Tag: nimhans recruitment 2024

  • NIMHANS Jobs 2024: ಬೆಂಗಳೂರಿನಲ್ಲಿ ಉದ್ಯೋಗ; ಒಟ್ಟು 84 ಹುದ್ದೆಗಳು ಖಾಲಿ ಇದೆ; ವೇತನ 20000-150000/-; ಈ ಕೂಡಲೇ ಅರ್ಜಿ ಹಾಕಿ

    NIMHANS Jobs 2024: ಬೆಂಗಳೂರಿನಲ್ಲಿ ಉದ್ಯೋಗ; ಒಟ್ಟು 84 ಹುದ್ದೆಗಳು ಖಾಲಿ ಇದೆ; ವೇತನ 20000-150000/-; ಈ ಕೂಡಲೇ ಅರ್ಜಿ ಹಾಕಿ

    NIMHANS Recruitment 2024: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿದ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಒಟ್ಟು 84 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ವೈದ್ಯಕೀಯ ಅಧಿಕಾರಿ, ಸೀನಿಯರ್‌ ರೆಸಿಡೆಂಟ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗೆ ಕರ್ನಾಟಕ ಸರ್ಕಾರದಲ್ಲಿ ಪೋಸ್ಟಿಂಗ್‌ ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 24-Jun-2024 ನೇರ ಸಂದರ್ಶನವಿರುತ್ತದೆ.

    ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ಇಲ್ಲಿ ಖಾಲಿ ಇರುವ 84 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಅಧಿಕಾರಿ, ಸೀನಿಯರ್‌ ರೆಸಿಡೆಂಟ್‌ ಹುದ್ದೆಗೆ ಮಾಸಿಕ ರೂ. 20000-150000/- ವೇತನ ದೊರಕಲಿದೆ.

    ಹುದ್ದೆ ಹೆಸರು ಮತ್ತು ಸಂಖ್ಯೆ ಮತ್ತು ವಿದ್ಯಾರ್ಹತೆ
    ನರ್ಸ್ – 10 ಹುದ್ದೆಗಳು- GNM, B.Sc ತೇರ್ಗಡೆ ಹೊಂದಿರಬೇಕು.
    ಕ್ಲಿನಿಕಲ್ ಸೈಕಾಲಜಿಸ್ಟ್/ಮನಶ್ಶಾಸ್ತ್ರಜ್ಞ – 11 ಹುದ್ದೆಗಳು – ಪೋಸ್ಟ್ ಗ್ರಾಜುಯೇಷನ್, M.Phil ತೇರ್ಗಡೆ ಹೊಂದಿರಬೇಕು.
    ಐಟಿ ಸಂಯೋಜಕರು – 1 ಹುದ್ದೆ- B.Sc, BCA, B.E ಅಥವಾ B.Tech, MCA ತೇರ್ಗಡೆ ಹೊಂದಿರಬೇಕು.
    ನ್ಯೂರೋ ನರ್ಸ್ – 1 ಹುದ್ದೆ- M.Sc ತೇರ್ಗಡೆ ಹೊಂದಿರಬೇಕು.
    ಭೌತಚಿಕಿತ್ಸಕ – 2 ಹುದ್ದೆಗಳು – ಪದವಿ ತೇರ್ಗಡೆ ಹೊಂದಿರಬೇಕು.
    ಸ್ಪೀಚ್ ಥೆರಪಿಸ್ಟ್ – 24 ಹುದ್ದೆಗಳು – ಬ್ಯಾಚುಲರ್ ಇನ್ ಆಡಿಯಾಲಜಿ ಮತ್ತು ಸ್ಪೀಚ್-ಲ್ಯಾಂಗ್ವೇಜ್ ಪ್ಯಾಥಾಲಜಿ ತೇರ್ಗಡೆ ಹೊಂದಿರಬೇಕು.
    ಜಿಲ್ಲಾ ಸಂಯೋಜಕರು – 1 ಹುದ್ದೆ – ಸ್ನಾತಕೋತ್ತರ ಪದವಿ ತೇರ್ಗಡೆ ಹೊಂದಿರಬೇಕು.
    ವೈದ್ಯಕೀಯ ಸಮಾಜ ಸೇವಕ -1 ಹುದ್ದೆಗಳು- MSW ತೇರ್ಗಡೆ ಹೊಂದಿರಬೇಕು.
    ಸೀನಿಯರ್‌ ರೆಸಿಡೆಂಟ್‌ (ನರವಿಜ್ಞಾನ/ನರಶಸ್ತ್ರಚಿಕಿತ್ಸೆ)/ಸೀನಿಯರ್‌ ರೆಸಿಡೆಂಟ್‌ (ವೈದ್ಯಕೀಯ)/ವೈದ್ಯಕೀಯ ಅಧಿಕಾರಿ- 33 ಹುದ್ದೆಗಳು- MBBS, M.D, DM,DNB ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ನರ್ಸ್ , ಕ್ಲಿನಿಕಲ್ ಸೈಕಾಲಜಿಸ್ಟ್ / ಸೈಕಾಲಜಿಸ್ಟ್, ಐಟಿ ಸಂಯೋಜಕರು, ನ್ಯೂರೋ ನರ್ಸ್ , ಭೌತಚಿಕಿತ್ಸಕ, ಸ್ಪೀಚ್ ಥೆರಪಿಸ್ಟ್, ಜಿಲ್ಲಾ ಸಂಯೋಜಕರು, ವೈದ್ಯಕೀಯ ಸಮಾಜ ಸೇವಕ ಈ ಹುದ್ದೆಗೆ ವಯಸ್ಸಿನ ಗರಿಷ್ಠ ಮಿತಿ 45 ವರ್ಷ, ಸೀನಿಯರ್‌ ರೆಸಿಡೆಂಟ್‌ (ನರವಿಜ್ಞಾನ/ನರಶಸ್ತ್ರಚಿಕಿತ್ಸೆ)/ಸೀನಿಯರ್‌ ರೆಸಿಡೆಂಟ್‌ (ವೈದ್ಯಕೀಯ)/ವೈದ್ಯಕೀಯ ಅಧಿಕಾರಿ 60 ವರ್ಷ ಗರಿಷ್ಠ ಮಿತಿ ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ವೇತನ:
    ನರ್ಸ್ ಹುದ್ದೆಗೆ ಆಯ್ಕೆಯಾದವರಿಗೆ ರೂ.20000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
    ಕ್ಲಿನಿಕಲ್ ಸೈಕಾಲಜಿಸ್ಟ್/ಮನಶ್ಶಾಸ್ತ್ರಜ್ಞ ಹುದ್ದೆಗೆ ಆಯ್ಕೆಯಾದವರಿಗೆ ರೂ.25000-40000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
    ಐಟಿ ಸಂಯೋಜಕರು ಹುದ್ದೆಗೆ ಆಯ್ಕೆಯಾದವರಿಗೆ ರೂ.55000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
    ನ್ಯೂರೋ ನರ್ಸ್ ಹುದ್ದೆಗೆ ಆಯ್ಕೆಯಾದವರಿಗೆ ರೂ.40000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
    ಭೌತಚಿಕಿತ್ಸಕ, ಸ್ಪೀಚ್ ಥೆರಪಿಸ್ಟ್, ಜಿಲ್ಲಾ ಸಂಯೋಜಕರು ಹುದ್ದೆಗೆ ಆಯ್ಕೆಯಾದವರಿಗೆ ರೂ.35000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
    ವೈದ್ಯಕೀಯ ಸಮಾಜ ಸೇವಕ ಹುದ್ದೆಗೆ ಆಯ್ಕೆಯಾದವರಿಗೆ ರೂ.40000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.
    ಸೀನಿಯರ್‌ ರೆಸಿಡೆಂಟ್‌ (ನರವಿಜ್ಞಾನ/ನರಶಸ್ತ್ರಚಿಕಿತ್ಸೆ)/ಸೀನಿಯರ್‌ ರೆಸಿಡೆಂಟ್‌ (ವೈದ್ಯಕೀಯ)/ವೈದ್ಯಕೀಯ ಅಧಿಕಾರಿ ಹುದ್ದೆಗೆ ಆಯ್ಕೆಯಾದವರಿಗೆ ರೂ.75000-150000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ತಮ್ಮ ಸೂಕ್ತ ದಾಖಲೆಗಳೊಂದಿಗೆ 24-ಜೂನ್-2024 ಈ ಕೆಳಗೆ ನೀಡಿದ ಸ್ಥಳದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು.

    ವಾಕ್-ಇನ್ ಸಂದರ್ಶನ ಸ್ಥಳದ ವಿವರಗಳು
    ಸೀನಿಯರ್‌ ರೆಸಿಡೆಂಟ್‌ ಮತ್ತು ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ: Executive Chamber, 2nd Floor, Directors’ Office, Bengaluru, Karnataka
    ಉಳಿದ ಹುದ್ದೆಗಳಿಗೆ: Board Room, 4th Floor, NBRC Building, NIMHANS, Bengaluru, Karnataka
    ನರ್ಸ್, ಕ್ಲಿನಿಕಲ್ ಸೈಕಾಲಜಿಸ್ಟ್- 18-ಜೂನ್-2024
    IT ಸಂಯೋಜಕರು 19-ಜೂನ್-2024
    ನ್ಯೂರೋ ನರ್ಸ್, ಫಿಸಿಯೋಥೆರಪಿಸ್ಟ್ – 21-ಜೂನ್-2024
    ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಮತ್ತು ಆಡಿಯಾಲಜಿಸ್ಟ್/ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್, ಜಿಲ್ಲಾ ಸಂಯೋಜಕರು, ವೈದ್ಯಕೀಯ ಸಮಾಜ ಸೇವಕ, ಹಿರಿಯ ನಿವಾಸಿ (ನರವಿಜ್ಞಾನ/ನರಶಸ್ತ್ರಚಿಕಿತ್ಸೆ)/ಹಿರಿಯ ನಿವಾಸಿ (ವೈದ್ಯಕೀಯ)/ವೈದ್ಯಕೀಯ ಅಧಿಕಾರಿ – 24-ಜೂನ್-2024

  • NIMHANS Jobs: ನಿಮ್ಹಾನ್ಸ್‌ನಲ್ಲಿ ಡೇಟಾ ಸುಪರ್‌ವೈಸರ್‌ ಹುದ್ದೆಗೆ ಅರ್ಜಿ ಆಹ್ವಾನ

    NIMHANS Jobs: ನಿಮ್ಹಾನ್ಸ್‌ನಲ್ಲಿ ಡೇಟಾ ಸುಪರ್‌ವೈಸರ್‌ ಹುದ್ದೆಗೆ ಅರ್ಜಿ ಆಹ್ವಾನ

    NIMHANS Recruitment 2024: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ, ಬೆಂಗಳೂರು (National Institute of Mental Health and Neuro Sciences) ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಒಟ್ಟು 01 ಹುದ್ದೆ ಖಾಲಿ ಇದ್ದು, ಡೇಟಾ ಮೇಲ್ವಿಚಾರಕರು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಈ ಹುದ್ದೆಗೆ ಪೋಸ್ಟಿಂಗ್‌ ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ನೇರ ಸಂದರ್ಶನ ನಡೆಯಲಿದ್ದು, ದಿನಾಂಕ 05-Jun-2024 ರಂದು 10:00 AM ರಂದು ವಾಕ್-ಇನ್-ಇಂಟರ್ವ್ಯೂ ನಡೆಯಲಿದೆ.

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆಯಾದ ದಿನಾಂಕ: 18-05-2024
    ನೇರ ಸಂದರ್ಶನದ ದಿನಾಂಕ: 05-ಜೂನ್-2024 10:00 AM ಗೆ.

    ಹುದ್ದೆಯ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ಇಲ್ಲಿ ಡೇಟಾ ಮೇಲ್ಚಿಚಾರಕರು ಹುದ್ದೆ ಖಾಲಿ ಇದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40000 ವೇತನ ಸಿಗಲಿದೆ.

    ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ ಮಾಡಿರಬೇಕು.

    ವಯೋಮಿತಿ: ಡೇಡಾ ಮೇಲ್ವಿಚಾರಕರು ಹುದ್ದೆಗೆ ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷ ಆಗಿರಬೇಕು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ ನಾರ್ಮ್ಸ್ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಲಿಖಿತ/ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಡೇಟಾ ಮೇಲ್ಚಿಚಾರಕರು ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಯೊಂದಿಗೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು. ವಿಳಾಸ ಈ ಕೆಳಗೆ ನೀಡಲಾಗಿದೆ.
    ನೇರ ಸಂದರ್ಶನದ ವಿಳಾಸ;
    Lecture hall-1, 1st floor, Old Administrative Building, NIMHANS, Bengaluru-560029 ಇಲ್ಲಿಗೆ ದಿನಾಂಕ 05-Jun-2024 10:00 AM ರಂದು ಅಭ್ಯರ್ಥಿಗಳು ಹಾಜರಿರಬೇಕು.

    ಅಧಿಕೃತ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ nimhans.ac.in
    ನೋಟಿಫಿಕೇಶನ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • NIMHANS Recruitment 2024: ಡಾಟಾ ಎಂಟ್ರಿ ಅಪರೇಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ರೂ.18 ಸಾವಿರ ಸಂಬಳ, ಈ ಕೂಡಲೇ ಅಪ್ಲೈ ಮಾಡಿ

    NIMHANS Recruitment 2024: ಡಾಟಾ ಎಂಟ್ರಿ ಅಪರೇಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ರೂ.18 ಸಾವಿರ ಸಂಬಳ, ಈ ಕೂಡಲೇ ಅಪ್ಲೈ ಮಾಡಿ

    NIMHANS Recruitment 2024: ನಿಮ್ಹಾನ್ಸ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1 ಡೇಟಾ ಎಂಟ್ರಿ ಅಪರೇಟರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಫೆ.23, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್‌ ನಡೆಯಲಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 09-02-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-02-2024

    ಹುದ್ದೆ ಹೆಸರು: ನಿಮ್ಹಾನ್ಸ್‌ನಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಅಪರೇಟರ್‌ (DEO) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ: 01 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ: ನಿಮ್ಹಾನ್ಸ್‌ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೋಗಿಗಳು ಮತ್ತು ಡೇಟಾ ಎಂಟ್ರಿ (ಜಿಸಿಪಿ ತರಬೇತಿ, ಕ್ಲಿನಿಕಲ್‌ ರಿಸರ್ಚ್‌ ಎಕ್ಸ್‌ಪೋಸರ್‌) ಒಳಗೊಂಡ ಆರು ತಿಂಗಳ ಸಂಶೋಧನಾ ಅನುಭವವನ್ನು ಹೊಂದಿರಬೇಕು.

    ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 40 ವರ್ಷ ಮೀರಿರಬಾರದು.

    ಆಯ್ಕೆ ವಿಧಾನ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ವೇತನ: ಡಾಟಾ ಎಂಟ್ರಿ ಅಪರೇಟರ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.18,000 ವೇತನ ದೊರಕಲಿದೆ.

    ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಆಫ್‌ಲೈನ್‌/ಪೋಸ್ಟ್‌ ಮೂಲಕ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ The Director, NIMHANS, P.B. No. 2900, D.R.College Post, Hosur Road. Bengaluru-560 029 ಇಲ್ಲಿಗೆ ಕಳುಹಿಸಬೇಕು. ಅಥವಾ [email protected] ಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಅಧಿಸೂಚನೆ ಸಂಖ್ಯೆ, ದಿನಾಂಕ, ಇಮೇಲ್ ಐಡಿ, ಸಂಪರ್ಕ ಸಂಖ್ಯೆ ಮತ್ತು ಅಂಚೆ ವಿಳಾಸವನ್ನು ನಮೂದಿಸಬೇಕು, ಇಲ್ಲದಿದ್ದರೆ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಸಂಬಂಧಿತ ದಾಖಲೆಗಳೊಂದಿಗೆ ಅರ್ಜಿಗಳನ್ನು ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • ನಿಮ್ಹಾನ್ಸ್‌ನಲ್ಲಿ ಉದ್ಯೋಗಾವಕಾಶ, 40 ಸಾವಿರ ರೂಪಾಯಿ ವೇತನ

    ನಿಮ್ಹಾನ್ಸ್‌ನಲ್ಲಿ ಉದ್ಯೋಗಾವಕಾಶ, 40 ಸಾವಿರ ರೂಪಾಯಿ ವೇತನ

    ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ (ನಿಮ್ಹಾನ್ಸ್‌)ಯಲ್ಲಿ 1 ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಯಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ: ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗೆ ಲೈಫ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ/ ಬಯೊಲಾಜಿಕಲ್‌ ಸೈನ್ಸ್‌/ ಬಯೋ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

    ಅನುಭವಿಗಳಿಗೆ ಆದ್ಯತೆ: ಮಾಲಿಕ್ಯುಲರ್‌ ಬಯೋಲಜಿ ಟೆಕ್ನಿಕ್ಸ್‌- ಡಿಎನ್‌ಎ/ ಆರ್‌ಎನ್‌ಎ/ ಪ್ರೊಟಿನ್‌, ಟಿಸ್ಯೂ ಕಲ್ಚರ್‌, ಸೆಲ್‌ ಕಲ್ವರ್‌ ಟೆಕ್ನಿಕ್ಸ್‌ ಆಂಡ್‌ ಇಮೇಜಿಂಗ್‌ ಟೆಕ್ನಿಕ್ಸ್‌ ಮುಂತಾದ ಮಾಲಿಕ್ಯುಲರ್‌ ಬಯೋಲಜಿ ಟೆಕ್ನಿಕ್ಸ್‌ನಲ್ಲಿ ಆರು ತಿಂಗಳ ರಿಸರ್ಚ್‌ ಅನುಭವ ಇರುವವರಿಗೆ ಆದ್ಯತೆ ನೀಡಲಾಗುತ್ತದೆ.

    ವಯೋಮಿತಿ: ಅರ್ಜಿ ಸಲ್ಲಿಸಲು ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ವೇತನ: ತಿಂಗಳಿಗೆ 40 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ.

    ಕೆಲಸದ ಅವಧಿ: ಒಂದು ವರ್ಷ

    ಆಯ್ಕೆ ಪ್ರಕ್ರಿಯೆ: ನೇರ ಸಂದರ್ಶನ

    ಸಂದರ್ಶನ ದಿನಾಂಕ: ಜನವರಿ 29, 2024

    ಸಂದರ್ಶನ ನಡೆಯುವ ಸ್ಥಳ: Committee Room, beside old Registrar Office, Administrative Block, NIMHANS,
    Bengaluru-29

    ಲಿಖಿತ ಪರೀಕ್ಷೆ/ಸ್ಕಿಲ್‌ ಟೆಸ್ಟ್‌ ನಡೆಯುವ ಹತ್ತು ನಿಮಿಷದ ಮೊದಲು ಅಭ್ಯರ್ಥಿಗಳು ಸ್ಥಳದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ: nimhans.ac.in

    Download Notification