Tag: recruitment

  • CRPF Jobs: ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯಲ್ಲಿ ಉದ್ಯೋಗ; ನೇರ ಸಂದರ್ಶನ

    CRPF Jobs: ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯಲ್ಲಿ ಉದ್ಯೋಗ; ನೇರ ಸಂದರ್ಶನ

    CRPF Recruitment 2024: ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಪೋರ್ಸ್‌ ನೇಮಕಾತಿ ಮಾಡಲಿದ್ದು, ಇಲ್ಲಿ 03 ಖಾಲಿ ಹುದ್ದೆಗಳಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫಿಸಿಯೋಥೆರಪಿಸ್ಟ್‌ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ನೇರ ಸಂದರ್ಶನವು ದಿ.17-06-2024 ರಂದು ನಡೆಯಲಿದ್ದು, ಆಸಕ್ತರು ಭಾಗವಹಿಸಬಹುದು.

    ಹುದ್ದೆಯ ವಿವರ ಇಲ್ಲಿದೆ:
    ಹುದ್ದೆ ಸಂಖ್ಯೆ ಹೆಚ್ಚಿನ ವಿವರ: ಕೇಂದ್ರೀಯ ಮೀಸಲು ಪಡೆಯಲ್ಲಿ 03 ಹುದ್ದೆಗಳು ಖಾಲಿ ಇದ್ದು, ಫಿಸಿಯೋಥೆರಪಿಸ್ಟ್‌ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದ್ದು, ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.55000 ವೇತನವಿರಲಿದೆ.

    ವಿದ್ಯಾರ್ಹತೆ: ಮಾನ್ಯತೆ ಪಡೆದ ಭಾರತೀಯ ಅಥವಾ ವಿದೇಶಿ ವಿಶ್ವವಿದ್ಯಾಲಯದಿಂದ ಭೌತಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

    ವಯೋಮಿತಿ: ಫಿಸಿಯೋಥೆರಪಿಸ್ಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಗರಿಷ್ಠ 40 ವರ್ಷ ಮೀರಿರಬಾರದು.

    ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನವು ರೂ.55,000 ಇರುತ್ತದೆ.

    ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗೆ ಒಂದು ವರ್ಷದ ಪ್ರೊಬೆಷನರಿ ಪಿರಿಯೇಡ್‌ ಇರುತ್ತದೆ. ಇದನ್ನು ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಎರಡು ವರ್ಷಕ್ಕೆ ವಿಸ್ತರಣೆ ಮಾಡಲಾಗುವುದು.

    ನೇಮಕ ಸ್ಥಳ: ಎಸ್‌ಎಂಸಿ, ಜಿಸಿ ನವದೆಹಲ್ಲಿ ಈ ಹುದ್ದೆಗೆ ಆಯ್ಕೆಯಾದವರನ್ನು ಪೋಸ್ಟಿಂಗ್‌ ಮಾಡಲಾಗುವುದು. ಹಾಗೆನೇ ಜಿಸಿ, ಸೋನೆಪತ್‌, ಜಿಸಿ ಜಲಂಧರ್‌, ಜಿಸಿ ಕತ್ಗೊಡಮ್‌, ಜಿಸಿ ಜಮ್ಶೆಡ್‌ಪುರ, ಜಿಸಿ-1&2 ಅಜ್ಮೀರ್‌, ಜಿಸಿ ಕೇಂದ್ರೀತ ಕೇಂದ್ರ ಕ್ರೀಡಾ ತಂಡ ಹೆಚ್ಚಾಗಿ ಇರುವ ರಂಗಾರೆಡ್ಡಿ ಜಿಲ್ಲೆ, ಚಂಡೀಗಢ, ಹಾಗೂ ಇತರ ಸ್ಥಳಗಳಲ್ಲಿ ಕೆಲಸವಿರುತ್ತದೆ.

    ಅರ್ಜಿ ಸಲ್ಲಿಸಬೇಕಾದ ವಿಳಾಸ; ಅಭ್ಯರ್ಥಿಗಳು ಭರ್ತಿ ಮಾಡಿದ ದಾಖಲೆಗಳ ಜೊತೆ ಈ ಕೆಳಗೆ ನೀಡಿದ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಹಾಜರಿರಬೇಕು.
    ವಿಳಾಸ ಇಲ್ಲಿದೆ;
    Training Directorate,
    East Block No 10,
    Level 7, R K Puram,
    New Delhi, 110066
    ಸಂಪರ್ಕ ಸಂಖ್ಯೆ -011-20867225 ಇಲ್ಲಿ ದಿ.17-06-2024 ರಂದು ನೇರ ಸಂದರ್ಶನವಿರಲಿದೆ.
    ಅಭ್ಯರ್ಥಿಗಳು ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾದ ಲಿಂಕ್‌ ಕ್ಲಿಕ್‌ ಮೂಲಕ ಪಡೆದುಕೊಳ್ಳಬಹುದು.

  • Canara Bank: ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ; ಆಸಕ್ತರು ಈ ಕೂಡಲೇ ಅಪ್ಲೈ ಮಾಡಿ

    Canara Bank: ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ; ಆಸಕ್ತರು ಈ ಕೂಡಲೇ ಅಪ್ಲೈ ಮಾಡಿ

    Canara Bank Recruitment 2024: ಕೆನರಾ ಬ್ಯಾಂಕ್‌ನಲ್ಲಿ ಕೆಲಸ ಮಾಡಲು ಇಚ್ಛೆ ಪಡುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ಕೆನರಾ ಬ್ಯಾಂಕ್‌ ಖಾಲಿ ಇರುವ ಒಂದು ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದು, ಆಸಕ್ತರು ಈ ಕೆಳಗೆ ನೀಡಲಾದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಸೆಕ್ರೆಟರಿ-ಅಕೌಂಟ್ಸ್‌ ಮತ್ತು ಅಡ್ಮಿನಿಸ್ಟೇಷನ್‌ ಹುದ್ದೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಕೆನರಾ ಬ್ಯಾಂಕಿನ ಖಾತೆಗಳು ಮತ್ತು ಆಡಳಿತ ಪ್ರಕ್ರಿಯೆಯನ್ನು ನಿರ್ವಹಿಸಬೇಕು. ಅರ್ಜಿ ಸಲ್ಲಿಕೆಗೆ ಜೂನ್‌ 3, 2024 ಕೊನೆಯ ದಿನಾಂಕವಾಗಿದ್ದು, 12 ತಿಂಗಳ ಪ್ರೊಬೆಷನರಿ ಅವಧಿ ಇರಲಿದ್ದು, ಈ ಕೂಡಲೇ ಅರ್ಜಿ ಸಲ್ಲಿಸಿ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 03-06-2024

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ;
    ಸಂಸ್ಥೆ ಹೆಸರು: ಕೆನರಾ ಬ್ಯಾಂಕ್‌ ತನ್ನಲ್ಲಿ ಖಾಲಿ ಇರುವ ಸೆಕ್ರೆಟರಿ-ಅಕೌಂಟ್ಸ್‌ ಮತ್ತು ಅಡ್ಮಿನಿಸ್ಟ್ರೇಷನ್‌ (Secretary- Accounts and Administration) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ.

    ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 28 ವರ್ಷ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು, ಇತರ ವರ್ಗಗಳಿಗೆ 25 ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

    ವಿದ್ಯಾಭ್ಯಾಸ: ಬಿಕಾಂ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಜೊತೆಗೆ ಕಂಪ್ಯೂಟರ್‌ ಜ್ಞಾನದ ಅಗತ್ಯವಿರಬೇಕು.

    ಅನುಭವ: ಲೆಕ್ಕಪರಿಶೋಧಕ ಸಾಫ್ಟ್‌ವೇರ್‌ ಜ್ಞಾನದೊಂದಿಗೆ ಖಾತೆಗಳು ಮತ್ತು ಸಾಮಾನ್ಯ ಆಡಳಿತವನ್ನು ನಿರ್ವಹಿಸುವಲ್ಲಿ ಎರಡು ವರ್ಷಗಳ ಅನುಭವ ಇರಬೇಕು.

    ವೇತನ: ಮೇಲೆ ತಿಳಿಸಿದ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30000 ವೇತನ ಇರಲಿದೆ.

    ಅರ್ಜಿ ಶುಲ್ಕ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ರೂ.300 ಅರ್ಜಿ ಶುಲ್ಕವಿರಲಿದೆ. ಇತರೆ ಅಭ್ಯರ್ಥಿಗಳಿಗೆ ರೂ.500 ಅರ್ಜಿ ಶುಲ್ಕ ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಿ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ನೇರ ಸಂದರ್ಶದನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • NIACL Recruitment 2024: ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿಯಲ್ಲಿ 300 ಸಹಾಯಕರ ಹುದ್ದೆಗಳು; ಉತ್ತಮ ವೇತನ, ಫೆ.15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

    NIACL Recruitment 2024: ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿಯಲ್ಲಿ 300 ಸಹಾಯಕರ ಹುದ್ದೆಗಳು; ಉತ್ತಮ ವೇತನ, ಫೆ.15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

    NIACL Recruitment 2024: ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ 300 ಸಹಾಯಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಯಾವುದೇ ಇತರ ವಿಧಾನಗಳಿಂದ ಅರ್ಜಿ ಸಲ್ಲಿಕೆಯ ವಿಧಾನವನ್ನು ಸ್ವೀಕರಿಸಲಾಗುವುದಿಲ್ಲ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01-02-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-02-2024
    ಶ್ರೇಣಿ I ಆನ್‌ಲೈನ್ ಪರೀಕ್ಷೆ (ಪೂರ್ವಭಾವಿ ಪರೀಕ್ಷೆ): 02/03/2024 (ಶನಿವಾರ)
    ಶ್ರೇಣಿ II ಆನ್‌ಲೈನ್ ಪರೀಕ್ಷೆ (ಮುಖ್ಯ ಪರೀಕ್ಷೆ): ನಂತರ ತಿಳಿಸಲಾಗುವುದು
    ಕರೆ ಪತ್ರಗಳ ಡೌನ್‌ಲೋಡ್: ಪ್ರತಿ ಪರೀಕ್ಷೆಯ ದಿನಾಂಕಕ್ಕೆ 7 ದಿನಗಳ ಮೊದಲು (ತಾತ್ಕಾಲಿಕ) (ಪೂರ್ವಭಾವಿ ಪರೀಕ್ಷೆಗಳು ಮತ್ತು ಮುಖ್ಯ ಪರೀಕ್ಷೆ)

    ಹುದ್ದೆಗಳ ವಿವರ;
    ಹುದ್ದೆ; ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
    ಒಟ್ಟು ಹುದ್ದೆ: 300 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಖಾಲಿ ಹುದ್ದೆಗಳು ಇರುವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಯಾವುದು?
    ಆಂದ್ರಪ್ರದೇಶ-6 ಅಸ್ಸಾಮ್‌-8 ಚಂಡೀಗಢ-4, ಛತ್ತೀಸ್‌ಗಡ-10, ಡೆಲ್ಲಿ-23, ಗೋವಾ-1, ಗುಜರಾತ್‌-24, ಹರಿಯಾಣ-3, ಜಮ್ಮು ಕಾಶ್ಮೀರ-3, ಕರ್ನಾಟಕ-17, ಕೇರಳ-24, ಮಧ್ಯಪ್ರದೇಶ-9, ಮಹಾರಾಷ್ಟ್ರ-81, ಮಿಜೋರಾಂ-1, ಒಡಿಶಾ-8, ಪಂಜಾಬ್‌-7, ರಾಜಸ್ಥಾನ-5, ತಮಿಳುನಾಡು-32, ತೆಲಂಗಾಣ-6, ತ್ರಿಪುರ-3, ಉತ್ತರ ಪ್ರದೇಶ-14, ಉತ್ತರಖಂಡ-5, ಪಶ್ಚಿಮ ಬಂಗಾಳ-6

    ವಯೋಮಿತಿ: ಕನಿಷ್ಠ ವಯಸ್ಸು 21 ವರ್ಷಗಳು, ಗರಿಷ್ಠ ವಯಸ್ಸು: 01/01/2024 ರಂತೆ 30 ವರ್ಷಗಳು. ಅಭ್ಯರ್ಥಿಗಳು 02/01/1994 ಕ್ಕಿಂತ ಮೊದಲು ಮತ್ತು 01/01/2003 ಕ್ಕಿಂತ ನಂತರ ಹುಟ್ಟಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 3 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಆಯ್ಕೆ ವಿಧಾನ:
    ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ (ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ). ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳನ್ನು ಅಂತಿಮ ಆಯ್ಕೆಯ ಮೊದಲು ಪ್ರಾದೇಶಿಕ ಭಾಷಾ ಪರೀಕ್ಷೆಗೆ ಮತ್ತಷ್ಟು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

    ಅರ್ಜಿ ಶುಲ್ಕ;
    SC/ST/PwBD ಅಭ್ಯರ್ಥಿಗಳಿಗೆ ರೂ. 100/-
    ಇತರೆ ಎಲ್ಲಾ ಅಭ್ಯರ್ಥಿಗಳಿಗೆ ರೂ. 850/-

    ವೇತನ ಶ್ರೇಣಿ: ರೂ. 22406-1305(1)-23710-1425(2)-26560-1605(5)-34585-1855(2)-38295-2260(3)-45075-2345(2)-49765-2565-25602(6)
    ಒಟ್ಟು ಸರಿಸುಮಾರು ರೂ 37,000/- ಮಾಸಿಕ ವೇತನವಿರಲಿದೆ. ಪೋಸ್ಟ್ ಮಾಡುವ ಸ್ಥಳವನ್ನು ಅವಲಂಬಿಸಿ ಇತರ ಭತ್ಯೆಗಳು ಬದಲಾಗಬಹುದು.

    ಪರೀಕ್ಷೆ ಯಾವ ರೀತಿ ಇರುತ್ತದೆ?
    ಇಂಗ್ಲೀಷ್‌ ಪರೀಕ್ಷೆ, ಸಾಮಾನ್ಯ ಜ್ಞಾನ, ಕಂಪ್ಯೂಟರ್‌ ಜ್ಞಾನ, ತಾರ್ಕಿಕ ಸಾಮರ್ಥ್ಯ, ಸಂಖ್ಯಾತ್ಮಕ ಸಾಮರ್ಥ್ಯ ಈ ವಿಷಯಕ್ಕೆ ಕುರಿತಾಗಿ ಒಟ್ಟು ನೂರು ಅಂಕಗಳ ಪ್ರಶ್ನೆಗಳಿರುತ್ತದೆ. ಅರುವತ್ತು ನಿಮಿಷಗಳ ಸಮಯದಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಸಲಾಗುವುದು. ಇಲ್ಲಿ ನೀವು ಗಳಿಸಿದ ಕಟ್‌ಆಫ್‌ ಅಂಕಗಳ ಆಧಾರದಲ್ಲಿ ನಿಮ್ಮನ್ನು ಮುಂದಿನ ಹಂತದ ಪರೀಕ್ಷೆಗೆ ಆಯ್ಕೆ ಮಾಡಲಾಗುವುದು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್ ಮಾಡಿ

  • BHABHA ATOMIC RESEARCH CENTER RECRUITMENT SECTION – IV – Apply Online

    BARC Recruitment 2018 for 17 posts –  Mumbai (Maharashtra)
    BARC strives to have a workforce that reflects gender balance and women candidates are encouraged to apply. Facility for submission of on-line application start from : 14/09/2018 Last Date for submission of on-line Application: 10/10/2018 BHABHA ATOMIC RESEARCH CENTER (BARC) invites on-line application for the following Group‘A’ Gazetted & Group ‘B’ Non Gazetted posts as follows:
    Name of the Post
    ST
    OBC
    UR
    Total
    Educational / Technical Qualification
    Medical/ Scientific Officer/D (Dental Surgeon – Prostho Dontics)
    0
    0
    1
    1
    M.D.S. (Prostho Dontics) from a recognised University
    Medical/Scientific Officer/D (Radiology)
    0
    0

    2
    2
    M.D/DNB of equivalent in Radio-diagnosis from a recognized University
    Medical/Scientific Officer/D (Generl Surgery)
    0
    0
    1
    1
    M.S/DNB General Surgery from the recognized University
    Nurse/A
    0
    07
    01
    08
    XII Standard and Diploma in Nursing & Midwifery (3 year course)+ Valid Registration as Nurse from Central/State Nursing Council in India
    OR
    B.Sc (Nursing)
    OR
    Nursing ‘A’ Certificate with 3 years Experience in Hospital or Nursing Assistant Class III & above from Armed Forces
    Scientific Assistant/B (Radiography)
    01
    01
    03
    05
    B.Sc. (Radiography) with minimum 60% marks.
     OR
     B.Sc. with minimum 50% marks + one year Diploma in Radiography
    Important Dates
    on-line application start from : 14/09/2018
     submission of on-line Application: 10/10/2018
    Name of the post : Nurse Post
    Job Location : Mumbai ( Maharastra)
    AGE LIMIT

    Name of the Post
    Minimum
    Maximum
    ST
    Maximum
    OBC
    Maximum
    UR
    Medical/ Scientific Officer/D (Dental Surgeon – Prostho Dontics)
    18

    NA
    NA
    40
    Medical/Scientific Officer/D (Radiology)
    18
    NA
    NA
    40
    Medical/Scientific Officer/D (General Surgery)
    18
    NA
    NA
    40
    Nurse/A
    18
    NA
    33
    30
    Scientific Assistant/B (Radiography)
    18
    35
    33
    30
    Selection procedure for DR/04 – Nurse/A will consist of tests in 3 stages
    Stage 1     Preliminary Test
    Stage 2    Advanced Test
    Stage 3    Skill Test

    Application Fee & Payment Procedure – Mode of payment of the Application Fee is through Online.

    Amount of Fee 

     a) For DR/01, DR/02 & DR/03 – `500/- (Rupees five hundred only)
     b) For DR/04 & DR/05 – `150/- (Rupees one hundred & fifty only)

    Notification : www.barc.gov.in