Tag: NIT Karnataka Jobs

  • NIT Surathkal Jobs: ಮಂಗಳೂರು-ಸುರತ್ಕಲ್‌ನಲ್ಲಿ ಕೆಲಸ ಇದೆ; ಮಾಸಿಕ ರೂ.35 ಸಾವಿರ ಸಂಬಳ,ಅರ್ಜಿ ಸಲ್ಲಿಕೆಗೆ ಜೂ.2,2024 ಕೊನೆಯ ದಿನಾಂಕ

    NIT Surathkal Jobs: ಮಂಗಳೂರು-ಸುರತ್ಕಲ್‌ನಲ್ಲಿ ಕೆಲಸ ಇದೆ; ಮಾಸಿಕ ರೂ.35 ಸಾವಿರ ಸಂಬಳ,ಅರ್ಜಿ ಸಲ್ಲಿಕೆಗೆ ಜೂ.2,2024 ಕೊನೆಯ ದಿನಾಂಕ

    NIT Karnataka Recruitment 2024: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕವು ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 01 ಹುದ್ದೆ ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪ್ರಾಜೆಕ್ಟ್ ಅಸೋಸಿಯೇಟ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸುರತ್ಕಲ್ – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗ ಮಾಡಲು ಬಯಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಸಲ್ಲಿಸಲು 02-Jun-2024 ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು
    ಅಧಿಸೂಚನೆ ಬಿಡುಗಡೆಗೊಂಡ ದಿನಾಂಕ; 22-05-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 02-06-2024

    ಹುದ್ದೆಯ ಕುರಿತ ಮಾಹಿತಿ ಇಲ್ಲಿದೆ;
    ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT ಕರ್ನಾಟಕ) ಇಲ್ಲಿ ಖಾಲಿ ಇರುವ ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.35,000 ವೇತನ ದೊರಕಲಿದೆ. ಈ ಹುದ್ದೆಗೆ ಸುರತ್ಕಲ್-ಕರ್ನಾಟಕದಲ್ಲಿ ಪೋಸ್ಟಿಂಗ್‌ ನಡೆಯಲಿದೆ.

    ವಿದ್ಯಾರ್ಹತೆ: NIT ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಮೆಕ್ಯಾನಿಕಲ್ / ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ M.E ಅಥವಾ M.Tech ಮಾಡಿರುವವರು ಅರ್ಜಿ ಸಲ್ಲಿಸಬಹುದು.

    ವಯೋಮಿತಿ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು NIT ಕರ್ನಾಟಕ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು
    ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನಾರ್ಮ್ಸ್ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅರ್ಹತೆ, ಅನುಭವ, ಪರೀಕ್ಷಾ ಕಾರ್ಯಕ್ಷಮತೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗೆ ನೀಡಿದ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
    ವಿಳಾಸ ವಿವರ ಇಲ್ಲಿದೆ;
    Dr. Vasudeva Madav, CSR Project Coordinator and Assistant Professor, Department of Mechanical Engineering, National Institute of Technology Karnataka, Surathkal or Email to [email protected] ಇಲ್ಲಿಗೆ 02-ಜೂನ್-2024 ರಂದು ಅಥವಾ ಮೊದಲು ತಲುಪಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • NIT Karnataka Jobs 2024: ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಆಹ್ವಾನ; ಅರ್ಹತೆ, ವೇತನ ವಿವರ ಇಲ್ಲಿದೆ

    NIT Karnataka Jobs 2024: ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಆಹ್ವಾನ; ಅರ್ಹತೆ, ವೇತನ ವಿವರ ಇಲ್ಲಿದೆ

    NIT Karnatka Recruitment 2024: ಕರ್ನಾಟಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT) ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆ ಭರ್ತಿ ಮಾಡಲಾಗುತ್ತಿದ್ದು, ಹುದ್ದೆ ಸಂಖ್ಯೆಯನ್ನು ಇನ್ನೂ ನಿರ್ದಿಷ್ಟ ಪಡಿಸಿಲ್ಲ. ಸುರತ್ಕಲ್ – ಕರ್ನಾಟಕ ಸರ್ಕಾರದಲ್ಲಿ ಈ ಹುದ್ದೆಗೆ ಪೋಸ್ಟಿಂಗ್‌ ನಡೆಯಲಿದ್ದು, ಅಭ್ಯರ್ಥಿಗಳು 20-Jun-2024 ರಂದು ಅಥವಾ ಮೊದಲು ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 20-05-2024
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 20-ಜೂನ್-2024

    ಹುದ್ದೆಯ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT ಕರ್ನಾಟಕ) ಇಲ್ಲಿ ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,000 ವೇತನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ: ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ ಕಂಪ್ಯೂಟರ್ ಸೈನ್ಸ್/ಮಾಹಿತಿ ವಿಜ್ಞಾನದಲ್ಲಿ B.E ಅಥವಾ B.Tech ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು NIT ಕರ್ನಾಟಕ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನಾರ್ಮ್ಸ್ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗೆ ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಅನುಭವ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, [email protected] ಗೆ 20-Jun-2024 ಅಥವಾ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು.

    ಅಧಿಕೃತ ವೆಬ್‌ಸೈಟ್: nitk.ac.in
    ನೋಟಿಫಿಕೇಶನ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • NIT Karnataka Jobs: ಎನ್‌ಐಟಿಯಲ್ಲಿ ಜೂನಿಯರ್‌ ರಿಸರ್ಚ್‌ ಫೆಲೋ ಹುದ್ದೆ ಖಾಲಿ ಇದೆ, ಅರ್ಜಿ ಸಲ್ಲಿಸಲು 27 ಮೇ,2024 ಕೊನೆಯ ದಿನ

    NIT Karnataka Jobs: ಎನ್‌ಐಟಿಯಲ್ಲಿ ಜೂನಿಯರ್‌ ರಿಸರ್ಚ್‌ ಫೆಲೋ ಹುದ್ದೆ ಖಾಲಿ ಇದೆ, ಅರ್ಜಿ ಸಲ್ಲಿಸಲು 27 ಮೇ,2024 ಕೊನೆಯ ದಿನ

    NIT Karnataka Recruitment 2024: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT) ಕರ್ನಾಟಕ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 02 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಎನ್‌ಐಟಿಯಲ್ಲಿ ಖಾಲಿ ಇರುವ ಜೂನಿಯರ್ ರಿಸರ್ಚ್ ಫೆಲೋ (ಜೆಆರ್‌ಎಫ್) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಮೇಲ್ಕಂಡ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸುರತ್ಕಲ್ – ಮಂಗಳೂರು ಇಲ್ಲಿ ಪೋಸ್ಟಿಂಗ್‌ ಮಾಡಲಿದ್ದು, 27-ಮೇ-2024 ಕೊನೆಯ ದಿನಾಂಕವಾಗಿದ್ದು, ಇದರ ಮೊದಲು ಅಭ್ಯರ್ಥಿಗಳು ಇ-ಮೇಲ್ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 13-05-2024
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 27-ಮೇ-2024

    ಹುದ್ದೆಯ ಕುರಿತ ವಿವರಗಳು;
    ಹುದ್ದೆಯ ಹೆಸರು ಮತ್ತು ಇತರ ವಿವರ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT ಕರ್ನಾಟಕ) ಇಲ್ಲಿ 2 ಜೂನಿಯರ್‌ ರಿಸರ್ಚ್‌ ಫೆಲೋ (JRF) ಹುದ್ದೆ ಖಾಲಿ ಇದ್ದು, ಸುರತ್ಕಲ್‌ ನಲ್ಲಿ ಪೋಸ್ಟಿಂಗ್‌ ನಡೆಯಲಿದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ರೂ.43660/- ಮಾಸಿಕ ವೇತನ ಇರಲಿದೆ.

    ವಿದ್ಯಾರ್ಹತೆ: NIT ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ B.E ಅಥವಾ B.Tech ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು NIT ಕರ್ನಾಟಕ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಮೀರಿರಬಾರದು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನಾರ್ಮ್ಸ್ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗೆ ಅಭ್ಯರ್ಥಿಗಳನ್ನು ಅರ್ಹತೆ, ಅನುಭವ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ? ಅಭ್ಯರ್ಥಿಗಳು ಇ-ಮೇಲ್ ಐಡಿ ಮೂಲಕ ಅರ್ಜಿ ಸಲ್ಲಿಸಬೇಕು. [email protected] ಈ ಮೇಲ್‌ ಐಡಿಗೆ ಅರ್ಜಿ ಸಲ್ಲಿಸಬೇಕಿದ್ದು, ದಿನಾಂಕ 27-ಮೇ-2024 ರಂದು ಅಥವಾ ಮೊದಲು ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.

    ಅಭ್ಯರ್ಥಿಗಳನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ nitk.ac.in ಮೂಲಕ ಹುದ್ದೆಯ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬಹುದು.