Tag: neet

  • NEET PG ಪರೀಕ್ಷೆ ಮುಂದೂಡಿಕೆ

    NEET PG ಪರೀಕ್ಷೆ ಮುಂದೂಡಿಕೆ

    ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್‌ ಫಾರ್‌ ಫೋಸ್ಟ್‌ ಗ್ರಾಜ್ಯುಯೆಟ್, ನೀಟ್ ಪಿಜಿ 2021 ಪರೀಕ್ಷೆಯನ್ನು ಕೇಂದ್ರ ಸರಕಾರವು ಮುಂದೂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    ನೀಟ್ ಪಿಜಿ ಪರೀಕ್ಷೆಯನ್ನು ಎಪ್ರಿಲ್ 18, 2021 ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಈ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ.

    ನೀಟ್ ಪಿಜಿ 2021 ಪರೀಕ್ಷೆ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ನ್ಯಾಷಲನ್ ಬೋರ್ಡ್‌ ಆಫ್ ಎಕ್ಸಾಮಿನೇಷನ್‌ನ ಅಫೀಶಿಯಲ್ ವೆಬ್‌ಸೈಟ್‌ ಅಥವಾ ಅಫೀಶಿಯಲ್ ಟ್ವಿಟ್ಟರ್ ಹ್ಯಾಂಡಲ್ ಫಾಲೋ ಮಾಡಬಹುದಾಗಿದೆ.

  • ನೀಟ್ ವೇಳಾಪಟ್ಟಿ ಬಿಡುಗಡೆ

    ನೀಟ್ ವೇಳಾಪಟ್ಟಿ ಬಿಡುಗಡೆ

    ರಾಷ್ಟ್ರೀಯ ಪರೀಕ್ಷೆ ಏಜೆನ್ಸಿಯು ( ಎನ್‌ಟಿಎ) ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್ ( ನೀಟ್) 2021 ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ನೀಟ್ 2021(ಯುಜಿ) ಪರೀಕ್ಷೆಗೆ ಆನ್‌ಲೈನ್ ಮೂಲಕ ರಿಜಿಸ್ಟ್ರೇಶನ್ ಪಡೆಯಬಹುದಾಗಿದೆ. ನೀಟ್ ಯುಜಿ ಪರೀಕ್ಷೆ ವೇಳಾಪಟ್ಟಿತಯ ಆಗಸ್ಟ್ 01, 2021 ರಂದು 11 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಬಾರಿ ನೀಟ್ 2021 ಪರೀಕ್ಷೆಯು ಒಂದೇ ಬಾರಿ ನಡೆಸಲಿದೆ. ಈ ಬಗ್ಗೆ ಎನ್‌ಟಿಎ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಇದಕ್ಕೂ ಮೊದಲು ನೀಟ್ ಪರೀಕ್ಷೆ ಎರಡು ಬಾರಿ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಎನ್‌ಟಿಎ ಅಭ್ಯರ್ಥಿಗಳ ಸಂಶಯಕ್ಕೆ ಉತ್ತರ ನೀಡಿದೆ.

    ನೀಟ್(ಯುಜಿ) ೨೦೨೧ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು https://nta.ac.in, https://ntaneet.nic.in ವೆಬ್‌ಸೈಟ್ ಭೇಟಿ ನೀಡಬಹುದು