Tag: News in Kannada

  • NMPA Recruitment 2024: ನವಮಂಗಳೂರು ಬಂದರಿನಲ್ಲಿ ಉದ್ಯೋಗಾವಕಾಶ; 15-03-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಈ ಕೂಡಲೇ ಅರ್ಜಿ ಸಲ್ಲಿಸಿ

    NMPA Recruitment 2024: ನವಮಂಗಳೂರು ಬಂದರಿನಲ್ಲಿ ಉದ್ಯೋಗಾವಕಾಶ; 15-03-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಈ ಕೂಡಲೇ ಅರ್ಜಿ ಸಲ್ಲಿಸಿ

    NMPA Recruitment 2024: ನ್ಯೂ ಮಂಗಳೂರು ಬಂದರು ಪ್ರಾಧಿಕಾರ (NMPA) ದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 01 ಹುದ್ದೆ ಖಾಲಿ ಇದ್ದು, ಆಸಕ್ತರು ಉಪ ನಿರ್ದೇಶಕ (ಸಂಶೋಧನೆ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಸಲ್ಲಿಸಬಹುದು. ಮಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅಭ್ಯರ್ಥಿಗಳು 15-Mar-2024 ರಂದು ಅಥವಾ ಮೊದಲು ಅರ್ಜಿ ಸಲ್ಲಿಸಬೇಕು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15-02-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-03-2024

    ಹುದ್ದೆ ವಿವರ:
    ಹುದ್ದೆ: ಡೆಪ್ಯುಟಿ ಡೈರೆಕ್ಟರ್‌ (ರಿಸರ್ಚ್‌) ಹುದ್ದೆಗೆ ಎನ್‌ಎಂಪಿಟಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

    ವೇತನ: ಉಪನಿರ್ದೇಶಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.50000-160000ರೂ. ವರೆಗೆ ವೇತನ ದೊರಕಲಿದೆ.

    ಶೈಕ್ಷಣಿಕ ಅರ್ಹತೆ: NMPA ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ ಎಲೆಕ್ಟ್ರಾನಿಕ್ಸ್/ಸ್ಟ್ಯಾಟಿಸ್ಟಿಕ್ಸ್/ಗಣಿತದಲ್ಲಿ ಪದವಿಯನ್ನು ಮಾಡಿರಬೇಕು.

    ವಯೋಮಿತಿ: ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷ ಮೀರರಬಾರದು. ನ್ಯೂ ಮಂಗಳೂರು ಬಂದರು ಪ್ರಾಧಿಕಾರ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಅಭ್ಯರ್ಥಿಗಳು ಅರ್ಜಿಯನ್ನು ಆಫ್‌ಲೈನ್‌ ಮೂಲಕ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್, ಅಥವಾ ಯಾವುದೇ ಇತರ ಸೇವೆಗಳ ಮೂಲಕ, Manager, New Mangalore Port Authority, Panambur, Mangalore-575010 ಇಲ್ಲಿಗೆ ದಿನಾಂಕ 15-ಮಾರ್ಚ್-2024ರಂದು ಅಥವಾ ಮೊದಲು ಕಳುಹಿಸಬೇಕು.

  • VA Post: 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆ, ಹೆಚ್ಚಿನ ಮಾಹಿತಿ ಇಲ್ಲಿದೆ

    VA Post: 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆ, ಹೆಚ್ಚಿನ ಮಾಹಿತಿ ಇಲ್ಲಿದೆ

    Karnataka Revenue Department Recruitment: ಕರ್ನಾಟಕ ಸರಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಹುದ್ದೆಗಳಿಗೆ ನೇಮಕಾತಿ ಶೀಘ್ರವೇ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಹುದ್ದೆಗೆ ಸಂಬಂಧಿಸಿದ ತಯಾರಿ ಮಾಡಿಕೊಳ್ಳಬಹುದು. ಆನ್‌ಲೈನ್‌ ಅರ್ಜಿ ಬಿಡುಗಡೆ ಲಿಂಕ್‌ ಸದ್ಯಕ್ಕೆ ಬಿಡುಗಡೆಯಾಗಿಲ್ಲ. ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ ಮೂಲಕ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 04-03-2024 ರ ಬೆಳಿಗ್ಗೆ 11.00 ರಿಂದ
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 03-04-2024 ರ ರಾತ್ರಿ 11.59 ರವರೆಗೆ
    ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ: 06-04-2024

    ಹುದ್ದೆಯ ವಿವರ ಇಲ್ಲಿದೆ
    ಹುದ್ದೆ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆಗಳ ವಿವರ
    ಬೆಂಗಳೂರು ನಗರ- 32
    ಬೆಂಗಳೂರು ಗ್ರಾಮಾಂತರ- 34
    ಚಿತ್ರದುರ್ಗ- 32
    ಕೋಲಾರ – 45
    ತುಮಕೂರು – 73
    ರಾಮನಗರ – 51
    ಚಿಕ್ಕಬಳ್ಳಾಪುರ – 42
    ಶಿವಮೊಗ್ಗ – 31
    ಮೈಸೂರು- 66
    ಚಾಮರಾಜನಗರ- 55
    ಮಂಡ್ಯ -60
    ಹಾಸನ -54
    ಚಿಕ್ಕಮಗಳೂರು- 23
    ಕೊಡಗು- 6
    ಉಡುಪಿ – 22
    ದಕ್ಷಿಣ ಕನ್ನಡ- 50
    ಬೆಳಗಾವಿ – 64
    ವಿಜಯಪುರ- 7
    ಬಾಗಲಕೋಟೆ – 22
    ಧಾರವಾಡ -12
    ಗದಗ – 30
    ಹಾವೇರಿ- 34
    ಉತ್ತರ ಕನ್ನಡ- 2
    ಕಲಬುರಗಿ- 67
    ರಾಯಚೂರು- 4
    ಕೊಪ್ಪಳ -19
    ಬಳ್ಳಾರಿ -17
    ಬೀದರ್ -24
    ಯಾದಗಿರಿ -9
    ವಿಜಯನಗರ- 3

    ವೇತನ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವವರಿಗೆ ಮಾಸಿಕ ರೂ.21,400-42000ರೂ. ವೇತನ ದೊರಕಲಿದೆ.

    ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (ಪ್ರವರ್ಗ-2ಎ/2ಬಿ/3ಎ/3ಬಿ) ಹುದ್ದೆಗೆ ಅಭ್ಯರ್ಥಿಗಳು ರೂ.750 ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳು ರೂ.500 ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
    (ಓಮ್ಮೆ ಪಾವತಿ ಮಾಡಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ)

    ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ವಿದ್ಯಾರ್ಹತೆಯ ಕುರಿತ ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

    ವಯೋಮಿತಿ: ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ.
    ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
    ಪ್ರವರ್ಗ 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

    ಆಯ್ಕೆ ವಿಧಾನ: ಮೇಲ್ಕಂಡ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್‌ಲೈನ್‌ -ಒಎಂಆರ್‌ ಮಾದರಿ ಮೂಲಕ ಪರೀಕ್ಷೆ ನಡೆಸಲಾಗುವುದು.

    ಅರ್ಜಿ ಸಲ್ಲಿಸುವ ವಿಧಾನ;
    ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ http://kea.kar.nic.in ನಲ್ಲಿ ತೋರಿಸುವ ಲಿಂಕ್‌ ಮೂಲಕ ಆನ್‌ಲೈನ್‌ ಅರ್ಜಿಯನ್ನು ಭರ್ತಿ ಮಾಡಬೇಕು.
    ಒಂದು ಜಿಲ್ಲೆಗೆ ಮಾತ್ರ ಅಭ್ಯರ್ಥಿಯು ಹುದ್ದೆ ಬಯಸಿ ಅರ್ಜಿಯನ್ನು ಸಲ್ಲಿಸಬೇಕು.
    ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ/ತಿದ್ದುಪಡಿ ಮಾಡಲು ಮತ್ತೊಮ್ಮೆ ಅವಕಾಶವಿಲ್ಲ.

    ಅಧಿಸೂಚನೆಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • MTS Recruitment: 10th ಪಾಸಾದವರಿಗೆ ಸಿಹಿ ಸುದ್ದಿ, ಎಂಟಿಎಸ್‌ನಲ್ಲಿ ಉದ್ಯೋಗಾವಕಾಶ; ಮಾಸಿಕ ರೂ.50 ಸಾವಿರಕ್ಕಿಂತಲೂ ಹೆಚ್ಚಿನ ಸಂಬಳ

    MTS Recruitment: 10th ಪಾಸಾದವರಿಗೆ ಸಿಹಿ ಸುದ್ದಿ, ಎಂಟಿಎಸ್‌ನಲ್ಲಿ ಉದ್ಯೋಗಾವಕಾಶ; ಮಾಸಿಕ ರೂ.50 ಸಾವಿರಕ್ಕಿಂತಲೂ ಹೆಚ್ಚಿನ ಸಂಬಳ

    MTS Recruitment: 10ನೇ ತರಗತಿ ಪಾಸಾದ ಯುವಕರಿಗೆ ಸಿಹಿ ಸುದ್ದಿ. ದೆಹಲಿ ಸಿವಿಲ್ ಸರ್ವೀಸಸ್ ಸೆಲೆಕ್ಷನ್ ಬೋರ್ಡ್ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗೆ ನೀಡಲಾದ ಹುದ್ದೆಯ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಫೆಬ್ರವರಿ 8 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಮಾರ್ಚ್ 8,2024 ರವರೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 08-02-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-03-2024

    ಹುದ್ದೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ;
    ಹುದ್ದೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ತರಬೇತಿ ಮತ್ತು ತಾಂತ್ರಿಕ ಶಿಕ್ಷಣ, ಪ್ರಧಾನ ಖಾತೆಗಳು, ವಿಧಾನಸಭೆಯ ಕಚೇರಿ, ಮುಖ್ಯ ಚುನಾವಣಾಧಿಕಾರಿಗಳ ಸಚಿವಾಲಯ, ಡಿಎಸ್‌ಎಸ್‌ಎಸ್‌ಬಿ, ಅರ್ಥಶಾಸ್ತ್ರ ನಿರ್ದೇಶನಾಲಯ ಸೇರಿದಂತೆ ಅಂಕಿಅಂಶ, ಯೋಜನೆ, ತರಬೇತಿ ನಿರ್ದೇಶನಾಲಯಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

    ಹುದ್ದೆ ಸಂಖ್ಯೆ: ಒಟ್ಟು 567 ಎಂಟಿಎಸ್ ಹುದ್ದೆಗಳು ಖಾಲಿ ಇದೆ.

    ವಿದ್ಯಾರ್ಹತೆ: ಈ ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು.

    ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿಯು 18 ರಿಂದ 27 ವರ್ಷಗಳ ನಡುವೆ ಇರಬೇಕು. ಕೆಲವೊಂದು ಹುದ್ದೆಗಳಿಗೆ 18 ವರ್ಷದಿಂದ 25 ವರ್ಷ ವಯೋಮಿತಿ ಇರಲಿದೆ. ಅರ್ಹತೆ ಮತ್ತು ವಯಸ್ಸಿನ ಮಿತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು.

    ವೇತನ: ಈ ಮೇಲ್ಕಂಡ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.18000-ರೂ.56900 ವೇತನ ನೀಡಲಾಗುವುದು.

    ಅರ್ಜಿ ಶುಲ್ಕ: ಮಹಿಳೆಯರು, ಎಸ್‌ಸಿ ಮತ್ತು ಎಸ್‌ಟಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಉಳಿದ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಸೂಚಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಶ್ರೇಣಿ 1 ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಪರೀಕ್ಷೆಯು ಆನ್‌ಲೈನ್ ಮೂಲಕ ನಡೆಯುತ್ತದೆ. ಆಯ್ಕೆ ಮಂಡಳಿಯು ಪರೀಕ್ಷೆಯ ದಿನಾಂಕವನ್ನು ಮಂಡಳಿಯ ವೆಬ್‌ಸೈಟ್ ಮೂಲಕ ಸೂಕ್ತ ಸಮಯದಲ್ಲಿ ತಿಳಿಸುತ್ತದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರವೇಶ ಕಾರ್ಡ್ ನೀಡಲಾಗುತ್ತದೆ.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳಿಗೆ ಮೊದಲಿಗೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ dsssbonline.nic.in ಗೆ ಭೇಟಿ ನೀಡಬೇಕು.
    ಎಂಟಿಎಸ್‌ ಸೂಚನೆ ನೀಡಿದ ಅಪ್ಲಿಕೇಶನ್‌ ಲಿಂಕ್‌ನ್ನು ಕ್ಲಿಕ್‌ ಮಾಡಿ
    ಅನಂತರ ಅಭ್ಯರ್ಥಿಗಳು ಅಲ್ಲಿ ಕೇಳಿದ ವಿವರಗಳನ್ನು ಭರ್ತಿ ಮಾಡಿ, ಸೂಕ್ತ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು.
    ಅನಂತರ ಶುಲ್ಕವನ್ನು ಪಾವತಿಸಬೇಕು, ಕೊನೆಗೆ ಸಲ್ಲಿಸು ಬಟನ್‌ ಅನ್ನು ಕ್ಲಿಕ್‌ ಮಾಡಬೇಕು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್ dsssbonline.nic.in ಗೆ ಭೇಟಿ ನೀಡಿ ವಿವರಗಳನ್ನು ಪಡೆದುಕೊಳ್ಳಬಹುದು.

  • BEL Jobs: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ 47 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ರೂ.40ಸಾವಿರ ಸಂಬಳ

    BEL Jobs: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನಲ್ಲಿ 47 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ರೂ.40ಸಾವಿರ ಸಂಬಳ

    BEL Recruitment 2024: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 47 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬಿಇಎಲ್‌ನಲ್ಲಿ ಟ್ರೈನಿ ಇಂಜಿನಿಯರ್-I ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೊಚ್ಚಿ – ಬೆಂಗಳೂರು ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಉದ್ಯೋಗದ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು 07-Mar-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 21-02-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-03-2024

    ಹುದ್ದೆಗಳ ವಿವರ;
    ಹುದ್ದೆಯ ಹೆಸರು; ಟ್ರೈನಿ ಇಂಜಿನಿಯರ್‌-1 ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
    ಹುದ್ದೆ ಸಂಖ್ಯೆ: 47 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಶೈಕ್ಷಣಿಕ ಅರ್ಹತೆ: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ CSE/IT ನಲ್ಲಿ B.Sc, B.E ಅಥವಾ B.Tech ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು 28 ವರ್ಷ ಮೀರಿರಬಾರದು. OBC (NCL) ಅಭ್ಯರ್ಥಿಗಳಿಗೆ 03 ವರ್ಷ, SC/ST ಅಭ್ಯರ್ಥಿಗಳಿಗೆ 05 ವರ್ಷ, PwBD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವೇತನ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30,000-ರೂ.40,000 ವರೆಗೆ ವೇತನ ಸಿಗಲಿದೆ.

    ಅರ್ಜಿ ಶುಲ್ಕ: ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ ರೂ.177/- ಅರ್ಜಿ ಶುಲ್ಕವನ್ನು ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್‌ ಕ್ಲಿಕ್‌ ಮಾಡಿ

  • Indian Navy SSC Recruitment: ಭಾರತೀಯ ನೌಕಾಪಡೆಯಲ್ಲಿ 254 ಹುದ್ದೆಗಳು, ಆಸಕ್ತರು ಅರ್ಜಿ ಸಲ್ಲಿಸಿ

    Indian Navy SSC Recruitment: ಭಾರತೀಯ ನೌಕಾಪಡೆಯಲ್ಲಿ 254 ಹುದ್ದೆಗಳು, ಆಸಕ್ತರು ಅರ್ಜಿ ಸಲ್ಲಿಸಿ

    Indian Navy Recruitment 2024: ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 254 ಶಾರ್ಟ್ ಸರ್ವಿಸ್ ಕಮಿಷನ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಶಾರ್ಟ್ ಸರ್ವಿಸ್ ಕಮಿಷನ್ ಆಫೀಸರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುವವರು ಈ ಉದ್ಯೋಗಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 10-Mar-2024 ರಂದು ಅಥವಾ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 24-02-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-03-2024

    ಹುದ್ದೆಗಳ ವಿವರ:
    ಜನರಲ್‌ ಸರ್ವಿಸ್‌-50 ಹುದ್ದೆಗಳು
    ಪೈಲಟ್‌ – 20 ಹುದ್ದೆಗಳು
    ನವಲ್‌ ಏರ್‌ ಒಪರೇಷನ್ಸ್‌ ಆಫೀಸರ್‌ – 18 ಹುದ್ದೆಗಳು
    ಏರ್‌ ಟ್ರಾಫಿಕ್‌ ಕಂಟ್ರೋಲರ್‌ – 8 ಹುದ್ದೆಗಳು
    ಲಾಜಿಸ್ಟಿಕ್ಸ್‌ – 30 ಹುದ್ದೆಗಳು
    ನವಲ್‌ ಅರ್ಮಾನೆಂಟ್‌ ಇನ್ಸ್‌ಪ್ಕ್ಟೋರೇಟ್‌ (NAIC) – 10 ಹುದ್ದೆಗಳು
    ಎಜುಕೇಶನ್‌ – 18 ಹುದ್ದೆಗಳು
    ಇಂಜಿನಿಯರಿಂಗ್‌ ಬ್ರಾಂಚ್‌ (ಜನರಲ್‌ ಸರ್ವಿಸ್‌ (ಜಿಎಸ್‌))- 30 ಹುದ್ದೆಗಳು
    ಎಲೆಕ್ಟ್ರಿಯಲ್‌ ಬ್ರಾಚ್‌ (ಜನರಲ್‌ ಸರ್ವಿಸ್‌ (ಜಿಎಸ್‌)) – 50 ಹುದ್ದೆಗಳು
    ನವಲ್‌ ಕಂಸ್ಟ್ರಕ್ಟರ್‌ – 20 ಹುದ್ದೆಗಳು

    ಒಟ್ಟು 254 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ: ಜನರಲ್‌ ಸರ್ವಿಸ್‌, ಪೈಲಟ್‌, ನವಲ್‌ ಏರ್‌ ಒಪರೇಷನ್ಸ್‌ ಆಫೀಸರ್‌,ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿಟೆಕ್‌ ತೇರ್ಗಡೆ ಹೊಂದಿರಬೇಕು.
    ಲಾಜಿಸ್ಟಿಕ್ಸ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ, ಬಿಕಾಂ ಅಥವಾ ಬಿಟೆಕ್‌, ಎಂಸಿಎ, ಎಂ.ಎಸ್ಸಿ, ಎಂಬಿಎ, ಪೋಸ್ಟ್‌ ಗ್ರಾಜ್ಯುಯೇಷನ್‌ ಹೊಂದಿರಬೇಕು.
    ನವಲ್‌ ಅರ್ಮಾಮೆಂಟ್‌ ಇನ್ಸ್‌ಪೆಕ್ಟೊರೇಟ್‌ ಕ್ಯಾಡರ್‌ (NAIC) ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ, ಅಥವಾ ಬಿ.ಟೆಕ್‌ ವಿದ್ಯಾಭ್ಯಾಸ ಮಾಡಿರಬೇಕು.
    ಎಜುಕೇಷನ್-‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ, ಬಿಇ ಅಥವಾ ಬಿಟೆಕ್‌, ಎಂಎಸ್ಸಿ, ಎಂ.ಟೆಕ್‌ ಈ ವಿದ್ಯಾರ್ಹತೆಯನ್ನು ಹೊಂದಿರಬೇಕು.
    ಇಂಜಿನಿಯರಿಂಗ್‌ ಬ್ರಾಂಚ್‌ (GS), ಎಲೆಕ್ಟ್ರಿಕಲ್‌ ಬ್ರಾಂಚ್‌ (GS), ನವಲ್‌ ಕಂಸ್ಟ್ರಕ್ಟರ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ, ಬಿಇ ಅಥವಾ ಬಿಟೆಕ್‌, ಎಂ.ಎಸ್ಸಿ, ಎಂ.ಟೆಕ್‌ ವಿದ್ಯಾರ್ಹತೆ ಹೊಂದಿರಬೇಕು.

    ವಯೋಮಿತಿ: ಭಾರತೀಯ ನೌಕಾಪಡೆಯ ನಿಯಮಾನುಸಾರ ವಯೋಮಿತಿ ನಿಗದಿಪಡಿಸಲಾಗಿದೆ. ಹಾಗೆನೇ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೆರಿಟ್‌ ಲಿಸ್ಟ್‌, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ

  • AAI Recruitment 2024: ಏರ್​ಪೋರ್ಟ್ಸ್ ಅಥಾರಿಟಿಯಲ್ಲಿ 490 ಹುದ್ದೆಗಳ ನೇಮಕಾತಿ; ಮಾಸಿಕ ವೇತನ 1.40 ಲಕ್ಷ; ಹೆಚ್ಚಿನ ವಿವರ ಇಲ್ಲಿದೆ

    AAI Recruitment 2024: ಏರ್​ಪೋರ್ಟ್ಸ್ ಅಥಾರಿಟಿಯಲ್ಲಿ 490 ಹುದ್ದೆಗಳ ನೇಮಕಾತಿ; ಮಾಸಿಕ ವೇತನ 1.40 ಲಕ್ಷ; ಹೆಚ್ಚಿನ ವಿವರ ಇಲ್ಲಿದೆ

    AAI Recruitment 2024: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. 490 ಜೂನಿಯರ್‌ ಎಕ್ಸಿಕ್ಯೂಟಿವ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಖಿಲ ಭಾರತ ಸರಕಾರದಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಅರ್ಜಿ ಸಲ್ಲಿಕೆ ಆರಂಭವು ಎಪ್ರಿಲ್‌, 02, 2024 ರಂದು ನಡೆಯಲಿದ್ದು, ಮೇ 01, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಕೇಂದ್ರ ಸರಕಾರದ ಉದ್ಯೋಗ ಬಯಸುವವರಿಗೆ ಇದೊಂದು ಸದಾವಕಾಶ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 02-04-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 01-05-2024

    ಹುದ್ದೆಗಳ ವಿವರ ಇಲ್ಲಿದೆ;
    ಜ್ಯೂನಿಯರ್‌ ಎಕ್ಸಿಕ್ಯೂಟಿವ್‌ (ಆರ್ಕಿಟೆಕ್ಚರ್‌) -3 ಹುದ್ದೆಗಳು ಖಾಲಿ ಇದೆ
    ಜ್ಯೂನಿಯರ್‌ ಎಕ್ಸಿಕ್ಯೂಟಿವ್‌ (ಇಂಜಿನಿಯರಿಂಗ್‌-ಸಿವಿಲ್‌) – 90 ಹುದ್ದೆಗಳು
    ಜ್ಯೂನಿಯರ್‌ ಎಕ್ಸಿಕ್ಯೂಟಿವ್‌ (ಇಂಜಿನಿಯರಿಂಗ್‌ ಎಲೆಕ್ಟ್ರಿಕಲ್)‌ – 106 ಹುದ್ದೆಗಳು
    ಜ್ಯೂನಿಯರ್‌ ಎಕ್ಸಿಕ್ಯೂಟಿವ್‌ (ಎಲೆಕ್ಟ್ರೋನಿಕ್ಸ್‌) – 278 ಹುದ್ದೆಗಳು
    ಜ್ಯೂನಿಯರ್‌ ಎಕ್ಸಿಕ್ಯೂಟಿವ್‌ (ಇನ್‌ಫಾರ್ಮೇಶನ್‌ ಟೆಕ್ನಾಲಜಿ) – 13 ಹುದ್ದೆಗಳು

    ಒಟ್ಟು 490 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

    ವಿದ್ಯಾರ್ಹತೆ:
    ಜ್ಯೂನಿಯರ್‌ ಎಕ್ಸಿಕ್ಯೂಟಿವ್‌ (ಆರ್ಕಿಟೆಕ್ಚರ್‌) – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆರ್ಕಿಟೆಕ್ಚರ್‌ನಲ್ಲಿ ಡಿಗ್ರಿ ಮಾಡಿರಬೇಕು.
    ಜ್ಯೂನಿಯರ್‌ ಎಕ್ಸಿಕ್ಯೂಟಿವ್‌ (ಇಂಜಿನಿಯರಿಂಗ್‌-ಸಿವಿಲ್‌) – ಈ ಹುದ್ದೆಗೆ ಸಿವಿಲ್‌ ಇಂಜಿನಿಯರಿಂಗ್/ಟೆಕ್ನಾಲಜಿ ಯಲ್ಲಿ ಡಿಗ್ರಿ ಮಾಡಿರುವವರು ಅರ್ಜಿ ಸಲ್ಲಿಸಬಹುದು.
    ಜ್ಯೂನಿಯರ್‌ ಎಕ್ಸಿಕ್ಯೂಟಿವ್‌ (ಇಂಜಿನಿಯರಿಂಗ್‌ ಎಲೆಕ್ಟ್ರಿಕಲ್)‌ – ಎಲೆಕ್ಟ್ರಾನಿಕ್ಸ್‌/ಟೆಲಿಕಮ್ಯುನಿಕೇಷನ್ಸ್‌/ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್/‌ ಟೆಕ್ನಾಲಜಿ ಯಲ್ಲಿ ಡಿಗ್ರಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
    ಜ್ಯೂನಿಯರ್‌ ಎಕ್ಸಿಕ್ಯೂಟಿವ್‌ (ಎಲೆಕ್ಟ್ರೋನಿಕ್ಸ್‌) – ಎಲೆಕ್ಟ್ರಾನಿಕ್ಸ್‌/ಟೆಲಿಕಮ್ಯುನಿಕೇಷನ್ಸ್‌/ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌/ ಟೆಕ್ನಾಲಜಿ ಯಲ್ಲಿ ಡಿಗ್ರಿ ಮಾಡಿ ತೇರ್ಗಡೆ ಹೊಂದಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು.
    ಜ್ಯೂನಿಯರ್‌ ಎಕ್ಸಿಕ್ಯೂಟಿವ್‌ (ಇನ್‌ಫಾರ್ಮೇಶನ್‌ ಟೆಕ್ನಾಲಜಿ) – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್‌ ಸೈನ್ಸ್‌/ ಕಂಪ್ಯೂಟರ್‌ ಇಂಜಿನಿಯರಿಂಗ್/‌ ಎಲೆಕ್ಟ್ರಾನಿಕ್ಸ್‌, ಎಂಸಿಎ ಮಾಡಿದವರು ಅರ್ಜಿ ಸಲ್ಲಿಸಬಹುದು.

    ವಯೋಮಿತಿ: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ನಿಯಮಗಳ ಪ್ರಕಾರ, ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಗರಿಷ್ಠ 27 ವರ್ಷ ಮೀರಿರಬಾರದು. ಒಬಿಸಿ (ಎನ್‌ಸಿಎಲ್‌) ಅಭ್ಯರ್ಥಿಗಳಿಗೆ 03 ವರ್ಷ, SC/ST ಅಭ್ಯರ್ಥಿಗಳಿಗೆ 05 ವರ್ಷ, PwBD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಎಸ್‌/ಎಸ್‌ಟಿ/PwBD/ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಉಳಿದ ಅಭ್ಯರ್ಥಿಗಳು ರೂ.300 ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಲು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

    ವೇತನ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40,000-1,40,000ರೂ. ವರೆಗೆ ವೇತನ ಸಿಗಲಿದೆ.

    ಆಯ್ಕೆ ಪ್ರಕ್ರಿಯೆ: ಗೇಟ್ ಅಂಕಗಳು, ಅರ್ಜಿ ಪರಿಶೀಲನೆಯ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್‌ ಕ್ಲಿಕ್‌ ಮಾಡಿ