Tag: Mysore

  • ಆಡಳಿತ ತರಬೇತಿ ಸಂಸ್ಥೆ ಮೈಸೂರು, ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ

    ಆಡಳಿತ ತರಬೇತಿ ಸಂಸ್ಥೆ ಮೈಸೂರು ಇಲ್ಲಿ ಇ-ಗರ್ವನೆನ್ಸ್ ಮತ್ತು ಡೇಟಾ ಅನಾಲಿಟಿಕ್ಸ್ ಕೇಂದ್ರದಲ್ಲಿ ಖಾಲಿಯಿರುವ ಕೆಳಕಂಡ ಹುದ್ದೆಗಳನ್ನು ಗುತ್ತಿಗೆ/ನಿಯೋಜನೆ ಆಧಾರದ ಮೇಲೆ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.

    ಹುದ್ದೆಗಳ ವಿವರ : ಸೀನಿಯರ್ ಫ್ಯಾಕಲ್ಟಿ- 01 ಹುದ್ದೆ
    ಸೀನಿಯರ್ ಫ್ಯಾಕಲ್ಟಿ ( ಕೇಂದ್ರ ಕಚೇರಿ ಬೆಂಗಳೂರು, ಬೆಳಗಾಂ, ಕಲ್ಬುರ್ಗಿ) – 03 ಹುದ್ದೆ

    ಜೂನಿಯರ್ ಫ್ಯಾಕಲ್ಟಿ -01

    ಜೂನಿಯರ್ ಫ್ಯಾಕಯ ಕಮ್ ರಿಸರ್ಚ್ ಅಸಿಸ್ಟೆಂಟ್ ‌- 03

    ರಿಸರ್ಚ್ ಅಸಿಸ್ಟೆಂಟ್- 02

    ಮಲ್ಟಿ ಟಾಸ್ಕಿಂಗ್ ಅಸಿಸ್ಟೆಂಟ್ – 01

    ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ವಿದ್ಯಾರ್ಹತೆ ವಿವರವು ಸಂಸ್ಥೆಯ ವೆಬ್ಸೈಟ್ www.atimysore.gov.in ನಲ್ಲಿ ದಿನಾಂಕ 08-09-2021 ರಿಂದ ಲಭ್ಯವಿರುತ್ತದೆ.

    ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಹಾ ನಿರ್ದೇಶಕರು, ಆ.ತ.ಸಂ.ಮೈಸೂರು ವಿಳಾಸಕ್ಕೆ ದಿ.17-09-2021 ರೊಳಗಾಗಿ ನೊಂದಾಯಿತ ಅರ್ಜಿಯ ಮೂಲಕ ಹಾಗೂ ಸಾಫ್ಟ್ ಕಾಫಿಯನ್ನು ಇ-ಮೇಲ್ ಮೂಲಕ [email protected] ವಿಳಾಸಕ್ಕೆ ಕಳುಹಿಸುವುದು. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರತಿ ಹುದ್ದೆಗೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವುದು. ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಹಾಜರಾಗುವುದು.

  • ಮೈಸೂರು ವಿಶ್ವವಿದ್ಯಾನಿಲಯದಲ್ಲಿ 4 ಪ್ರಾಜೆಕ್ಟ್ ಫೆಲೋ ಹುದ್ದೆ

    ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಪ್ರಾಜೆಕ್ಟ್ ಫೆಲೋ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ : 4 ಹುದ್ದೆಗಳು.

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.12,000/- ವೇತನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ : ಅಭ್ಯರ್ಥಿಗಳು 55% ಅಂಕಗಳನ್ನು ಎಂ.ಎಸ್ಸಿ ಇನ್ ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಫಿಸಿಕ್ಸ್, ಮೆಟಿರೀಯಲ್ ಸೈನ್ಸ್ ಪಡೆದಿರಬೇಕು.

    ಅಭ್ಯರ್ಥಿಗಳು ಇ-ಮೇಲ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02-08-2021

    ಇ-ಮೇಲ್ ವಿಳಾಸ : [email protected]
    [email protected]

  • ಆಡಳಿತ ತರಬೇತಿ ಸಂಸ್ಥೆ, ಮೈಸೂರು : 15 ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ

    ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ಖಾಲಿಯಿರುವ ಕೆಳಕಂಡ ಹುದ್ದೆಗಳನ್ನು ಗುತ್ತಿಗೆ/ ನಿಯೋಜನೆ ಆಧಾರದ ಮೇಲೆ ಭರ್ತಿ ಮಾಡಲು ಅಧಿಸೂಚನೆ ‌ಹೊರಡಿಸಲಾಗಿದೆ.

    ಹುದ್ದೆ ವಿವರ : ಬೋಧಕರು ( ಸಾರ್ವಜನಿಕ ಆಡಳಿತ) -02
    ಬೋಧಕರು (ಅರ್ಥಶಾಸ್ತ್ರ ಮತ್ತು ಆಡಳಿತ ) -01
    ಬೋಧಕರು ( ಮಹಿಳಾ ಅಧ್ಯಯನ ) – 01
    ಬೋಧಕರು ( ಅಭಿವೃದ್ಧಿ ಅರ್ಥಶಾಸ್ತ್ರ ಮತ್ತು ಯೋಜನೆ)- 01
    ಬೋಧಕರು ( ನಡವಳಿ ವಿಜ್ಞಾನ ) -01

    ವಿಕೋಪ ನಿರ್ವಹಣಾ ಕೇಂದ್ರ, ಆಡಳಿತ ತರಬೇತಿ ಸಂಸ್ಥೆ, ಮೈಸೂರು

    ಬೋಧಕರು ( ವಿ.ನಿ‌.ಕೇಂದ್ರ) – 2 ಹುದ್ದೆ
    ಕಮ್ಯುನಿಕೇಷನ್ – ಐಟಿ ಅಧಿಕಾರಿ (ವಿ.ನಿ.ಕೇಂದ್ರ) – 01
    ರಿಸರ್ಚ್ – ಟ್ರೈನಿಂಗ್ ಅಸೋಸಿಯೇಟ್ಸ್ : 02 ಹುದ್ದೆ
    ಸಿಸ್ಟಂ ಆಫೀಸರ್ – 02 ಹುದ್ದೆ
    ಅಸಿಸ್ಟೆಂಟ್ – 02 ಹುದ್ದೆ

    ಒಟ್ಟು ಹುದ್ದೆಗಳು : 15 ಹುದ್ದೆಗಳು

    ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ವಿದ್ಯಾರ್ಹತೆ ವಿವರವು ಸಂಸ್ಥೆಯ ವೆಬ್‌ಸೈಟ್‌ www.atimysore.gov.in ನಲ್ಲಿ ಲಭ್ಯವಿರುತ್ತದೆ.

    ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಹಾನಿರ್ದೇಶಕರು, ಆ.ತ.ಸಂ.ಮೈಸೂರು ವಿಳಾಸಕ್ಕೆ ದಿನಾಂಕ 28-07-2021 ರೊಳಗಾಗಿ ನೊಂದಾಯಿತ ಅರ್ಜಿಯ ಮೂಲಕ ಹಾಗೂ ಸಾಫ್ಟ್ ಕಾಪಿಯನ್ನು ಇ-ಮೇಲ್ ಮೂಲಕ ಮತ್ತು [email protected] ಮತ್ತು [email protected] ವಿಳಾಸಕ್ಕೆ ಕಳುಹಿಸುವುದು. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರತಿ ಹುದ್ದೆಗೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವುದು. ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿಯೆ ಹಾಜರಾಗುವುದು.

    ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಲಾಗಿರುವ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವುದು :

    0821-2520906( ಆಫೀಸ್) , 2520905(R),

  • ಮೈಸೂರು ಜಿಲ್ಲಾ ಪಂಚಾಯತಿನಲ್ಲಿ 14 ಹುದ್ದೆಗಳು: ವಿವರ ಇಲ್ಲಿದೆ

    ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಖಾಲಿಯಿರುವ ಎಡಿಪಿಸಿ ಮತ್ತು ತಾಂತ್ರಿಕ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ NIC ಯ ಜಿಲ್ಲಾ ವೆಬ್‌ಸೈಟ್‌ ನಲ್ಲಿ ನಿಗದಿತ ನಮೂನೆಯು ಲಭ್ಯವಿದ್ದು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ವೆಬ್‌ಸೈಟ್‌ mysore.nic.in ಆಗಿರುತ್ತದೆ. ಸದರಿ ಹುದ್ದೆಗಳು ತಾತ್ಕಾಲಿಕವಾಗಿರುತ್ತದೆ.

    ಹುದ್ದೆ : ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ ( ಎಡಿಪಿಸಿ ) 01ಹುದ್ದೆ: ಅಭ್ಯರ್ಥಿಗಳು ಈ ಹುದ್ದೆಗೆ ಬಿ.ಇ/ಬಿಟೆಕ್ ಅಥವಾ ಎಂಬಿಎ ವಿದ್ಯಾರ್ಹತೆಯನ್ನು ಹೊಂದಿರಬೇಕು. ವಯೋಮಿತಿ ಗರಿಷ್ಠ 35 ವರ್ಷ. ಅಭ್ಯರ್ಥಿಗಳು ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 36 ತಿಂಗಳ ಅನುಭವ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.38,000/- ವೇತನವಿರುತ್ತದೆ.

    ತಾಂತ್ರಿಕ ಸಹಾಯಯ ಇಂಜಿನಿಯರ್ – 13 ಹುದ್ದೆಗಳು. ಇಂಜಿನಿಯರಿಂಗ್ ಪದವೀಧರರು (ಸಿವಿಲ್) ಗಣಕಯಂತ್ರ ಜ್ಞಾನ ಕಡ್ಡಾಯ. ಈ ಹುದ್ದೆಗೆ ಮಾಸಿಕ ರೂ.24,000/- ವೇತನವಿರುತ್ತದೆ. ವಯೋಮಿತಿ ಗರಿಷ್ಠ 35 ಹೊಂದಿರಬೇಕು. ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 2,3 ವರ್ಷ ಅನುಭವ ಇರಬೇಕು. ಡಿಪ್ಲೋಮಾ ಇನ್ ಸಿವಿಲ್ ( ಗಣಕಯಂತ್ರ ಜ್ಞಾನ ಕಡ್ಡಾಯ) ಪಡೆದಿರಬೇಕು. ವಯೋಮಿತಿ ಗರಿಷ್ಠ 35 ಹೊಂದಿರಬೇಕು. ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 2,3 ವರ್ಷ ಅನುಭವ ಇರಬೇಕು. ಈ ಹುದ್ದೆಗೆ ಮಾಸಿಕ ರೂ. 19,000/- ವೇತನವಿರುತ್ತದೆ.

    ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-07-2021
    ದಾಖಲಾತಿ ಪರಿಶೀಲನೆ: 13-07-2021

  • ಮೈಸೂರು ಜಿಲ್ಲಾ ಪಂಚಾಯತ್ : ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ

    ಕೋವಿಡ್ -19 ಸಂಬಂಧವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಬರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಮೈಸೂರು ಜಿಲ್ಲೆ ಮೈಸೂರು ಇವರ ಅಧೀನ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ಖಾಲಿ ಇರುವ ಶುಶ್ರೂಷಕರು ಹುದ್ದೆಗಳಿಗೆ ತಾತ್ಕಾಲಿಕವಾಗಿ ದಿನಾಂಕ 30-09-2021 ರವರೆಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿಯಾಗುವವರೆಗೆ ಗುತ್ತಿಗೆ ಆಧಾರದ ಮೇಲೆ ಮೆರಿಟ್ ಕಂ ರೊಸ್ಟರ್ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಆಸಕ್ತರು ದಿನಾಂಕ 17-06-2021 ರಂದು ಬೆಳಿಗ್ಗೆ 10.00 ಗಂಟೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಎನ್.ಪಿ.ಸಿ. ಆಸ್ಪತ್ರೆ ‌ಆವರಣ, ಮೈಸೂರು ‌ಇಲ್ಲಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಈ ಹಿಂದೆ ಈ ಉದ್ದೇಶಕ್ಕಾಗಿ ದಿನಾಂಕ ‌04-06-2021 ರಂದು ‌ಸಂದರ್ಶನಕ್ಕೆ ಹಾಜರಾಗಿದ್ದ‌ ಅಭ್ಯರ್ಥಿಗಳನ್ನು ಈ ಹುದ್ದೆಗೆ ಪರಿಗಣಿಸಲಾಗುವುದರಿಂದ ಈ ಸಂದರ್ಶನಕ್ಕೆ ‌ಹಾಜರಾಗುವಂತಿಲ್ಲ.

    ಹುದ್ದೆ : ನರ್ಸಿಂಗ್ ‌ಆಫೀಸರ್
    ವಿದ್ಯಾರ್ಹತೆ : ಬಿ.ಎಸ್ಸಿ/ಜಿಎನ್ ಎಂ/ ಡಿಪ್ಲೋಮಾ ನರ್ಸಿಂಗ್
    ಹುದ್ದೆ ಸಂಖ್ಯೆ : 13
    ವೇತನ : ಅಭ್ಯರ್ಥಿಗಳಿಗೆ ಮಾಸಿಕ‌ ರೂ.25,000/- ವೇತನವಿರುತ್ತದೆ.
    ವಯೋಮಿತಿ : ಜನರಲ್ ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು.

    ಈ ಮೇಲ್ಕಂಡ ಹುದ್ದೆಗೆ ಆಸಕ್ತಿಯುಳ್ಳ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ತಮ್ಮ ಮೂಲ ಅಂಕಪಟ್ಟಿಗಳು/ ಎಲ್ಲಾ ಪ್ರಮಾಣ ಪತ್ರಗಳೊಂದಿಗೆ ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ನೊಂದಿಗೆ ಹಾಗೂ ಇವುಗಳ ಒಂದು ಜೆರಾಕ್ಸ್ ಪ್ರತಿಯೊಂದಿಗೆ ತಿಳಿಸಿರುವ ದಿನಾಂಕದಂದು ಹಾಗೂ ಸಮಯದೊಳಗೆ ಹಾಜರಿರತಕ್ಕದ್ದು.

  • ಮೈಸೂರು ವೈದ್ಯಕೀಯ ಕಾಲೇಜು : 276 ಹುದ್ದೆ

    ಮೈಸೂರು ವೈದ್ಯಕೀಯ ಕಾಲೇಜು : 276 ಹುದ್ದೆ

    ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಇಲ್ಲಿ ಕೋವಿಡ್ – 19 ಚಿಕಿತ್ಸಾ ಆಸ್ಪತ್ರೆಗಳಲ್ಲಿ ‌ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಕೋವಿಡ್ ‌ಪರಿಸ್ಥಿತಿ ಸುಧಾರಿಸುವವರೆಗೆ ( ಯಾವುದೇ ಮೊದಲೊ ಅಲ್ಲಿಯವರೆಗೆ) ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ನೇರ ಸಂದರ್ಶನ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಕೆಳಕಂಡಂತೆ ನಿರ್ದೇಶಕರು ಮತ್ತು ಡೀನ್, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಈ ಕಛೇರಿಯನ್ನು ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

    1. ಸೀನಿಯರ್ ರೆಸಿಡೆಂಟ್ಸ್ (ಮೆಡಿಸಿನ್)-18
    2. ಸೀನಿಯರ್ ರೆಸಿಡೆಂಟ್ಸ್ (ಪುಲ್ಮೋ)-14
    3. ಸೀನಿಯರ್ ರೆಸಿಡೆಂಟ್ಸ್ ( ಅನಸ್ತೇಶಿಯ)-22
    4. ಜ್ಯೂನಿಯರ್ ರೆಸಿಡೆಂಟ್ – 35
    5. ಸ್ಟಾಫ್ ನರ್ಸಸ್ – 276

    ಸಂದರ್ಶನ ದಿನಾಂಕ ಮತ್ತು ಸಮಯ: 13-05-2021 ರಂದು ಬೆಳಿಗ್ಗೆ 10.30ಕ್ಕೆ.

    ಈ ಮೇಲ್ಕಂಡ ಹುದ್ದೆಗಳಿಗೆ ಎಲ್ಲಾ ಪ್ರಮಾಣ ಪತ್ರಗಳು, ವಿಳಾಸ ಪುರಾವೆ ಮತ್ತು ಗುರುತಿನ ಪುರಾವೆಗಳೊಂದಿಗೆ‌ ಹಾಗೂ ಇವುಗಳ 02 ಜೆರಾಕ್ಸ್ ಪ್ರತಿಗಳೊಂದಿಗೆ ತಿಳಿಸಿರುವ ದಿನಾಂಕದಂದು ನಿಗದಿತ ಸಮಯದೊಳಗೆ ಸಂದರ್ಶನಕ್ಕೆ ಬರತಕ್ಕದ್ದು.