Tag: Sarakari Jobs in Kannada

  • CSB Recruitment 2024: ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ; ಅರ್ಜಿ ಆಹ್ವಾನ

    CSB Recruitment 2024: ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ; ಅರ್ಜಿ ಆಹ್ವಾನ

    CSB Recruitment 2024: ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ತನ್ನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 122 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಿಎಸ್‌ಬಿ ಯಲ್ಲಿ ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಯ ಮಾನದಂಡಗಳನ್ನು ಪೂರೈಸುವವರು, ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬಹುದು.

    ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಕೆಲಸ ಹುಡುಕುವವರು ಈ ಉದ್ಯೋಗದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಕೇಂದ್ರ ಸರಕಾರದ ಉದ್ಯೋಗ ಹುಡುಕುವವರಿಗೆ ಇದೊಂದು ಸುವರ್ಣಾವಕಾಶ. ಈ ಹುದ್ದೆಗೆ 31-Mar-2024 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 24-02-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-03-2024

    ಹುದ್ದೆಗಳ ವಿವರ:
    ಹುದ್ದೆ ಹೆಸರು: ಸೈಂಟಿಸ್ಟ್‌ ಬಿ ಹುದ್ದೆಗೆ ಅರ್ಜಿಗಳನ್ನು ಸೆಂಟ್ರಲ್ ಸಿಲ್ಕ್‌ ಬೋರ್ಡ್‌ ‌ಸಂಸ್ಥೆ ಅರ್ಜಿಯನ್ನು ಆಹ್ವಾನಿಸಿದೆ.
    ಹುದ್ದೆ ಸಂಖ್ಯೆ: ಒಟ್ಟು 122 ಹುದ್ದೆಗಳು ಖಾಲಿ ಇದೆ.

    ವೇತನ: ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.56,100-ರೂ.1,77,500/- ವೇತನ ದೊರಕಲಿದೆ.

    ವಿದ್ಯಾರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ವಿಜ್ಞಾನ/ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಸೆಂಟ್ರಲ್ ಸಿಲ್ಕ್ ಬೋರ್ಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯೋಮಿತಿ 35 ವರ್ಷ ಮೀರಿರಬಾರದು. ಸಂಸ್ಥೆಯ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.

    ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • BEL Jobs: ಬಿಇಎಲ್‌ ಕಂಪನಿಯಲ್ಲಿ 59 ಹುದ್ದೆಗಳ ನೇಮಕಾತಿ- ಕಂಪ್ಲೀಟ್‌ ವಿವರ ಇಲ್ಲಿದೆ

    BEL Jobs: ಬಿಇಎಲ್‌ ಕಂಪನಿಯಲ್ಲಿ 59 ಹುದ್ದೆಗಳ ನೇಮಕಾತಿ- ಕಂಪ್ಲೀಟ್‌ ವಿವರ ಇಲ್ಲಿದೆ

    BEL Recruitment 2024: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 59 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗಳ ಪೋಸ್ಟಿಂಗ್ ಕಾರವಾರ – ಗುವಾಹಟಿ, ಬೆಂಗಳೂರು-ಗುವಾಹಟಿ ಸರ್ಕಾರದಲ್ಲಿ ನಡೆಯಲಿದೆ. ಹಿರಿಯ ಸಹಾಯಕ ಇಂಜಿನಿಯರ್‌ ಹುದ್ದೆಗಳು, ಹಾಗೂ ಫೀಲ್ಡ್‌ ಆಪರೇಷನ್‌ ಇಂಜಿನಿಯರ್‌, ಸೀನಿಯರ್‌ ಫೀಲ್ಡ್‌ ಆಪರೇಷನ್‌ ಹುದ್ದೆಗಳು ಖಾಲಿ ಇದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 13-March-2024 ಹಾಗೂ 20-Mar-2024 ರಂದು ಅಥವಾ ಮೊದಲು ಆನ್‌ಲೈನ್‌, ಹಾಗೂ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    ಹುದ್ದೆಗಳ ವಿವರ:
    ಫೀಲ್ಡ್‌ ಆಪರೇಷನ್‌ ಇಂಜಿನಿಯರ್‌- 29ಹುದ್ದೆಗಳು, ಸೀನಿಯರ್‌ ಫೀಲ್ಡ್‌ ಆಪರೇಷನ್‌ ಇಂಜಿನಿಯರ್‌ ಹುದ್ದೆಗಳು – 6 ಖಾಲಿ ಇದ್ದು, ಒಟ್ಟು 35 ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರು-ಗುವಾಹಟಿ ಪೋಸ್ಟಿಂಗ್‌ ಮಾಡಲಾಗುವುದು.
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 28-02-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-03-2024
    ಫೀಲ್ಡ್‌ ಅಪರೇಷನ್‌ ಇಂಜಿನಿಯರ್‌ ಹುದ್ದೆಗೆ ಅರ್ಜಿ ಸಲ್ಲುಸವವರು ಆನ್‌ಲೈನ್‌ ಮೂಲಕ ಅಲ್ಲಿ ನೀಡಲಾದ ವೆಬ್‌ಸೈಟ್‌ ಲಿಂಕ್‌ ಮೂಲಕ, ಕೇಳಿದ ಮಾಹಿತಿಯನ್ನು ಭರ್ತಿ ಮಾಡಿ, ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬೇಕು.

    ಹಿರಿಯ ಸಹಾಯಕ ಇಂಜಿನಿಯರ್‌ ಹುದ್ದೆಗಳು ಖಾಲಿ ಇದ್ದು, ಒಟ್ಟು 24 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾರವಾರ-ಗುವಾಹಟಿಯಲ್ಲಿ ಪೋಸ್ಟಿಂಗ್‌ ಆಗಲಿದೆ. ಹಿರಿಯ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಸ್ವಯಂ ದೃಢೀಕರಿಸಿದ ದಾಖಲೆಯೊಂದಿಗೆ, Assistant Manager-Human Resources, Bharat Electronics Limited, Military Communication & NWCS – SBU, Jalahalli Post, Bengaluru – 560013 ಇಲ್ಲಿಗೆ ತಲುಪುವಂತೆ 20-Mar-2024 ರೊಳಗ ಅರ್ಜಿ ಸಲ್ಲಿಸಬೇಕು.

    ಒಟ್ಟು 59 ಹುದ್ದೆಗಳು ಖಾಲಿ ಇದೆ.

    ವೇತನ: ಹಿರಿಯ ಫೀಲ್ಡ್ ಆಪರೇಷನ್ ಇಂಜಿನಿಯರ್ ರೂ.80000/-, ಫೀಲ್ಡ್ ಆಪರೇಟಿಂಗ್ ಇಂಜಿನಿಯರ್ ರೂ.60000/- ಸೀನಿಯರ್‌ ಅಸಿಸ್ಟೆಂಟ್‌ ಇಂಜಿನಿಯರ್‌ ಹುದ್ದೆಗೆ ರೂ.30000-120000/- ವೇತನವಿರಲಿದೆ.

    ವಯೋಮಿತಿ: ಹಿರಿಯ ಫೀಲ್ಡ್ ಆಪರೇಷನ್ ಇಂಜಿನಿಯರ್ 45 ವರ್ಷ ಗರಿಷ್ಠ, ಫೀಲ್ಡ್ ಆಪರೇಷನ್ ಇಂಜಿನಿಯರ್ 40 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿದೆ.
    OBC (NCL) ಅಭ್ಯರ್ಥಿಗಳು: 03 ವರ್ಷಗಳು, SC/ST ಅಭ್ಯರ್ಥಿಗಳು: 05 ವರ್ಷಗಳು, PwBD ಅಭ್ಯರ್ಥಿಗಳು: 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನಿಯಮಾನುಸಾರ ನೀಡಲಾಗಿದೆ. ಸೀನಿಯರ್‌ ಅಸಿಸ್ಟೆಂಟ್‌ ಇಂಜಿನಿಯರ್‌ ಹುದ್ದೆಗೆ 50 ವರ್ಷಗಳ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಇಲ್ಲಿ OBC ಅಭ್ಯರ್ಥಿಗಳು: 03 ವರ್ಷಗಳು, SC/ST ಅಭ್ಯರ್ಥಿಗಳು: 05 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಹಿರಿಯ ಫೀಲ್ಡ್ ಆಪರೇಷನ್ ಇಂಜಿನಿಯರ್, ಫೀಲ್ಡ್ ಆಪರೇಷನ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರ ಅರ್ಜಿ ಶುಲ್ಕ ಈ ರೀತಿ ಇದೆ
    SC/ST/PwBD ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಇತರ ಎಲ್ಲಾ ಅಭ್ಯರ್ಥಿಗಳು: ರೂ.450/- ಅರ್ಜಿ ಶುಲ್ಕ ಪಾವತಿ ಮಾಡಬೇಕು. SBI ಕಲೆಕ್ಟ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • NALCO Recruitment 2024: 277 ಗ್ರಾಜ್ಯುಯೇಟ್‌ ಇಂಜಿನಿಯರ್‌ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

    NALCO Recruitment 2024: 277 ಗ್ರಾಜ್ಯುಯೇಟ್‌ ಇಂಜಿನಿಯರ್‌ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

    NALCO Careers: ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ (NALCO), ನವರತ್ನ ಸೆಂಟ್ರಲ್ ಪಿಎಸ್‌ಯು ಮತ್ತು ಏಷ್ಯಾದ ಅತಿದೊಡ್ಡ ಸಂಯೋಜಿತ ಅಲ್ಯೂಮಿನಾ-ಅಲ್ಯೂಮಿನಿಯಂ ಕಾಂಪ್ಲೆಕ್ಸ್‌ಗಳಲ್ಲಿ ಒಂದು. NALCO ಮೆಕ್ಯಾನಿಕಲ್ ವಿಭಾಗಗಳಲ್ಲಿ ಗ್ರಾಜುಯೇಟ್ ಇಂಜಿನಿಯರ್ ಟ್ರೈನಿಗಳಾಗಿ (GET ಗಳು) ಸಂಸ್ಥೆಗೆ ಸೇರಲು ಆಸಕ್ತರಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಧಿಸೂಚನೆಯ ಪ್ರಕಾರ ಯುವ ಗ್ರಾಜುಯೇಟ್ ಇಂಜಿನಿಯರ್‌ಗಳಿಗೆ ಉದ್ಯೋಗದ ಭರವಸೆಯನ್ನು ನೀಡಿದೆ.

    ಒಟ್ಟು 277 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಎಲೆಕ್ಟ್ರಿಕಲ್, ಇನ್ಸ್ಟ್ರುಮೆಂಟೇಶನ್, ಮೆಟಲರ್ಜಿ, ಕೆಮಿಕಲ್ ಮತ್ತು ಕೆಮಿಸ್ಟ್ರಿ ಈ ವಿಭಾಗಗಳಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 04-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-04-2024

    ಹುದ್ದೆಯ ಹೆಸರು: ಗ್ರಾಜ್ಯುಯೇಟ್‌ ಇಂಜಿನಿಯರ್‌ ಟ್ರೈನಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 277 ಹುದ್ದೆಗಳು ಖಾಲಿ ಇದೆ.

    ವಿದ್ಯಾರ್ಹತೆ: ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿವಿಧ ಬ್ರ್ಯಾಂಚ್‌ಗಳಲ್ಲಿ ಇಂಜಿನಿಯರಿಂಗ್‌ ಪದವಿ/ಕೆಮಿಸ್ಟ್ರಿ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆ ಹೊದಿರಬೇಕು.

    ಯಾವ ಪೋಸ್ಟ್‌ಗೆ ಎಷ್ಟು ಹುದ್ದೆ ಸಂಖ್ಯೆ?
    ಮೆಕ್ಯಾನಿಕಲ್‌-127 ಹುದ್ದೆಗಳು
    ಎಲೆಕ್ಟ್ರಿಕಲ್‌ -100 ಹುದ್ದೆಗಳು
    ಇನ್ಸ್‌ಟ್ರುಮೆಂಟೇಷನ್‌ – 20 ಹುದ್ದೆಗಳು
    ಮೆಟಾಲುರ್ಜಿ- 10 ಹುದ್ದೆಗಳು
    ಕೆಮಿಕಲ್‌ – 13 ಹುದ್ದೆಗಳು
    ಕೆಮಿಸ್ಟ್ರಿ- 7 ಹುದ್ದೆಗಳು

    ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ನಿಯಮದಂತೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ವಯೋಮಿತಿ ಸಡಿಲಿಕೆ ಇದೆ.

    ಅರ್ಜಿ ಶುಲ್ಕ: ರೂ.500 ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ, ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ/ಮಾಜಿ ಸೈನಿಕ/ಡಿಪಾರ್ಟ್‌ಮೆಂಟಲ್‌ ಅಭ್ಯರ್ಥಿಗಳು ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿ ಮಾಡಬೇಕು.

    ಅಭ್ಯರ್ಥಿಗಳು ಅರ್ಜಿಸಲ್ಲಿಸಬೇಕಾದಾಗ ಸಲ್ಲಿಸಬೇಕಾದ ದಾಖಲೆಗಳು ಯಾವುದು?
    SSLC ಅಂಕಪಟ್ಟಿ, ಆಧಾರ್‌ಕಾರ್ಡ್‌, ಇಂಜಿನಿಯರಿಂಗ್‌ ಪದವಿ ಪಾಸ್‌ ಸರ್ಟಿಫಿಕೇಟ್‌, ಸಹಿ ಸ್ಕ್ಯಾನ್‌ ಕಾಪಿ, ಜಾತಿ ಪ್ರಮಾಣ ಪತ್ರ, ಇತರೆ ದಾಖಲೆಗಳು.

    ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಶೈಕ್ಷಣಿಕ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗುವುದು. ನಂತರ ಸಂದರ್ಶನ, ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • BSNL Recruitment 2024: 558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬಿಎಸ್‌ಎನ್‌ಎಲ್-‌ ತಿಂಗಳಿಗೆ 50ಸಾವಿರಕ್ಕಿಂತಲೂ ಹೆಚ್ಚು ಸಂಬಳ

    BSNL Recruitment 2024: 558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬಿಎಸ್‌ಎನ್‌ಎಲ್-‌ ತಿಂಗಳಿಗೆ 50ಸಾವಿರಕ್ಕಿಂತಲೂ ಹೆಚ್ಚು ಸಂಬಳ

    BSNL Recruitment 2024: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಶೀಘ್ರದಲ್ಲೇ ಈ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸುವ ದಿನಾಂಕ ಬಿಡುಗಡೆಯಾಗಲಿದೆ. ಬಿಎಸ್‌ಎನ್‌ಎಲ್‌ ನಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಯನ್ನು ಮಾಡಲು ಇಚ್ಛಿಸುವವರು ಈ ಉದ್ಯೋಗದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಶೀಘ್ರದಲ್ಲೇ ಪ್ರಕಟವಾಗಲಿದೆ.
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಶೀಘ್ರದಲ್ಲೇ ಪ್ರಕಟವಾಗಲಿದೆ.

    ಹುದ್ದೆಗಳ ವಿವರ;
    ಹುದ್ದೆಯ ಹೆಸರು: ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (BSNL) ನಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆಯ ಹೆಸರು ಮತ್ತು ಸಂಖ್ಯೆ:
    ಟೆಲಿಕಾಂ ಕಾರ್ಯಾಚರಣೆಗಳು- 450 ಹುದ್ದೆಗಳು
    ಹಣಕಾಸು – 84 ಹುದ್ದೆಗಳು
    ನಾಗರಿಕ – 13 ಹುದ್ದೆಗಳು
    ಎಲೆಕ್ಟ್ರಿಕಲ್- 11 ಹುದ್ದೆಗಳು
    ಹುದ್ದೆ ಸಂಖ್ಯೆ: ಒಟ್ಟು 558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ವೇತನ: ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.24900-50500/- ಪ್ರತಿ ತಿಂಗಳು ವೇತನ ನೀಡಲಾಗುವುದು.

    ವಿದ್ಯಾರ್ಹತೆ: ಟೆಲಿಕಾಂ ಕಾರ್ಯಾಚರಣೆ- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು B.E ಅಥವಾ B.Tech in EEE/ECE/CSE/IT/Instrumentation Engineering ತೇರ್ಗಡೆ ಹೊಂದಿರಬೇಕು.
    ಹಣಕಾಸು- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು CA, CMA ಮಾಡಿಬೇಕು.
    ಸಿವಿಲ್- ಈ ಹುದ್ದೆಗೆ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್ ಮಾಡಿರಬೇಕು
    ಎಲೆಕ್ಟ್ರಿಕಲ್: ಈ ಹುದ್ದೆಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

    ವಯೋಮಿತಿ: ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 21 ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.

    ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • ONGC Recruitment 2024: ಒಎನ್‌ಜಿಸಿಯಲ್ಲಿದೆ ಉದ್ಯೋಗಾವಕಾಶ; ಹುದ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ

    ONGC Recruitment 2024: ಒಎನ್‌ಜಿಸಿಯಲ್ಲಿದೆ ಉದ್ಯೋಗಾವಕಾಶ; ಹುದ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ

    ONGC Recruitment 2024: ONGC ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು 25 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಜಿಯೋಫಿಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು ಭರ್ತಿ ಮಾಡಲು ಆಹ್ವಾನಿಸಿದ ಖಾಲಿ ಹುದ್ದೆಗಳಿಗೆ ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಮಾಡುವವರು ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು 06-Mar-2024 ರಂದು ಅಥವಾ ಮೊದಲು ಆನ್‌ಲೈನ್‌ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29-02-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-03-2024
    ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಸಂದರ್ಶನಕ್ಕಾಗಿ ಪ್ರವೇಶ ಕಾರ್ಡ್‌ನ ವಿತರಣೆಯ ದಿನಾಂಕ: 07-ಮಾರ್ಚ್-2024
    ಸಂದರ್ಶನದ ದಿನಾಂಕ: 10ನೇ ಮತ್ತು 11ನೇ ಮಾರ್ಚ್ 2024
    ಫಲಿತಾಂಶಗಳ ಘೋಷಣೆಯ ತಾತ್ಕಾಲಿಕ ದಿನಾಂಕ: 13-ಮಾರ್ಚ್-2024

    ಹುದ್ದೆಗಳ ವಿವರ:
    ಹುದ್ದೆ : ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ -22 ಪೋಸ್ಟ್‌, ಜಿಯೋಫಿಸಿಸ್ಟ್-3 ಪೋಸ್ಟ್‌ಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC)ವು ಒಟ್ಟು 25 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

    ವೇತನ: ಮೇಲೆ ತಿಳಿಸಿದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.60000-180000/- ರವರೆಗೆ ವೇತನ ದೊರಕಲಿದೆ.

    ವಿದ್ಯಾರ್ಹತೆ: ಜಿಯೋಫಿಸಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂ.ಟೆಕ್, ಸ್ನಾತಕೋತ್ತರ ಪದವಿ ಮಾಡಿಬೇಕು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್: ಬಿ.ಇ ಅಥವಾ ಬಿ.ಟೆಕ್ ಇನ್ EEE/ಇನ್‌ಸ್ಟ್ರುಮೆಂಟೇಶನ್/ಮೆಕ್ಯಾನಿಕಲ್/ಪೆಟ್ರೋಲಿಯಂ

    ವಯಸ್ಸಿನ ಮಿತಿ: ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು 30 ವರ್ಷ. ಈ ವಯಸ್ಸನ್ನು ಮೀರಿರಬಾರದು. OBC (NCL) ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, PwBD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಎಸ್‌ಸಿ/ಎಸ್‌ಟಿ/PwBD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. GEN/EWS/OBC ಅಭ್ಯರ್ಥಿಗಳಿಗೆ ರೂ.1000 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ತೀಗಳು ಆನ್‌ಲೈನ್‌ ಮೂಲಕ ಮಾತ್ರವೇ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: GATE 2023ಯ ಮಾರ್ಕ್ಸ್‌, ಕ್ವಾಲಿಫಿಕೇಶನ್‌, ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

  • KPSC Job: ಕೆಪಿಎಸ್‌ಸಿ ಇಂದ 364 ಭೂಮಾಪಕರ ಹುದ್ದೆಗೆ ಅರ್ಜಿ ಆಹ್ವಾನ

    KPSC Job: ಕೆಪಿಎಸ್‌ಸಿ ಇಂದ 364 ಭೂಮಾಪಕರ ಹುದ್ದೆಗೆ ಅರ್ಜಿ ಆಹ್ವಾನ

    Karnataka SSLR Recruitment 2024: ಕರ್ನಾಟಕ ಲೋಕಸೇವಾ ಆಯೋಗವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 364 ಲ್ಯಾಂಡ್‌ ಸರ್ವೇಯರ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಈ ಕೆಳಗೆ ನೀಡಲಾದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಮಾಡಲು ಇಚ್ಛಿಸುವವರು ಈ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 10-Apr-2024 ರಂದು ಅಥವಾ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 11-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-04-2024
    ಭೂಮಾಪಕರ (HK) ಹುದ್ದೆಗಳಿಗೆ ಕನ್ನಡ ಭಾಷಾ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 06-Jul-2024
    ಭೂಮಾಪಕರ (HK) ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 07-Jul-2024
    ಭೂಮಾಪಕರ (RPC) ಹುದ್ದೆಗಳಿಗೆ ಕನ್ನಡ ಭಾಷಾ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 20-ಜುಲೈ-2024
    ಭೂಮಾಪಕರ (RPC) ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 21-ಜುಲೈ-2024

    ಹುದ್ದೆಯ ಈ ಕೆಳಗೆ ನೀಡಲಾಗಿದೆ.
    ಭೂಮಾಪಕರ ಹುದ್ದೆ:
    ಹೈದರಾಬಾದ್‌ -ಕರ್ನಾಟಕ ವೃಂದ (HK)-100
    ಉಳಿಕೆ ಮೂಲ ವೃಂದ (RPC)-264

    ಶೈಕ್ಷಣಿಕ ಅರ್ಹತೆ:
    ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ ITI, 12th, ಡಿಪ್ಲೊಮಾ, B.E ಅಥವಾ B.Tech ಸಿವಿಲ್ ಇಂಜಿನಿಯರಿಂಗ್ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ, ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
    CAT-2ಎ/2ಬಿ/3ಎ/3ಬಿ- 03 ವರ್ಷ, SC/ST/Cat-1- 05 ವರ್ಷ, PWD/ವಿಧವೆ- 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: SC/ST/Cat-I/PWD ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಮಾಜಿ ಸೈನಿಕ ಅಭ್ಯರ್ಥಿಗಳು: ರೂ.50/-, CAT-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: ರೂ.300, ಸಾಮಾನ್ಯ ಅಭ್ಯರ್ಥಿಗಳು: ರೂ.600/- ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಆನ್‌ಲೈನ್‌ ಮೂಲಕ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಸೂಚಿಸಲಾಗಿದೆ.

    ವೇತನ: ಅಭ್ಯರ್ಥಿಗಳಿಗೆ ಮಾಸಿಕ ರೂ.23,500-ರೂ.47,650 ಶ್ರೇಣಿಯಲ್ಲಿ ವೇತನ ನೀಡಲಾಗುವುದು.

    ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಲಿಂಕ್‌ಗೆ ಕ್ಲಿಕ್‌ ಮಾಡಿ
    ಭೂ ಮಾಪಕ (HK), ಭೂ ಮಾಪಕ (RPC) ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ