (ಮಹಿಳೆ) 61
    ಬಿಎಸ್‌ಎಫ್‌- 892
    ಸಿಐಎಸ್‌ಎಫ್‌- 1597
    ಸಿಆರ್‌ಪಿಎಫ್‌- 1172
    ಐಟಿಬಿಪಿ- 278
    ಎಸ್‌ಎಸ್‌ಬಿ- 62
    ಒಟ್ಟು ಹುದ್ದೆಗಳು 4187

    ವಿದ್ಯಾರ್ಹತೆ: ಎಸ್‌ಎಸ್‌ಸಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ 25 ವರ್ಷಗಳನ್ನು ಮೀರಿರಬಾರದು. OBC ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ, PWD (ಸಾಮಾನ್ಯ) ಅಭ್ಯರ್ಥಿಗಳಿಗೆ 10 ವರ್ಷ, PWD (OBC) ಅಭ್ಯರ್ಥಿಗಳಿಗೆ 13 ವರ್ಷ, PWD (SC/ST) ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ:ಸಾಮಾನ್ಯ/ OBC/EWS ಅಭ್ಯರ್ಥಿಗಳು: ರೂ. 100/- ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. SC/ST ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು CBT ಲಿಖಿತ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ), ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

    ಅಭ್ಯರ್ಥಿಗಳು ನೋಟಿಫಿಕೇಶನ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • SSC ನಲ್ಲಿ ಭರ್ಜರಿ ಉದ್ಯೋಗವಕಾಶ, 25,271 ಹುದ್ದೆ: SSLC ಪಾಸಾದವರಿಗೆ ಆದ್ಯತೆ

    ಸಿಬ್ಬಂದಿ ನೇಮಕಾತಿ ಆಯೋಗವು ( ಎಸ್ ಎಸ್ ಸಿ) ಜೆನರಲ್ ಡ್ಯೂಟಿ ಕಾನ್ಸ್‌ಟೇಬಲ್ ಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, 31-08-2021 ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕ, ವಿದ್ಯಾರ್ಹತೆ, ವಯೋಮಿತಿ ಹಾಗೂ ಇನ್ನಿತರ ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ.

    ಹುದ್ದೆಗಳ ವಿವರ : ಗಡಿ ಭದ್ರತಾ ಪಡೆ: 7545
    ಕೇಂದ್ರ ಕೈಗಾರಿಕಾ ಭದ್ರತಾ ಪಡೆ : 8464
    ಸಶಸ್ತ್ರ ಸೀಮಾ ಬಲ : 3806
    ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ : 1431
    ಅಸ್ಸಾಂ ರೈಫಲ್ಸ್ : 3785
    ಸೆಕ್ರರಿಯೇಟ್ ಸೆಕ್ಯುರಿಟಿ ಫೋರ್ಸ್ : 240

    ಒಟ್ಟು ಹುದ್ದೆಗಳ ಸಂಖ್ಯೆ : 25,271

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 17-07-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-08-2021
    ಆನ್ಲೈನ್ ಮೂಲಕ ಅಪ್ಲಿಕೇಶನ್ ಶುಲ್ಕ ಕಟ್ಟಲು ಕೊನೆಯ ದಿನಾಂಕ : 02-09-2021
    ಚಲನ್ ಮೂಲಕ ಅಪ್ಲಿಕೇಶನ್ ಶುಲ್ಕ ಸಲ್ಲಿಸಲು ಕೊನೆಯ ದಿನಾಂಕ : 04-09-2021

    ಶುಲ್ಕ : ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳಿಗೆ ರೂ.100/- , ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
    ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಎಸ್ ಬಿಐ ಚಲನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಸಲ್ಲಿಸಬಹುದು.

    ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ ‌ 23 ವರ್ಷ ವಯೋಮಿತಿ ಮೀರಿರಬಾರದು.

    ವಿದ್ಯಾರ್ಹತೆ : ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

    ಆನ್ಲೈನ್ ಅಪ್ಲಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ಹೆಚ್ಚಿನ ವಿವರಗಳಿಗಾಗಿ ಈ ನೋಟಿಫಿಕೇಶನ್ ಕ್ಲಿಕ್ ಮಾಡಿ

  • SSC ಸೆಲೆಕ್ಷನ್ ಪೋಸ್ಟ್ : ದಾಖಲೆಗಳನ್ನು ಸಲ್ಲಿಸಲು ಅವಧಿ ವಿಸ್ತರಣೆ

    SSC ಸೆಲೆಕ್ಷನ್ ಪೋಸ್ಟ್ : ದಾಖಲೆಗಳನ್ನು ಸಲ್ಲಿಸಲು ಅವಧಿ ವಿಸ್ತರಣೆ

    ಸಿಬ್ಬಂದಿ ನೇಮಕಾತಿ ಆಯೋಗವು, 2020 ನೇ ಸಾಲಿನ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ ಎಸ್ ಸಿ) ಸೆಲೆಕ್ಷನ್ ಪೋಸ್ಟ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಲು ಅವಧಿಯನ್ನು ವಿಸ್ತರಿಸಿದೆ.

    ಎಪ್ರಿಲ್ 30 ರವರೆಗೆ ದಾಖಲೆಗಳನ್ನು ಸಲ್ಲಿಸಲು ಅವಧಿ ನೀಡಲಾಗಿತ್ತು. ಪ್ರಸ್ತುತ ಮೇ.31 ರವರೆಗೆ ಅವಧಿಯನ್ನು ವಿಸ್ತರಿಸಿದೆ.

    ಕೋವಿಡ್ ನ ಎರಡನೇ ಅಲೆ ಪರಿಣಾಮದಿಂದ ಎಸ್ ಎಸ್ ಸಿ ಯು ದಾಖಲೆಗಳನ್ನು ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿದೆ.

    ದಾಖಲೆಗಳನ್ನು ನೀಡುವ ಕುರಿತು ಅಧಿಕೃತ ನೋಟಿಸನ್ನು ಅಭ್ಯರ್ಥಿಗಳು ಸ್ಟಾಫ್ ಸೆಲೆಕ್ಷನ್ ಕಮಿಷನ್ ವೆಬ್‌ಸೈಟ್‌ ಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

    ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಎಸ್ ಎಸ್ ಸಿ ಜೆ ಇ ಅಂತಿಮ ಉತ್ತರಗಳು ಪ್ರಕಟ

    ಎಸ್ ಎಸ್ ಸಿ ಜೆ ಇ ಅಂತಿಮ ಉತ್ತರಗಳು ಪ್ರಕಟ

    ಸ್ಟಾಫ್ ಸೆಲೆಕ್ಷನ್ ಕಮಿಶನ್ ಎಸ್ ಎಸ್ ಸಿ ಜೆ ಇ 2019 ನೇ ಸಾಲಿನ‌ ಪರೀಕ್ಷೆಯ ಅಂತಿಮ ಸರಿಯುತ್ತರಗಳನ್ನು ಪ್ರಕಟಿಸಿದೆ. ಈ ಪರೀಕ್ಷೆ ಬರೆದ ಅಭ್ಯರ್ಥಿಗಳು ಕೀ ಉತ್ತರಗಳು ಮತ್ತು ಪ್ರಶ್ನೆ ಪತ್ರಿಕೆಗಳನ್ನು ssc.nic.in ಗೆ ಭೇಟಿ ನೀಡಿ ಪಡೆಯಬಹುದು.

    ಎಸ್ ಎಸ್ ಸಿ ಜೆಇ 2019, ಪರೀಕ್ಷೆ 1 ಅಂತಿಮ‌ ಕೀ ಉತ್ತರಗಳನ್ನು ಮಾರ್ಚ್ 19,2021 ರ ವರೆಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

    ಪೇಪರ್ -1 ಪರೀಕ್ಷೆಯು ಸಿವಿಲ್, ಕ್ವಾಂಟಿಟಿ, ಸರ್ವೇಯಿಂಗ್, ಕ್ರಾಂಟ್ರ್ಯಾಕ್ಟ್, ಮೆಕ್ಯಾನಿಕಲ್,ಎಲೆಕ್ಟ್ರಿಕಲ್ ಹುದ್ದೆಗಳಿಗೆ ನಡೆಸಿತ್ತು.

    ಒಟ್ಟು 5661 ಅಭ್ಯರ್ಥಿಗಳು ಎಸ್ ಎಸ್ ಸಿ ಜೆಇ ವಿವರಣಾತ್ಮಕ ಪೇಪರ್ -2 ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಈ ಪರೀಕ್ಷೆಯು ಮಾರ್ಚ್ 21, 2021 ರಂದು ನಡೆಸಲು ತೀರ್ಮಾನಿಸಿದೆ.