Tag: Recruitment 2024

  • Indian Airforce Recruitment 2024: ಅಗ್ನಿವೀರ್‌ ವಾಯು ಸಂಗೀತಗಾರರ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ

    Indian Airforce Recruitment 2024: ಅಗ್ನಿವೀರ್‌ ವಾಯು ಸಂಗೀತಗಾರರ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ

    Airforce Agniveer Musician Recruitment 2024: ಏರ್‌ಫೋರ್ಸ್‌ ಅಗ್ನಿವೀರ್‌ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಏರ್‌ಫೋರ್ಸ್‌ ಅಗ್ನಿವೀರ್‌ ವಾಯು ಸಂಗೀತಗಾರರ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು ವಾಯುಪಡೆ ಕೇಂದ್ರದಲ್ಲಿ ಕೂಡಾ ನೇಮಕಾತಿ ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಕೆಗೆ ಸುವರ್ಣಾವಕಾಶ ಎಂದೇ ಹೇಳಬಹುದು. ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿದೆ.

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22-05-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-06-2024

    ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 17.5 ವರ್ಷ ಗರಿಷ್ಠ 22 ವರ್ಷ ಎಂದು ನಿಗದಿಪಡಿಸಲಾಗಿದೆ.

    ಅರ್ಜಿ ಶುಲ್ಕ: ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್‌ ರೂ.100/-, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ರೂ.100 ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ನೆಟ್‌ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ವಾಲೆಟ್‌ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.

    ಅರ್ಹತೆ: ಪುರುಷ/ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರು.

    ಅರ್ಜಿ ನಮೂನೆಯು ಜಾಯಿನ್‌ ಇಂಡಿಯನ್‌ ಏರ್‌ಫೋರ್ಸ್‌ ಅಗ್ನಿವೀರ್‌ ವಾಯು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬೇಕು.

    ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಇಲ್ಲಿ ನೀಡಲಾಗಿದ್ದು, ಅಭ್ಯರ್ಥಿಗಳ ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬೇಕು.

  • ICF Chennai Recruitment 2024: 1010 ಅಪ್ರೆಂಟಿಸ್‌ ಹುದ್ದೆಗಳು;10,ITI ಪಾಸಾದವರು ಈ ಕೂಡಲೇ ಅರ್ಜಿ ಸಲ್ಲಿಸಿ

    ICF Chennai Recruitment 2024: 1010 ಅಪ್ರೆಂಟಿಸ್‌ ಹುದ್ದೆಗಳು;10,ITI ಪಾಸಾದವರು ಈ ಕೂಡಲೇ ಅರ್ಜಿ ಸಲ್ಲಿಸಿ

    Indian Railway ICF Recruitment 2024: ಚೆನ್ನೈನಲ್ಲಿರುವ ಭಾರತೀಯ ರೈಲ್ವೇಯ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿಯು ತನ್ನಲ್ಲಿರುವ ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ವಿವಿಧ ಇಂಜಿನಿಯರಿಂಗ್‌ ಟ್ರೇಡ್‌ಗಳಲ್ಲಿ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿದ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಸಾವಿರಾರು ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್‌ 21, 2024 ಕೊನೆಯ ದಿನಾಂಕವಾಗಿದ್ದು, ಅದರ ಮೊದಲು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ.

    ಹುದ್ದೆಯ ಕುರಿತ ಹೆಚ್ಚಿನ ವಿವರ ಇಲ್ಲಿದೆ;
    1010 ಅಪ್ರೆಂಟಿಸ್‌ಶಿಪ್‌ ಹುದ್ದೆಯನ್ನು ಎರಡು ವಿಭಾಗಗಳಾಗಿ ಮಾಡಲಾಗಿದೆ. ಇದರಲ್ಲಿ ಫ್ರೆಶರ್ಸ್‌ ಮತ್ತು ಎಕ್ಸ್‌ ಐಟಿಐ ಟ್ರೇಡ್‌ ಅಪ್ರೆಂಟಿಸ್‌ ಎಂದು ವಿಂಗಡಿಸಲಾಗಿದೆ.

    ಹುದ್ದೆಗಳ ಹೆಸರು, ಸಂಖ್ಯೆ ಇಲ್ಲಿದೆ;
    ಕಾರ್ಪೆಂಟರ್​​ – 90 ಹುದ್ದೆಗಳು
    ಎಲೆಕ್ಟ್ರಿಷಿಯನ್​ – 200 ಹುದ್ದೆಗಳು
    ಫಿಟ್ಟರ್​ – 260 ಹುದ್ದೆಗಳು
    ಮೆಕ್ಯಾನಿಕ್​ – 90 ಹುದ್ದೆಗಳು
    ಪೇಂಟರ್​​ – 90 ಹುದ್ದೆಗಳು
    ವೆಲ್ಡರ್​​ – 260 ಹುದ್ದೆಗಳು
    ಎಂಎಲ್​ಟಿ ರೇಡಿಯಾಲಜಿ – 5 ಹುದ್ದೆಗಳು
    ಎಂಎಲ್​ಟಿ ರೇಡಿಯಾಲಜಿ – 5 ಹುದ್ದೆಗಳು
    ಪಿಎಎಸ್​ಎಎ – 10 ಹುದ್ದೆಗಳು

    ಹುದ್ದೆಗಳ ಸಂಖ್ಯೆ: ಫ್ರೆಶರ್ಸ್‌ಗಳಿಗೆ 330 ಹುದ್ದೆಗಳಿದೆ. ಎಕ್ಸ್‌ ಐಟಿಐ ಹುದ್ದೆಗೆ 680 ಹುದ್ದೆಗಳು ಖಾಲಿ ಇದೆ.

    ಶೈಕ್ಷಣಿಕ ಅರ್ಹತೆ: ಫ್ರೆಶರ್ಸ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 50% ಅಂಕಗಳೊಂದಿಗೆ 10 ನೇ ತರಗತಿ ಪಾಸಾಗಿರಬೇಕು. ಜೊತೆಗೆ 10+2 ವಿಜ್ಞಾನ / ಗಣಿತದಲ್ಲಿ ತೇರ್ಗಡೆ ಹೊಂದಿರಬೇಕು.
    ಎಕ್ಸ್‌ ಐಟಿಐ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 50% (ಕನಿಷ್ಠ) ಅಂಕದೊಂದಿಗೆ 10 ನೇ ತರಗತಿ ತೇರ್ಗಡೆ ಹೊಂದಿರಬೇಕು. ಹಾಗೂ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣ ಪತ್ರ ಇರಬೇಕು.

    ಸ್ಟೈಫಂಡ್‌: 10ನೇ ತರಗತಿ ಉತ್ತೀರ್ಣರಾದವರಿಗೆ ರೂ.6000/-, 12ನೇ ತರಗತಿ ಪಾಸಾದವರಿಗೆ ರೂ.7000, ITI ಪಾಸಾದವರಿಗೆ ರೂ.7000 ಮಾಸಿಕ ಸ್ಟೈಫಂಡ್‌ ಪಡೆಯುತ್ತಾರೆ.

    ಅರ್ಜಿ ಸಲ್ಲಿಸುವುದು ಹೇಗೆ?
    ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲಿಗೆ ಹೆಸರು, ಇಮೇಲ್‌, ಫೋನ್‌ ಸಂಖ್ಯೆ ಹಾಗೂ ವೈಯಕ್ತಿಕ ವಿವರಗಳನ್ನು pb.icf.gov.in ನಲ್ಲಿ ICF ಚೆನ್ನೈನ ನೇಮಕಾತಿ ಪೋರ್ಟಲ್‌ನಲ್ಲಿ ನೋಂದಾಯಿಸಿ ಅರ್ಜಿ ಸಲ್ಲಿಸಬೇಕು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • Railway Recruitment 2024: ರೈಲ್ವೆಯಲ್ಲಿ ಭರ್ಜರಿ ನೇಮಕಾತಿ; ಲೋಕೋ ಪೈಲಟ್-ಟ್ರೈನ್‌ ಮ್ಯಾನೇಜರ್‌ ಹುದ್ದೆ; ಹೆಚ್ಚಿನ ವಿವರ ಇಲ್ಲಿದೆ

    Railway Recruitment 2024: ರೈಲ್ವೆಯಲ್ಲಿ ಭರ್ಜರಿ ನೇಮಕಾತಿ; ಲೋಕೋ ಪೈಲಟ್-ಟ್ರೈನ್‌ ಮ್ಯಾನೇಜರ್‌ ಹುದ್ದೆ; ಹೆಚ್ಚಿನ ವಿವರ ಇಲ್ಲಿದೆ

    RRC SER Recruitment 2024: ಆಗ್ನೇಯ ರೈಲ್ವೆಯು ಜಿಡಿಸಿಇ ಕೋಟಾದ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 1202 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಹಾಯಕ ಲೋಕೋ ಪೈಲಟ್‌ ಮತ್ತು ಟ್ರೈನ್‌ ಮ್ಯಾನೇಜರ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಜೂನ್‌ 12,2024 ಕೊನೆಯ ದಿನಾಂಕವಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಗ್ನೇಯ ರೈಲ್ವೆಯ ಸಾಮಾನ್ಯ ರೈಲ್ವೆ ಉದ್ಯೋಗಿಗಳು ಮಾತ್ರ ಜಿಡಿಸಿಇ ಕೋಟಾದ ಅಡಿಯಲ್ಲಿ ಈ ಹುದ್ದೆಗಳನ್ನು ಅರ್ಜಿ ಸಲ್ಲಿಸಬಹುದೆಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 13-05-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-06-2024

    ಹುದ್ದೆಯ ವಿವರ ಇಲ್ಲಿದೆ;
    ಸಹಾಯಕ ಲೋಕೋಪೈಲೆಟ್‌ (ಎಎಲ್‌ಪಿ)-827 ಹುದ್ದೆಗಳು ಖಾಲಿ ಇದೆ
    ಟ್ರೈನ್ ಮ್ಯಾನೇಜರ್‌ – 375 ಹುದ್ದೆಗಳು ಖಾಲಿ ಇದೆ.

    ಶೈಕ್ಷಣಿಕ ಅರ್ಹತೆ: ಸಹಾಯಕ ಲೋಕೋಪೈಲಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ತೇರ್ಗಡೆ ಹೊಂದಿರಬೇಕು. ಅಷ್ಟು ಮಾತ್ರವಲ್ಲದೇ ಸಂಬಂಧಿತ ಕ್ಷೇತ್ರಕ್ಕೆ ಕುರಿತಂತೆ ಐಟಿಐ ಪ್ರಮಾಣ ಪತ್ರವನ್ನು ಪಡೆದಿರಬೇಕು.
    ಟ್ರೈನಿ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವೀಧರರಾಗಿರಬೇಕು.

    ವಯೋಮಿತಿ: ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ. ಗರಿಷ್ಠ 42 ವರ್ಷ ಮೀರಿರಬಾರದು. ಒಬಿಸಿ/ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಯನ್ನು ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸಿಬಿಟಿ/ಆಲ್ಟಿಟ್ಯೂಡ್‌ ಟೆಸ್ಟ್‌/ಡಾಕ್ಯುಮೆಂಟ್‌ ವೆರಿಫಿಕೇಶನ್‌/ ಮೆಡಿಕಲ್‌ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಮೊದಲಿಗೆ RRC/SER ವೆಬ್‌ಸೈಟ್ www.rrcser.co.in ಗೆ ಹೋಗಿ ಮತ್ತು “GDCE- 2024 ONLINE/E-ಅಪ್ಲಿಕೇಶನ್” ಗಾಗಿ ಉಲ್ಲೇಖಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ.
    ನಂತರ “ಹೊಸ ನೋಂದಣಿ” ಮೇಲೆ ಕ್ಲಿಕ್ ಮಾಡಿ.
    ಮೂಲ ವಿವರಗಳನ್ನು ಭರ್ತಿ ಮಾಡಿ ಅಂದರೆ ಹೆಸರು, ಸಮುದಾಯ, DOB, ಉದ್ಯೋಗಿ ಐಡಿ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಹಾಕಿ.
    ಅನಂತರ ಅಭ್ಯರ್ಥಿಗೆ ನೋಂದಣಿ ಸಂಖ್ಯೆ ದೊರಕುತ್ತದೆ. ಮತ್ತು ಅದೇ ಸಂದೇಶವನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
    ನಂತರ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಅನಂತರ ಸಬ್‌ಮಿಟ್‌ ಬಟನ್‌ ಕ್ಲಿಕ್‌ ಮಾಡಿ.

  • Canara Bank: ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ; ಆಸಕ್ತರು ಈ ಕೂಡಲೇ ಅಪ್ಲೈ ಮಾಡಿ

    Canara Bank: ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ; ಆಸಕ್ತರು ಈ ಕೂಡಲೇ ಅಪ್ಲೈ ಮಾಡಿ

    Canara Bank Recruitment 2024: ಕೆನರಾ ಬ್ಯಾಂಕ್‌ನಲ್ಲಿ ಕೆಲಸ ಮಾಡಲು ಇಚ್ಛೆ ಪಡುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ಕೆನರಾ ಬ್ಯಾಂಕ್‌ ಖಾಲಿ ಇರುವ ಒಂದು ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದು, ಆಸಕ್ತರು ಈ ಕೆಳಗೆ ನೀಡಲಾದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಸೆಕ್ರೆಟರಿ-ಅಕೌಂಟ್ಸ್‌ ಮತ್ತು ಅಡ್ಮಿನಿಸ್ಟೇಷನ್‌ ಹುದ್ದೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಕೆನರಾ ಬ್ಯಾಂಕಿನ ಖಾತೆಗಳು ಮತ್ತು ಆಡಳಿತ ಪ್ರಕ್ರಿಯೆಯನ್ನು ನಿರ್ವಹಿಸಬೇಕು. ಅರ್ಜಿ ಸಲ್ಲಿಕೆಗೆ ಜೂನ್‌ 3, 2024 ಕೊನೆಯ ದಿನಾಂಕವಾಗಿದ್ದು, 12 ತಿಂಗಳ ಪ್ರೊಬೆಷನರಿ ಅವಧಿ ಇರಲಿದ್ದು, ಈ ಕೂಡಲೇ ಅರ್ಜಿ ಸಲ್ಲಿಸಿ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 03-06-2024

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ;
    ಸಂಸ್ಥೆ ಹೆಸರು: ಕೆನರಾ ಬ್ಯಾಂಕ್‌ ತನ್ನಲ್ಲಿ ಖಾಲಿ ಇರುವ ಸೆಕ್ರೆಟರಿ-ಅಕೌಂಟ್ಸ್‌ ಮತ್ತು ಅಡ್ಮಿನಿಸ್ಟ್ರೇಷನ್‌ (Secretary- Accounts and Administration) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ.

    ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 28 ವರ್ಷ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು, ಇತರ ವರ್ಗಗಳಿಗೆ 25 ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

    ವಿದ್ಯಾಭ್ಯಾಸ: ಬಿಕಾಂ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಜೊತೆಗೆ ಕಂಪ್ಯೂಟರ್‌ ಜ್ಞಾನದ ಅಗತ್ಯವಿರಬೇಕು.

    ಅನುಭವ: ಲೆಕ್ಕಪರಿಶೋಧಕ ಸಾಫ್ಟ್‌ವೇರ್‌ ಜ್ಞಾನದೊಂದಿಗೆ ಖಾತೆಗಳು ಮತ್ತು ಸಾಮಾನ್ಯ ಆಡಳಿತವನ್ನು ನಿರ್ವಹಿಸುವಲ್ಲಿ ಎರಡು ವರ್ಷಗಳ ಅನುಭವ ಇರಬೇಕು.

    ವೇತನ: ಮೇಲೆ ತಿಳಿಸಿದ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30000 ವೇತನ ಇರಲಿದೆ.

    ಅರ್ಜಿ ಶುಲ್ಕ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ರೂ.300 ಅರ್ಜಿ ಶುಲ್ಕವಿರಲಿದೆ. ಇತರೆ ಅಭ್ಯರ್ಥಿಗಳಿಗೆ ರೂ.500 ಅರ್ಜಿ ಶುಲ್ಕ ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಿ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ನೇರ ಸಂದರ್ಶದನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • 1000 VA Jobs:ಉದ್ಯೋಗಾಕಾಂಕ್ಷಿಗಳ ಗಮನಕ್ಕೆ; ಕೆಇಎ ಇಂದ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆ ಲಿಂಕ್‌ ಬಿಡುಗಡೆ

    1000 VA Jobs:ಉದ್ಯೋಗಾಕಾಂಕ್ಷಿಗಳ ಗಮನಕ್ಕೆ; ಕೆಇಎ ಇಂದ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆ ಲಿಂಕ್‌ ಬಿಡುಗಡೆ

    Karnataka Revenue Department Recruitment: ಕರ್ನಾಟಕ ಸರಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಹುದ್ದೆಗೆ ಸಂಬಂಧಿಸಿದ ತಯಾರಿ ಮಾಡಿಕೊಳ್ಳಬಹುದು. ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಕರ್ನಾಟಕದಲ್ಲಿ ಪೋಸ್ಟಿಂಗ್‌ ನಡೆಯಲಿದೆ. ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಎಪ್ರಿಲ್‌ 5, 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 04, 2024
    ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ: ಮೇ, 07, 2024

    ಹುದ್ದೆಯ ವಿವರ ಇಲ್ಲಿದೆ; ಉಳಿಕೆ ಮೂಲ ವೃಂದ- 869 ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ- 131 ಹುದ್ದೆಗಳು

    ವೇತನ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವವರಿಗೆ ಮಾಸಿಕ ರೂ.21,400-42000ರೂ. ವೇತನ ದೊರಕಲಿದೆ.

    ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (ಪ್ರವರ್ಗ-2ಎ/2ಬಿ/3ಎ/3ಬಿ) ಹುದ್ದೆಗೆ ಅಭ್ಯರ್ಥಿಗಳು ರೂ.750 ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳು ರೂ.500 ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
    (ಓಮ್ಮೆ ಪಾವತಿ ಮಾಡಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ)

    ವಿದ್ಯಾರ್ಹತೆ: ವಿದ್ಯಾರ್ಹತೆಯ ಕುರಿತ ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

    ವಯೋಮಿತಿ: ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ.
    ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
    ಪ್ರವರ್ಗ 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

    ಆಯ್ಕೆ ವಿಧಾನ: ಮೇಲ್ಕಂಡ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್‌ಲೈನ್‌ -ಒಎಂಆರ್‌ ಮಾದರಿ ಮೂಲಕ ಪರೀಕ್ಷೆ ನಡೆಸಲಾಗುವುದು.

    ಆನ್ಲೈನ್‌ ಅರ್ಜಿ ಸಲ್ಲಿಕೆ ವೇಳಾಪಟ್ಟಿಯ ನೋಟಿಫಿಕೇಶನ್‌

    ಅರ್ಜಿ ಸಲ್ಲಿಕೆಯ ನೇರ ಲಿಂಕ್‌

    ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯ ಈ ಲಿಂಕ್‌ ಕ್ಲಿಕ್‌ ಮಾಡಿ

  • CISF Recruitment 2024: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ  ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ಗಳ ನೇಮಕಾತಿ; 820 ಖಾಲಿ ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ

    CISF Recruitment 2024: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ಗಳ ನೇಮಕಾತಿ; 820 ಖಾಲಿ ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ

    CISF Recruitment 2024: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಖಾಲಿ ಹುದ್ದೆಗಳಿದ್ದು ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಗ್ರೇಡ್ ಅಥವಾ ಐದು ವರ್ಷಗಳ ಮೂಲ ತರಬೇತಿಯ ಅವಧಿಯನ್ನು ಒಳಗೊಂಡಂತೆ 5 ವರ್ಷಗಳ ನಿಯಮಿತ ಸೇವೆಯನ್ನು ಪೂರ್ಣಗೊಳಿಸಿದ ಹೆಡ್ ಕಾನ್ಸ್‌ಟೇಬಲ್/ಜಿಡಿ, ಕಾನ್‌ಸ್ಟೆಬಲ್/ಜಿಡಿ ಮತ್ತು ಕಾನ್‌ಸ್ಟೆಬಲ್/ಟ್ರೇಡ್ಸ್‌ಮೆನ್‌ ಮೂಲ ತರಬೇತಿಯ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಹಾಗೂ ಸೀಮಿತ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

    CISF ನಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಕಾರ್ಯನಿರ್ವಾಹಕ) 836 ಖಾಲಿ ಹುದ್ದೆಗಳನ್ನು (UR-649, SC- 125 ಮತ್ತು ST-62) ಭರ್ತಿ ಮಾಡಲು ಅರ್ಹ ಇಲಾಖಾ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರೀಯ ಕೈಗಾರಿಕಾ ಪಡೆ ಸೀಮಿತ ಇಲಾಖೆಯಲ್ಲಿ ಎಎಸ್‌ಐ ಹುದ್ದೆಗೆ 836 ಸ್ಥಾನಗಳಿವೆ. UR-649, SC- 125 ಮತ್ತು ST-62 ಹುದ್ದೆ ಮೀಸಲಿಡಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-02-2024. CISF ನೇಮಕಾತಿ ಅರ್ಜಿ 2024 ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ ಮೊದಲು ಅರ್ಜಿ ಶುಲ್ಕವನ್ನು ಪಾವತಿಸುವುದು ಬಹಳ ಮುಖ್ಯ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಸೂಚನೆಯನ್ನು ಪರಿಶೀಲನೆ ಮಾಡಬಹುದು

    ವಯೋಮಿತಿ: ಮೇಲೆ ತಿಳಿಸಿದ ಹುದ್ದೆಗಳಿಗೆ ಅಭ್ಯರ್ಥಿಗಳ ವಯೋಮಿತಿಯು 25 ವರ್ಷ ಮೀರಿರಬಾರದು. SC/ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. OBC ಅಭ್ಯರ್ಥಿಗಳಿಗೆ ಯಾವುದೇ ವಯೋಮಿತಿ ಸಡಿಲಿಕೆ ಅನ್ವಯಿಸುವುದಿಲ್ಲ ಏಕೆಂದರೆ OBC ವರ್ಗಕ್ಕೆ ಯಾವುದೇ ಹುದ್ದೆಯನ್ನು ಕಾಯ್ದಿರಿಸಲಾಗಿಲ್ಲ, OBC ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಗಳಾಗಿ ಅರ್ಜಿ ಸಲ್ಲಿಸಬಹುದು.

    ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು.

    ಅರ್ಜಿ ಸಲ್ಲಿಸುವುದು ಹೇಗೆ-
    ಅಭ್ಯರ್ಥಿಗಳು CISF ವೆಬ್‌ಸೈಟ್‌ಗೆ ಭೇಟಿ ನೀಡಿ, ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.