Tag: railway jobs

  • Railway Jobs: ರೈಲ್ವೆ ಇಲಾಖೆಯಲ್ಲಿ ಬಂಪರ್‌ ಉದ್ಯೋಗಾವಕಾಶ; ನೇರ ಸಂದರ್ಶನ, ಭರ್ಜರಿ ವೇತನ

    Railway Jobs: ರೈಲ್ವೆ ಇಲಾಖೆಯಲ್ಲಿ ಬಂಪರ್‌ ಉದ್ಯೋಗಾವಕಾಶ; ನೇರ ಸಂದರ್ಶನ, ಭರ್ಜರಿ ವೇತನ

    KRCL Recruitment 2024: ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರಾಜೆಕ್ಟ್ ಇಂಜಿನಿಯರ್, ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಒಟ್ಟು 11 ಹುದ್ದೆಗಳು ಖಾಲಿ ಇದ್ದು, ಆಸಕ್ತರು 27-ಜೂನ್-2024 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಿ ತಮ್ಮ ಅದೃಷ್ಟ ಪರಿಶೀಲಿಸಬಹುದು.

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 31-05-2024
    ನೇರ ಸಂದರ್ಶನದ ದಿನಾಂಕ: 27-ಜೂನ್-2024

    ಹುದ್ದೆಯ ಕುರಿತ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು: ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (KRCL) ಇಲ್ಲಿ ಖಾಲಿ ಇರುವ 11 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಪ್ರಾಜೆಕ್ಟ್ ಇಂಜಿನಿಯರ್, ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದು, ಮಾಸಿಕ ರೂ. ರೂ.35400-56100/- ವೇತನ ದೊರಕಲಿದೆ.

    ಹುದ್ದೆಯ ವಿವರ ಇಲ್ಲಿದೆ;
    ಹಿರಿಯ ತಾಂತ್ರಿಕ ಸಹಾಯಕ- 1 ಹುದ್ದೆ
    ಪ್ರಾಜೆಕ್ಟ್ ಇಂಜಿನಿಯರ್- 7 ಹುದ್ದೆಗಳು
    ಪ್ರಾಜೆಕ್ಟ್ ಎಂಜಿನಿಯರ್ (ಟೆಂಡರ್‌ಗಳು ಮತ್ತು ಪ್ರಸ್ತಾವನೆ) 1 ಹುದ್ದೆ
    CAD/ಡ್ರಾಫ್ಟ್ಸ್‌ಮನ್ 1 ಹುದ್ದೆ
    ಸಹಾಯಕ ಇಂಜಿನಿಯರ್ 1 ಹುದ್ದೆ
    ಒಟ್ಟು ಹುದ್ದೆ 11 ಹುದ್ದೆಗಳು

    ವಿದ್ಯಾರ್ಹತೆ: ಹಿರಿಯ ತಾಂತ್ರಿಕ ಸಹಾಯಕ, ಪ್ರಾಜೆಕ್ಟ್ ಇಂಜಿನಿಯರ್ , ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಸಿವಿಲ್‌ ಇಂಜಿನಿಯರಿಂಗ್‌ನಲ್ಲಿ ಪದವಿ ಮಾಡಿರಬೇಕು.
    CAD/Draftsman ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ITI, ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್ ಮಾಡಿರಬೇಕು.
    ಸಹಾಯಕ ಎಂಜಿನಿಯರ್ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

    ವಯೋಮಿತಿ: ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗೆ 35 ವರ್ಷ ಮೀರಿರಬಾರದು.
    ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ 40 ವರ್ಷ ಮೀರಿರಬಾರದು.
    ಪ್ರಾಜೆಕ್ಟ್ ಎಂಜಿನಿಯರ್ (ಟೆಂಡರ್) , CAD/ಡ್ರಾಫ್ಟ್ಸ್‌ಮನ್, ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿಯು 45 ವರ್ಷ ಮೀರಿರಬಾರದು. ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆನ್ನು ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೇಲ್ಕಂಡ ಹುದ್ದೆಗೆ ಗುಂಪು ಚರ್ಚೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಸಂಬಳ: ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗೆ ರೂ.44900/- ಸಂಬಳವಿರಲಿದೆ.
    ಪ್ರಾಜೆಕ್ಟ್ ಇಂಜಿನಿಯರ್, ಪ್ರಾಜೆಕ್ಟ್ ಎಂಜಿನಿಯರ್ (ಟೆಂಡರ್‌), CAD/ಡ್ರಾಫ್ಟ್‌ಮನ್ ರೂ.35400/- ಸಂಬಳವಿರಲಿದೆ.
    ಸಹಾಯಕ ಇಂಜಿನಿಯರ್ ರೂ.56100/- ಸಂಬಳ ನೀಡಲಾಗುವುದು.

    ನೇರ ಸಂದರ್ಶನದ ದಿನಾಂಕ ಹುದ್ದೆಗನುಸಾರವಾಗಿ ಇಲ್ಲಿ ನೀಡಲಾಗಿದೆ;
    ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗೆ 25-ಜೂನ್-2024
    ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ 27-ಜೂನ್-2024
    ಪ್ರಾಜೆಕ್ಟ್ ಎಂಜಿನಿಯರ್ (ಟೆಂಡರ್‌ಗಳು ಮತ್ತು ಪ್ರಸ್ತಾವನೆ) ಹುದ್ದೆಗೆ 20-ಜೂನ್-2024
    CAD/ ಡ್ರಾಫ್ಟ್ಸ್‌ಮನ್ ಹುದ್ದೆಎ 15-ಜೂನ್-2024
    ಸಹಾಯಕ ಇಂಜಿನಿಯರ್ ಹುದ್ದೆಗೆ 24-ಜೂನ್-2024 ರಂದು ನೇರ ಸಂದರ್ಶನವಿರಲಿದೆ

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿದ ದಾಖಲೆಗಳೊಂದಿಗೆ ಈ ಕೆಳಗೆ ನೀಡಲಾದ ವಿಳಾಸಕ್ಕೆ ನೇರ ಸಂದರ್ಶನದ ಮೂಲಕ ಹಾಜರಾಗಬೇಕು.

    ವಿಳಾಸ ಇಲ್ಲಿದೆ; Executive Club, Konkan Rail Vihar, Konkan Railway Corporation Ltd., Near Seawoods Railway Station, Sector-40, Seawoods (West), Navi Mumbai
    ಇಲ್ಲಿಗೆ ದಿನಾಂಕ 7-ಜೂನ್-2024 ರಂದು ನೇರ ಸಂದರ್ಶನಕ್ಕೆ ಹಾಜರಾಗಬೇಕು.

  • Railway Recruitment 2024: ರೈಲ್ವೆಯಲ್ಲಿ ಭರ್ಜರಿ ನೇಮಕಾತಿ; ಲೋಕೋ ಪೈಲಟ್-ಟ್ರೈನ್‌ ಮ್ಯಾನೇಜರ್‌ ಹುದ್ದೆ; ಹೆಚ್ಚಿನ ವಿವರ ಇಲ್ಲಿದೆ

    Railway Recruitment 2024: ರೈಲ್ವೆಯಲ್ಲಿ ಭರ್ಜರಿ ನೇಮಕಾತಿ; ಲೋಕೋ ಪೈಲಟ್-ಟ್ರೈನ್‌ ಮ್ಯಾನೇಜರ್‌ ಹುದ್ದೆ; ಹೆಚ್ಚಿನ ವಿವರ ಇಲ್ಲಿದೆ

    RRC SER Recruitment 2024: ಆಗ್ನೇಯ ರೈಲ್ವೆಯು ಜಿಡಿಸಿಇ ಕೋಟಾದ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 1202 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಹಾಯಕ ಲೋಕೋ ಪೈಲಟ್‌ ಮತ್ತು ಟ್ರೈನ್‌ ಮ್ಯಾನೇಜರ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಜೂನ್‌ 12,2024 ಕೊನೆಯ ದಿನಾಂಕವಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಗ್ನೇಯ ರೈಲ್ವೆಯ ಸಾಮಾನ್ಯ ರೈಲ್ವೆ ಉದ್ಯೋಗಿಗಳು ಮಾತ್ರ ಜಿಡಿಸಿಇ ಕೋಟಾದ ಅಡಿಯಲ್ಲಿ ಈ ಹುದ್ದೆಗಳನ್ನು ಅರ್ಜಿ ಸಲ್ಲಿಸಬಹುದೆಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 13-05-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-06-2024

    ಹುದ್ದೆಯ ವಿವರ ಇಲ್ಲಿದೆ;
    ಸಹಾಯಕ ಲೋಕೋಪೈಲೆಟ್‌ (ಎಎಲ್‌ಪಿ)-827 ಹುದ್ದೆಗಳು ಖಾಲಿ ಇದೆ
    ಟ್ರೈನ್ ಮ್ಯಾನೇಜರ್‌ – 375 ಹುದ್ದೆಗಳು ಖಾಲಿ ಇದೆ.

    ಶೈಕ್ಷಣಿಕ ಅರ್ಹತೆ: ಸಹಾಯಕ ಲೋಕೋಪೈಲಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ತೇರ್ಗಡೆ ಹೊಂದಿರಬೇಕು. ಅಷ್ಟು ಮಾತ್ರವಲ್ಲದೇ ಸಂಬಂಧಿತ ಕ್ಷೇತ್ರಕ್ಕೆ ಕುರಿತಂತೆ ಐಟಿಐ ಪ್ರಮಾಣ ಪತ್ರವನ್ನು ಪಡೆದಿರಬೇಕು.
    ಟ್ರೈನಿ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವೀಧರರಾಗಿರಬೇಕು.

    ವಯೋಮಿತಿ: ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ. ಗರಿಷ್ಠ 42 ವರ್ಷ ಮೀರಿರಬಾರದು. ಒಬಿಸಿ/ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಯನ್ನು ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸಿಬಿಟಿ/ಆಲ್ಟಿಟ್ಯೂಡ್‌ ಟೆಸ್ಟ್‌/ಡಾಕ್ಯುಮೆಂಟ್‌ ವೆರಿಫಿಕೇಶನ್‌/ ಮೆಡಿಕಲ್‌ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಮೊದಲಿಗೆ RRC/SER ವೆಬ್‌ಸೈಟ್ www.rrcser.co.in ಗೆ ಹೋಗಿ ಮತ್ತು “GDCE- 2024 ONLINE/E-ಅಪ್ಲಿಕೇಶನ್” ಗಾಗಿ ಉಲ್ಲೇಖಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ.
    ನಂತರ “ಹೊಸ ನೋಂದಣಿ” ಮೇಲೆ ಕ್ಲಿಕ್ ಮಾಡಿ.
    ಮೂಲ ವಿವರಗಳನ್ನು ಭರ್ತಿ ಮಾಡಿ ಅಂದರೆ ಹೆಸರು, ಸಮುದಾಯ, DOB, ಉದ್ಯೋಗಿ ಐಡಿ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಹಾಕಿ.
    ಅನಂತರ ಅಭ್ಯರ್ಥಿಗೆ ನೋಂದಣಿ ಸಂಖ್ಯೆ ದೊರಕುತ್ತದೆ. ಮತ್ತು ಅದೇ ಸಂದೇಶವನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
    ನಂತರ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಅನಂತರ ಸಬ್‌ಮಿಟ್‌ ಬಟನ್‌ ಕ್ಲಿಕ್‌ ಮಾಡಿ.

  • RRB Technician Recruitment 2024: ರೈಲ್ವೆ ಇಲಾಖೆಯಲ್ಲಿ ಬೃಹತ್‌ ಉದ್ಯೋಗಾವಕಾಶ; ಭರ್ಜರಿ 9000 ಹುದ್ದೆಗಳು,ಐಟಿಐ, ಡಿಪ್ಲೋಮಾ, ಬಿಇ ಪಾಸಾದವರಿಗೆ ಸಿಹಿ ಸುದ್ದಿ

    RRB Technician Recruitment 2024: ರೈಲ್ವೆ ಇಲಾಖೆಯಲ್ಲಿ ಬೃಹತ್‌ ಉದ್ಯೋಗಾವಕಾಶ; ಭರ್ಜರಿ 9000 ಹುದ್ದೆಗಳು,ಐಟಿಐ, ಡಿಪ್ಲೋಮಾ, ಬಿಇ ಪಾಸಾದವರಿಗೆ ಸಿಹಿ ಸುದ್ದಿ

    RRB Technician Recruitment 2024: ಕೇಂದ್ರ ಸರಕಾರಿ ಹುದ್ದೆಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ರೈಲ್ವೆ ಇಲಾಖೆಯು ಖಾಲಿ ಇರುವ 9000 ಟೆಕ್ನಿಷಿಯನ್‌ ಹುದ್ದೆಗಳಿಗೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಿದೆ. ಟೆಕ್ನಿಷಿಯನ್ಸ್ ಗ್ರೇಡ್ III ರ ವಿವಿಧ ವಿಭಾಗಗಳಿಗೆ ಮತ್ತು ಟೆಕ್ನಿಷಿಯನ್ ಗ್ರೇಡ್ 1 ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08-04-2024. ಅಭ್ಯರ್ಥಿಗಳು ಎಲ್ಲಾ ರೀತಿಯಲ್ಲೂ ಪೂರ್ಣಗೊಂಡ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು.

    ದೇಶದ ಎಲ್ಲಾ ರೈಲ್ವೇ ವಲಯಗಳಲ್ಲಿ ನೇಮಕ ಮಾಡಲು ಕಿರು ನೋಟಿಫಿಕೇಶನ್‌ನ್ನು ಬಿಡುಗಡೆ ಮಾಡಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 09-03-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-04-2024

    ಹುದ್ದೆಗಳ ವಿವರ: ಟೆಕ್ನಿಷಿಯನ್‌ ಗ್ರೇಡ್‌-1 ಸಿಗ್ನಲ್‌-1100
    ಟೆಕ್ನಿಷಿಯನ್‌ ಗ್ರೇಡ್‌ 111-7900 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ವೇತನ: ಟೆಕ್ನಿಷಿಯನ್‌ ಗ್ರೇಡ್‌ 1 ಸಿಗ್ನಲ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.29,200 ಮಾಸಿಕ ವೇತನ ಸಿಗಲಿದೆ
    ಟೆಕ್ನಿಷಿಯನ್‌ ಗ್ರೇಡ್‌ 111 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.19,900 ವೇತನ ದೊರಕಲಿದೆ.

    ವಯೋಮಿತಿ: ಟೆಕ್ನಿಷಿಯನ್‌ ಗ್ರೇಡ್‌ 1 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ಆಗಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 36 ವರ್ಷ ಮೀರಿರಬಾರದು.
    ಟೆಕ್ನಿಷಿಯನ್‌ ಗ್ರೇಡ್‌ 111 ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ಆಗಿರಬೇಕು. ಗರಿಷ್ಠ ವಯೋಮಿತಿ 33 ಮೀರರಬಾರದು.

    ಶೈಕ್ಷಣಿಕ ಅರ್ಹತೆ: ವಿವಿಧ ಹುದ್ದೆಗಳಿಗೆ ವಿವಿಧ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, RRB ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ವಿವರ ನೀಡಲಾಗಿದೆ.

    ಅರ್ಜಿ ಶುಲ್ಕ: Gen/OBC/EWS ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.500 ಪಾವತಿ ಮಾಡಬೇಕು.
    SC, ST, ಮಾಜಿ ಸೈನಿಕರು, EBC/ ಮಹಿಳಾ ಅಭ್ಯರ್ಥಿಗಳಿಗೆ ರೂ.250
    ಟ್ರಾನ್ಸ್ಜೆಂಡರ್, ಅಲ್ಪಸಂಖ್ಯಾತರು ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗ (ಇಬಿಸಿ) ರೂ.250/-ಗಳ ಈ ಶುಲ್ಕವನ್ನು CBT ಯಲ್ಲಿ ಕಾಣಿಸಿಕೊಂಡಾಗ ಅನ್ವಯವಾಗುವಂತೆ ಬ್ಯಾಂಕ್ ಶುಲ್ಕಗಳನ್ನು ಕಡಿತಗೊಳಿಸಿ ಮರುಪಾವತಿ ಮಾಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕಿರು ನೋಟಿಫಿಕೇಶನ್‌ ಕ್ಲಿಕ್‌ ಮಾಡಬಹುದು.

  • Southern Railway Recruitment 2024: ರೈಲ್ವೆ ಇಲಾಖೆಯಲ್ಲಿ 2860 ಅಪ್ರೆಂಟಿಸ್‌ ಹುದ್ದೆ, 10,12th ಪಾಸಾದವರಿಗೆ ಆದ್ಯತೆ

    Southern Railway Recruitment 2024: ರೈಲ್ವೆ ಇಲಾಖೆಯಲ್ಲಿ 2860 ಅಪ್ರೆಂಟಿಸ್‌ ಹುದ್ದೆ, 10,12th ಪಾಸಾದವರಿಗೆ ಆದ್ಯತೆ

    Southern Railway Recruitment 2024: ರೈಲ್ವೆ ಇಲಾಖೆಯ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌. ದಕ್ಷಿಣ ರೈಲ್ವೆಯಲ್ಲಿ ವಿವಿಧ 2860 ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದೆ. ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ನೀಡಿರುವ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29.01.2024 10:00 ಗಂಟೆಯಿಂದ
    ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28.02.2024 ರಿಂದ 17:00 ಗಂಟೆಗಳವರೆಗೆ

    ದಕ್ಷಿಣ ರೈಲ್ವೇಯ ಅಪ್ರೆಂಟಿಸ್‌ ಹುದ್ದೆಗಳಿಗೆ ಕೆಳಗಿನ ಸ್ಥಳಗಳು/ಪ್ರದೇಶಗಳಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ;
    ತಮಿಳುನಾಡು, ಕೇಂದ್ರಾಡಳಿತ ಪ್ರದೇಶ ಪುದುಚೇರಿ, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು, ಆಂಧ್ರಪ್ರದೇಶದ ಎರಡು ಜಿಲ್ಲೆಗಳು ಮಾತ್ರ, ಅವುಗಳೆಂದರೆ, SPSR ನೆಲ್ಲೂರು ಮತ್ತು ಚಿತ್ತೂರು, ಕರ್ನಾಟಕದ ದಕ್ಷಿಣ ಕನ್ನಡ.

    ವಯಸ್ಸಿನ ಮಿತಿ:-
    ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 15 ವರ್ಷ ಮೀರಿರಬೇಕು ಹಾಗೂ 22/24 ವರ್ಷ ಮೀರಿರಬಾರದು.
    OBC ಅಭ್ಯರ್ಥಿಗಳಿಗೆ 3 ವರ್ಷಗಳು, SC/ST ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು ಅಂಗವಿಕಲರಿಗೆ (PWBD) 10 ವರ್ಷಗಳು ಗರಿಷ್ಠ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವಿದ್ಯಾಭ್ಯಾಸ: ಅಪ್ರೆಂಟಿಸ್‌ ಹುದ್ದೆಗಳಿಗೆ 10-12 ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಅರ್ಜಿ ಶುಲ್ಕ:
    ಈ ಹುದ್ದೆಗಳಿಗೆ ರೂ. 100/- ಜೊತೆಗೆ ಸೇವಾ ಶುಲ್ಕ (ಮರುಪಾವತಿಸಲಾಗದ) ವನ್ನು ಪ್ರತ್ಯೇಕವಾಗಿ ಪಾವತಿ ಮಾಡಬೇಕು. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್ ಮೋಡ್ ಮೂಲಕ ಪಾವತಿಸಲು ಅವಕಾಶವಿದೆ
    SC/ST/PwBD/ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

    ಆಯ್ಕೆ ಪ್ರಕ್ರಿಯೆ:
    ಈ ಹುದ್ದೆಗಳಿಗೆ ಮೆಟ್ರಿಕ್ಯುಲೇಷನ್‌ ಮತ್ತು ಐಟಿಐ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಂಕಗಳ ಆಧಾರದ ಮೇಲೆ ಮೆರಿಟ್‌ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವನ್ನು ಓದಬೇಕು.

    ವೇತನ: ರೈಲ್ವೆ ಮಂಡಳಿಯ ಸುತ್ತೋಲೆ, ನಿರ್ದೇಶನಗಳ ಪ್ರಕಾರ ಸ್ಟೈಫಂಡ್ ಅನ್ನು ಕೌಶಲ್ಯ ಅಭಿವೃದ್ಧಿ ಸಚಿವಾಲಯದ ನಿರ್ದೇಶನಗಳ ಅಡಿಯಲ್ಲಿ ಪಾವತಿಸಲಾಗುವುದು.

    ದಕ್ಷಿಣ ರೈಲ್ವೆ ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ ಮೂಲಕವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ sr.indianrailways.gov.in ಗೇ ಭೇಟಿ ನೀಡಿ, ಅಲ್ಲಿ ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • Bangalore Metro Recruitment 2019, Apply for 100 Executive Engineer and Other Posts, Last Date April 8

    Bangalore Metro Rail Corporation Limited, invites applications from qualified and experienced personnel for appointment to Engineering positions in the Project Wing. All appointments proposed will be on “contract basis” only. Application Process, Job Details, Age Limit, Educational Qualification and Other Details Read Below.

    Post Names

    Executive Engineer, Asst. Executive Engineer, Assistant Engineer, Section Engineer

    Number of Posts: 100
    How to Apply: Post
    Last Date for Apply: 08.04.2019
    Age Limits: Executive Engineer 50 years, Asst. Executive Engineer 45 years, Assistant Engineer 40 years, Section Engineer 35 years

    Educational Qualifications

    Executive Engineer: BE / B.Tech in Civil Engineering Minimum 12 years in large infrastructure project execution. Candidates with experience in Metro construction for Viaduct / Stations / Underground station / Tunnelling with TBMs will be preferred.
    Asst. Executive Engineer: BE / B.Tech in Civil Engineering Minimum 8 years in large infrastructure project execution. Candidates with experience in Metro construction for Viaduct / Stations / Underground station / Tunneling with TBMs will be preferred.
    Assistant Engineer: BE / B.Tech in Civil Engineering OR Diploma in Civil Engineering BE/B.Tech holders: Minimum 5 years in large infrastructure project execution. Candidates with experience in Metro construction for Viaduct / Stations / Underground station / Tunneling with TBMs will be preferred. Diploma holders: Minimum 8 years in large infrastructure project execution. Candidates with experience in Metro construction for Viaduct / Stations / Underground station / Tunneling with TBMs will be preferred.
    Section Engineer: BE / B.Tech in Civil Engineering OR Diploma in Civil Engineering BE/B.Tech holders: Minimum 3 years in large infrastructure project execution. Candidates with experience in Metro construction for Viaduct / Stations / Underground station / Tunneling with TBMs will be preferred. Diploma holders: Minimum 6 years in large infrastructure project execution. Candidates with experience in Metro construction for Viaduct / Stations / Underground station / Tun.

    Salary
    Executive Engineer Rs. 80,000/-
    Asst. Executive Engineer Rs. 65,000/-
    Assistant Engineer Rs. 50,000/-
    Section Engineer Rs. 36,000/-

    LAST DATE FOR RECEIPT OF APPLICATIONS
    Last date for receipt of hard copy of the application is 4.00 PM of 08.04.2019

    How to Apply

    Eligible candidates may fill in the application on-line, take a print out of the same and forward along with relevant documents in support of qualification and experience. Such applications may be addressed to the General Manager(HR), Bangalore Metro Rail Corporation Limited, III Floor, BMTC Complex, K.H.Road, Shanthinagar, Bengaluru 560027 superscribing the envelope as “APPLICATION FOR THE TOF……………………………………”

    Apply Here